ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಧರಣಿ ನಡೆಸುತ್ತಿರುವುದು.
ವಿಜಯಪುರ: ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವಂತೆ ಆಗ್ರಹಿಸಿ ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆ ಹೋರಾಟ ಸಮಿತಿ ಪದಾಧಿಕಾರಿಗಳು ಹಮ್ಮಿಕೊಂಡ ಧರಣಿ ಶನಿವಾರ 3 ನೇ ದಿನ ಪೂರೈಸಿ, ಭಾನುವಾರ 4 ನೇ ದಿನಕ್ಕೆ ಕಾಲಿಟ್ಟಿದೆ.
ಈ ಸಂದರ್ಭ ಧರಣಿಗೆ ವಿವಿಧ ಸಂಘಟನೆಗಳು ಹಾಗೂ ಛಾಯಾಗ್ರಾಹಕರ ಸಂಘದವರು ಬೆಂಬಲ ವ್ಯಕ್ತಪಡಿಸಿದರು.
ಛಾಯಾಗ್ರಾಹಕ ಸಂಘದ ಜಿಲ್ಲಾಧ್ಯಕ್ಷ ರಮೇಶ ಚವ್ಹಾಣ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಸಚಿವದ್ವಯರು ರಾಜ್ಯ ಕಂಡ ಪ್ರಭಾವಿ ನಾಯಕರುಗಳಾಗಿದ್ದು, ನಮ್ಮ ಜಿಲ್ಲೆಯು ಅತಿ ಹಿಂದುಳಿದ ಜಿಲ್ಲೆ ಎಂಬುದು ಗೊತ್ತಿದೆ. ಇದಕ್ಕೆ ಕೂಡಲೇ ಸ್ಪಂದಿಸಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು. ನಾವು ಜಿಲ್ಲೆಯಲ್ಲಿ ಏನೇ ಯೋಜನೆ ಅಥವಾ ಯಾವುದೇ ಸೌಲಭ್ಯಗಳು ಪಡೆಯಬೇಕು ಎಂದರೆ ಹೋರಾಟ, ಪ್ರತಿಭಟನೆ ಮಾಡಲೇಬೇಕಾದಂತಹ ಅನಿವಾರ್ಯವಾಗಿದೆ ಎಂದರು.
ಅನಿರ್ಧಿಷ್ಟ ಧರಣಿಯನು ಉದ್ದೇಶಿಸಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎಮ್.ಎಮ್. ಶೇಖ ಮಾತನಾಡಿ, ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವವರೆಗೆ ನಾವು ಹೋರಾಟದಶ ಜೊತೆ ಇರುತ್ತೇವೆ, ಯಾವುದೇ ಕಾರಣಕ್ಕೂ ಖಾಸಗೀಯವರಿಗೆ ಬಿಟ್ಟುಕೊಡಲು ಬಿಡುವುದಿಲ್ಲ ಎಂದರು.
ನಿವೃತ್ತ ಉಪನ್ಯಾಸಕ ಎಸ್.ಆರ್. ಟಿಂಗ್ರಿ, ಮುಖಂಡರಾದ ಡಾ. ಗುರಿಕಾರ, ಪರಶುರಾಮ ಬಂದಪಟೆ, ವಿಶ್ವನಾಥ ಅಲಕುಂಟೆ, ಬಸವರಾಜ ಬಾಗೇವಾಡಿ, ದಾವಲಸಾಬ ಸೊಲ್ಲಾಪುರ, ಕರವೇ ಜಿಲ್ಲಾಧ್ಯಕ್ಷ ಗಿರೀಶ ಕಲಘಟಗಿ, ಸುಶಿಲಾ ಮಿಣಜಗಿ, ಜ್ಯೋತಿ ಮಿಣಜಗಿ, ರೈತ ಸಂಘಟನೆಯ ನೀಲಾಂಬಿಕಾ ಬಿರಾದಾರ, ಅರವಿಂದ ಕುಲಕರ್ಣಿ, ಅಕ್ರಂ ಮಾಶಾಳಕರ, ಮಲ್ಲಿಕಾರ್ಜುನ ಬಟಗಿ, ಬಾಬುರಾವ್ ಬೀರಬ್ಬಿ, ಬೋಗೇಶ ಸೊಲ್ಲಾಪುರ, ಅನಿಲ ಹೊಸಮನಿ, ಭರತಕುಮಾರ ಎಚ್.ಟಿ., ಸಿದ್ದಲಿಂಗ ಬಾಗೇವಾಡಿ, ಗೀತಾ ಎಚ್., ದಸ್ತಗಿರಿ ಉಕ್ಕಲಿ, ಸಿದ್ರಾಮ ಹಿರೇಮಠ, ಮಹಾದೇವಿ ಧರ್ಮಶೆಟ್ಟಿ, ಜಯದೇವ ಸರ‍್ಯವಂಶಿ, ಸುರೇಶ ಬಿಜಾಪುರ, ಶಮಸೊದ್ದಿನ ಬಾವಿಕಟ್ಟಿ, ಕಾವೇರಿ ರಜಪುತ, ಪ್ರಭುಗೌಡ ಪಾಟೀಲ, ಸತೀಶ ಕಲಾಲ ಇತರರು ಇದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
