ಯುಗಾದಿ ಹಬ್ಬವು ಯುಗ ಯುಗ ಕಳೆದರು, ತನ್ನ ವೈಶಿಷ್ಟವನ್ನು ಬದಲಾವಣೆ ಮಾಡಿಕೊಳ್ಳದು. ತನ್ನದೇ ವಿಶೇಷ ಅನುಭವಗೊಳ್ಳನ್ನು ನೀಡುತ್ತಾ.. ಸಿಹಿ ಕಹಿ ಹುಳಿ ರುಚಿ ನೀಡುತ್ತಾ .. ನಿಸರ್ಗದ ಸೌಂದರ್ಯಕ್ಕೆ ಕಳೆದು ಹೋಗುವ ಅನುಭವ ಕೊಡುತ್ತದೆ. ಈ ಯುಗಾದಿ ಆಚರಣೆ ಒಂದ್ದೆಡೆ ಆದರೆ ನಿಸರ್ಗದ ಸೌಂದರ್ಯದ ಬದಲಾವಣೆಗೊಂಡು ಹಸಿರಾಗಿ ಕಂಗೊಳಿಸುವ ಕಾಲ. ಯುಗಾದಿ ಸಮಯ ಅದಲ್ಲದೆ ಮುಖ್ಯವಾಗಿ ಹಿಂದೂ ಧರ್ಮದ ಹೊಸ ವರ್ಷದ ವರ್ಷಚಾರಣೆ...
ಯುಗಾದಿ ಹಬ್ಬವು ತುಂಬಾ ವಿಶೇಷ ನಿಸರ್ಗ ಸೌಂದರ್ಯದ ಬದಲಾವಣೆ ಬಗ್ಗೆ ಹೇಳಿದರೆ.. ಬಾಡಿದ ಮರಗಳೆಲ್ಲಾ ಚಿಗುರೋಡೆದು ಕಿರುನಗೆ ಬೀರಲು ಹಚ್ಚು ಹಸಿರಾಗಿ ತಂಪಾದ ಗಾಳಿ ಬಿಸುತ್ತಾ ಹೊಸ ಸೊಬಗನ್ನು ಈ ಸೃಷ್ಟಿಯಲ್ಲಿ ಸೃಷ್ಟಿಸುತ್ತವೇ. ಮಾಮರದ ಮರದಲ್ಲಿ ಮಾವಿನ ಕಾಯಿಗಳು.ಹೂ ಕಾಯಿಗಳ ಗೊಂಚಲು ತೋರಣದಂತೆ ಮರಕ್ಕೆ ತೂಗು ಬೀಳುವ ದೃಶ್ಯ ಯುಗಾದಿಯಲ್ಲಿ ಕಾಣುತ್ತೆವೆ..ಮಾಮರದಲ್ಲಿ ಹಸಿರು ಮಾವಿನ ಕಾಯಿಗಳ ನೋಡಿದರೆ ಬಸರಿ ಬಯಕೆಯಂತೆ ಎಲ್ಲರಿಗೂ ಮಾವಿನ ಕಾಯಿಯ ರುಚಿ ನೋಡುವ ಆಸೆ.ಉಂಟಾಗುವುದು. ಹುಳಿ ಮಾವಿನ ಕಾಯಿಯನ್ನ ಕಚ್ಚಿ ತಿನ್ನುವ ಹುಚ್ಚು ಆಸೆ ಶುರು ಆಗುವುದು..
ಈ ಪ್ರಕೃತಿ ಸೊಬಗಿನ ಸೌಂದರ್ಯ
ವರ್ಣಿಸಲು ಯುಗಾದಿ ಹಬ್ಬವೇ ಸಾಕ್ಷಿಯಾಯಿತು..
ಒಣಗಿದ ಮರದಲ್ಲಿ ಹಸಿರು ಎಲೆಗಳು ನೋಡದಂತೆ ಬದಲಾಗುವ ಈ ದೃಶ್ಯಕ್ಕೆ ಈ ಯುಗಾದಿಯೇ ನೈಜ ಸಾಕ್ಷಿ ಮನುಷ್ಯನ ಜೀವನದಲ್ಲಿ ಸಹ ಕಷ್ಟ ಮತ್ತು ಸುಖಗಳ ಪುಟಗಳಂತೆ ಬಂದು ಹೋಗುವುವು.. ಇದಕ್ಕೆ ವರುಷದ ಅನುಭವ ಹಳೇದನ್ನು ಕಳೆದು.ಹೊಸತನದ ಚಿಗುರು ಕಾಣುಯುದು. ಮನುಷ್ಯ ಅಥವಾ ಜೀವಿಯಲ್ಲಿ ಕಷ್ಟ ಸುಖಗಳು ಪುಟಗಳ ಬರುವುವು ಅದರಂತೆ ಅವು ಸಮನಾಗಿ ಜೀವನದಲ್ಲಿ ಹಂಚಿಕೆ ಆಗದಿದ್ದರು.. ಎರಡು ತಿರುವು ನಾವು ಕಾಣೇ ಕಾಣುತ್ತೆವೆ ಅದೇ ಕಾರಣಕ್ಕೆ ಈ ಯುಗಾದಿ ಹಬ್ಬದ ದಿನದಂದು ಬೇವು ಬೆಲ್ಲ ತಿಂದು ಸಿಹಿ ಕಹಿಯ ಅನುಭವ ಪಡೆಯುತ್ತೇವೆ.
ಹಿಂದಿನ ನೆನಪು ಮುಂದಿನ ಕನಸು ಸಿಹಿ ಕಹಿಗೆ ಸಾಕ್ಷಿಯಾಗಿ ಬೇವು ಬೆಲ್ಲದ ರುಚಿ ಸವಿಯುತ್ತೇವೆ..ವರ್ಷದ ಚಾಲನೆ ಬೇಸಿಗೆಯ ಬಿಸಿಲು, ಮಳೆಯ ಬಿರುಗಾಳಿ,ಚಳಿಯ ನಡುಕ ತಡೆದುಕೊಂಡು ಪ್ರಕೃತಿಗೆ ಹೊಂದಿಕೊಂಡು ಹೋಗುವ ಈ ಮನುಷ್ಯರಿಗೆ ಈ ಯುಗಾದಿಯಯೇ ಅವರಿಗೆ ಉಡುಗೊರೆ.ಹೊಸ ವರ್ಷ ಬರುವಾಗಲೆ ಕಷ್ಟ ಸುಖದ ಭಾರಿ ಅನುಭವ ನೀಡುತ್ತದೆ.
ಪ್ರತೀಕ್ಷಾ ನಿಡೋಣಿ
ವಿಜಯಪುರ
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
