ವಿಜಯಪುರ : ಕಾಲೇಜು ವಿದ್ಯಾರ್ಥಿನಿಯರು ಮೊಬೈಲ್ ಗೀಳಿನಿಂದ ಹೊರ ಬಂದು ತಮ್ಮ ಅಧ್ಯಯನಕ್ಕೆ ಪುಸ್ತಕಗಳನ್ನು ಹೆಚ್ಚಾಗಿ ಬಳಸಲು ಡಾ. ಸೌಮ್ಯಶ್ರೀ ಮಯೂರ ಕಾಕು ಖ್ಯಾತ ಮಕ್ಕಳ ಮತ್ತು ಹದಿಹರೆಯ ಮನೋರೋಗ ತಜ್ಞರು ಜೆ ಎಸ್ ಎಸ್ ಆಸ್ಪತ್ರೆ, ವಿಜಯಪುರ ಅವರು ಸಲಹೆ ನೀಡಿದರು.
ಕ.ರಾ.ಅ.ಮ.ವಿ.ವಿ. ವಿಜಯಪುರ ಸ್ನಾತಕ ಅಧ್ಯಯನ ವಿಭಾಗ (NEP) ದಲ್ಲಿ 2024-25 ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ವಿದ್ಯಾಥಿನಿಯರಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತಾನಾಡಿದರು.
ಸಾಮಾಜಿಕ ಜಾಲತಾಣ ಬಳಕೆಯಲ್ಲಿ ವಿದ್ಯಾರ್ಥಿನಿಯರು ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥಗೊಳಿಸುತ್ತಿದ್ದಾರೆ, ಬೌದ್ಧಿಕ ಬೆಳವಣಿಗೆಗೆ ಹಲವಾರು ಆ್ಯಪ್ ಮಾರಕವಾಗಿವೆ. ವಿದ್ಯಾರ್ಥಿನಿಯರು ಪುಸ್ತಕಗಳೊಂದಿಗೆ ಹೆಚ್ಚು ಸಮಯ ಕಳೆಯುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರುಗೊಳ್ಳಲು ಉಪಯುಕ್ತವಾಗುವಂತಹ ಜ್ಙಾನವನ್ನು ವಿದ್ಯಾರ್ಥಿನಿಯರು ಪಡೆಯಬೇಕು, ಈ ಜ್ಙಾನವು ಮೊಬೈಲ್ ಗಳಲ್ಲಿ ದೊರೆಯುವುದು ವಿರಳ. ಗ್ರಂಥಾಲಯದ ಪುಸ್ತಕಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಬೇಕೆಂದು ಕರಾಅಮವಿವಿ ಕುಲಸಚಿವರಾದ ಶ್ರೀ ಶಂಕರಗೌಡಾ ಸೋಮನಾಳ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ವಿದ್ಯಾರ್ಥಿನಿಯರಿಗೆ ರಸಪ್ರಶ್ನೆ ಕೇಳುವುದರ ಮೂಲಕ ಕಾರ್ಯಕ್ರಮಕ್ಕೆ ಜ್ಙಾನಸ್ಪರ್ಶ ನೀಡಿದರು. ರಸಪ್ರಶ್ನೆ ವಿಜೇತರಿಗೆ ಬಹುಮಾನ ನೀಡಿ ಗೌರವಿಸಿದರು.
ಸ್ನಾತಕ ಆಧ್ಯಯನ ವಿಭಾಗದ ವಿಶೇಷಾಧಿಕಾರಿಗಳಾದ ಪ್ರೊ. ಸಕ್ಪಾಲ ಹೂವಣ್ಣ ಅವರು ಮಾತನಾಡಿ ವಿದ್ಯಾರ್ಥಿನಿಯರು ತಮ್ಮ ಉಜ್ವಲ ಭವಿಷ್ಯಕ್ಕಾಗಿ ಉನ್ನತ ಶಿಕ್ಷಣದ ಅಧ್ಯಯನದ ಸಮಯ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ವಿಭಾಗದ ಸಂಯೋಜಕರಾದ ಡಾ. ಜಿ ಸೌಭಾಗ್ಯ, ಹಾಗೂ ಸಾಂಸ್ಕçತಿಕ ಕರ‍್ಯಕ್ರಮದ ಸಂಯೋಜಕರಾದ ಡಾ. ಮೆಹರಾಜಬೇಗಂ ಸೈಯ್ಯದ ಭಾಗವಹಿಸಿದ್ದರು. ಭವಾನಿ ಅಂಗಡಿ ಸ್ವಾಗತಿಸಿದರು ಚನ್ನಮ್ಮಾ ಕಂಬಾರ ನಿರೂಪಿಸಿದರು. ಶ್ವೇತಾ ನಿಂಬಾಳ ವಂದಿಸಿದರು. ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.



.jpeg)