Saturday, October 14, 2023
ಶಾಲಾ ಗ್ರಂಥಕ್ಕೆ ಲೇಖನಗಳ ಆಹ್ವಾನ
ಆಲಮಟ್ಟಿ (ವಿಜಯಪುರ ಜಿಲ್ಲೆ): ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಎಂ.ಪಿ.ಎಸ್.) ಮತ್ತು ಮಂಜಪ್ಪ ಹರ್ಡೇಕರ ಸ್ಮಾರಕ (ಎಂ.ಹೆಚ್.ಎಂ.) ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಅಭಿನಂದನ ಗ್ರಂಥ ರಚಿಸುವ ಮೂಲಕ ಉಭಯ ಶಾಲೆಗಳಿಗೆ ಕೃತಜ್ಞತೆ ಸಲ್ಲಿಸಲು ನಿರ್ಧರಿಸಿದ್ದಾರೆ.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು.
ಜೀ ಕನ್ನಡ ವಾಹಿನಿಯ ಶೋ ಸರಿಗಮಪ ಸೀಸನ್ 20 ರ ಸ್ಪರ್ಧೆಗೆ ವಿಜಯಪುರ ಪ್ರತಿಭೆ ಸಾಕ್ಷಿ ಆಯ್ಕೆ ಹಿನ್ನೆಲೆ ಆತ್ಮೀಯ ಸನ್ಮಾನ
ವಿಜಯಪುರ: ಅಭಿವೃದ್ಧಿ ಪಥದತ್ತ ವೇಗವಾಗಿ ಚಲಿಸುತ್ತಿರುವ ಇಂದಿನ ಭಾರತ ದೇಶದಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆಯ ಶಿಖರವನ್ನೇರುವುದು ಸುಲಭದ ಮಾತಲ್ಲ, ಏಕೆಂದರೆ ಕೊಟ್ಟ ನಂತರ ಪ್ರತಿಭೆಗಳು ನಮ್ಮ ಭಾರತದಲ್ಲಿವೆ. ಅತಿ ಕಠಿಣವಾದಂತಹ ಸ್ಪರ್ಧಾತ್ಮಕ ಯುಗದಲ್ಲಿ ಸಂಗೀತವನ್ನು ಆಯ್ಕೆ ಮಾಡಿಕೊಂಡು ಸತತ ಅಭ್ಯಾಸ ಮಾಡಿ, ಭಕ್ತಿ ಗೀತೆ ಭಾವಗೀತೆ, ಸಿನಿಮಾ, ಹಿಂದಿ ಜನಪದ,ಹೀಗೆ ಎಲ್ಲಾ ಹಾಡುಗಳನ್ನು ತನ್ನ ಕಂಚಿನ ಕಂಠದಿಂದ ಸರಾಗವಾಗಿ ಹಾಡುತ್ತಾ ವಿಜಯಪುರ ನಗರದ ಹೆಮ್ಮೆಯ ಗಾಯಕಿಯಾಗಿ ಹೊರಹೊಮ್ಮಿದ ಕುಮಾರಿ ಸಾಕ್ಷಿ ಹಿರೇಮಠ ಇವಳು ಇತ್ತೀಚೆಗೆ ಜೀ ಕನ್ನಡ ವಾಹಿನಿಯ ಶೋ ಸರಿಗಮಪ ಸೀಸನ್ 20 ರ ಸ್ಪರ್ಧೆಯಲ್ಲಿ ಆಯ್ಕೆಯಾಗಿ ವಿಜಯಪುರದ ಕೀರ್ತಿ ಪತಾಕೆಯನ್ನು ಹಾರಿಸಿದ ಸಾಕ್ಷಿ ನಮ್ಮೆಲ್ಲರ ಸಾಧನೆಗೆ ಸ್ಫೂರ್ತಿ ಹಾಗೂ ಸಾಕ್ಷಿ ಎಂದು ಸಾಹಿತಿ ಹಾಗೂ ಉಪನ್ಯಾಸಕ ರೇವಣಸಿದ್ದಪ್ಪ ಪಟ್ಟಣಶೆಟ್ಟಿ ಹೇಳಿದರು.
ನಗರದ ಕನಕದಾಸ ಬಡಾವಣೆಯಲ್ಲಿರುವ ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸಸ್ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಾ ದೇವರು ಪ್ರತಿಯೊಬ್ಬ ಮಗುವಿನಲ್ಲಿ ವಿಶೇಷ ಸಾಮರ್ಥ್ಯವನ್ನು ಕೊಟ್ಟಿರುತ್ತಾನೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಪೋಷಕರು ಹಾಗೂ ಗುರುಗಳು ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಸಾಧಕಿಯನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಜತ್ತಿ ವಿದ್ಯೆಗೆ ವಿನಯವೇ ಭೂಷಣ ಎನ್ನುವಂತೆ ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮೌಲ್ಯ ಶಿಕ್ಷಣ ಮರೆಯಾಗುತ್ತಿರುವ ಸಂದರ್ಭದಲ್ಲಿ ಗುರು ಹಿರಿಯರಿಗೆ ವಿಧೇಯಳಾಗಿ ತನ್ನ ಸುಮಧುರ ಕಂಠದಿಂದ ಗಾಯನ ಸುರಿಸುತ್ತಾ, ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇತ್ತೀಚಿಗೆ ಜೀ ಕನ್ನಡದಲ್ಲಿ ಆಯ್ಕೆಯಾಗಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ. ಸಾಧನೆಗೆ ಸಮಸ್ಯೆ ಆಗದು ತಾವು ಕೂಡ ಸೈನಿಕ ನವೋದಯ ಕಿತ್ತೂರು ಶಾಲೆಗಳಂತ ಪ್ರತಿಷ್ಠಿತ ಶಾಲೆಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾಗುವ ಮೂಲಕ ತಂದೆ ತಾಯಿ ಹಾಗೂ ಗುರುಗಳ ಹೆಸರನ್ನು ತರೋಣ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. 2023 24ನೇ ಶೈಕ್ಷಣಿಕ ಸಾಲಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಂಸ್ಥೆಯ ಮಕ್ಕಳಿಗೆ ತಲೆ 2001 ರೂಪಾಯಿ ಬಹುಮಾನವನ್ನು ಕೊಡುವುದಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ವಾಣಿಶ್ರೀ ಮಠ , ಪ್ರಧಾನ ಕಾರ್ಯದರ್ಶಿ ನೀಲಾ ಜತ್ತಿ, ಮುಖ್ಯ ಅತಿಥಿಗಳಾದ ಶ್ರೀ ಸಂಗಮೇಶ ಹಲಗಣಿ,ಮುಖ್ಯ ಶಿಕ್ಷಕಿ ಸುಚಿತ್ರಾ ಹೊಸಮನಿ ಮಂಜುನಾಥ್ ಚೌಹಾಣ್, ವಾಣಿ ಬಡಿಗೇರ್, ಮಧು ಬಿರಾದಾರ್, ಸುಧಾರಾಣಿ ಕುಪ್ಪಸದ,ಸಿದ್ದಣ್ಣ ಲಾಳಸೆರಿ, ಚಂದ್ರಕಲಾ ಕೆ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು.
ದಸರಾ ಕವಿಗೋಷ್ಠಿಗೆ ಪ.ಗು. ಸಿದ್ದಾಪುರ ಮುಖ್ಯ ಅತಿಥಿ
ಈ ದಿವಸ ವಾರ್ತೆ
ವಿಜಯಪುರ: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಅ.18 ರಂದು ಜರುಗಲಿರುವ ' ಚಿಗುರು ಕವಿಗೋಷ್ಠಿ 'ಯಲ್ಲಿ ಮುಳವಾಡದ ಖ್ಯಾತ ಮಕ್ಕಳ ಸಾಹಿತಿ ಪ.ಗು.ಸಿದ್ದಾಪುರವರು ಮುಖ್ಯ ಅತಿಥಿ ಸ್ಥಾನವನ್ನು ವಹಿಸಲಿದ್ದಾರೆಂದು ದಸರಾ ಕವಿಗೋಷ್ಠಿ ಉಪಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ವಿಜಯಕುಮಾರಿ ಕರಿಕಲ್ ತಿಳಿಸಿದ್ದಾರೆ.
ಪ.ಗು.ಸಿದ್ದಾಪುರವರು ಈಗಾಗಲೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮಕ್ಕಳಸಾಹಿತ್ಯದ ಕುರಿತು ಉಪನ್ಯಾಸ ನೀಡಿದ್ದಾರೆ. ಹಲವಾರು ಕೃತಿಗಳನ್ನು ಲೋಕಾರ್ಪಣೆಗೊಳಿಸಿದ ಇವರ ಕವಿತೆಗಳು ಕರ್ನಾಟಕ ˌಮಹಾರಾಷ್ಚ್ರ ಹಾಗೂ ಕೇರಳ ರಾಜ್ಯ ಪಠ್ಯ ಪುಸ್ತಕದಲ್ಲಿ ಸ್ಥಾನ ಪಡೆದುಕೊಂಡಿವೆ.