Sunday, March 16, 2025

17-03-2025 EE DIVASA KANNADA DAILY NEWS PAPER

ಮಹಾಲಕ್ಷ್ಮೀ ಸಹಕಾರಿ ಬ್ಯಾಂಕ್ ಕಾರ್ಯಾಲಯಕ್ಕೆ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ


ವಿಜಯಪುರ : ವಿಜಯಪುರದ ಸಹಕಾರ ವಲಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕ ಆಗಿರುವ ಮಹಾಲಕ್ಷ್ಮೀ ಸಹಕಾರಿ ಬ್ಯಾಂಕ್ ಕಾರ್ಯಾಲಯಕ್ಕೆ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಭೇಟಿ ನೀಡಿ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅನುಗ್ರಹಪೂರ್ವಕ ಆಶೀರ್ವಾದ ಮಾಡಿದರು. ಬಡವರ ಕಲ್ಯಾಣಕ್ಕೆ ಈ ಬ್ಯಾಂಕು ಸದಾ ಶ್ರಮಿಸಲಿ, ಉತ್ತಮ ಆರ್ಥಿಕ ಸೇವೆ ನೀಡಿ ಬಡವರಿಗೆ ಆರ್ಥಿಕ ಚೈತನ್ಯ ತುಂಬಲಿ, ಹೀಗೆ ಬ್ಯಾಂಕು ಉತ್ತರೋತ್ತರವಾಗಿ ಬೆಳೆಯಲಿ ಎಂದು ಅನುಗ್ರಹ ಸಂದೇಶ ನೀಡಿದರು. 

ಈ ವೇಳೆ ಮಹಾಲಕ್ಷ್ಮಿ ಬ್ಯಾಂಕ್ ಅಧ್ಯಕ್ಷ  ಮುಕುಂದ ಕುಲಕರ್ಣಿ ವಿವರಣೆ ನೀಡಿ, ಮಹಾಲಕ್ಷ್ಮಿ ಸಹಕಾರ ಬ್ಯಾಂಕ್  ಕಳೆದ ಹಲವಾರು ದಶಕಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿದ್ದು ದಿ.ಶ್ರೀನಿವಾಸರಾವ ಸ್ವಾಮೀರಾವ ದೇಶಪಾಂಡೆ ಅವರು ೧೯೩೦ ರಲ್ಲಿ ಈ ಬ್ಯಾಂಕ್ ಸ್ಥಾಪಿಸಿದ್ದು, ಶತಮಾನೋತ್ಸವದ ಹೊಸ್ತಿಲಲ್ಲಿದೆ ಎಂದು ಬ್ಯಾಂಕ ಗ್ರಾಹಕರಿಗೆ ಕಲ್ಪಿಸಿರುವ ಸೌಲಭ್ಯಗಳ ಬಗ್ಗೆ ವಿವರಿಸಿದರು.

ಉಪಾಧ್ಯಕ್ಷ ವಿಕಾಸ್ ಪದಕಿ,  ನಿರ್ದೇಶಕರಾದ ವಿಜಯ ಜೋಶಿ, ಕೃಷ್ಣ ಗುನ್ನಾಳಕರ,   ಗೋವಿಂದ ಜೋಶಿ, ಶಂಕರ್ ರಾವ್ ಕುಲಕರ್ಣಿ, ಸಚಿನ್ ಮದ್ದಿನಮಠ, ಪವನ್  ಕುಲಕರ್ಣಿ, ಬಸವರಾಜ್ ಪತ್ತಾರ್, ವೃತ್ತಿಪರ ನಿರ್ದೇಶಕ ಸಮೀರ್ ಕುಲಕರ್ಣಿ, ಬ್ಯಾಂಕ್  ವ್ಯವಸ್ಥಾಪಕರಾದ ಪದ್ಮಾವತಿ ಕುಲಕರ್ಣಿ ಕಲ್ಯಾಣಿ ಸಂಗಮ್ ಕೃಷ್ಣ ಜೋಶಿ ಹಾಗೂ  ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


ಬಡವರಿಗೆ ಸಂತೋಷ ಗೊಳಿಸುವುದೇ ನಿಜವಾದ ಹಬ್ಬ : ಚಂದ್ರಶೇಖರ ಬುರಾಣಪುರ

 


ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ : ನಿರ್ಗತಿಕ, ಬಡ ಕುಟುಂಬಗಳಿಗೆ ರಂಜಾನ್ ಹಬ್ಬದ ಪ್ರಯುಕ್ತ ಚಂದ್ರಶೇಖರ ಬುರಾಣಪುರ ಕುಟುಂಬದ ವತಿಯಿಂದ ಸುಮಾರು ೧೫೦ ಕುಟುಂಬಕ್ಕೆ ಆಹಾರ ಕಿಟ್ ನಗರದ ಮುಳಗಸಿಯಲ್ಲಿ ನೀಡಲಾಯಿತು.

ಜಿಲ್ಲಾ ಪಂಚಾಯತ್ ಸಾಂಕಿಕ ಅಧಿಕಾರಿ ರಾ ಬಹಾದ್ಧೂರ ಮಾತನಾಡಿ, ರಂಜಾನ್ ಹಬ್ಬವು ದಾನ ಧರ್ಮದ ಸಂಕೇತವಾಗಿದ್ದು, ಅದನ್ನು ಯಾವುದೇ ಜಾತಿ, ಧರ್ಮಕ್ಕೆ ಹೊಲಿಸದೇ ಮಾನವ ಧರ್ಮ ಒಂದೇ ಎಂಬ ಉದ್ದೇಶದಿಂದ ಎಲ್ಲ ಬಡ ಕುಟುಂಬಕ್ಕೆ ಆಹ್ವಾನ ಕೋರಿ ಆಹಾರ ಕಿಟ್ ವಿತರಣೆ ಮಾಡಿರುವುದು ಸಂತಸ ತಂದಿದೆ. ಇವರು ದೀಪಾವಳಿ, ರಮಜಾನ್ ಮುಂತಾದವ ಯಾವುದೇ ಹಬ್ಬವಿದ್ದರು ಬಡವರಿಗೆ ಆಹಾರ ಕಿಟ್ ನಿಡುವುದು, ನಿರಾಶ್ರಿತರಿಗೆ ಕೈಲಾದ ಸಹಾಯ ಮಾಡುವ ಮನೋಭಾವನೆಯೂ ನಿಜಕ್ಕೂ ಶ್ಲಾö್ಯಘನೀಯ ಚಂದ್ರಶೇಖರ ಬುರಾಣಪೂರ ಕುಟುಂಬವು ಬಡ ಬಲಿದರಿಗೆ ಇದೇ ರೀತಿಯಾಗಿ ಸಹಾಯ ಮಾಡುವಲ್ಲಿ ಮುಂದಾಗಲಿ ದೇವರು ಇವರ ಕುಟುಂಬಕ್ಕೆ ಇನಷ್ಟು ದಾನ ಮಾಡಲು ಶಕ್ತಿ ಕರುಣಿಸಲಿ ಎಂದರು. 

ಇದೇ ಸಂದರ್ಭದಲ್ಲಿ ಪೂಜಾ ಬುರಾಣಪೂರ ಮಾತನಾಡಿ, ಪ್ರತಿ ವರ್ಷ ನಮ್ಮ ಕುಟುಂಬದಿAದ ನಮ್ಮ ತಂದೆ ತಾಯಿ ಸರ್ವಜನಾಂಗಕ್ಕೂ ಆಹಾರ ಕಿಟ್ ವಿತರಿಸುತ್ತಿರುವುದು ನನಗೆ ಹೆಮ್ಮೆಯಾಗುತ್ತಿದೆ. ಇಂತಹ ತಂದೆ ತಾಯಿಗೆ ಮಗಳಾಗಿರುವುದು ನಾನೇ ಪುಣ್ಯವಂತೆ ಎಂದು ಹೇಳಿದರು. 



ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಲೆಕ್ಕಾಧಿಕಾರಿ ಅನ್ವರ ನದಾಫ್ ಮಾತನಾಡಿ, ಚಂದ್ರಶೇಖರ ಬುರಾಣಪೂರ ಇವರು ಜಾತಿ ಮತ ತೊರೆದು ಸರ್ವಜನಾಂಗದ ಕಷ್ಟಕ್ಕೇ ಮುಂದಾಗುವ ಕಾಳಜಿವುಳ್ಳ ವ್ಯಕ್ತಿಯಾಗಿದ್ದಾರೆ. ಪ್ರತಿ ಹಬ್ಬದಲ್ಲಿ ತಮ್ಮ ಸಂತೋಷವನ್ನು ಬಡವರಿಗೆ ಸಹಾಯ ಮಾಡುವುದರ ಮೂಲಕ ಹಬ್ಬ ಆಚರಿಸಿಕೊಳ್ಳುತ್ತಾರೆ ಆದ ಕಾರಣ ಇವರು ಕುಟುಂಬಕ್ಕೇ ಭಗವಂತ ನೆಮ್ಮದಿ ನೀಡಲೆಂದು ಶುಭ ಹಾರೈಸಿದರು. 

ಇದೇ ಸಂದರ್ಭದಲ್ಲಿ ಅಂಬಿಕಾ ಚಂದ್ರಶೇಖರ ಬುರಾಣಪೂರ, ಹಾಗೂ ಕುಟುಂಬದ ಸದಸ್ಯರು ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.