Friday, June 7, 2024

08-06-2024 EE DIVASA KANNADA DAILY NEWS PAPER

ಜೂ.9ಕ್ಕೆ ಪ್ರೊ. ಬಿ.ಕೆ. ಸಂಘರ್ಷ ದಿನಾಚರಣೆ


ವಿಜಯಪುರ : ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪರ 88ನೇ ಜನ್ಮ ದಿನಾಚರಣೆಯ ಅಂಗವಾಗಿ ಪ್ರೊ. ಬಿ.ಕೆ. ಸಂಘರ್ಷ ದಿನ ಎಂಬ ಘೋಷವಾಕ್ಯದೊಂದಿಗೆ ಜೂ. 9 ರಂದು ಬೆಳಗ್ಗೆ 11:30 ಕ್ಕೆ ಪುರಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾ ಪ್ರಧಾನ ಸಂಚಾಲಕರಾದ ಸಂಜು ವೈ. ಕಂಬಾಗಿ ತಿಳಿಸಿದ್ದಾರೆ.

ಅವರು ಪತ್ರಿಕಾ ಪ್ರಕಟಣೆ ನೀಡಿದ ಅವರು, ಶೋಷಿತ ಸಮುದಾಐಗಳ ಹೋರಾಟಗಾರ, ದಲಿತ ಚೇತನ ಬಿ. ಕೃಷ್ಣಪ್ಪ ಭದ್ರಾವತಿಯಲ್ಲಿ ಆರಂಭಮಾಡಿದ ಚಳವಳಿ, ಕರ್ನಾಟಕದ ಉದ್ದಗಲಕ್ಕೂ ವ್ಯಾಪಿಸಿ ಲಕ್ಷಾಂತರ ತಳ ಸಮುದಾಯ ಬಡವರ ವಿಮೋಚನೆಗಾಗಿ ದಸಂಸ ಹೋರಾಟ ಮಾಡುತ್ತಾ ಬಂದಿದೆ ಎಂದರು.

ಕೃಷ್ಣಪ್ಪ ತಮ್ಮ ಬದುಕಿನುದ್ದಕ್ಕೂ ಸರಳ ಜೀವನ ನಡೆಸಿದ್ದಾರೆ. ರಾಜಕೀಯವಾಗಿ ಶೋಷಿತರು ಸಬಲಾಗಬೇಕೆನ್ನುವ ಕನಸು ಹೊಂದಿದ್ದರು. ಜಾತೀಯತೆ, ಅಸ್ಪೃಶ್ಯತೆ, ವರ್ಗ ಅಸಮಾನತೆಗಳ ವಿರುದ್ಧ ಹೋರಾಟ ರೂಪಿಸಿದವರು. ಇಂದು ದಲಿತ ಶೋಷಿತ ಸಮುದಾಯದವರಿಗೆ ಅಲ್ಪ-ಸ್ವಲ್ಪ ಭೂಮಿ ಸಿಕ್ಕಿದೆ ಎಂದರೆ ಅದು ಬಿ. ಕೃಷ್ಣಪ್ಪರ ಹೋರಾಟದಿಂದಲೇ ಎಂದರು.

ವಿಜಯಪುರ ಜಿಲ್ಲೆಯಿಂದ 100 ಕ್ಕೂ ಹೆಚ್ಚು ಜನ ಕಾರ್ಯಕರ್ತರು ರೇಲ್ವೆ ಮುಖಾಂತರ ಬೆಂಗಳೂರಿನ ಕಾರ್ಯಕ್ರಮಕ್ಕೆ ತೆರಳಿಲಿದ್ದಾರೆ. ಅತಿ ಹೆಚ್ಚು ಕಾರ್ಯಕರ್ತರು ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ ಜಾರಕಿಹೋಳಿ, ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ. ಎಚ್.ಸಿ. ಮಹಾದೇವಪ್ಪ, ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ನ ಅಧ್ಯಕ್ಷ ಇಂದಿರಾ ಕೃಷ್ಣಪ್ಪ, ಉಪನ್ಯಾಸಕ ಡಾ. ಸಿ.ಜಿ. ಲಕ್ಷಿö್ಮÃಪತಿ, ದಸಂಸ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ, ದಸಂಸ ಪದಾಧಿಕಾರಿಗಳಾದ ರಮೇಶ ಡಾಕುಳುಕಿ, ಎನ್. ನಾಗರಾಜ್ ಹಾಗೂ ಉಪ ಪ್ರಧಾನ ಸಂಚಾಲಕರಾದ ನಾಗಣ್ಣ ಬಡಿಗೇರ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಸಂಜು ಕಂಬಾಗಿ ತಿಳಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಪರಿಸರ ನಾಶ ಜೀವ ಸಂಕುಲ ವಿನಾಶ: ಡಿ.ವೈ.ಎಸ್ಪಿ ಬಸವರಾಜ್ ಯಲಿಗಾರ

ವಿಜಯಪುರ : ಜನಸಂಖ್ಯೆ ಹೆಚ್ಚಳ, ನಗರೀಕರಣ, ಕಾರ್ಖಾನೆಗಳ ಬೆಳವಣಿಗೆ ವಾಹನಗಳ ಭರಾಟೆ, ಮಾನವನ ದುರಾಸೆಯಿಂದ ಕಾಡು-ಮೇಡು ನಾಶವಾಗಿ ಬಿಸಿಲಿನ ತಾಪ ಹೆಚ್ಚಿ, ಹಿಮಕರಗಿ, ಋತುಮಾನಗಳು ಬದಲಾವಣೆ ಆಗುತ್ತಿರುವದು ದುರದೃಷ್ಟಕರ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು. ಪರಿಸರ ನಾಶವಾದರೆ ಇಡೀ ಜೀವಸಂಕುಲವೇ ವಿನಾಶವಾದಂತೆ ಎಂದು ನಗರ ಪೊಲೀಸ್ ಉಪ ಅಧೀಕ್ಷಕರಾದ ಬಸವರಾಜ್ ಯಲಿಗಾರ ಎಚ್ಚರಿಸಿದರು.



ಅಫಜಲಪುರ ಟಕ್ಕೆ ಕಿರಿಯ ಬಾಲಕರ ಬಾಲಮಂದಿರದಲ್ಲಿ ಜೂನ್ 05 ರಂದು ವನಮಹೋತ್ಸವ ಕಾರ್ಯಕ್ರಮದಲ್ಲಿ ವಿವಿಧ ನಮೂನೆಯ ಸಸಿಗಳನ್ನು ನೆಟ್ಟು. ನೀರೆರೆರೆದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೆಪ ಮಾತ್ರಕ್ಕೆ ಪರಿಸರ ದಿನಾಚರಣೆ ಆಚರಿಸದೆ ಪ್ಲಾಸ್ಟಿಕ್ ಬಳಕೆ ನಿಷೇಧ. ನಿತ್ಯ ಸಸಿ ನೆಡುವ ಕಾರ್ಯ ಸಂಕಲ್ಪ ಮಾಡಿ ಜೀವನದ ದಿನಚರಿಯಾಗಿಸಿಕೊಳ್ಳಬೇಕು. ಹರಪ್ಪ ಮೆಹೆಂಜೋದಾರೋ ಕಾಲದಿಂದಲೂ ಮಾನವ ಜನಾಂಗ ನದಿ ತೀರದಲ್ಲಿ, ಕಾಡಿನ ನಡುವೆ ಬೆಳೆದು ಬಂದಿದೆ. ಕಾಡು ಇದ್ದರೆ ನಾಡು. ಶುದ್ಧವಾದ ಗಾಳಿ, ನೀರು, ಪರಿಸರ ವಿವಿಧ ಪ್ರಾಣಿ ಪಕ್ಷಿ, ಜೀವ ಸಂಕುಲ ಮುಂದಿನ ಜನಾಂಗಕ್ಕೆ ಉಳಿಸಿ ಕೊಡುವ ಪಜ್ಞಾವಂತಿಕೆ ಮೆರೆಯಬೇಕಾದರೆ ಇಂದೇ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಿ ಕಾರ್ಯೋನ್ಮುಖರಾಗೋಣ ಎಂದು ಕರೆ ನೀಡಿದರು.

ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಸವರಾಜ್ ಜಿಗಳೂರು ಮಾತನಾಡಿ, ಪರಿಸರ ಸಂರಕ್ಷಣೆಯ ಕುರಿತು ಸರಕಾರ ಹಲವಾರು ರೀತಿ ಸಕಾರಾತ್ಮಕ ಯೋಜನೆಗಳನ್ನು ಜಾರಿಗೆ ತಂದಿದ್ದು.'ಮನೆಗೊAದು ಮರ ಊರಿಗೊಂದು ವನ' ಎಂಬ ಘೋಷವಾಕ್ಯದೊಂದಿಗೆ ಜನ ಜಾಗೃತಿ ಮೂಡಿಸುವದರೊಂದಿಗೆ ಉಚಿತ ಸಸಿ ವಿತರಣೆ, ನರ್ಸರಿ ಪ್ಲಾಂಟೇಶನ್ ಮಾಡಲು ಪ್ರೋತ್ಸಾಹ, ರೈತರಿಗೆ ಹೊಲಗದ್ದೆ ಬದುಗಳಲ್ಲಿ ವಿವಿಧ ಗಿಡ ಬೆಳೆಸಲು ಸಹಾಯ ಸಹಕಾರ ಅರಣ್ಯ ಇಲಾಖೆಯಿಂದ ನೀಡುತ್ತಿದೆ. ಶಾಲಾ ಕಾಲೇಜು ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡುತ್ತಿದೆ. ಸಾರ್ವಜನಿಕರು ಸಂಘ ಸಂಸ್ಥೆಗಳು ಈ ಪವಿತ್ರಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕೆAದು ಮನವಿ ಮಾಡಿದರು.

ಸಾನಿಧ್ಯ ವಹಿಸಿದ್ದ ರಾಮಕೃಷ್ಣ ಆಶ್ರಮದ ಪೂಜ್ಯಶ್ರೀ ನರೇಶಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತೀಯ ಪರಂಪರೆಯಲ್ಲಿ ನಮ್ಮ ಋಷಿ ಮುನಿಗಳು ಗಿಡ ಮರಗಳಿಗೂ ಜೀವವಿದೆ ಎಂದು ಸಿದ್ಧಪಡಿಸಿದ್ದಲ್ಲದೆ. ಹಲವಾರು ಔಷಧೀಯ ಗುಣ, ಮಾನವನಿಗೆ ಉಪಯುಕ್ತ ಆಹಾರತತ್ವ ಒಳಗೊಂಡಿದೆ ಎಂದು ತೋರಿಸಿ ಕೊಟ್ಟಿದ್ದಾರೆ. ಕಾರಣ ಭಾರತೀಯರು ಗಿಡ ಮರಗಳನ್ನು, ರೈತರು ಬೆಳೆಗಳನ್ನು ದೇವರೆಂದು ನಂಬಿ ಭಕ್ತಿ ಶ್ರದ್ಧೆಯಿಂದ ಪೂಜಿಸುತ್ತಾರೆ. ನದಿಗಳಿಗೆ ಬಾಗಿನ ಅರ್ಪಣೆ, ಗಿಡ ಮರಗಳ ಪೂಜೆ, ವಿವಿಧ ಹಬ್ಬ ಹರಿದಿನಗಳಲ್ಲಿ ಮಣ್ಣಿನ ಮೂರ್ತಿಗಳ ಪೂಜೆ. ರೈತ ಬೆಳೆದ ಪೈರು, ಹೂ-ಹಣ್ಣುಗಳ ಪೂಜೆ ಇವೆಲ್ಲ ಈ ಭೂಮಿಗೆ ನಮಗೆ ಕಾಪಾಡುವ ಪರಿಸರಕ್ಕೆ ನಾವು ಸಲ್ಲಿಸುವ ಕೃತಜ್ಞತಾ ಭಾವ ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ದೀಪಾಕ್ಷಿ ಜಾನಕಿ, ಮಾನ್ಯ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀಧರ ಕುಲಕರ್ಣಿ, ಸದಸ್ಯರಾದ ದಾನೇಶ ಅವಟಿ, ಯಲ್ಲಪ್ಪ ಇರಕಲ್. ಪೊಲೀಸ್ ನಿರೀಕ್ಷಕರಾದ ಪರಮೇಶ್ವರ್ ಕವಟಗಿ, ಮಲ್ಲಯ್ಯ ಮಠಪತಿ, ಸಂಗಮೇಶ ಪಾಟೀಲ್, ಮಹಾಂತೇಶ ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಾಂದರ್ಭಿಕವಾಗಿ ಮಾತನಾಡಿದರು.

ಬಾಲ ಮಂದಿರದ ಅಧೀಕ್ಷಕಿ ಶ್ರೀಮತಿ ಜಯಶ್ರೀ ಪವಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಶಿವಲೀಲಾ ಶಿರಮಗೊಂಡ ಪ್ರಾರ್ಥಿಸಿದರು. ಶೀತಲ್ ಹೂಲಿ ನಿರೂಪಿಸಿದರು.ಮೂಖ್ಯೋಪಾದ್ಯಾಯ ಪಿ.ಬಿ.ತಳಕಟನಾಳ ವಂದಿಸಿದರು.

ವಿಷಯ ಪರಿವೀಕ್ಷಕಿ ಶ್ರೀಮತಿ ಭಾರತಿ ಹಡಪದ, ಎಸ್.ಎಚ್. ಹೊಸಮನಿ, ವಾಣಿಶ್ರೀ ನಿಂಬಾಳ, ಜ್ಯೋತಿ ತೇಲಿ, 

ಗ್ರೃಹಪೀತರಾದ ಶಿವಾನಂದ ಅವತಾಡೆ, ಶರಣು ಯರನಾಳ, ನಿವೃತ್ತ ವಿಷಯ ಪರಿವೀಕ್ಷಕರಾದ ಎ.ಡಿ.ಮಕಾನದಾರ, ಪ್ರಭು ಹಿರೇಮಠ, ಸಂತೋಷ ಮುಳವಾಡ, ಶ್ರೀಮತಿ ಅಮಿನಮ್ಮ ಮಣೂರ, ಬಸಮ್ಮ ಸಜ್ಜನ, ತಾರಾಬಾಯಿ ಬನಸೋಡೆ, ಮೌನೇಶ ಗಂಗನಹಳ್ಳಿ, ಮಾಳಪ್ಪ ಬೆಳಗಾವಿ ಇನ್ನೂ ಅನೇಕರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ರೈತರ ವಿವಿಧ ಬೇಡಿಕೆ ಈಡೇರಿಸಲು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯ



ವಿಜಯಪುರ : ಬಿತ್ತನೆ ಬೀಜ-ರಸಗೊಬ್ಬರ ಬೆಲೆ ಇಳಿಸಲು ಒತ್ತಾಯಿಸಿ, ನಕಲಿ ಕಳಪೆ ಮಾರಾಟ ತಡೆಗಟ್ಟಲು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆಯ ಮೇರೆಗೆ ಬಿತ್ತನೆ ಬೀಜ -ರಸಗೊಬ್ಬರ ಬೆಲೆಗಳನ್ನು ಇಳಿಸಲು ಆಗ್ರಹಿಸಿ, ಕಳಪೆ ಹಾಗೂ ನಕಲಿ ಬಿತ್ತನೆ ಬೀಜ -ರಸಗೊಬ್ಬರಗಳ ಮಾರಾಟವನ್ನು ತಡೆಗಟ್ಟಲು. ಕೃತಕ ಅಭಾವ ಸೃಷ್ಟಿಸಿ ಕಾಳಸಂತೆ ಮಾರಾಟದ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಏPಖS) ವಿಜಯಪುರ ಜಿಲ್ಲಾ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರಾಯ ಪೂಜಾರಿ ಮಾತನಾಡಿ, ಬಲವಂತದ ಸಾಲ ವಸೂಲಾತಿ ನಿಲ್ಲಬೇಕು. ಬರ ಪರಿಹಾರದ ಹಣವನ್ನು ಸಾಲಕ್ಕೆ ಕಟಾಯಿಸಿಕೊಳ್ಳಬಾರದು. ಸಾಲಕ್ಕೆ ಬರ ಪರಿಹಾರದ ಹಣ ಕಳೆದುಕೊಂಡಿರುವ ರೈತರ ಖಾತೆಗೆ ಹಣ ಮರಳಿಸಲು ಕ್ರಮ ಕೈಗೊಳ್ಳಬೇಕು ಹಾಗೂ ರೈತರ ಆತ್ಮಹತ್ಯೆ ತಡೆಗಟ್ಟಬೇಕು. ಕೃಷಿ ಚಟುವಟಿಕೆಗಳಿಗೆ ಅಗತ್ಯ ಬೆಂಬಲ ಒದಗಿಸಬೇಕು ಮತ್ತು ಬೆಳೆ ವಿಮೆ ಪರಿಹಾರ ಇತ್ಯರ್ಥಕ್ಕೆ ಕ್ರಮ ವಹಿಸಬೇಕು ಎಂದು ರಾಜ್ಯ, ಕೇಂದ್ರ ಸರ್ಕಾರಗಳನ್ನು ಆಗ್ರಹಿಸಿ ರಾಜ್ಯಾದ್ಯಂತ ಕರೆ ನೀಡಲಾಗಿದೆ. ಕಳೆದ ವರ್ಷ ಶತಮಾನದಲ್ಲೇ ಕಂಡರಿಯದ ಭೀಕರ ಬರಗಾಲವನ್ನು ರಾಜ್‌ಯ ಅನುಭವಿಸಿತ್ತು. ಯಾವುದೇ ಅರ್ಥ ಪೂರ್ಣ ಬರ ಪರಿಹಾರ ಕ್ರಮಗಳಿಲ್ಲದೇ ದೊಡ್ಡ ಪ್ರಮಾಣದ ಸಂಕಷ್ಟಕ್ಕೆ ಸಿಲುಕಿ ನರಳುತ್ತಿರುವ ರೈತಾಪಿ ಸಮುದಾಯವನ್ನು ಬಿತ್ತನೆ ಬೀಜ-ರಸಗೊಬ್ಬರ ಬೆಲೆಗಳ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕೂಡಲೇ ಬೆಲೆಗಳನ್ನು ಇಳಿಸಬೇಕು. ಉತ್ತಮ ಮಳೆಯ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸುವ ರೈತರನ್ನು ಬೀಜ ಗೊಬ್ಬರದ ವ್ಯಾಪಾರಿಗಳು ಶೋಷಣೆ ಮಾಡದಂತೆ ರಕ್ಷಣೆ ಒದಗಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ(ಏPಖS) ಕರ್ನಾಟಕ ರಾಜ್ಯ ಸಮಿತಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘದ ಜಿಲ್ಲಾಧ್ಯಕ್ಷರಾದ ಭಾರತಿ ವಾಲಿ ಮಾತನಾಡಿ, ಕೃತಕ ಅಭಾವ ಸೃಷ್ಟಿಸಿ, ಕಾಳಸಂತೆ ಮಾರಾಟವನ್ನು ತಡೆಗಟ್ಟಬೇಕು, ಬಲವಂತದ ಸಾಲವಸೂಲಾತಿ ವಿರುದ್ಧ ರೈತರಿಗೆ ರಕ್ಷಣೆ ಒದಗಿಸಬೇಕು. ರಾಜ್ಯಾದ್ಯಂತ ನಡೆಯುತ್ತಿರುವ ವ್ಯಾಪಕ ರೈತ ಆತ್ಮಹತ್ಯೆಗಳನ್ನು ತಡೆಗಟ್ಟಲು ಅಗತ್ಯ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಅಭಿನೇಶ ಮಣೂರ, ಎ.ಆರ್.ಮುಂಜಣ್ಣಿ, ನಿತ್ಯಾನಂದ ಸಾಗರ, ಎಮ್.ಎ.ಜಮಾದಾರ, ಅನುಸೂಯಾ ಹಜೇರಿ, ಶಮಶಾದ ಬೆಗಂ, ಸಾಹೇಬಿ ಶೇಖ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.