Tuesday, December 19, 2023
ಎಂ. ಬಿ.ಪಾಟೀಲ ಹಿಟ್ಲರ ನೀತಿಗೆ ತೀವ್ರ ಖಂಡನೆ : ಸತೀಶ ಪಾಟೀಲ
ವಿಜಯಪುರ : ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚುವುದನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಬಿಡಬೇಕು. ಈಗಾಗಲೇ ಲಿಂಗಾಯತ ಧರ್ಮ ಪ್ರತ್ಯೇಕಿಸಲು ಪ್ರಯತ್ನಿಸಿ ಅಖಂಡ ಹಿಂದು ಧರ್ಮಕ್ಕೆ ಹಿಂದುತ್ವಕ್ಕೆ ಧಕ್ಕೆ ತಂದ ತಮ್ಮ ಹಿಂದೂ ಧರ್ಮ ವಿರೋಧಿನೀತಿಯನ್ನು ಜನ ಇನ್ನು ಮರೆತಿಲ್ಲ ಎಂದು ಶಿವಸೇನಾ ಮುಖಂಡ ಸತೀಶ ಪಾಟೀಲ ಹೇಳಿದರು.
ಈ ಕುರಿತು ಪ್ರಕಟಣೆ ನೀಡಿದ ಅವರು, ಆದ್ಯಾಗೂ ನಿನ್ನೆಯ ದಿನ ಹಿಂದೂ ಗಾಣಿಗ, ಹಿಂದೂ ಸಾಧರ ಈ ರೀತಿ ಬರೆದುಕೊಳ್ಳಬಾರದು ಲಿಂಗಾಯತ ಎಂದು ಉಪನಾಮದೊಂದಿಗೆ ತಮ್ಮ ಜಾತಿಯನ್ನು ಬರೆದುಕೊಳ್ಳಲು ಒತ್ತಾಯಿಸುತ್ತಿರಲು ತಾವೇನು ನಮ್ಮ ಸಮುಧಾಯದ ಧರ್ಮ ಗುರುವೇ ? ತಮ್ಮ ಈ ಸರ್ವಾಧಿಕಾರಿ ಧೋರಣೆಗೆ ನಾಡಿನ ಗಾಣಿಗ ಹಾಗೂ ಸಾಧರ ಸಮಾಜದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಆ ಸಮಾಜಗಳಿಗೆ 2 ಎ ಮೀಸಲಾತಿ ತಪ್ಪಿದ್ದೆ ಆದಲ್ಲಿ ತಮಗೆ ಮುಂದಿನ ದಿನಮಾನಗಳಲ್ಲಿ ನಮ್ಮ ಎಲ್ಲ ಸಮಾಜ ಬಾಂಧವರು ತಮಗೆ ತಕ್ಕ ಪಾಠ ಕಲಿಸಲಿದ್ದಾರೆ. ತಾವು ವಿಜಯಪುರ ಜಿಲ್ಲಾ ಉಸ್ತುವಾರಿಯಾಗಿದ್ದೀರಿ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳ ಹೂರಣಗಳಿವೆ. ಮೊದಲಿಗೆ ಅವುಗಳನ್ನು ಸರಿಪಡಿಸಿರಿ. ಅದರಲ್ಲಿ ಮುಖ್ಯವಾಗಿ ಜಿಲ್ಲೆಯು ಸಂಪೂರ್ಣವಾಗಿ ಬರಗಾಲದಿಂದ ತುತ್ತಾಗಿದ್ದು ಜಿಲ್ಲೆಯ ಜನತೆ ನಿರೀಕ್ಷೆಯು ಅಪಾರವಿದೆ. ಸುವರ್ಣಸೌಧದಲ್ಲಿ ವಿಜಯಪುರ ಜಿಲ್ಲೆಗೆ ಹೊಸ ಯೋಜನೆಯಾಗಲಿ, ಬರಗಾಲ ಜಿಲ್ಲೆ ಎಂದು ಘೋಷಣೆಯಾದರೂ ಇನ್ನೂ ಯಾವುದೇ ತರಹದ ವಿಶೇಷ ಅನುದಾನವಾಗಲಿ ಯಾವುದು ತರದ ತಮ್ಮ ನಡೆ ಜಿಲ್ಲೆ ಉಸ್ತುವಾರಿಯೋ ಸುಸ್ತುವಾರಿಯೋ ಆ ಭಗವಂತನೆ ಬಲ್ಲ.
ತಮ್ಮ ಈ ಜಾತಿ ರಾಜಕಾರಣ, ಹಿಂದೂ ಧರ್ಮಗಳಲ್ಲಿ ಹೊಡೆದಾಳುವ ಬ್ರಿಟಿಷ್ ನೀತಿಯನ್ನು ಅನುಸರಿಸುತ್ತಿರುವ ತಮ್ಮ ಮನೋಧೋರಣೆ ಹಿಟ್ಲರಗಿಂತಲೂ ಕಡಿಮೆ ಇಲ್ಲ ಆದಷ್ಟು ಬೇಗನೆ ತಮಗೆ ದೇವರು ಬುದ್ಧಿಕೊಡಲಿ ಈಗಲೇ ಎಚ್ಚೆತ್ತುಕೊಳ್ಳಿರಿ ಎಂದು ಶಿವಸೇನಾ ಮುಖಂಡ ಸತೀಶ ಪಾಟೀಲ ಗಂಭೀರವಾಗಿ ಖಂಡಿಸಿ ಎಚ್ಚರಿಸಿದ್ದಾರೆ.
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.