Thursday, December 26, 2024

ಜಗತ್ತಿನಾದ್ಯಂತ ಭಕ್ತ ಸಮೂಹ ಹೊಂದಿದ ಅತ್ಯಂತ ಸರಳ ಮತ್ತು ಶ್ರೇಷ್ಠ ಸಂತ : ಮಹೇಶ ಮಾಶಾಳ

 ವಿಜಯಪುರ :  ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಜಗತ್ತನ್ನೇ ಗೆದ್ದಂತವರು. ಜಗತ್ತಿನಾದ್ಯಂತ ಭಕ್ತ ಸಮೂಹ ಹೊಂದಿದ ಅತ್ಯಂತ ಸರಳ ಮತ್ತು ಶ್ರೇಷ್ಠ ಸಂತ ಎಂದು ಖ್ಯಾತ ಭಾಷಣಕಾರ ಮಹೇಶ ಮಾಶಾಳ ಹೇಳಿದರು.

ನಗರದ ಜ್ಞಾನಯೋಗಾಶ್ರಮದಲ್ಲಿ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಯವರ ಗುರುನಮನ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ "ಜ್ಞಾನಾರಾಧನೆ" ಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಾನು ಮೊದಲು ಶ್ರೀ ಸಿದ್ದೇಶ್ವರ ಅಪ್ಪಾಜಿಯವರನ್ನು ಭೇಟಿ ಮಾಡಿದ್ದು ಸಿಂದಗಿಯ ಒಂದು ಕಾಲೇಜಿನಲ್ಲಿ. ಅವರನ್ನು ಭೇಟಿಯಾಗುವುದಕ್ಕೂ ಮುನ್ನ ನಾನು ಅಹಂಕಾರದಿAದ ಭಾಷಣ ಮಾಡುತ್ತಿದ್ದೆ. ಆದರೆ ಅವರನ್ನು ನೋಡಿದ ಮೇಲಿನಿಂದ ನಾನು ಪ್ರಜ್ಞಾವಂತಿಕೆಯಿAದ ಭಾಷಣ ಮಾಡುವುದನ್ನು ಕಲಿತುಕೊಂಡೆ. ನನ್ನ ಇಡೀ ಜೀವನದಲ್ಲಿಯೇ ನಾನು ಈ ಮಟ್ಟಿಗೆ ಏನಾದರೂ ಬೆಳೆದಿದ್ದೇನೆ ಎಂದರೆ ಅದಕ್ಕೆ ಅಪ್ಪಾಜಿಯವರೇ ಕಾರಣ. ನನಗೆ ಒಂದು ಮಾತು ಹೇಳಿದ್ದರು ನೀನು ಎಷ್ಟು ಕಲಸ್ತಿಯಾ ಅಷ್ಟು ಕಲಿತಿಯಾ ಹೀಗಾಗಿ ನೀನು ನಿನ್ನ ಭಾಷಣದ ಮೂಲಕ ಜನರಿಗೆ ಕಲಿಸ್ತಾ ಹೋಗು ಇನ್ನು ಹೆಚ್ಚಿಗೆ ಅವರಿಂದ ಕಲಿತಿಯಾ ಎಂದು ಹೇಳಿದ್ದರು ಅವರ ಈ ಮಾತು ನಾನು ಎಲ್ಲವನ್ನು ಕಲಿತು ಮುಗಿಸಿದ್ದೇನೆ ಎನ್ನುವ ಅಹಂಕಾರವನ್ನು ಮುರಿತು ಜೀವನ ಪೂರ್ತಿ ನಾನು ಕಲಿಯುವುದು ಬಾಖಿ ಇದೆ ಎಂದು ತೋರಿಸಿ ಕೊಟ್ಟರು. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ನಮ್ಮೆಲ್ಲರನ್ನು ಸತ್ಯದ ದಾರಿಯಲ್ಲಿ ನಡೆಯಿರಿ ಎಂದು ತೋರಿಸಿಕೊಟ್ಟವರು. ನಮ್ಮಲ್ಲಿರುವ ಎಲ್ಲ ಹೊಲಸನ್ನು ಹೊರಗೆ ಹಾಕಿ ನಮ್ಮನ್ನ ಮತ್ತು ನಮ್ಮ ಬದುಕನ್ನು ಶುಚಿಗೊಳಿಸಿದ ಮಹಾತ್ಮರು. ನಮ್ಮೆಲ್ಲರ ಮನಸ್ಸೊಳಗೆ ಅರಿವಿನ ದೀಪ ಹಚ್ಚಿದ ಅಪ್ಪನವರು ನಮ್ಮ ಮನಸ್ಸಲ್ಲಿ ಎಂದೆAದಿಗೂ ಇರುತ್ತಾರೆ ಎಂದರು.  


ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಬದುಕಿದ ಜೀವನ ಶೈಲಿ ಇಡೀ ಜಗತ್ತಿನ ಸಂತ ಸಮೂಹಕ್ಕೆ ಹಾಗೂ ಅವರ ಸರಳತೆ ನಮ್ಮೆಲ್ಲರ ಬದುಕಿಗೆ ಮಾದರಿ ಎಂದರು. ನಮಗೆ ಯಾವಾಗಲೂ ಉತ್ತಮ ಸಲಹೆಗಳನ್ನು ನೀಡುವ ಮೂಲಕ ನಮ್ಮನ್ನು ತಿದ್ದುತ್ತಿದ್ದರು. ನಮಗೆ ಎಂದಿಗೂ ಪ್ರಚಾರಕ್ಕಾಗಿ ಹೋರಾಟ, ಕೆಲಸಗಳನ್ನು ಮಾಡಬೇಡಿ ನಿಮ್ಮ ಹೋರಾಟ ಯಶಸ್ವಿಯಾಗಿ ನಿಮ್ಮ ಕೆಲಸಗಳು ಸಾರ್ಥಕತೆ ತರಬೇಕು ಆ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಸಲಹೆಗಳನ್ನು ನೀಡುವ ಮೂಲಕ ನಮ್ಮ ಬದುಕಿಗೆ ಪ್ರೇರಣೆಯಾಗಿದ್ದಾರೆ ಎಂದರು.  


ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕದೋಂಡ ಮಾತನಾಡಿ, ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಹುಟ್ಟಿದ ಭೂಮಿಯಲ್ಲಿ ಹುಟ್ಟಿದ ನಾವೇ ಪುಣಿತರು. ಶ್ರೀ ಅಪ್ಪಾಜಿಯವರ ಮಾತುಗಳಲ್ಲಿ ಬರೀ ನಾಲ್ಕಾನೆ ಭಾಗ ನಮ್ಮಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಪಾವನವಾಗುತ್ತದೆ. ನುಡಿದಂತೆ ನಡೆದ ಆತ್ಯಂತ ಸರಳ ಮತ್ತು ಜಗತ್ತಿನ ಶ್ರೇಷ್ಠ ಸಂತ ಅದು ಶ್ರೀ ಸ್ವಾಮೀಜಿಯವರು. ಅವರ ಜೀವನದುದ್ದಕ್ಕೂ ನಮಗೆ ಜ್ಞಾನಾರಾಧನೆ ಮಾಡಿದಂತವರು ಅಂತಹವರ ನೆರಳಲ್ಲಿ ನಾವು ನಿವೆಲ್ಲರೂ ಬೆಳೆದಿದ್ದೇವೆ ಎಂದರೆ ಅದು ನಮ್ಮ ಪುಣ್ಯ. ಹೀಗಾಗಿ ಅವರು ಹಾಕಿ ಕೊಟ್ಟ ದಾರಿಯಲ್ಲಿ ಅವರು ಕಲಿಸಿದ ಸತ್ಯದ ದಾರಿಯಲ್ಲಿ ನಡೆಯುವ ಮೂಲಕ ನಾವು ಅವರಿಗೆ ನಿಜವಾದ ಗುರುನಮನ ಸಲ್ಲಿಸೋಣ ಎಂದರು.

ಸಿದ್ದಣ್ಣ ಲಂಗೂಟಿ ಮಾತನಾಡಿ, ಸಿದ್ದೇಶ್ವರ ಅಪ್ಪಗಳು ವಿಶ್ವಜ್ಞಾನಿಗಳು, ಅವರು ಆಧ್ಯಾತ್ಮ ಲೋಕದಲ್ಲಿ ದೊಡ್ಡ ಕ್ರಾಂತಿ ಮಾಡಿದ್ದಾರೆ. ಆಶ್ರಮದಲ್ಲಿದ್ದ ಎಲ್ಲ ಗುರುಗಳು ವಿದ್ಯಾರ್ಥಿಗಳಲ್ಲಿ ವಿಶ್ವ ತತ್ವಜ್ಞಾನದ ಚಿಂತನೆಗೆ ಕರೆದುಕೊಂಡು ಹೋದವರು ಪೂಜ್ಯ ಸಿದ್ದೇಶ್ವರ ಅಪ್ಪಗೋಳು ಎಂದು ಹೇಳಲು ಹರ್ಷವಾಗುತ್ತದೆ ಎಂದರು.

ಭಾರತದ ೩೦ ಭಾಷೆಗಳಿಗೆ ನಮ್ಮ ಶರಣರ ವಚನಗಳು ಅನುವಾದಗೊಂಡಿವೆ. ೨೩ ಸಂಪುಟಗಳನ್ನು ಪ್ರಧಾನ ಮಥ್ರಿ ನರೆಂದ್ರ ಮೋದಿ ಅವರು ಅನಾವರಣಗೊಳಿಸಿದ್ದಾರೆ. ೧೪ ವಿದೇಶಿ ಭಾಷೆಗಳಲ್ಲೂ ಅನುವಾದಗೋಳ್ಳುತ್ತಿದ್ದು ಶೀಗ್ರದಲ್ಲಿಯೇ ರಾಷ್ಟçಪತಿ ಮುರ್ಮುಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಒಟ್ಟು ೫೦ ವಿದೇಶಿ ಭಾಷೆಗಳಲ್ಲಿ ವಚನಗಳು ಅನುವಾದಗೊಳುತ್ತವೆ. ಇಷ್ಟು ಕೆಲಸ ಮಾಡಲು ನನಗೆ ಪ್ರೇರಣೆ ನೀಡಿದವರು ಶ್ರೀ ಸಿದ್ದೇಶ್ವರ ಅಪ್ಪಾಜಿಯವರು ಎಂದು ಹೇಳಲು ಸಂತೋಷವೆನಸುತ್ತದೆ ಎಂದು ಹೇಳಿದರು. 


ಇಸ್ಲಾಂ ವಿದ್ವಾಂಸರು ಕಾಶ್ಮೀರದಲ್ಲಿ ವಚನ ಅನುವಾದದ ಬಗ್ಗೆ ಕೇಳಿದಾಗ ಅದರಲ್ಲಿ ಮಾನವೀಯತೆಯ ಗುಣಗಳಿವೆ ಹಾಗಾಗಿ ನಾವು ಅದನ್ನು ಅನುವಾದ ಮಾಡುತ್ತಿದ್ದೇವೆ ಎಂದು ಉತ್ತರ ನೀಡಿದರು. ಅಂತಹ ದಿವ್ಯ ಶಕ್ತಿ ನಮ್ಮ ವಚನಗಲ್ಲಿ ಇವೆ. ನಾವು ಅವುಗಳಲ್ಲಿನ ಜ್ಞಾನವನ್ನು ಅಳವಡಿಸಿಕೊಂಡು ಬದುಕು ಸಾಗಿಸಬೇಕು. ಅವುಗಳು ನಮ್ಮ ಸಂಪತ್ತು ಎಂದು ಅವುಗಳನ್ನು ರಕ್ಷಣೆ ಮಾಡಿ ಬದುಕಬೇಕು. ಜಗತ್ತಿನಲ್ಲಿ ವಿಜ್ಞಾನ ಇದೆ, ಸುಜ್ಞಾನ ಇದೆ, ಆದರೆ ಇಂದು ವಿಜ್ಞಾನದಿಂದ ಜಗತ್ತು ನಾಶದ ಕಡೆಗೆ ಹೊರಟಿದೆ ಆದರೆ ಸುಜ್ಞಾನದಿಂದ ಜಗತ್ತು ಬೇಳಗಲಿದೆ ಎಂದರು


ಇದೇ ಸಂದರ್ಭದಲ್ಲಿ ಮುಚಳಂಬಾ ನಾಗಭೂಷಣ ಶಿವಯೋಗಿಗಳ ಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಪ್ರಣವಾನಂದ ಮಹಸ್ವಾಮಿಗಳು ಆಶೀರ್ವಚನ ನೀಡಿ, ಹೇಳುವುದು ಸರಳ ಮಾಡುವುದು ಬಹಳ ಕಷ್ಟ ಆದರೆ ಹೇಳಿದಂತೆ ಬದುಕಿ ಇಡೀ ಜಗತ್ತಿಗೆ ಪ್ರೇರಣೆಯಾದಂತವರು ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು. ಅವರು ಬದುಕಿದ ದಿನಗಳಲ್ಲಿ ನಾವು ಕೂಡ ಬದುಕಿದ್ದೇವು ಎನ್ನುವುದು ನಮಗೆ ಹೆಮ್ಮೆ. ಸಿದ್ದೇಶ್ವರ ಅಪ್ಪಾಜಿಯವರು ಜ್ಞಾನೋಪಾಸಕರು. ಅವರು ಜ್ಞಾನದ ಮೂಲಕ  ನಮಗೆ ಅಮೃತವನ್ನು ನೀಡಿದ್ದಾರೆ ಎಂದರು. ಬದುಕಿನಲ್ಲಿ ಆಧ್ಯಾತ್ಮದ ಕೀಲಿ ಮರೆತರೆ ನಿಮ್ಮ ಬದುಕು ನಿರರ್ಥಕವಾಗುತ್ತದೆ ಎಂದು ಸಿದ್ದೇಶ್ವರ ಅಪ್ಪಾಜಿಯವರು ನಮಗೆ ಹೇಳಿ ಹೋಗಿದ್ದಾರೆ. ಅವರು ಹೇಳಿದ ಮಾತನ್ನು ಪಾಲನೆ ಮಾಡಬೇಕು ಎಂದು ಹೇಳಿದರು.

ಜ್ಞಾನಯೋಗಾಶ್ರಮ ಅಧ್ಯಕ್ಷ ಗುರುಗಳಾದ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ತಮ್ಮ ಜೀವನದೂದ್ದಕ್ಕೂ ಇಡೀ ಜಗತ್ತಿಗೆ ಜ್ಞಾನದಾಸೋಹ ಬಡಿಸಿದಂತವರು. ಅವರು ಬಿತ್ತಿದ ಜ್ಞಾನದ ಬೀಜ ನಮ್ಮಲ್ಲಿ ಮೊಳಕೆಯೊಡೆದು ಹೆಮ್ಮರವಾಗಿ ಬೆಳೆಯಬೇಕಿದೆ. ಅವರು ನೀರೆರೆದ ಜ್ಞಾನದಲ್ಲಿ ಸ್ವಲ್ಪವಾದರೂ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗಿದ್ದೇ ಆದಲ್ಲಿ ಅವರ ಆಶಯ ಸಾರ್ಥಕವಾಗುತ್ತದೆ ಎಂದರು.

ಈ ಸಮಯದಲ್ಲಿ ವಿವಿಧ ಮಠಾಧೀಶರು, ಸ್ವಾಮೀಜಿಯವರು, ರೈತ ಮುಖಂಡರು, ನಾಯಕರು, ಸಾವಿರಾರು ಭಕ್ತಾಧಿಗಳು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಮರೆಯಲಾಗದ ಮಾಣಿಕ್ಯ. ಅವರು ಪ್ರತಿ ಕ್ಷಣವೂ ನಮ್ಮ ನೆನೆಪಿನಲ್ಲಿಯೇ ಇರುತ್ತಾರೆ:ಕೃಷಿ ನಿಯೋಗದ ಅಧ್ಯಕ್ಷ ಎ.ಎಸ್.ಆನಂದ

 ವಿಜಯಪುರ: ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಮರೆಯಲಾಗದ ಮಾಣಿಕ್ಯ. ಅವರು ಪ್ರತಿ ಕ್ಷಣವೂ ನಮ್ಮ ನೆನೆಪಿನಲ್ಲಿಯೇ ಇರುತ್ತಾರೆ ಅವರು ತೋರಿಸಿದ ದಾರಿಯಲ್ಲಿ ನಾವೆಲ್ಲರೂ ಸಾಗುವ ಮೂಲಕ ಸಾರ್ಥಕದ ಜೀವನ ನಡೆಸಬೇಕು ಎಂದು ಸಾವಯವ ಕೃಷಿ ನಿಯೋಗದ ಅಧ್ಯಕ್ಷ ಎ.ಎಸ್.ಆನಂದ ಹೇಳಿದರು.

ನಗರದ ಶ್ರೀ ಜ್ಞಾನಯೋಗಾಶ್ರಮದಲ್ಲಿ  ಶ್ರೀ ಸಿದ್ದೇಶ್ವರ ಅಪ್ಪಾಜಿಯವರ ೨ನೇ ವರ್ಷದ ಗುರು ನಮನ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ "ಸುಧಾರಿತ ಕೃಷಿ ಪದ್ಧತಿ" ಎಂಬ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಶ್ರೀ ಸಿದ್ದೇಶ್ವರ ಅಪ್ಪಾಜಿಯವರು ಇದ್ದಾಗ ಅವರನ್ನು ಭೇಟಿ ಮಾಡಲು ಅವರ ಮಾತುಗಳನ್ನು ಕೇಳಲು ಮನಸ್ಸು ಮೌನವಾಗುತ್ತಿತ್ತು. ಆದರೆ ಇಂದು ಅವರು ಇಲ್ಲದಾಗ ಅದೇ ಮೌನವನ್ನು ಮುರೆದು ಅವರ ಬಗ್ಗೆಯೇ ಮಾತನಾಡಬೇಕಾದ ಅನಿವಾರ್ಯತೆ ಬಂದಿದೆ. ಅವರು ಇಲ್ಲ ಎಂಬ ಮಾತು ನಂಬಲಸಾಧ್ಯ ಅವರು ನಮ್ಮ ಸುತ್ತು-ಮುತ್ತಲಯಲ್ಲಿಯೇ ಇದ್ದಾರೆ ನಮ್ಮ ಮಾತುಗಳನ್ನು ಕೇಲಿಸಿಕೊಳ್ಳುತ್ತಿದ್ದಾರೆ ಎಂಬ ಭಾವನೆ ಮೂಡುತ್ತದೆ ಎಂದರು.

ಇನ್ನು ಕೃಷಿಯ ಬಗ್ಗೆ ಅಪಾರ ಕಾಳಜಿ ಹೊಂದಿAತವರು ಅಪ್ಪಾಜೀಯವರು. ಸಾವಯವ ಕೃಷಿಯ ಬಗ್ಗೆ ಸಾಕಷ್ಟು ಅರಿವನ್ನು ರೈತರಿಗೆ ಮೂಡಿಸಿದಂತವರು. ಅವರ ಮಾತಿನಂತೆ ನಾವೆಲ್ಲರೂ ಸಾವಯವ ಕೃಷಿಯ ಮಹತ್ವದ ಬಗ್ಗೆ ಅರಿಯಬೇಕಾಗಿದೆ. ರೈತರು ರಾಸಾಯನಿಕ ಗೊಬ್ಬರವನ್ನು ನಮ್ಮ ಭೂಮಿಗೆ ಹಾಕುವುದರಿಂದ ಅದರಿಂದ ಆಗುವ ನಷ್ಟದ ಬಗ್ಗೆ ಅರಿಯಬೇಕಾಗಿದೆ. ಕೃಷಿ ಬರೀ ಲಾಭದಾಯಕ ಉದ್ಯೋಗವಾದ ಪರಿಣಾಮ ಇಂದಿನ ದಿನ ನಮಗೆ ಅನ್ನ ನೀಡುವ ಭೂಮಿಗೆ, ಹಾಲು ಕೊಡುವ ಗೋವಿಗೆ, ನಮ್ಮ ಮಕ್ಕಳಿಗೂ, ನಮ್ಮ ಕುಟುಂಬಗಳಿಗೂ ವಿಷಪೂರಿತ ಆಹಾರವನ್ನು ನೀಡುತ್ತಿರುವುದು ದುರಂತದ ವಿಷಯ ಎಂದರು.

ಪತ್ರಿಕೆಗಳಲ್ಲಿ ಯಾರದ್ದೋ ಕೊಲೆ ವಿಷಯವನ್ನು ಓದಿ ಮರುಗುವ ನಾವು ಪ್ರತಿದಿನ ವಿಷಪೂರಿತ ಗೊಬ್ಬರ ಬಳಸಿ ಇಷ್ಟೊಂದು ಜೀವಿಗಳ ಜೀವನವನ್ನು ನಾವು ನಾಶ ಮಾಡುತ್ತಿದ್ದೇವೆ ಅದರ ಬಗ್ಗೆ ಏಕೆ ನಮಗೆ ಅರಿವಾಗುತ್ತಿಲ್ಲ.

ಬಯಲಲ್ಲಿ ಬಯಲಾಗಿ ಹೋಗುವುದೇ ಜೀವನ ಎಂದು ಹೇಳಿದ ಸಿದ್ದೇಶ್ವರ ಸ್ವಾಮೀಜಿಯವರ ಮಾತುಗಳು ನಮ್ಮ ಜೀವನಕ್ಕೆ ಪ್ರೇರಣೆಯಾಗಬೇಕು. ನಾವು ಎಷ್ಟೇ ಗಳಿಸಿದರು, ಕೋಟಿ, ಕೋಟಿ ಕೂಡಿಟ್ಟರು ಎಲ್ಲವನ್ನು ಇಲ್ಲೆ ಬಿಟ್ಟು ಅಪ್ಪಾಜಿಯವರ ಮಾತಿನಂತೆ ಬಯಲಲ್ಲಿ ಬಯಲಾಗಿಯೇ ಹೋಗುವುದು ಶತಸಿದ್ಧ ಹೀಗಿರುವಾಗ ಕೃಷಿಯಲ್ಲಿ ಲಾಭದಾಯಕದ ಆಸೆಗಾಗಿ ಎಲ್ಲ ಬೆಳೆಗಳಿಗು ವಿಷ ಸಿಂಪಡಿಸಿ ಎಲ್ಲರ ಜೀವಕ್ಕೂ ಕುತ್ತು ತರುವ ಪದ್ಧತಿ ನಿಲ್ಲಬೇಕು. ನಮ್ಮ ಸ್ವಾರ್ಥಕ್ಕಾಗಿ ಭೂಮಿಗೆ ವಿಷ ಉಣಿಸುತ್ತಿದ್ದೇವೆ. ನಿಸರ್ಗ ಜೀವಿಗಳಿಗೆ ವಿಷ ಹಾಕಿ ಪಾಪಿಗಳಾಗುತ್ತಿದ್ದೇವೆ. ಕೃಷಿ ಸಾತ್ವಿಕವಾಗಬೇಕು ಅಂದಾಗ ಮಾತ್ರ ಈ ಭೂಮಿ ಮೇಲೆ ಒಳ್ಳೆಯದಾಗಲೂ ಸಾಧ್ಯ. ನಾವೆಲ್ಲರೂ ಯಾವ ರೈತ ತನ್ನ ಬೆಳೆಗಳಿಗೆ ವಿಷ ಸಿಂಪಡಿಸದೆ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಾನೊ ಅಂತಹವನನ್ನು ಕೈ ಮುಗಿದು ಗೌರವಿಸೋಣ. ಅಂತಹ ರೈತರನ್ನ ನೋಡಿ ಹೆಮ್ಮೆ ಪಡುವ ಮೂಲಕ ಅವರನ್ನು ಪ್ರೋತ್ಸಾಹಿಸೋಣ ಸಾವಯವ ಕೃಷಿ ಪದ್ಧತಿಗೆ ಬೆಂಬಲ ಸೂಚಿಸೋಣ ಎಂದರು.


ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಬೀಜ ಮತ್ತು ಸಾವಯವ ಪ್ರಮಾಣ ನಿಗಮದ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿ, ನಮ್ಮ ಇಡೀ ಮನೆತನವೇ ಆಶ್ರಮದ ಭಕ್ತರು. ನನ್ನ ಅಜ್ಜಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಗುರುಗಳಾದ ಮಲ್ಲಿಕಾರ್ಜುನ ಸ್ವಾಮೀಜಿಯವರ ಪರಮ ಭಕ್ತರಾಗಿದ್ದರು ಆ ಕಾಲದಿಂದಲೂ ಆಶ್ರಮದ ಜೊತೆ ನಮ್ಮ ಒಡನಾಟ ಮರೆಯಲಾಗದು. ಒಬ್ಬ ಗುರುವಾಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಆಶೀರ್ವಾದ ನಮ್ಮ ಮನೆಯ ಮೇಲೆ ಸದಾ ಇದೆ ಅವರ ಆಶೀರ್ವಾದದ ಕಾರಣವೇ ಇಂದು ನಾವು ಇಷ್ಟರ ಮಟ್ಟಿಗೆ ಬೆಳೆಯಲು ಸಾಧ್ಯ ಎಂದರು. ಶ್ರೀ ಸಿದ್ದೇಶ್ವರ ಅಪ್ಪಾಜಿಯವರಿಗೆ ಲಕ್ಷಾಂತರು ಭಕ್ತರು ಜತತ್ತಿನಾದ್ಯಂತ ಅವರನ್ನು ಪೂಜಿಸುತ್ತಾರೆ. ಅವರು ನಡೆದಾಡಿದ ಭೂಮಿಯಲ್ಲಿ ನಾವೆಲ್ಲರೂ ಜನಿಸಿದ್ದೇ ನಮ್ಮ ಪುಣ್ಯ. ಅವರ ಹಾಕಿ ಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಕೃಷಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅಪ್ಪಾಜಿಯವರು ಯಾರಾದರೂ ರೈತರು ತಮ್ಮ ತೋಟಕ್ಕೆ ಕರೆದರೆ ಅತ್ಯಂತ ಖುಷಿಯಿಂದ ಹೋಗಿ ಅವರ ಬೆಳೆ ಪದ್ಧತಿಗೆಳಿಗೆ ಹಲವಾರು ಸಲಹೆ ಸೂಚನೆಗಳನ್ನು ನೀಡುತ್ತಿದ್ದರು, ಸಾವಯವ ಕೃಷಿಗೆ ಒತ್ತು ಕೊಡುವಂತೆ ಪ್ರೇರೆಪಿಸುತ್ತಿದ್ದರು ಅವರ ಸಲಹೆಯಂತೆ ನಾವೆಲ್ಲರೂ ಸಾವಯವ ಕೃಷಿ ಪದ್ಧತಿಗೆ ಬೆಂಬಲ ಸೂಚಿಸಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಬಬಲೇಶ್ವರದ ಪಂಚಮಸಾಲಿ ಪೀಠದ ಜಗದ್ಗುರು ಪೂಜ್ಯ ಶ್ರೀ ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶ್ರೀ ಮಲ್ಲಿಕಾರ್ಜುನ ಅಪ್ಪಾಜೀಯವರು ವೇದಾಂತ ಕೇಸರಿ ಎಂಬ ಬಿರುದನ್ನು ಸುಮ್ಮನೆ ಪಡೆದಿಲ್ಲ. ಪ್ರತಿ ದಿನವೂ ಸತತ ಮೂರು ಹೊತ್ತುಗಳ ಕಾಲ ಇಡೀ ಭಕ್ತಕೂಲಕ್ಕೆ ಪ್ರವಚನ ನೀಡಿದಂತವರು ಸ್ವಾಮೀಜಿಯವರು. ಅವರ ಶಿಷ್ಯರಾಗಿ ಇಡೀ ಪ್ರಪಂಚದಾದ್ಯAತ ಇಂಗ್ಲೀಷ್ ಸೇರಿದಂತೆ ಹಲವಾರು ಭಾಷೆಗಳಲ್ಲಿ ಜ್ಞಾನದಾಸೋಹ ಮಾಡಿದಂತವರು ಶ್ರೀ ಸಿದ್ದೇಶ್ವರ ಅಪ್ಪಾಜಿಯವರು. ಪ್ರತಿ ಹಳ್ಳಿ-ಹಳ್ಳಿಗೂ, ದೇಶ-ವಿದೇಶಕ್ಕೂ ತಮ್ಮ ಜ್ಞಾನ ಭಂಡಾರವನ್ನು ಹಂಚಿದAತವರು. ಬದುಕು ಹೇಗಿರಬೇಕು, ಜೀವನ ಎಂದರೆ ಏನು, ಎಷ್ಟು ಸರಳವಾಗಿ ನಾವು ಬದುಕಬೇಕು, ಇದರ ಜೊತೆಗೆ ರೈತರ ಜವಾಬ್ದಾರಿ ಮತ್ತು ಕೃಷಿಯ ಮಹತ್ವದ ಬಗ್ಗೆ ನಡೆದಾಡಿಕೊಂಡೆ ಇಡೀ ಮನುಕೂಲಕ್ಕೆ ತಿಳಿಸಿದ ಮಹಾತ್ಮ ಶ್ರೀ ಸಿದ್ದೇಶ್ವರ ಅಪ್ಪಾಜಿಯವರು. ಅವರ ಬಗ್ಗೆ ಮಾತನಾಡುವುದೇ ನಮ್ಮ ಪುಣ್ಯ ನಮ್ಮ ಜೀವನ ಪಾವಣವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರು ಶ್ರೀ ಬಸವಲಿಂಗ ಸ್ವಾಮೀಜಿಯವರು ಆಶೀರ್ವಚನ ನೀಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ನಮ್ಮ ಜೀವನಕ್ಕೆ ದಾರಿದೀಪ. ಜಗತ್ತಿಗೆ ನಿರಂತರ ಅನ್ನ ಕೊಡುವವನು ರೈತ ನಮ್ಮ ಜೀವನಕ್ಕೆ ರೈತರ ಕೊಡುಗೆ ಅಪಾರ. ಅಂತಹ ರೈತರ ಪ್ರಾಮುಖ್ಯತೆ ಬಗ್ಗೆ ಪೂಜ್ಯ ಶ್ರೀ ಸಿದ್ದೇಶ್ವರ ಅಪ್ಪಾಜಿಯವರು ನಮಗೆ ಸದಾಕಾಲ ತಿಳಿಸಿಕೊಟ್ಟಿದ್ದಾರೆ. ರೈತರೆಂದರೆ ಅವರಿಗೆ ಅಪಾರ ಪ್ರೀತಿ, ಗೌರವ ಎಲ್ಲಿಯಾದರೂ ಹೋಗುವಾಗ ಹೊಲದಲ್ಲಿ ರೈತರು ಕಂಡರೆ ಅಲ್ಲಿ ನಿಂತು ಅವರನ್ನು ಮಾತನಾಡಿಸಿ ಅವರೊಂದಿಗೆ ಕೆಲ ಕಾಲ ಚರ್ಚಿಸಿ ನಂತರ ಮತ್ತೆ ವಾಪಾಸಾಗುತ್ತಿದ್ದರು ಅಷ್ಟು ಪ್ರೀತಿಯನ್ನು ರೈತರಿಗೆ ಅಪ್ಪಾಜಿಯವರು ತೋರಿಸುತ್ತಿದ್ದರು ಎಂದರು.

 

ಇದೇ ಸಂದರ್ಭದಲ್ಲಿ ಪ್ರಗತಿಪರ ಸಾವಯವ ಕೃಷಿಕರ ಧರೆಪ್ಪ ಕಿತ್ತೂರ ಮಾತನಾಡಿ, ನಮ್ಮ ಜೀವನದಲ್ಲಿ ಕೃಷಿ, ಪರಿಸರ, ಆರೊಗ್ಯದ ಬಗ್ಗೆ ಅರಿವನ್ನು ಮೂಡಿಸಿದವರು ಶ್ರೀ ಸಿದ್ದೇಶ್ವರ ಅಪ್ಪಾಜಿಯವರು. ನಾನು ರೈತನಾಗಿ  ಇಷ್ಟು ಸಾಧನೆ ಮಾಡಬೇಕೆಂದರೆ ಅವರೆ ಕಾರಣ. ಸಾವಯವ ಕೃಷಿಯ ಮಹತ್ವದ ಬಗ್ಗೆ ತಿಳಿಸಿ ಅದನ್ನು ನನ್ನ ತೋಟದಲ್ಲಿ ಪ್ರಯೋಗಿಸಲು ಕಾರಣ ಅಪ್ಪಾಜಿಯವರು. ನನ್ನ ಕೃಷಿ ತೋಟಕ್ಕೆ ಭೇಟಿ ನೀಡಿ ನನಗೆ ಸಾಕಷ್ಟು ಸಲಹೆ ನೀಡಿ ನನಗೆ ಆಶೀರ್ವಾದ ಮಾಡಿದ್ದರು ಅವರು ನಮ್ಮ ಮನದಲ್ಲಿ ಎಂದೆAದಿಗೂ ಅಮರರು ಎಂದು ಹೇಳಿದರು.

ಇನ್ನೋರ್ವ ರೈತ ರಾಜಶೇಖರ ನಿಂಬರಗಿ ಮಾತನಾಡಿ, ಅಪ್ಪಾಜೀಯವರು ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದAತವರು. ಕೃಷಿಯ ಮಹತ್ವದ ಬಗ್ಗೆ ಇಡೀ ಮನುಕೂಲಕ್ಕೆ ತಲುಪಿಸಿದಂತವರು. ಅವರ ಸಲಹೆ ಸೂಚನೆಗಳು ಕೃಷಿಕರಿಗೆ ಸಾಕಷ್ಟು ಸಹಕಾರಿಯಾಗಿವೆ ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೂ ಮುನ್ನ ಹಂತಿಪದಗಳನ್ನು ಹಾಡಿ ಜಾನಪದ ಕಲೆಯನ್ನು ಮರುಕಳಿಸಿದ ರೈತರನ್ನು ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಮಯದಲ್ಲಿ ವಿವಿಧ ಮಠಾಧೀಶರು, ಪೂಜ್ಯರು, ರೈತ ಮುಖಂಡರು, ನಾಯಕರು, ಸಾವಿರಾರು ಭಕ್ತಾಧಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಸುಭಾಷ್ ಕನ್ನೂರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಸಾಹಿತಿ ಜಂಬುನಾಥ ಕಂಚ್ಯಾಣಿ ಸ್ವಾಗತಿಸಿದರು, ಶಿಕ್ಷಕ ಅಶೋಕ ಹಂಚಲಿ ನಿರೂಪಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.