Friday, August 16, 2024

ಕೆನರಾ ಬ್ಯಾಂಕಿನಿಂದ ಕೆನರಾ ವಿದ್ಯಾ ಜ್ಯೋತಿ ವಿದ್ಯಾರ್ಥಿ ವೇತನ ವಿತರಣೆ.

ಕೆನರಾ ಬ್ಯಾಂಕಿನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳ ಭಾಗವಾಗಿರುವ "ಕೆನರಾ ವಿದ್ಯಾ ಜ್ಯೋತಿ" ಯೋಜನೆಯಲ್ಲಿ ಸರಕಾರಿ ಹಾಗೂ ಅನುದಾನಿತ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಪ್ರತಿಭಾನ್ವಿತ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಡ ವಿದ್ಯಾರ್ಥಿನಿಯರಿಗೆ ಕೆನರಾ ವಿದ್ಯಾಜ್ಯೋತಿ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವು ದಾವಣಗೆರೆಯ ಕೆನರಾ ಬ್ಯಾಂಕ್ ವಿದ್ಯಾನಗರ ಶಾಖೆಯಲ್ಲಿ ನಡೆಯಿತು‌. 


ಕೆನರಾ ಬ್ಯಾಂಕ್ ದಾವಣಗೆರೆ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕ ವೈ.ವಿ.ಎನ್‌.ಶಿವಪ್ರಸಾದ್ ವಿದ್ಯಾರ್ಥಿ ವೇತನವನ್ನು ವಿತರಿಸಿ ಮಾತನಾಡುತ್ತಾ 1906 ರಲ್ಲಿ ಅಮ್ಮೆಂಬಳ ಸುಬ್ಬರಾವ್ ಪೈ ಅವರು ಕೆನರಾ ಬ್ಯಾಂಕನ್ನು ಸ್ಥಾಪಿಸುವಾಗ ಹೊಂದಿದ್ದ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯನ್ನು ಕೆನರಾ ಬ್ಯಾಂಕ್ ಇಂದಿಗೂ ಮುಂದುವರೆಸಿಕೊಂಡು ಬರುತ್ತಿದೆ. ಈ ಯೋಜನೆಯಡಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪಂಗಡದ 5, 6, 7 ನೇ ತರಗತಿಯ ವಿದ್ಯಾರ್ಥಿನಿಯರಿಗೆ ತಲಾ ರೂ.2,500 ಹಾಗೂ 8, 9, 10 ನೇ ತರಗತಿಯ ವಿದ್ಯಾರ್ಥಿನಿಯರಿಗೆ ತಲಾ ರೂ‌.5000 ವಿದ್ಯಾರ್ಥಿ ವೇತನ ವಿತರಿಸುತ್ತಿದ್ದೇವೆ ಎಂದರು. ದಾವಣಗೆರೆಯ ಕೆನರಾ ಬ್ಯಾಂಕ್ ವಿದ್ಯಾನಗರ ಶಾಖೆ, ವಿನೋಬ ನಗರ ಶಾಖೆ, ಪಿಜೆ ಬಡಾವಣೆ ಶಾಖೆ ಹಾಗೂ ಎಸ್‌ಎಂಇ ಶಾಖೆಗಳು ಗುರುತಿಸಿರುವ ವಿವಿಧ ಶಾಲೆಗಳ 40 ವಿದ್ಯಾರ್ಥಿನಿಯರನ್ನು ಕೆನರಾ ಬ್ಯಾಂಕಿಗೆ ಬರಮಾಡಿಕೊಂಡು ವಿದ್ಯಾರ್ಥಿ ವೇತನವನ್ನು ಅವರು ವಿತರಿಸಿ ಮಾತನಾಡಿದರು.

ದಾವಣಗೆರೆ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಕೊಟ್ರೇಶ್, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಎಮ್.ಹೆಚ್‌.ಬಸವರಾಜ್ ಹಾಗೂ ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅಧಿಕಾರಿ ನವೀನ್ ಮಠದ್ ಅವರು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆನರಾ ಬ್ಯಾಂಕಿನ ಸಾಮಾಜಿಕ ಜವಾಬ್ದಾರಿ ಯೋಜನೆಯನ್ನು ಶ್ಲಾಘಿಸಿದರು.

ಕೆನರಾ ಬ್ಯಾಂಕಿನ ಪ್ರಾದೇಶಿಕ ಕಛೇರಿಯ ವಿಭಾಗೀಯ ಪ್ರಬಂಧಕಿ ರವಿಕಲಾ ಮಾತನಾಡಿ ದೇಶದ ಎಲ್ಲ ಕೆನರಾ ಬ್ಯಾಂಕ್ ಶಾಖೆಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಈ ಯೋಜನೆಯ ಫಲಾನುಭವಿ ವಿದ್ಯಾರ್ಥಿನಿಯರು ಮುಂದೆ ಕೆನರಾ ಬ್ಯಾಂಕಿನ ಜೊತೆಯೇ ವ್ಯವಹಾರಗಳನ್ನು ನಡೆಸಲು ಮನವಿ ಮಾಡಿದರು. ಸಮಾರಂಭದಲ್ಲಿ ಬ್ಯಾಂಕಿನ ವಿದ್ಯಾನಗರ ಶಾಖೆಯ ಮುಖ್ಯ ಪ್ರಬಂಧಕಿ ಶಿಲ್ಪಾ ಎಂ. ಗಾಯಕವಾಡ್, ವಿನೋಬ ನಗರ ಶಾಖೆಯ ಮುಖ್ಯ ಪ್ರಬಂಧಕಿ ಚಂಚಲಾ ಕುಮಾರಿ, ಪಿ.ಜೆ‌.ಬಡಾವಣೆ ಶಾಖೆಯ ಮುಖ್ಯ ಪ್ರಬಂಧಕ ಶಬೀರ್ ಬಶೀರ್, ಎಸ್‌ಎಂಇ ಶಾಖೆಯ ಮುಖ್ಯ ಪ್ರಬಂಧಕ ಎಸ್.ವಿ.ಕಿರುಬ ಶಂಕರ್ ಹಾಗೂ ಬ್ಯಾಂಕಿನ ಹಿರಿಯ ಅಧಿಕಾರಿಗಳಾದ ಅನಿಲ್ ನಾಯಕ್, ಗೋಪಾಲ ಕೃಷ್ಣ, ವಿ.ಆರ್.ಹರೀಶ್, ಕೆ.ಭಾರ್ಗವಿ, ಸಿ.ಸುವೇಶ್ ಚಂದ್ರ, ಎನ್.ಪಾರ್ವತಿ, ಹೆಚ್.ಜೆ.ಆಶಾ, ಡಿ.ಎ.ಸಾಕಮ್ಮ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟ ಗೂಢಾಚಾರಿಗಳ ವಿಶೇಷ ಕಾರ್ಯಕ್ರಮ "ಏಜೆಂಟ್​​ 001" ಶನಿವಾರದಿಂದ ನ್ಯೂಸ್​ಫಸ್ಟ್​ನಲ್ಲಿ

 ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ಇವತ್ತು ನಾವು ನೀವು ಸುರಕ್ಷಿತವಾಗಿ ಇದ್ದೀವಿ ಅಂದ್ರೆ ನಮಗೋಸ್ಕರ ಮತ್ಯಾರೋ ತಮ್ಮ ಪ್ರಾಣವನ್ನ ಒತ್ತೆಯಿಟ್ಟು ಹೋರಾಡ್ತಿದ್ದಾರೆ. ಗಡಿಯಲ್ಲಿ ನಿಂತು ಸಾವಿನ ಜೊತೆ ಸರಸ ಆಡ್ತಿದ್ದಾರೆ. ಸಮವಸ್ತ್ರದಲ್ಲಿ ಹೋರಾಡ್ತಿರೋ ಯೋಧರು ಒಂದು ಕಡೆಯಾದ್ರೆ, ತಾವು ಯಾರು ಅನ್ನೋದನ್ನ ಜಗತ್ತಿಗೂ ಹೇಳದೇ ತಮ್ಮ ಕುಟುಂಬದವರಿಗೂ ಗೊತ್ತಿಲ್ಲದೇ ಹೋರಾಡ್ತಿರೋರು ಮತ್ತೊಂದು ಕಡೆ. ಹುಟ್ಟ ಊರು ಬಿಟ್ಟು ಬೇಱವುದೋ ದೇಶದಲ್ಲಿ ಗೂಡಚಾರಿಗಳಾಗಿ ಕೆಲಸ ಮಾಡ್ತಾ ದೇಶ ಸೇವೆ ಮಾಡ್ತಿದ್ದಾರೆ. ಪ್ರತಿಕ್ಷಣವೂ ಚಾಲೆಂಜ್​ ಆಗಿರುವಂತಹ ಸನ್ನಿವೇಶದಲ್ಲೇ ಬದುಕಿದ ಸೀಕ್ರೆಟ್​ ಏಜೆಂಟ್​​ಗಳ ಕುರಿತ ವಿಶೇಷ ಸೀರೀಸ್​ ಶನಿವಾರದಿಂದ ನ್ಯೂಸ್​ಫಸ್ಟ್​​ನಲ್ಲಿ ಪ್ರಸಾರವಾಗಲಿದೆ. ಏಜೆಂಟ್​​ 001 ಹೆಸರಿನ ಈ ಕಾರ್ಯಕ್ರಮ ಪ್ರತಿ ಶನಿವಾರ ಸಂಜೆ 7 ಗಂಟೆಗೆ ಹಾಗೂ ಭಾನುವಾರ ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಇಷ್ಟವಾಗುವಂತಹ ಕಾರ್ಯಕ್ರಮ ಇದಾಗಿದೆ. 

ಹಲವು ಪುಸ್ತಕಗಳು ಹಾಗೂ ದಾಖಲೆಗಳನ್ನು ಅಧ್ಯಯನ ಮಾಡಿ ನಿಖರ ಮಾಹಿತಿ ಸಂಗ್ರಹಿಸಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ಅತ್ಯುತ್ತಮ ಗುಣಮಟ್ಟದಿಂದ ಕಾರ್ಯಕ್ರಮ ನಿರ್ಮಾಣ ಮಾಡಲಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಗೂ ಇಷ್ಟವಾಗುವಂತಹ ವಿಷಯಗಳನ್ನು ಇದು ಒಳಗೊಂಡಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ವಿಷಯಗಳನ್ನ ತಿಳಿಸಿಕೊಡುವ ನಿಟ್ಟಿನಲ್ಲಿ ಇದನ್ನ ರೂಪಿಸಲಾಗಿದೆ. 

ಇದಕ್ಕೂ ಮೊದಲು ಚುನಾವಣಾ ಸಂದರ್ಭದಲ್ಲಿ ದಿ ಲೀಡರ್​ ಎಂಬ ವಿಶೇಷ ಕಾರ್ಯಕ್ರಮ ನ್ಯೂಸ್​ಫಸ್ಟ್​​ನಲ್ಲಿ ಪ್ರಸಾರವಾಗಿತ್ತು. ದೇಶ ಕಟ್ಟಿದ್ದ ಪ್ರಧಾನಮಂತ್ರಿಗಳು ಅವರು ಎದುರಿಸಿದ ಸವಾಲುಗಳು ಅವರು ಮಾಡಿದ ಸಾಧನೆ ಕುರಿತ ಲೀಡರ್​ ಕಾರ್ಯಕ್ರಮಕ್ಕೆ ರಾಜ್ಯದ ಜನರಿಂದ ಅಭೂತಪೂರ್ವ ಯಶಸ್ಸು ದೊರೆತಿತ್ತು. ನ್ಯೂಸ್​ಫಸ್ಟ್​​ನ ಎಂಡಿ ಹಾಗೂ ಸಿಇಒ ಆಗಿರುವ ಎಸ್.ರವಿಕುಮಾರ್​ ​ ಅವರು ಲೀಡರ್​ ಕಾರ್ಯಕ್ರಮದ ನಿರೂಪಣೆ ಮಾಡಿದ್ದರು. ಸದ್ಯ ಏಜೆಂಟ್​ 001 ಕಾರ್ಯಕ್ರಮವನ್ನ ಸಹ ಅವರೇ ನಿರೂಪಣೆ ಮಾಡುತ್ತಿದ್ದಾರೆ. ​

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


ವಿಆರ್‌ಎಲ್ ಲಾಜಿಸ್ಟಿಕ್ಸ್, ವಿಜಯಾನಂದ ಟ್ರಾವೆಲ್ಸ್‌ಗೆ ಪ್ರತಿಷ್ಠಿತ ‘ರಸ್ತೆ ಸಾರಿಗೆ ಪ್ರಶಸ್ತಿ’

 ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ನವದೆಹಲಿ: ಪ್ರಸಕ್ತ ವರ್ಷದ ಪ್ರತಿಷ್ಠಿತ ‘ರಸ್ತೆ ಸಾರಿಗೆ ಪ್ರಶಸ್ತಿ’ಯ ಸರಕು ಸಾಗಣೆ ವಿಭಾಗದಲ್ಲಿ ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರು  ‘ವರ್ಷದ ವ್ಯಕ್ತಿ’ (ಬಿಜಿನೆಸ್ ಪರ್ಸನ್ ಆಫ್ ದ ಇಯರ್) ಪುರಸ್ಕಾರ ಪಡೆದಿದ್ದಾರೆ. ಕಂಪನಿಯನ್ನು ಮುನ್ನಡೆಸುವಲ್ಲಿ ಅವರು ಮಾಡಿದ ಗಣನೀಯ ಪ್ರಯತ್ನಗಳನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.

ಟಿವಿ9 ನೆಟ್‌ವರ್ಕ್ ಮತ್ತು ಲೀಡರ್ಸ್ ಆಫ್ ರೋಡ್ ಟ್ರಾನ್ಸ್‌ಪೋರ್ಟ್ ಅವಾರ್ಡ್ಸ್ ಸಂಸ್ಥೆಯು ಕಾಂಟಿನೆಂಟಲ್ ಟೈರ್ಸ್‌ ಸಹಯೋಗದೊಂದಿಗೆ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ಹರ್ಷ ಮಲ್ಹೋತ್ರಾ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಆನಂದ ಸಂಕೇಶ್ವರ ಅವರು, ವಿಆರ್‌ಎಲ್ ಸಮೂಹದ ಪ್ರತಿಯೊಬ್ಬ ಉದ್ಯೋಗಿಯ ಪರಿಶ್ರಮ ಮತ್ತು 1976ರಲ್ಲಿ ಕೇವಲ ಒಂದು ಟ್ರಕ್‌ನೊಂದಿಗೆ ಕಂಪನಿಯನ್ನು ಆರಂಭಿಸಿ ಈ ಮಟ್ಟಕ್ಕೆ ಬೆಳೆಸಿದ ತಮ್ಮ ತಂದೆ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ದೂರದರ್ಶಿತ್ವವನ್ನು ಸ್ಮರಿಸಿದರು. ‘‘ಕಂಪನಿ ಇಂದು 6100ಕ್ಕೂ ಹೆಚ್ಚು ವಾಹನಗಳನ್ನು ಹೊಂದಿದ್ದು ವಾಣಿಜ್ಯ ವಾಹನಗಳ ಕ್ಷೇತ್ರದಲ್ಲಿ ಅತಿ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ’’ ಎಂದು ಡಾ. ಆನಂದ ಸಂಕೇಶ್ವರ ವಿವರಿಸಿದಾಗ, ಸಭಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಯಿತು.

ವಿಟಿಪಿಎಲ್‌ಗೂ ಪುರಸ್ಕಾರ:

ಇದೇ ವೇಳೆ, ಶಿವಾ ಸಂಕೇಶ್ವರ ನೇತೃತ್ವದ ವಿಜಯಾನಂದ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್ (ವಿಟಿಪಿಎಲ್), ಬಸ್ ಆಪರೇಟರ್ಸ್ ವಿಭಾಗದಲ್ಲಿ ‘ಎಮರ್ಜಿಂಗ್ ಬ್ರಾೃಂಡ್ ಆಫ್ ದ ಇಯರ್’ ಎಂಬ ಪ್ರಶಸ್ತಿಗೆ  ಪಾತ್ರವಾಯಿತು. ಬಸ್ ಕಾರ್ಯಾಚರಣೆ ಬಿಜಿನೆಸ್ಸನ್ನು ವಿಆರ್‌ಎಲ್ ಲಾಜಿಸ್ಟಿಕ್ಸ್‌ನಿಂದ 2023ರಲ್ಲಿ ಪ್ರತ್ಯೇಕಿಸಲಾಗಿದ್ದು, ಅದು ಈಗ ಸ್ವತಂತ್ರ ಕಂಪನಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಹೆಚ್ಚು ಬಸ್‌ಗಳನ್ನು ಕ್ಷಿಪ್ರ ಅವಧಿಯಲ್ಲಿ ಸೇರ್ಪಡೆ ಮಾಡಿರುವುದು, ಹೊಸಹೊಸ ಮಾರ್ಗಗಳನ್ನು ಪ್ರಾರಂಭಿಸಿರುವುದು, ನವನವೀನ ಅಭ್ಯಾಸಗಳನ್ನು ಅಳವಡಿಸಿರುವುದು ಮುಂತಾದ ಕಾರಣಗಳಿಂದ ಮುಂದಿನ ದಿನಗಳಲ್ಲಿ ಭಾರಿ ಯಶಸ್ಸು ಸಾಧಿಸಲಿರುವ ಹಿನ್ನೆಲೆಯಲ್ಲಿ ವಿಟಿಪಿಎಲ್‌ನ್ನು ‘ವರ್ಷದ ಎಮರ್ಜಿಂಗ್ ಬ್ರಾೃಂಡ್’ ಆಗಿ ಆಯ್ಕೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ, ವಿ-ಟ್ರಾನ್ಸ್, ಗ್ಯಾನ್ ಲಾಜಿಸ್ಟಿಕ್ಸ್ ಪ್ರೈ.ಲಿ., ಜೆಕೆಎಂ ಟ್ರಾನ್ಸ್‌ಪೋರ್ಟ್, ಎಚ್‌ಬಿಆರ್ ಟ್ರಾನ್ಸ್‌ಪೋರ್ಟ್, ಪಂಕಜ್ ಟ್ರಾನ್ಸ್‌ಪೋರ್ಟ್ ಮುಂತಾದ ಕಂಪನಿಗಳಿಗೂ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. 50-200 ವಾಣಿಜ್ಯ ವಾಹನಗಳ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವ ಕೆಲವು ಮಹಿಳಾ ಉದ್ಯಮಿಗಳನ್ನೂ ಗುರುತಿಸಿ ಪುರಸ್ಕರಿಸಲಾಯಿತು.

ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಮಾಡಿರುವ ಸಾಧನೆಯನ್ನು ಗುರುತಿಸಿ ಪುರಸ್ಕರಿಸುವುದು ಈ ಪ್ರಶಸ್ತಿಯ ಹಿಂದಿನ ಉದ್ದೇಶವಾಗಿದೆ. ಯಾವುದೇ ವಾಣಿಜ್ಯ ಉದ್ದೇಶಗಳಿಲ್ಲದೆ, ಸಂಪೂರ್ಣವಾಗಿ ಸಾಧನೆಯನ್ನೇ ಆಧರಿಸಿ ಆಯ್ಕೆ ಮಾಡಿದ ಪ್ರತಿಷ್ಠಿತ ಪ್ರಶಸ್ತಿ ಇದಾಗಿದ್ದು, ವಿಆರ್‌ಎಲ್‌ನ ಎರಡು ಸಂಸ್ಥೆಗಳು ಈ ಮೂಲಕ ರಾಷ್ಟ್ರಮಟ್ಟದ ಗೌರವಕ್ಕೆ ಭಾಜನವಾಗಿವೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

17-08-2024 EE DIVASA KANNADA DAILY NEWS PAPER