Sunday, August 31, 2025

01-09-2025 EE DIVASA KANNADA DAILY NEWS PAPER

ಹಿಂದುಳಿದ ವರ್ಗಗಳ ಹಿತರಕ್ಷಕ ಅಂಬೇಡ್ಕರ್: ಡಾ. ಪೋತೆ

ವಿಜಯಪುರದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಕೃತಿಗಳ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ವಿಜಯಪುರ: ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಡಾ.ಅಂಬೇಡ್ಕರ್ ಅವರು ಹಿಂದುಳಿದ ವರ್ಗಗಳ ಹಿತರಕ್ಷಣೆಯ ಬಗ್ಗೆಯೂ ಯೋಚಿಸಿ ಹಿಂದುಳಿದ ವರ್ಗದವರ ಪರ ಧ್ವನಿಯಾಗಿದ್ದರು, ಇದನ್ನು ಹಿಂದುಳಿದ ವರ್ಗದವರು ಅಂಬೇಡ್ಕರ್ ಅವರನ್ನು ಮರೆಯಬಾರದು ಎಂದು ಹಿರಿಯ ಸಾಹಿತಿ ಡಾ.ಎಚ್.ಟಿ. ಪೋತೆ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮAದಿರದಲ್ಲಿ ಕವಿತಾ ಪ್ರಕಾಶನ ಚನ್ನಬಸಮ್ಮ ಚಂದಪ್ಪ ಪ್ರತಿಷ್ಠಾನದ ಆಶ್ರಯದಲ್ಲಿ ಹಮ್ಮಿಕೊಂಡ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ರಚಿಸಿದ ನಮ್ಮ ಸಂವಿಧಾನ- ನಮ್ಮ ಹೆಮ್ಮೆ ಹಾಗೂ ದೇವರ ಗೆಣ್ಣೂರ ಎಂಬ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಮನೆಯಲ್ಲಿ ಸಾವು ಸಂಭವಿಸಿದರೂ ಸಹ ಲಕ್ಷಾಂತರ ಮಕ್ಕಳು ಕಣ್ಣೀರು ಸುರಿಸಬಾರದು ಎಂಬ ಏಕೈಕ ಉದ್ದೇಶದಿಂದ ಲಂಡನ್‌ಗೆ ಹೋಗಿ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಧ್ವನಿ ಮಂಡಿಸಿದ್ದರು ಎಂದರು.

ಸರ್ಕಾರಿ ಅಧಿಕಾರಿಗಳಿಗೆ ಬುದ್ಧ, ಬಸವಣ್ಣ, ಡಾ.ಅಂಬೇಡ್ಕರ್, ಕುವೆಂಪು ಮತ್ತಿತರರ ಮನಸ್ಥಿತಿ ಬರಬೇಕೇ ಹೊರತು, ದರ್ಪದ ಮನಸ್ಥಿತಿ ಇರಬಾರದು. ಈ ಎಲ್ಲ ಮಹನೀಯರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳು ಮುಂದಾಗಬೇಕು ಎಂದರು.

ಶಾಲೆಗಳಲ್ಲಿ ಹೋಮ, ಹವನ ಮಾಡುವುದು ಕಲಿಸಲಾಗುತ್ತದೆ. ಆದರೆ, ಸಂವಿಧಾನ ಓದುವುದನ್ನು ಕಲಿಸುತ್ತಿಲ್ಲ ಎಂಬುದು ಬೇಸರದ ಸಂಗತಿ. ಇಂದು ಮೊಬೈಲ್ ಬದಿಗಿಟ್ಟು ಪುಸ್ತಕ ಕೈಗೆ ತೆಗೆದುಕೊಳ್ಳಿ, ಮಾಂಸಾಹಾರ ಒಂದು ಬಾರಿ ಬಿಟ್ಟರೂ ಚಿಂತೆಯಿಲ್ಲ ಆ ಹಣದಲ್ಲಿ ಪುಸ್ತಕ ಖರೀದಿಸಿ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಮಾತನಾಡಿ, ವ್ಯಕ್ತಿಯೊಬ್ಬ ಪ್ರಾಮಾಣಿಕನಾಗಿದ್ದಾಗ ಸಾಹಿತ್ಯ ಬರೆಯಲು ಸಾಧ್ಯ, ಗೆಣ್ಣೂರ ಅವರಲ್ಲಿ ಪ್ರಾಮಾಣಿಕತೆ ಇದ್ದ ಕಾರಣಕ್ಕೆ ಅವರು ಬರೆಯಲು ಸಾಧ್ಯವಾಯಿತು, ಇದೇ ನೆಲದಲ್ಲಿ ಒಬ್ಬ ರಾಜಕಾರಣಿ ಸಾಹಿತಿಗಳನ್ನು ಗಂಜಿ ಗಿರಾಕಿಗಳು ಎಂದು ಕರೆದಿದ್ದರು ದುರದೃಷ್ಟಕರ ಎಂದರು.

ದೇಶದಲ್ಲಿ ಸಮೃದ್ಧತೆ, ಸೌಹಾರ್ದತೆ ಮೂಡಲು ಯಾವುದೇ ದೇವರು ಕಾರಣವಲ್ಲ ಅದಕ್ಕೆ ಕಾರಣ ಡಾ.ಅಂಬೇಡ್ಕರ್, ಹೀಗಾಗಿ ಡಾ.ಅಂಬೇಡ್ಕರ್ ಅವರು ರಾಷ್ಟçದ ಮಹಾಪಿತ ಎಂದರು.

ಜಿಲ್ಲಾಧಿಕಾರಿ ಡಾ.ಆನಂದ ಕೆ. ಮಾತನಾಡಿ, ಸರ್ಕಾರದ ಕೆಲಸದ ಒತ್ತಡದ ನಡುವೆ ಸಾಹಿತ್ಯ ಬರೆಯುವ ಕಲ್ಪನೆ ಬರುವುದು ವಿಶೇಷ. ನಮ್ಮ ಶಾಲಾ, ಕಾಲೇಜು ದಿನಗಳ ಹವ್ಯಾಸ ಮುಂದುವರಿಸಿಕೊAಡು ಹೋಗುವುದು ಕಷ್ಟದ ಕೆಲಸ. ಜನರ ಕೆಲಸದ ನಡುವೆ ಸಾಹಿತ್ಯ ರಚಿಸಿರುವುದು ಶ್ಲಾಘನೀಯ ಎಂದರು.

ಎಸ್ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ದೇವನೂರು ಮಹಾದೇವ ಅವರ ಒಡಲಾಳದ ಭಾಷೆಯಂತೆ ದೇವರ ಗೆಣ್ಣೂರ ಅವರ ಆತ್ಮಕಥೆಯೂ ಸ್ವಾತಂತ್ರ‍್ಯ, ಸಮಾನತೆ, ಭ್ರಾತೃತ್ವದ ಆಶಯದ ಸ್ವರೂಪದಂತಿದೆ ಎಂದರು.

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕೆಎಎಸ್ ಅಧಿಕಾರಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಕವಿತಾ ಪ್ರಕಾಶನದ ಗಣೇಶ ಅಮೀನಗಡ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಅಡಿವೆಪ್ಪ ಸಾಲಗಲ್, ರಾಜಶೇಖರ ಯಡಹಳ್ಳಿ, ಸುರೇಶ ಶೆಡಶ್ಯಾಳ, ನಾಗರಾಜ ಲಂಬು, ಪ್ರೊ.ದೊಡ್ಡಣ್ಣ ಭಜಂತ್ರಿ, ಸುಜಾತಾ ಚಲವಾದಿ, ರಮೇಶ ಆಸಂಗಿ, ಅಭಿಷೇಕ ಚಕ್ರವರ್ತಿ ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಡಾ. ಸುಧಾರಾಣಿ ಮಣೂರವರ ಕೃತಿ ಬಿಡುಗಡೆಗೊಳಿಸಿದ ಗುರುಮಹಾಂತ ಶ್ರೀಗಳು ಮಕ್ಕಳ ಸಾಹಿತ್ಯ ಅವಲೋಕನ ಕೃತಿ ; ಮಕ್ಕಳ ಸಾಹಿತ್ಯದಲ್ಲಿ ಕೃಷಿಮಾಡುವವರಿಗೆ ದಿಕ್ಸೂಚಿ

 ವಿಜಯಪುರ: ಡಾ. ಸುಧಾರಾಣಿ ಮಣೂರ ಅವರು ‘ಮಕ್ಕಳ ಸಾಹಿತ್ಯ ಅವಲೋಕನ' ಕೃತಿ ಯುವ ಬರಹಗಾರರಿಗೆ ಆಕರ ಗ್ರಂಥವಾಗಿದೆ. ಮಕ್ಕಳ ಸಾಹಿತ್ಯದಲ್ಲಿ ಕೃಷಿಮಾಡುವವರಿಗೆ ದಿಕ್ಸೂಚಿಯಾಗಿದೆ ಎಂದು ಇಲಕಲ್ ಚಿತ್ತರಗಿ ಮಹಾಂತಮಠದ ಪೂಜ್ಯರಾದ ಮನಿಪ್ರ ಶ್ರೀ ಗುರುಮಹಾಂತ ಮಹಾಸ್ವಾಮಿಗಳು ಹೇಳಿದರು.

 ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ಪ.ಗು.ಸಿದ್ದಾಪುರ ಅವರ ಮನೆಯಲ್ಲಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದಲ್ಲಿ ಡಾ. ಸುಧಾರಾಣಿ ಮಣೂರ ಅವರು ರಚಿಸಿದ ಮಕ್ಕಳ ಸಾಹಿತ್ಯ ಅವಲೋಕನ ಗ್ರಂಥವನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು. 

 ಡಾ. ಸುಧಾ ರಾಣಿ ಮಣೂರ ಅವರು ‘ಮಕ್ಕಳ ಸಾಹಿತ್ಯ ಅವಲೋಕನ' ಕೃತಿಯಲ್ಲಿ ಮಕ್ಕಳ ಸಾಹಿತ್ಯದಲ್ಲಿ ಕೃಷಿ ಮಾಡಿದ ಹಿರಿಯ ಮಕ್ಕಳ ಸಾಹಿತಿಗಳ ಕೃತಿಗಳನ್ನು ವಿಮರ್ಶೆ ಮಾಡಿದ್ದಾರೆ. ಮಕ್ಕಳ ಸಾಹಿತ್ಯದ ಕುರಿತು ವಿಶೇಷ ಲೇಖನಗಳನ್ನು ಬರೆದಿದ್ದಾರೆ ಎಂದರು. 

 ಈ ಸಂದರ್ಭ ಬಸವರಾಜ ಸಿದ್ದಾಪುರ, ಅರವಿಂದಕುಮಾರ ಸಿದ್ದಾಪುರ, ಶಿವಪ್ಪ ಮಣೂರ, ಡಾ.ಸುಧಾರಾಣಿ ಮಣೂರ ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.