ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಕಾನಿಪ ಚುನಾವಣೆ ಪ್ರಚಾರ ಸಭೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಅಶೋಕ ಯಡಳ್ಳಿ ಮತಯಾಚಿಸಿದರು.
ಸಿಂದಗಿ: ಗ್ರಾಮೀಣ ಭಾಗದ ಪತ್ರಕರ್ತರಿಗಾಗಿ ತಾಲೂಕು ಕೇಂದ್ರದಲ್ಲಿ ಪತ್ರಿಕಾ ಭವನಕ್ಕಾಗಿ ನಿವೇಶನ, ಆರೋಗ್ಯ ವಿಮೆ, ಮಕ್ಕಳ ಶಿಕ್ಷಣಕ್ಕಾಗಿ ಸರಕಾರದ ಸೌಕರ್ಯ ಸೇರಿದಂತೆ ಸಂಘದ ವಿವಿಧ ರೀತಿಯ ಅನುದಾನದಲ್ಲಿ ಸಹಾಯ ಸೌಲಭ್ಯ ಒದಗಿಸಲು ನಮ್ಮ ತಂಡ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಅಶೋಕ ಯಡಳ್ಳಿ ಭರವಸೆ ನೀಡಿದರು.
ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಕಾನಿಪ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮತಯಾಚಿಸಿ ಅವರು ಮಾತನಾಡಿದರು.
ಒತ್ತಡದ ಬದುಕಿನ ಮದ್ಯದಲ್ಲಿಯೂ ಪತ್ರಕರ್ತರು ಸಮಾಜದ ಅಂಕುಡೊಂಕುಗಳನ್ನು ಜನತೆಗೆ ತಿಳಿಸುತ್ತಾ ಸಮಾಜದ ಏಳ್ಗೆಗೆ ಶ್ರಮಿಸುವ ನಮ್ಮ ಪತ್ರಕರ್ತರಿಗೆ ಹಾಗೂ ಅವರ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ಅತ್ಯವಶ್ಯವಾಗಿದೆ. ಜಿಲ್ಲೆಯ ಹಿರಿಯ ಪತ್ರಕರ್ತರ ಮಾರ್ಗದರ್ಶನ, ಸಹಕಾರ ಮತ್ತು ಬೆಂಬಲದಿಂದ 24 ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಾತ್ರ ನ.09 ರಂದು ಚುನಾವಣೆ ನಡೆಯಲಿದೆ. ಮಾಧ್ಯಮ ಮಿತ್ರರೆಲ್ಲರೂ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಬೆಂಬಲಿಸಬೇಕು ಎಂದರು.
ಈ ಸಂದರ್ಭ ಇಂದುಶೇಖ ಮಣೂರ, ರಾಜು ಕೊಂಡಗೂಳಿ, ಶರಣು ಮಸಳಿ, ಮೊಹ್ಮದಸಮೀರ ಇನಾಮದಾರ, ಪ್ರಕಾಶ ಬೆಣ್ಣೂರ, ಪ್ರಭು ಕುಮಟಗಿ, ಬಾಬು ತಡಲಗಿ, ಮೋಹನ ಕುಲಕರ್ಣಿ, ಗುರುರಾಜ ಗದ್ದನಕೇರಿ, ದೇವೆಂದ್ರ ಹೆಳವರ, ಶಶಿಕಾಂತ ಮೇಂಡೆಗಾರ, ರಾಹುಲ ಆಪ್ಟೆ, ಕಾನಿಪ ತಾಲೂಕಾಧ್ಯಕ್ಷ ಆನಂದ ಶಾಬಾದಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಅಲ್ಲಾಪುರ, ಎಂ.ಎ.ಖತೀಬ, ಸಲೀಂಪಟೇಲ್ ಮರ್ತೂರ, ನವೀನ ಶೆಳ್ಳಗಿ, ಶಿವಾನಂದ ಆಲಮೇಲ, ಗುಂಡು ಕುಲಕರ್ಣಿ, ಸಿದ್ದು ಕಡಗಂಚಿ, ವಿಜಯಕುಮಾರ ಪತ್ತಾರ, ಅಂಬರೀಷ ಸುಣಗಾರ, ಸಿದ್ದಲಿಂಗ ಕಿಣಗಿ, ರಮೇಶ ಪೂಜಾರಿ ಸೇರಿದಂತೆ ಅನೇಕರು ಇದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

.jpg)
.jpeg)