Friday, July 19, 2024

ತಂಬಾಕು ಸೇವನೆ ನಿಯಂತ್ರಣಕ್ಕೆ ಜೀವನಶೈಲಿ ಬದಲಾವಣೆ ಒಂದೇ ದಾರಿ


 

ವಿಜಯಪುರ: ಇತ್ತೀಚಿನ ದಿನಗಳಲ್ಲಿ ತಂಬಾಕು ಸೇವನೆ ಪಿಡುಗು ಹೆಚ್ಚಾಗುತ್ತಿದೆ, ಬಾಯಿ ಹುಣ್ಣು, ಅನ್ನನಾಳ, ಶ್ವಾಸಕೊಶ, ಮೂತ್ರಕೋಶ, ಗಂಟಲು ಕ್ಯಾನ್ಸರ್ ನಂತಹ ಭಯಾನಕ ರೋಗಗಳು ತಂಬಾಕು ಸೇವನೆಯಿಂದಲೆ ಹೆಚ್ಚಾಗಿ ಬರುತ್ತಿವೆ. ಎಂಬ ಅರಿವು ಸಾಮಾನ್ಯ ಜನರಿಗೆ ಗೊತ್ತಿಲ್ಲ, ಗೊತ್ತಿದ್ದರೂ ಸಹ ನಿರ್ಲಕ್ಷ ಮಾಡುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಯಾವುದೇ ವ್ಯಕ್ತಿ ತಮ್ಮ ಜೀವನದಲ್ಲಿ ನಿಲುವು ಮತ್ತು ಸರಿಯಾದ ಜೀವನಶೈಲಿ ಬದಲಾವಣೆ ಮಾಡಿಕೊಂಡಲರೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟಬಹುದು ಎಂದು ವಿಜಯಪುರ ತಾಲೂಕು ಆರೊಗ್ಯ ಅಧಿಕಾರಿಗಳಾದ ಡಾ|| ಪರಶುರಾಮ ಹಿಟ್ನಳ್ಳಿ ಹೇಳಿದರು.

 ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಬೆಂಗಳೂರು ಪಿ.ಜಿ.ಡಿ.ಹೆಚ್.ಪಿ.ಈ. ವಿಭಾಗದ ಮೇಲ್ವಿಚಾರಣೆ ಆಧಾರಿತ ಕ್ಷೇತ್ರ ತರಬೇತಿ 2024ರ ಅಡಿಯಲ್ಲಿ “ತಂಬಾಕು ಸೇವನೆ ದುಷ್ಪರಿಣಾಮ ಕುರಿತು ಜಾಗೃತಿ ಮತ್ತು ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ” ಉದ್ಘಾಟಿಸಿ ಡಾ|| ಪರಶುರಾಮ ಹಿಟ್ನಳ್ಳಿ ಮಾತನಾಡಿದರು.

 ಸಾರ್ವಜನಿಕ ಆರೋಗ್ಯ ಕುರಿತು ಹಲವಾರು ಯೋಜನೆಗಳು ಸರಕಾರದಿಂದ ಲಭ್ಯವಿದ್ದು, ಆ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು, ವಿಶೇಷವಾಗಿ ಯುವಕರು/ಯುವತಿಯರು ಹೆಚ್ಚಾಗಿ ಭಾಗವಹಿಸಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಮಾಹಿತಿ ಪಡೆದುಕೊಂಡು ತಮ್ಮ ತಮ್ಮ ಮನೆಯ ಹಿರಿಯರಿಗೆ ಕಿರಿಯರಿಗೆ ಮಾಹಿತಿ ತಿಳಿಸಿಕೊಡಬೇಕು. ಎಂದು ಜುಮನಾಳ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಶ್ರೀ ಮುಕ್ಕಣ್ಣ ನಾಯಕ ಹೇಳಿದರು.

 ಯಾವುದೇ ಲಿಂಗ ಭೇಧವಿಲ್ಲದೆ ಪುರುಷರು, ಮಹಿಳೆಯರು, ಯುವಕ, ಯುವತಿಯರು ಎಲ್ಲರಲ್ಲೂ ತಂಬಾಕು ಸೇವನೆ ಒಂದು ಚಟವಾಗಿದೆ, ಈ ಚಟದಿಂದ ಪಾರಾಗಲು ಆರೋಗ್ಯ ಇಲಾಖೆ ವತಿಯಿಂದ ಹಲವಾರು (ಐ.ಈ.ಸಿ./ಬಿ.ಸಿ.ಸಿ) ಜಾಗೃತಿ, ಜ್ಞಾನ, ಅರಿವು ಮತ್ತು ವರ್ತನೆಗಳ ಬದಲಾವಣೆಯುತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ ವಿಭಾಗದಿಂದ ಕರಪತ್ರಗಳು, ಬಿತ್ತಿಪತ್ರಗಳು, ಬೀದಿ ನಾಟಕ, ವಿವಿಧ ಜನಪದ ಕಲೆಗಳ ಮುಖಾಂತರ ಆರೋಗ್ಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀ ಜಿ. ಎಮ್. ಕೊಲೂರ ಹೇಳಿದರು.

 ಉಸಿರು ಜೀವನಕ್ಕೆ ಅವಶ್ಯಕ, ಉಸಿರಾಡುವ ಗಾಳಿ ಸ್ವಚ್ಛವಾಗಿರುವುದು ಅತ್ಯಂತ ಅವಶ್ಯಕ ಆದರೆ ಧೂಮಪಾನಿಗಳು ತಾವು ಕೆಡುವುದಲ್ಲದೆ ಧೂಮಪಾನ ಮಾಡದೇ ಇರುವ ಅಮಾಯಕ ಮಕ್ಕಳು ಕುಟುಂಬಸ್ಥರು ತಂಬಾಕು ಹೊಗೆ ಮಿಶ್ರಿತ ಗಾಳಿ ಸೇವಿಸಲು ಪ್ರೋಕ್ಷವಾಗಿ ಕಾರಣರಾಗಿದ್ದಾರೆ. ಅದರಿಂದಾಗಿ ಮಕ್ಕಳಲ್ಲೂ ಸಹ ಕ್ಯಾನ್ಸರ ಅಂತಹ ಕಾಯಿಲೆಗಳು ಹೆಚ್ಚಾಗುತ್ತಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ಪಿ.ಜಿ.ಡಿ.ಹೆಚ್.ಪಿ.ಈ ವಿಭಾಗದ ಉಪನ್ಯಾಸಕರಾದ ಡಾ|| ಮಂಜುನಾಥ ಟಿ. ಎ. ರವರು ಆತಂಕ ವ್ಯಕ್ತಪಡಿಸಿದರು.

 ತಂಬಾಕಿನಲ್ಲಿರುವ ಸುಮಾರು ಆರು ಸಾವಿರ ರಸಾಯನಿಕಗಳು ಹಲವಾರು ಭಯಂಕರ ರೋಗಗಳಿಗೆ ಕಾರಣವಾಗಿವೆ ಅದರಲ್ಲೂ ಕೂದಲು ಉದರುವುದು. ಕಣ್ಣಿನ ಪೊರೆ/ನರದೌರ್ಬಲ್ಯ, ದಂತಕ್ಷಯ, ಶ್ವಾಸಕೊಶ ಕ್ಯಾನ್ಸರ್, ಹೃದಯಾಘಾತ, ಹೊಟ್ಟೆ ಅಲ್ಸರ್, ಪಾರ್ಶ್ವವಾಯುದಂತ ಭಯಾನಕ ರೋಗಗಳು ಸಂಭವಿಸುತ್ತವೆ. ಧೂಮಪಾನಿಗಳಲ್ಲಿ ಕ್ಷಯರೋಗ ಬರುವ ಅಪಾಯ ಮೂರು ಪಟ್ಟು ಇತರರಿಗಿಂತ ಹೆಚ್ಚಿದೆ. ಅಂದರೆ ಮರಣ ಪ್ರಮಾಣ 3 ರಿಂದ 4 ಪಟ್ಟು ಹೆಚ್ಚಿದೆ ಎಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀ ಸುರೇಶ ಹೊಸಮನಿ ತಮ್ಮ ಸುಧೀರ್ಘ ಭಾಷಣದಲ್ಲಿ ಎಚ್ಚರಿಕೆ ಸಂದೇಶ ನೀಡಿದರು.

 ಈ ಆರೋಗ್ಯ ಜಾಗೃತಿ ಕಾರ್ಯಕ್ರಮ ಜುಮನಾಳ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಫಿರ್ದೋಶ ಮೆಹಬೂಬಸಾಬ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

 ಜಮನಾಳ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಸುರೇಶ ಕೊಲಕಾರ ಕಾರ್ಯಕ್ರಮಕ್ಕೆ ಸೌಲಭ್ಯಗಳನ್ನು ಒದಗಿಸಲು ಸಹಕರಿಸಿದರು. ಕಾರ್ಯಕ್ರಮವನ್ನು ಶ್ರೀ ದಿನೇಶ ಕೋರಿ ನಿರೂಪಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮತ್ತು ಪ್ರಶಿಕ್ಷಣಾರ್ಥಿ ಶ್ರೀ ಶಂಕರಪ್ಪ ಎಂ. ಚಲವಾದಿ ಕಾರ್ಯಕ್ರಮ ನೆರವೇರಿಸಿ ಕೊಟ್ಟರು. ಟಿ.ಹೆಚ್.ಓ. ಕಾರ್ಯಾಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಎನ್. ಆರ್. ಬಾಗವಾನ ವಂದಿಸಿದರು.

 ಜುಮನಾಳ ಗ್ರಾಮ ಪಂಚಾಯತಿ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಹೊನಕಟ್ಟಿ, ಎನ್. ಟಿ. ಸಿ. ಪಿ. ವಿಭಾಗದ ಶ್ರೀಕಾಂತ ಪೂಜಾರಿ, ಸಮುದಾಯ ಆರೋಗ್ಯ ಅಧಿಕಾರಿ ಬಸವರಾಜ ಬಿರಾದಾರ, ಶ್ರೀಮತಿ ಕೆ. ಸಿ. ಇಂಡಿಕರ, ಶ್ರೀಮತಿ ಆಶಾ ಬಿದರಿ, ಗಾಮದ ಪಂಚಾಯತ ಸದಸ್ಯರು ಆಶಾ ಕಾರ್ಯಕರ್ತರು ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 ರಾಜ್ಯ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ, ಬೆಂಗಳೂರು, ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಜಯಪುರ, ತಾಲ್ಲೂಕ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಜಯಪುರ, ಪ್ರಾಥಮಿಕ ಆರೋಗ್ಯ ಕೇಂದ್ರ ಹೊನಗನಹಳ್ಳಿ ಹಾಗೂ ಜುಮನಾಳ ಗ್ರಾಮ ಪಂಚಾಯತಿ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಜರುಗಿತು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.