Saturday, October 26, 2024

ಆಲಮಟ್ಟಿ, ಹೆರಕಲ್‌ ಗ್ರಾಮಗಳಲ್ಲಿರುವ ಉದ್ದೇಶಿತ ಯೋಜನಾ ಸ್ಥಳಗಳಿಗೆ ಕೆಎಂಬಿ ಸಿಇಒ ಭೇಟಿ

 


ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ : ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಸಾಗರಮಾಲ ಯೋಜನೆಯಡಿ ಪ್ರವಾಸೋದ್ಯಮ ಪೂರಕವಾಗಿ ಮತ್ತು ಸ್ಥಳೀಯ ಜನರಿಗೆ ಅನುಕೂಲವಾಗುವ ಆಲಮಟ್ಟಿ, ಹೆರಕಲ್‌ ಗ್ರಾಮಗಳಲ್ಲಿರುವ ಉದ್ದೇಶಿತ ಯೋಜನೆಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು  ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯರಾಮ್‌ ರಾಯ್‌ ಪುರ ಅವರು ತಿಳಿಸಿದರು.

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಮತ್ತು ಹೆರಕಲ್‌ ಗ್ರಾಮಗಳಲ್ಲಿರುವ ಉದ್ದೇಶಿತ ಯೋಜನಾ ಸ್ಥಳಗಳ ಕಾರ್ಯಸಾಧ್ಯತೆ, ಯೋಜನೆಯ ಭೂಸ್ವಾಧೀನ ಮತ್ತು ಜಲಸಾರಿಗೆ ಉಪಯುಕ್ತತೆ ಬಗ್ಗೆ ಪರಿಶೀಲನೆ ಹಾಗೂ ಆಲಮಟ್ಟಿ ಆಣೆಕಟ್ಟಿನ ಕೆಳಭಾಗದಲ್ಲಿರುವ 25 ಎಕರೆ ಜಮೀನಿನಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಮೀನು ಸಾಕಾಣಿಕೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿರುವ ಜಲಮಾರ್ಗದ ಮುಖಾಂತರ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿದಲ್ಲಿ ಸ್ಥಳೀಯ ಜನರಿಗೆ ವಿವಿಧ ಆರ್ಥಿಕವಾಗಿ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ನದಿ ತೀರದಲ್ಲಿ ಜಲಮಾರ್ಗದ ಮುಖಾಂತರ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸಿದ್ದಲ್ಲಿ ಹೆಚ್ಚಿನ ಸಂಖ್ಯೆ ಪ್ರವಾಸಿಗರ ಗಮನ ಹೆಚ್ಚು ಸೆಳೆಯಬಹುದು. ಜೊತೆಗೆ ಈ ಯೋಜನೆಯಿಂದ ಸ್ಥಳೀಯ ಜನರು ವಿವಿಧ ಆರ್ಥಿಕ ಪ್ರಯೋಜನಗಳು ಪಡೆದುಕೊಳ್ಳಬಹುದು ಎಂದರು. 

ಈ ಯೋಜನೆಯನ್ನು ಅಭಿವೃದ್ಧಿಪಡಿಸಿದಲ್ಲಿ ಪ್ರವಾಸಿಗರು ಮತ್ತು ಸುತ್ತಮುತ್ತ ಪ್ರದೇಶದ ನಿವಾಸಿಗಳಿಗೆ ನೀರು ಆಧಾರಿತ ಕ್ರೀಡೆಗಳನ್ನು ಅನುಭವಿಸುವ ಅವಕಾಶಗಳನ್ನು ಒದಗಿಸಿ ಪ್ರವಾಸೋದ್ಯಮ ಚಟುವಟಿಕೆಗಳು ಅಭಿವೃದ್ಧಿಯಾಗಲಿದೆ ಜಯರಾಮ್‌ ರಾಯ್‌ ಪುರ ಅವರು ತಿಳಿಸಿದರು. 

ಈ ಪ್ರದೇಶದಲ್ಲಿ ದೋಣಿ/ನೌಕೆ ನಿರ್ಮಾಣ, ಬೋಟ್‌ ಯಾರ್ಡ್‌ಗಳು ಹಾಗೂ ಸಂಬಂಧಿತ ಉಪಕರಣಗಳ ತಯಾರಿಕೆ ಮುಂತಾದ ಇತರ ಬೆಂಬಲದೊಂದಿಗೆ ಉದ್ಯಮ ತೆರೆಯುವ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸುವಿಕೆಯಲ್ಲಿ ನೆರವಾಗಲಿದೆ ಎಂದು ತಿಳಿಸಿದರು. 

 

ಸುತ್ತ ಮುತ್ತಲಿನ ಜಿಲ್ಲೆಯಲ್ಲಿರುವ ಪ್ರವಾಸ ತಾಣಗಳು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿದ್ದು, ಜಲಮಾರ್ಗದ ಅಭಿವೃದ್ಧಿಗೆ ಮೂಲಸೌಕರ್ಯ ಒದಗಿಸಿದ್ದಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆ ಪ್ರವಾಸಿಗರನ್ನು ಆಕರ್ಷಿಸಿ ಸರ್ಕಾರಕ್ಕೆ ಆದಾಯವನ್ನು ಗಳಿಸಬಹುದಾಗಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಕೃಷ್ಣಭಾಗ್ಯ ಜಲ ನಿಗಮ ನಿಯಮಿತ ಅಧೀಕ್ಷಕ ಇಂಜಿನೀಯರ್‌ ಹಿರೇಗೌಡರ, ಕಾರ್ಯಪಾಲಕ ಇಂಜಿನಿಯರ್‌ ದೊಡ್ಡಮನಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಚಲವಾದಿ, ಕರ್ನಾಟಕ ಜಲಸಾರಿಗೆ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ  ಇಂಜಿನೀಯರ್‌ ಪಾಂಡುರಂಗ, ಕುಲಕರ್ಣಿ  ಸೇರಿದಂತೆ ಮತ್ತಿತ್ತರು ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


26-10-2024 EE DIVASA KANNADA DAILY NEWS PAPER