Saturday, April 11, 2026

ಮನಸೂರೆಗೊಂಡ ಪಾವಾ ಗಾಯನ | ಬುದ್ದ, ಬಸವ, ಅಂಬೇಡ್ಕರ್ ಗೆ ನಮನ | ಅಕ್ಷರೋತ್ಸವದಲ್ಲಿ ಮೊಳಗಿದ ಪ್ರಬುದ್ಧ ನಾದ !



ಮೇ ಸಾಹಿತ್ಯ ಮೇಳ, ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ಬೃಹತ್ ಪುಸ್ತಕ ಮೇಳದ ಎರಡನೇ ದಿನ ಶನಿವಾರ, ಸಾಹಿತ್ಯ ಮತ್ತು ಸಂಗೀತದ ಸೌಂದರ್ಯ ಸಂಗಮವಾಗಿ ಸ್ಮರಣೀಯ ಸಂಜೆಯಾಗಿ ಅರಳಿತು. ಅಕ್ಷರಗಳ ಅಂಗಳದಲ್ಲಿ ಅರಳಿದ ಈ ಅಕ್ಷರೋತ್ಸವ, ಪುಸ್ತಕಗಳ ಪರಿಮಳದಿಂದ ಮನಮಿಡಿಯುವ ಮಹೋತ್ಸವವಾಗಿ ಮಿಂಚಿತು.

ಪ್ರತಿ ಪುಸ್ತಕಗಳ ಪುಟದಲ್ಲಿ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಅವರ ಅಪ್ಪಟ ಮಾನವೀಯ ಮೌಲ್ಯಗಳ ಝೇಂಕಾರದ ಮಧ್ಯೆ, ಏಕಾಏಕಿ ಕೇಳಿಬಂತು ತಥಾಗತ ಬುದ್ಧನ ಶಾಂತಿಯ ಶುದ್ಧ ನಾದ. ಆ ನಾದವು ಕೇವಲ ಶಬ್ದವಲ್ಲ; ಅದು ಮನಸ್ಸಿನ ಮೌನವನ್ನು ಮಿಡಿದ ಮಧುರ ಮಂತ್ರ, ಚಿತ್ತದ ಚಂಚಲತೆಯನ್ನು ಶಮನಗೊಳಿಸಿದ ಶಾಂತಿಯ ಸಂದೇಶ.


ಶಬ್ದಗಳ ಸಾಗರದಲ್ಲಿ ಸಾಗುತ್ತಿದ್ದ ಸಭಿಕರ ಮನಗಳಿಗೆ, ಸಪ್ತಸ್ವರಗಳ ಸೌಂದರ್ಯ ಸವರಿದವರು ಖ್ಯಾತ ಸಂಗೀತಗಾರ ಪಾವಾ. ಅವರ ಸ್ವರಗಳು ಸರಳವಾಗಿದ್ದರೂ ಸಾರ್ಥಕ, ಮೃದುವಾಗಿದ್ದರೂ ಮೌಲ್ಯಮಯ, ಗಂಭೀರವಾಗಿದ್ದರೂ ಗಾಢಾರ್ಥಪೂರ್ಣ. ಶಬ್ದ ಮತ್ತು ಸ್ವರಗಳ ಸಮ್ಮಿಲನದಲ್ಲಿ, ಸಾಹಿತ್ಯ ಮತ್ತು ಸಂಗೀತದ ಸಂಯೋಜನೆಯಲ್ಲಿ, ಅವರು ಮೂಡಿಸಿದ ಮಧುರತೆ ಮೇಳದ ಮೆರಗನ್ನು ಮತ್ತಷ್ಟು ಹೆಚ್ಚಿಸಿತು.

ವಿಜಯಪುರದ ಈ ಪುಣ್ಯ ನೆಲದ ಮುಸ್ಸಸಂಜೆಯಲ್ಲಿ, ಪಾವಾ ಮತ್ತು ಅವರ ತಂಡದವರಿಂದ ಹರಿದ ಸಂಗೀತ ಲಹರಿ, ‘ಜಾಗತಿಕ ಶಾಂತಿ ಚಿಂತನೆ’ಯ ಸಂದೇಶವನ್ನು ಸಾರಿತು. ಸ್ವರಗಳ ಸಾಗರದಲ್ಲಿ ತೇಲಿದ ಪ್ರತಿಯೊಂದು ರಾಗವೂ ಶಾಂತಿಯ ಶ್ಲೋಕ, ಪ್ರತಿಯೊಂದು ಲಯವೂ ಮಾನವೀಯತೆಯ ಮೌಲ್ಯ. ಮನಸ್ಸಿನ ಮಡುಗಟ್ಟಿದ ಮಬ್ಬುಗಳನ್ನು ತೆರೆದ ಆ ಸಂಗೀತ, ಹೃದಯಗಳಲ್ಲಿ ಹಿತದ ಹೂಗಳನ್ನು ಅರಳಿಸಿತು.

ಧ್ಯಾನಸ್ಥ ಸ್ಥಿತಿಯಲ್ಲಿ ತೇಲಿದ ಸಭಿಕರು, ಅಕ್ಷರ ಲೋಕದ ಸೊಬಗನ್ನು ಸ್ವರಗಳ ಮೂಲಕ ಸವಿದರು. ಓದಿನ ಓಜಸ್ಸು, ಸಂಗೀತದ ಸೌಂದರ್ಯ, ಚಿಂತನೆಯ ಚೈತನ್ಯ—ಈ ಮೂರುಗಳ ಸಂಗಮದಲ್ಲಿ ಮೂಡಿದ ಆ ಅನುಭವ, ಆನಂದದ ಅಮೃತವಾಯಿತು. ಶಬ್ದಗಳ ಸರಪಣಿಯಲ್ಲಿ ಸಾಗಿದವರ ಮನಸ್ಸು, ಸ್ವರಗಳ ಸರಸಿಯಲ್ಲಿ ಸ್ನಾನಮಾಡಿದಂತೆ ಶಾಂತವಾಯಿತು.

ಬುದ್ಧನ ಶಾಂತಿಯ ಸಂದೇಶವು ಮೃದುವಾದ ಮಳೆಬಿಲ್ಲಿನಂತೆ ಮನಗಳನ್ನು ಮುದಗೊಳಿಸಿದರೆ, ಅಂಬೇಡ್ಕರರ ಆದರ್ಶಗಳು ಅಗ್ನಿಯಂತೆ ಆತ್ಮವಿಶ್ವಾಸವನ್ನು ಉಜ್ವಲಗೊಳಿಸಿತು. ಸಮಾನತೆ, ಸಹಾನುಭೂತಿ, ಸೌಹಾರ್ದತೆ—ಈ ಮೌಲ್ಯಗಳು ಸಂಗೀತದ ಮೂಲಕ ಮತ್ತೊಮ್ಮೆ ಜೀವಂತವಾದವು. ಆಲೋಚನೆಗಳ ಅಂಗಳದಲ್ಲಿ ಅರಳಿದ ಆ ಆದರ್ಶಗಳು, ಜೀವನದ ದಿಕ್ಕು ತೋರಿದ ದೀಪಗಳಾದವು.

ಪುಸ್ತಕಗಳ ನಡುವೆ ಮೂಡಿದ ಈ ಸಂಗೀತ ಸಂಜೆಯು, ಶಬ್ದ-ಸ್ವರಗಳ ಶ್ರೇಷ್ಠ ಸಂಭ್ರಮವಾಗಿ ಉಳಿಯಿತು. ಸಾಹಿತ್ಯದ ಸಾಲುಗಳಲ್ಲಿ ಸತ್ಯದ ಸೌಂದರ್ಯ ಕಂಡರೆ, ಸಂಗೀತದ ಸ್ವರಗಳಲ್ಲಿ ಶಾಂತಿಯ ಸಾರ್ಥಕತೆ ಕಂಡುಬಂತು. ಈ ಸಂಜೆಯು ಕೇವಲ ಕಾರ್ಯಕ್ರಮವಲ್ಲ; ಅದು ಚಿಂತನೆಯ ಚರಿತ್ರೆ, ಸಂಸ್ಕೃತಿಯ ಸಮ್ಮೇಳನ, ಮಾನವೀಯತೆಯ ಮಹೋತ್ಸವ.

ಮೇ ಸಾಹಿತ್ಯ ಮೇಳದ ಈ ಮಧುರ ಕ್ಷಣಗಳು, ಮನಸ್ಸಿನ ಮಿಡಿತಗಳಲ್ಲಿ ಮುದ್ರಿತವಾಗಿ ಉಳಿಯುವವು. ಪುಸ್ತಕಗಳ ಪ್ರಪಂಚದಲ್ಲಿ ಪಯಣಿಸುತ್ತಾ, ಸಂಗೀತದ ಮೃದುವಾದ ಮಂತ್ರವನ್ನು ಅನುಭವಿಸಿದ ಈ ಅನುಭವ, ಜೀವನದ ಜಾತ್ರೆಯಲ್ಲಿ ಜ್ಯೋತಿಯಂತೆ ಜಗಮಗಿಸುವುದು. ವಿಜಯಪುರದ ಈ ವೈಭವಮಯ ಮೇಳ, ಶಬ್ದ ಮತ್ತು ಸ್ವರಗಳ ಸಂಯೋಜನೆಯಲ್ಲಿ ಶಾಂತಿಯ ಸಂದೇಶವನ್ನು ಸಾರಿದ ಸಾರ್ಥಕ ಸಂಭ್ರಮವಾಗಿ ಸದಾಕಾಲ ಸ್ಮರಣೀಯವಾಗಿರಲಿದೆ.

ವಿಶೇಷ ವರದಿ: ಕಲ್ಲಪ್ಪ ಶಿವಶರಣ 7204279187

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಬುದ್ಧ ಬಸವ ಅಂಬೇಡ್ಕರ್ ಸಮಾಜಕ್ಕೆ ನೀಡಿದ ಕೊಡುಗೆ ದೊಡ್ಡದು : ಪ ಗು ಸಿದ್ದಾಪುರ


ಫಾತಿಮಾ ಶೇಖ, ಶಂ.ಗು. ಬಿರಾದಾರ, ಸಿಸು ಸಂಗಮೇಶ ವೇದಿಕೆ

ವಿಜಯಪುರ : ಯಾವುದೊ ಶತಮಾನದಲ್ಲಿ ಆಗಿ ಹೋದ ಬುದ್ಧ ಬಸವ ಅಂಬೇಡ್ಕರ್ ಅವರನ್ನು ನಾವು ಇವತ್ತಿಗೂ ನೆನೆಯುತ್ತಿವೆ ಅಂದರೆ ಅವರು ಸಮಾಜಕ್ಕೆ ನೀಡಿದ ಕೊಡುಗೆ ದೊಡ್ಡದು ಎಂದು ಹಿರಿಯ ಸಾಹಿತಿ ಪ ಗು ಸಿದ್ದಾಪುರ ಅವರು ಹೇಳಿದರು
ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದಲ್ಲಿ ಎರಡನೇ ದಿನದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
                                  

ಅತಿಥಿ ಸ್ಥಾನವಹಿಸಿ ಹಿರಿಯ ಸಾಹಿತಿ ಸುಭಾಸ ಯಾದವಾಡ ಅವರುಮಾತನಾಡಿ ಕಡಿಮೆ ಶಬ್ದ ಬಳಸಿ ಹೆಚ್ಚು ಹೇಳುವ ಕಲೆ ಕವಿಗೆ ಮತ್ತು ಕವಿತೆಗೆ ಇದೆ ಎಂದು ಹಿರಿಯ ಸಾಹಿತಿ ಸುಭಾಸ ಯಾದವಾಡ ಅವರು ಹೇಳಿದರು.
ಡಾ ಮಲ್ಲಿಕಾರ್ಜುನ ಮೇತ್ರಿ ಅವರು ಆಶಯನುಡಿ ಮಾತನಾಡಿ ಇಡಿ ಜಗತ್ತಿನ ದಾರ್ಶನಿಕರ ಮೊದಲ ಸಾಲಿನಲ್ಲಿ ನಿಲ್ಲುವ ಬುದ್ಧ ಬಸವ ಅಂಬೇಡ್ಕರ್ ಅವರ ಹೆಸರಲ್ಲಿ ಪುಸ್ತಕ ಮೇಳ ಹಮ್ಮಿಕೊಳ್ಳುವ ಮೂಲಕ ಮತ್ತೆ ಮತ್ತೆ ಅವರನ್ನು ನೆನೆಯುತ್ತೇವೆ ಅದು ಅವರು ಸಮಾಜಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸುವುದಾಗಿದೆ ಎಂದರು
ಕವಿಗಳಲ್ಲಿ ಇಂದು ಪ್ರಗತಿಪರ ನೆಲೆ ಕಳೆದುಕೊಳ್ಳುತ್ತಿದೆ ನಮ್ಮ ಮನೋಶಕ್ತಿ ಹೆಚ್ಚಿಸುವ ಶಕ್ತಿ ಕಾವ್ಯಕ್ಕಿದೆ ಕಾವ್ಯ ಕಟ್ಟುವುದು ಕುಶಲಕರ್ಮಿ ಕೆಲಸವಾಗಿದೆ ಎಂದು ಹೇಳಿದರು.
ಕವಿಗೋಷ್ಠಿಯಲ್ಲಿ ಡಾ ಮೈನುದ್ದಿನ್ ರೇವಡಿಗಾರ, ಚಂದ್ರಶೇಖರ ಸಿಂಗಾಡಿ, ಮುದ್ದಣ್ಣ ಭೀಮನಗರ, ಶಿವಾಜಿ ಮೋರೆ ಸಮೀರ ಹಾದಿಮನಿ ಕವನ ವಾಚಿಸಿದರು.
ಕವಿಗೋಷ್ಠಿಗೂ ಮೊದಲು ಎರಡನೇ ದಿನದ ನಾಲ್ಕನೇ ಗೋಷ್ಠಿ ನನ್ನ ನೆಚ್ಚಿನ ಪುಸ್ತಕ ವಿದ್ಯಾರ್ಥಿಗಳ ಮಾತು ಸಂವಾದದಲ್ಲಿ ಸುಷ್ಮಾ ಪವಾರ ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆ, ಪವಿತ್ರಾ ಕುಂಬಾರ ರಮಾಬಾಯಿ ಅಂಬೇಡ್ಕರ್ ಅವರ ಜೀವನ ಚರಿತ್ರೆ  ಸುಕನ್ಯಾ ಹತ್ತಿ ಅವರು ಹೋರಾಟದ ಹಾದಿಗೆ ಹಣತೆ ಹಿಡಿದವರು ಕೃತಿ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಿದ್ರಾಮ ಬಿರಾದಾರ ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ, ಸುರೇಶ ಬಿಜಾಪುರ, ಚೆನ್ನು ಕಟ್ಟಿಮನಿ ವೈ ಎಸ್ ಗುಣಕಿ. ಸಂಘರ್ಷ ಹೊಸಮನಿ, ಲಾಯಪ್ಪ ಇಂಗಳೆ ಸೋಮು ರಣದೇವಿ, ಬಿ ಆರ್ ಬನಸೋಡೆ  ರಾಜೇಶ ಚಲವಾದಿ  ಉಪಸ್ಥಿತರಿದ್ದರು.



ಬರಹಗಾರ ಸಮಾನತೆ ತತ್ವದಲ್ಲಿ ಕೆಲಸ ಮಾಡಬೇಕು- ಸನತಕುಮಾರ ಬೆಳಗಲಿ

ಫಾತಿಮಾ ಶೇಖ, ಶಂ.ಗು. ಬಿರಾದಾರ, ಸಿಸು ಸಂಗಮೇಶ ವೇದಿಕೆ

ವಿಜಯಪುರ : ಪತ್ರಕರ್ತ ಮತ್ತು ಬರಹಗಾರನಿಗೆ ಸಾಮಾಜಿಕ ಕಳಕಳಿ ಇರಬೇಕು ಸಮಾಜದ ಏರು ಪೇರುಗಳನ್ನು  ಗುರುತಿಸಿ ಸಮಾನತೆ  ತತ್ವದಲ್ಲಿ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹಿರಿಯ ಪತ್ರಕರ್ ಸನತಕುಮಾರ ಬೆಳಗಲಿ ಅವರು ಹೇಳಿದರು.
ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದಲ್ಲಿ ಎರಡನೇ ದಿನದ ಮೂರನೇ ಗೋಷ್ಠಿ ಲೇಖಕರೊಂದಿಗೆ ಸಂವಾದ ವಿಷಯ ಮಂಡನೆ ಅವರು ಮಾತನಾಡಿದರು.
ಕರ್ನಾಟಕದಲ್ಲಿ ವೈಚಾರಿಕ ಚಳುವಳಿ ಮತ್ತು ವೈಚಾರಿಕ ಲೇಖಕರಿಗೆ ಅನ್ಯಾಯ ಮಾಡಿದ ಘಟನೆಗಳು ಹಿಂದೆ ನಡೆದಿವೆ ಅಂತಹ ಸಂದರ್ಭದಲ್ಲಿ ಲೇಖಕ ತುಂಬಾ ಜಾಗರುಕತೆಯಿಂದ ವರ್ತಿಸಬೇಕು ಎಂದರು.
ಸಂವಾದದಲ್ಲಿ ಸಾಹಿತಿ ಡಾ ಶಿವಗಂಗಾ ರುಮ್ಮಾ ಅವರು ಮಾತನಾಡಿ  ಬರಗಾಲ ಬಿದ್ದಾಗ ಬಾಲ್ಕಿ ಪಟ್ಟದ ದೇವರು ದಲಿತರಿಗೆ ದಾಸೋಹ ಮಾಡಿದ್ದನ್ನು ವಿರೋಧಿಸಿ ಗ್ರಾಮದವರು ವಿರೋಧ ಮಾಡಿ ಬಹಿಷ್ಕಾರ ಹಾಕಿದ್ದರು ಅಂತಹ ವಾತಾವರಣದಲ್ಲಿ ಬೆಳೆದ ನಾನು ಬಸವಣ್ಣ ಮತ್ತು ಕಾರ್ಲಮಾರ್ಕ್ಸ್ ರ ಕುರಿತು ವಿರೋಧದ ಮಧ್ಯೆ ಪಿ ಎಚ್ ಡಿ ಪ್ರಬಂಧ ಮಂಡಿಸಿದ್ದು ನನ್ನ ಜೀವನದಲ್ಲಿ ಏನನ್ನು ಅಳವಡಿಸಿಕೊಳ್ಳಬೇಕು ಏನನ್ನು ಅಳವಡಿಸಿಕೊಳ್ಳಬಾರದು ಎಂಬ ದಾರಿ ತೋರಿತು ಎಂದು ಹೇಳಿದರು.
ಪ್ರಭುತ್ವವನ್ನು ವಿರೋಧಿಸುವ ಲೇಖಕರ ಸಂಖ್ಯೆ ವಿರಳವಾಗುತ್ತಿದೆ. ರಾಜಕಾರಣಿಗಳಂತೆ ಲೇಖಕರು ಕೂಡಾ ಸ್ಥಿತ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿದ್ದಾರೆ ಪ್ರಭುತ್ವದ ವಿರುದ್ಧ ಸಾಮಾಜಿಕ ಬದ್ಧತೆ ಕಾಪಾಡಿಕೊಳ್ಳಬೇಕಿದೆ ಎಂದರು.
ಬಸವಣ್ಣನಿಗೆ ಯಾರಾದರೂ ವಿರೋಧಿಗಳಿದ್ದರೆ ಅದು ಲಿಂಗಾಯತರಲ್ಲಿಯೇ ಇದ್ದಾರೆ ಎಂದರು.


ಸಂವಾದದಲ್ಲಿ ಬಾಗಲಕೋಟ ವಿಶ್ವವಿದ್ಯಾಲಯದ ಕುಲಸಚಿವ ಡಾ ಸೋಮಲಿಂಗ ಗೆಣ್ಣೂರ ಅವರು ಮಾತನಾಡಿ ಲೇಖಕನಾದವನಿಗೆ ಧರ್ಮ ಮತ್ತು ಜಾತಿ ಮುಖ್ಯವಾದರೆ ಸಮಾಜ ವಿಘಟನೆಯಾಗುತ್ತದೆ. ಮೌಢ್ಯ ಬಿತ್ತುವ ಸಾಹಿತಿ ಸಮಾಜಕ್ಕೆ ಹೊರೆಯಾಗುತ್ತಾನೆ ಲೇಖಕನಾದವನಿಗೆ ವಾಸ್ತವಿಕ ಪ್ರಜ್ಞೆ ಇರಬೇಕು ಎಂದು ಅವರು ಹೇಳಿದರು.
ಪರಿಶಿಷ್ಟ ಜಾತಿ ಮೀಸಲಾತಿ ಎಂಬುದು ಆರ್ಥಿಕವಾಗಿ ಹಿಂದುಳಿದವರಿಗೆ ಅಲ್ಲ ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆಗೆ ಒಳಗಾದವರಿಗೆ ಇರುವಂತಹದು ಅದನ್ನು ಇಂದು ವ್ಯಾಖ್ಯಾನ ಮಾಡುವ ಪರಿ ಬದಲಾವಣೆ ಆಗಬೇಕು ಎಂದರು.
 ಬಸವರಾಜ ಹೂಗಾರ ಅವರು ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ,ಅಪ್ಪಾಸಾಹೇಬ ಯರನಾಳ ಸುರೇಶ ಜೀಬಿ ಲಕ್ಷ್ಮಣ ಹಂದ್ರಾಳ ದೊಡ್ಡಣ್ಣ ಬಜಂತ್ರಿ, ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಮುಕ್ತವಾಗಿ ಸುದ್ದಿ ಪ್ರಸಾರ ಮಾಡುವುದು ಪತ್ರಕರ್ತನ ಸಾಮಾಜಿಕ ಜವಾಬ್ದಾರಿ -ಸಂಗಮೇಶ ಮೆಣಸಿನಕಾಯಿ

ಫಾತಿಮಾ ಶೇಖ, ಶಂ.ಗು. ಬಿರಾದಾರ, ಸಿಸು ಸಂಗಮೇಶ ವೇದಿಕೆ ವಿಜಯಪುರ : ಲಿಂಗಾಯತ ಧರ್ಮದ ಚರ್ಚೆ ನಡೆದಾಗ ಮಠದ ಸ್ವಾಮೀಜಿಗಳನ್ನು ಕ್ರಿಶ್ಚಿಯನ್ ಚರ್ಚ್ ಗಳಿಗೆ ಪಾದ್ರಿಗಳನ್ನು ವರ್ಗಾವಣೆ ಮಾಡಿದಂತೆ ವರ್ಗಾವಣೆ ಮಾಡಬೇಕು ಎಂದು ಬರೆದೆ ಅದು ಸಾಕಷ್ಟು ಚರ್ಚೆಯಾಯಿತು ಮುಕ್ತವಾಗಿ ಸುದ್ದಿ ಪ್ರಸಾರ ಮಾಡುವುದು ಪತ್ರಕರ್ತನ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಸಂಗಮೇಶ ಮೆಣಸಿನಕಾಯಿ ಹೇಳಿದರು.

ಇತ್ತೀಚಿಗೆ ಕರ್ನಾಟಕದಲ್ಲಿ ಕೆಲವು ಸ್ವಾಮೀಜಿಗಳು ತಮ್ಮ ಖಾಸಗಿ ವಿಡಿಯೋ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಜೊತೆಗೆ ಪೊಲೀಸ್ ಪ್ರಕರಣ ಕೂಡಾ ದಾಖಲಾಗಿದೆ ನಮ್ಮ ಪತ್ರಕರ್ತರು ಪ್ರಕರಣ ದಾಖಲಾದ ಬಗ್ಗೆ ಸುದ್ದಿ ಮಾಡಲು ನಮ್ಮ ಪತ್ರಕರ್ತರು ಹಿಂಜರಿಯುತ್ತಿದ್ದಾರೆ ಇದು ನಮ್ಮ ಪತ್ರಕರ್ತರು ಎತ್ತ ಸಾಗುತ್ತಿದ್ದಾರೆ ಎಂಬುದು ತೋರಿಸುತ್ತದೆ ಎಂದರು.

ಪತ್ರಕರ್ತರು ಗಣಿಗಾರಿಕೆ ವಿರುದ್ಧ ಪುಟಗಟ್ಟಲೆ ಬರೆಯುತ್ತೇವೆ ಆದರೆ ಗಣಿಗಾರಿಕೆ ಕಾರ್ಮಿಕರ ಬಗ್ಗೆಯು ನಾವು ವರದಿ ಮಾಡಬೇಕು ಏಕೆಂದರೆ ಗಣಿಗಾರಿಕೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಪರಿಸರ ಬಗ್ಗೆ ಕಾಳಜಿ ತೋರುವ ನಾವು ಕಾರ್ಮಿಕರಿಗೆ ಆಗುವ ತೊಂದರೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.
ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದಲ್ಲಿ ಎರಡನೇ ದಿನದ ಎರಡನೇ ಗೋಷ್ಠಿ ಸಾಮಾಜಿಕ ಬದ್ಧತೆ ಪತ್ರಕರ್ತನಾಗಿ ನನ್ನ ಅನುಭವಗಳು ಕುರಿತು ವಿಷಯ ಮಂಡನೆ ಮಾಡಿ ಅವರು ಮಾತನಾಡಿದರು.
                                     
ಸಂವಾದದಲ್ಲಿ ಪತ್ರಕರ್ತ ಕಲ್ಲಪ್ಪ ಶಿವಶರಣ ಅವರು ಮಾತನಾಡಿ ಪತ್ರಕರ್ತನಾದವವನು ಪೂರಕ ಮಾಹಿತಿ ಸಂಗ್ರಹ ಮಾಡಿ ನಿಖರವಾಗಿ ಸುದ್ದಿ ಪ್ರಸಾರ ಮಾಡಬೇಕು ಸುದ್ದಿಗಳು ಸಮಾಜದ ಅಂಕು-ಡೊAಕು ತಿದ್ದುವಂತಿರಬೇಕು ಎಂದರು.
ಸAವಾದದಲ್ಲಿ ಪತ್ರಕರ್ತ ಸುನೀಲ ಗೋಡೆನ್ನವರ ಮಾತನಾಡಿ ದೃಶ್ಯ ಮಾಧ್ಯಮದ ಪತ್ರಕರ್ತರು ಅಪಘಾತ ಸಂಭವಿಸಿದಾಗ ಮೊದಲು ಗಾಯಾಳುಗಳನ್ನು ರಕ್ಷಣೆ ಮಾಡಲು ಪ್ರಯತ್ನ ಮಾಡಬೇಕು ಇದು ಪತ್ರಕರ್ತನ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದರು.
ಪತ್ರಕರ್ತ ಚಂದ್ರಶೇಖರ ಹೊಸಮನಿ ಅವರು ಮಾತನಾಡಿ ಪತ್ರಕರ್ತ ಸುದ್ದಿ ಪ್ರಸಾರ ಮಾಡುವಾಗ ನೇರ ನಿಷ್ಠುರ ನಿರ್ಭಯತೆ ಹೊಂದಿರಬೇಕು ಎಂದರು.
ಹಿರಿಯ ಪತ್ರಕರ್ತ ರಾಜು ಕೊಂಡಗೂಳಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ,ಬೋಗೇಶ ಸೋಲಾಪುರ ಅರವಿಂದ ಲಂಬು ಸಂಗಮೇಶ ಚೂರಿ ರವಿ ಕಿತ್ತೂರ ಸುರೇಶ ಬಿಜಾಪುರ, ಚೆನ್ನು ಕಟ್ಟಿಮನಿ ವೈ ಎಸ್ ಗುಣಕಿ. ಸಂಘರ್ಷ ಹೊಸಮನಿ, ಲಾಯಪ್ಪ ಇಂಗಳೆ ಶಿವು ಕಟ್ಟಿಮನಿ, ಸೋಮು ರಣದೇವಿ ರಾಜೇಶ ಚಲವಾದಿ,ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಸಮಾಜವನ್ನು ಒಗ್ಗೂಡಿಸುವ ಶಕ್ತಿ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಮಾತ್ರಯಿದೆ - ಡಾ ಎಚ್ ಟಿ ಪೋತೆ

ಫಾತಿಮಾ ಶೇಖ, ಶಂ.ಗು. ಬಿರಾದಾರ, ಸಿಸು ಸಂಗಮೇಶ ವೇದಿಕೆ ವಿಜಯಪುರ : ಮಹಾತ್ಮಾ ಜ್ಯೋತಿಬಾ ಫುಲೆ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರಿಗೆ ನ್ಯಾಯ ಒದಗಿಸಲು ಶೈಕ್ಷಣಿಕ ಕ್ರಾಂತಿ ಮಾಡಿದವರು ಹನ್ನೆರಡನೆ ಶತಮಾನದಲ್ಲಿ ಅಪ್ಪನು ಮಾದರ ಚೆನ್ನಯ್ಯ, ಬಪ್ಪನು ಡೋಹರ ಕಕ್ಕಯ್ಯ ಎನ್ನುವ ಮೂಲಕ ಒಂಬತ್ತು ನೂರು ರ‍್ಷಗಳ ಹಿಂದೆ ಬಸವಣ್ಣ, ಎರಡು ಸಾವಿರ ರ‍್ಷಗಳ ಹಿಂದೆ ಬುದ್ಧ, ನಾಲ್ಕು ನೂರು ರ‍್ಷಗಳ ಹಿಂದೆ ಸಮಾಜದಲ್ಲಿ ಮಾನವ ಹಕ್ಕುಗಳ ಬಗ್ಗೆ ಮಾತನಾಡಿದರು, ಅದನ್ನು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಜಾರಿಗೊಳಿಸಿದರು ಇಂತಹ ಬುದ್ದ, ಬಸವ,ಕಬೀರ,ಫುಲೆ ಮತ್ತು ಅಂಬೇಡ್ಕರ್ ಜಗತ್ತಿಗೆ ಮಾದರಿ ಎಂದು ಕಲಬುರಗಿ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ನರ‍್ದೇಶಕರಾದ ಡಾ ಎಚ್ ಟಿ ಪೋತೆ ಅವರು ಹೇಳಿದರು.

ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದಲ್ಲಿ ಎರಡನೇ ದಿನದ ಮೊದಲ ಗೋಷ್ಠಿ ಮಹಾತ್ಮಾ ಜ್ಯೋತಿಬಾ ಫುಲೆ ಜಯಂತಿ ಕರ‍್ಯಕ್ರಮದಲ್ಲಿ ಮುಖ್ಯ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ ಎಲ್ಲವನ್ನು ಪಡೆದುಕೊಂಡ ಜನ ಅವರ ತತ್ವ ಸಿದ್ಧಾಂತಗಳನ್ನು ಪ್ರಚಾರ ಮಾಡುವ ಜವಾಬ್ದಾರಿ ತೆಗೆದುಕೊಳ್ಳಬೇಕು ಜ್ಯೋತಿಬಾ ಫುಲೆ ಅವರ ಶಾಲೆಯಲ್ಲಿ ಕಲಿತ ಮುಕ್ತಾ ಎಂಬ ದಲಿತ ಲೇಖಕಿ ಅವತ್ತೆ ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತಿದ್ದಾರೆ ಭಾರತ ಇವತ್ತು ವಿವಿಧ ಸಂಸ್ಕೃತಿ ಹೆಸರಲ್ಲಿ ಒಡೆದು ಹೋಗುತ್ತಿದೆ ಸಮಾಜವನ್ನು ಒಗ್ಗೂಡಿಸುವ ಕೆಲಸ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನಕ್ಕೆ ಮಾತ್ರಯಿದೆ ಮಹಾತ್ಮರು ಯಾವುದೇ ಒಂದು ಸಮಾಜಕ್ಕೆ ಸೇರಿದವರಲ್ಲ ಅವರು ದೇಶದ ಎಲ್ಲ ಜನರಿಗೆ ಸೇರಿದವರು ಎಂದು ಹೇಳಿದರು.

ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಕಲಬುರಗಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನರ‍್ದೇಶಕರಾದ ಬಸವರಾಜ ಹೂಗಾರ ಅವರು ಮಾತನಾಡಿ, ಜಾತಿಯ ಸಮಸ್ಯೆಗಳು ಬಗೆಹರಿಸುವುದು ಹೇಗೆ ಮತ್ತು ನಮ್ಮ ಹುಟ್ಟಿನ ಮೂಲ ಸಮಾಜದಲ್ಲಿ ಎಲ್ಲರಿಗೂ ಕಾಡುವ ಎರಡು ಪ್ರಶ್ನೆಗಳಾಗಿವೆ ನಾವು ಪಡೆಯುವ ಶಿಕ್ಷಣ ನಮ್ಮ ಮೌಢ್ಯ ಕಳೆಯುತ್ತದೆ ಎಂದು ಎಂಬುದು ತಪ್ಪು ಇವತ್ತಿನ ಶಿಕ್ಷಣ ಎತ್ತ ಸಾಗಿದೆ ಎಂದು ನಾವು ಚಿಂತಿಸಬೇಕಿದೆ ಮಕ್ಕಳಿಗೆ ಬುದ್ಧ ಬಸವ ಅಂಬೇಡ್ಕರ್ ಪುಸ್ತಕ ಓದುವ ಸಂಸ್ಕೃತಿ ಬೆಳೆಸಬೇಕಿದೆ ಆಗ ಮಾತ್ರ ನಮ್ಮ ಮಕ್ಕಳು ನವ ಸಮಾಜ ನರ‍್ಮಾಣ ಮಾಡಲು ಸಾಧ್ಯವಿದೆ ಅಂಬೇಡ್ಕರ್ ಹಚ್ಚಿದ ಸಮಾನತೆ ದೀಪವನ್ನು ಆರದಂತೆ ಜೋಪಾನವಾಗಿ ಕಾಪಾಡಿಕೊಂಡು ಬಂದವರು ಈ ದೇಶದ ಕೆಳ ಸಮುದಾಯದ ಜನ ಎಂದು ಹೇಳಿದ ಅವರು ಪ್ರತಿಯೊಬ್ಬರೂ ಪುಸ್ತಕ ಮೇಳದಲ್ಲಿ ಭಾಗವಹಿಸಿ ಪುಸ್ತಕ ಖರೀದಿಸಿ ಮೇಳವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.

ಉಪಸ್ಥಿತಿ ವಹಿಸಿ ಮುಖಂಡ ಸುರೇಶ ಘೊಣಸಗಿ ಅವರು ಮಾತನಾಡಿ ದೇಶದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಜ್ಯೋತಿಬಾ ಫುಲೆ ಜಯಂತಿ ಪ್ರಯುಕ್ತ ವಿಜಯಪುರದಲ್ಲಿ ಐತಿಹಾಸಿಕ ಪುಸ್ತಕ ಮೇಳ ಹಮ್ಮಿಕೊಂಡಿರುವುದು ಮಾದರಿ ಕರ‍್ಯವಾಗಿದೆ. ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನವನ್ನು ವಿದ್ಯರ‍್ಥಿಗಳಿಗೆ ಭೋದನೆ ಮಾಡುವ ಜವಾಬ್ದಾರಿಯನ್ನು ಶಿಕ್ಷಕರು ತೆಗೆದುಕೊಳ್ಳಬೇಕು ದೇಶ ಸಂಕಷ್ಟದ ದಾರಿಯಲ್ಲಿದೆ ತಳ ಸಮುದಾಯದ ಜನ ಶಿಕ್ಷಣಕ್ಕೆ ಒತ್ತುಕೊಟ್ಟು ಶಿಕ್ಷಣವಂತರಾದರೆ ಮಾತ್ರ ಸಮ ಸಮಾಜ ನರ‍್ಮಾಣ ಸಾಧ್ಯ ಎಂದು ಹೇಳಿದರು.

ಬಂಜಾರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಿ ಎಲ್ ಚವ್ಹಾಣ ಅವರು ಮಾತನಾಡಿ, ಪುಸ್ತಕ ಮೇಳವು ಸಮಾಜದಲ್ಲಿ ಒಮ್ಮತ ಮೂಡಿಸುವ ಕೆಲಸ ಮಾಡುತ್ತಿದೆ. ಎಲ್ಲರು ಕೂಡಿಕೊಂಡು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕರ‍್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಎಸ್ ಸಿ ಎಸ್ ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಬಿ ಎಚ್ ನಾಡಗಿರಿ ಅವರು ಮಾತನಾಡಿ ಶಿಕ್ಷಕ ವೃತ್ತಿ ಸಮಾಜದಲ್ಲಿ ಬಹಳಷ್ಟು ಜವಾಬ್ದಾರಿ ಹೊಂದಿರುವ ಹುದ್ದೆಯಾಗಿದೆ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಜ್ಯೋತಿಬಾ ಫುಲೆ ಜಯಂತಿ ಪ್ರಯುಕ್ತ ಪುಸ್ತಕ ಮೇಳದಲ್ಲಿ ಶಿಕ್ಷಕ ದಂಪತಿಗಳಿಗೆ ಗೌರವ ಸಲ್ಲಿಸುವ ಕೆಲಸ ಮಾಡಿದ್ದು ಸ್ವಾಗತರ‍್ಹ ಎಂದರು.

ಕರ‍್ಯಕ್ರಮದಲ್ಲಿ ಶಿಕ್ಷಕ ದಂಪತಿಗಳ ಜಾಥಾದಲ್ಲಿ ಪಾಲ್ಗೊಂಡಿದ್ದ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

 ಕರ‍್ಯಕ್ರಮದಲ್ಲಿ ಚಿದಾನಂದ ಕಾಂಬಳೆ, ಸುರೇಖಾ ರಜಪೂತ, ಸಿದ್ದಪ್ಪ ಹೊಸಮನಿ ಬಿರಾದಾರ, ಸತ್ಯಪ್ಪ ಚಲವಾದಿ, ಸುರೇಶ ಗೊಣಸಗಿ, ಕೆ.ಎಂ. ಕೂಡಲಗಿ, ಸಿದ್ದನಗೌಡ ಪಾಟೀಲ, ಬಸವರಾಜ ತಾಳಿಕೋಟಿ, ಶಬ್ಬಿರ ಕಾಗಜಕೋಟಿ, ಸಾಹೇಬಗೌಡ ಪಾಟೀಲ, ಚಂದ್ರಕಾಂತ ಸಿಂಗೆ, ರವಿ ಕಿತ್ತೂರ, ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ, ಚೆನ್ನು ಕಟ್ಟಿಮನಿ ವೈ ಎಸ್ ಗುಣಕಿ, ಚಂದ್ರಶೇಖರ ಹೊಸಮನಿ, ಸಂರ‍್ಷ ಹೊಸಮನಿ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ, ಶಿವು ಕಟ್ಟಿಮನಿ, ಸೋಮು ರಣದೇವಿ ರಾಜೇಶ ಚಲವಾದಿ ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


ಮಹಾತ್ಮಾ ಜ್ಯೋತಿಬಾ ಫುಲೆ ಜಯಂತಿ ಶಿಕ್ಷಕ ದಂಪತಿಗಳಿಂದ ಜಾಥಾ ವಿಜಯಪುರ ಬುದ್ಧ ಬಸವ ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ

ವಿಜಯಪುರ :  ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದಲ್ಲಿ ಎರಡನೇ ದಿನ ಮಹಾತ್ಮಾ ಜ್ಯೋತಿಬಾ ಫುಲೆ ಜಯಂತಿ ಅಂಗವಾಗಿ ನಗರದ ಸಾವಿತ್ರಿಬಾಯಿ ಫುಲೆ ಮಾರ್ಗದಿಂದ  ಪುಸ್ತಕ ಮೇಳದ ಸ್ಥಳದ ವರೆಗೆ ಶಿಕ್ಷಕ ದಂಪತಿಗಳ ಜಾಥಾ ಜರುಗಿತು.


ಶಿಕ್ಷಕ ದಂಪತಿಗಳ ಜಾಥಾಕ್ಕೆ  ಎಸ್ ಸಿ ಎಸ್ ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಬಿ ಎಚ್ ನಾಡಗಿರಿ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಹೊಸಮನಿ, ಹೊನಮಲ್ಲಗೌಡ ಸಾರವಾಡ, ಎಸ್  ಎಂ ಡೋಣಿ, ಆಶಾ ಕಟ್ಟಿಮನಿ, ನೀಲಾಂಬಿಕಾ ಬಿರಾದಾರ, ರಶ್ಮಿ ಗುಣಕಿ ವಿಜಯಶ್ರೀ ಬಿಜಾಪುರ, ಹಣಮಂತ ಮಮದಾಪುರ, ಸಲೀಂ ಕಲಾದಗಿ ಚಾಲನೆ ನೀಡಿದರು.

ಜಾಥಾದಲ್ಲಿ ಬುದ್ಧ ಬಸವ, ಬಾಬಾಸಾಹೇಬ ಅಂಬೇಡ್ಕರ್ ಮತ್ತು ದೇಶದ ಮೊದಲ ಶಿಕ್ಷಕ ದಂಪತಿಗಳಾದ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ದಂಪತಿಗಳಿಗೆ ಜಯಘೋಷ ಮೊಳಗಿದವು.
ಶಿಕ್ಷಕ ದಂಪತಿಗಳ  ಜಾಥಾದಲ್ಲಿ ದ್ರೌಪತಿ ನಾಗರಾಜ ಹೊನಸೂರೆ, ಶೋಭಾ ಮಲ್ಲಿಕಾರ್ಜುನ ಕನ್ನೂರ, ಸಾವಿತ್ರಿ ದೇವರಾಜ ಶೃಂಗೇರಿ, ಸಾವಿತ್ರಿ ಗಣಪತಿ ಚವ್ಹಾಣ, ರೇಣುಕಾ ಶಿವಪ್ಪ ಚಲವಾದಿ, ಜಯಶ್ರೀ ಸಿದ್ರಾಮಪ್ಪ ತದ್ದೇವಾಡಿ, ನೇತ್ರಾವತಿ ವಿಶ್ವನಾಥ ಮೇತ್ರಿ, ಶಿಲ್ಪಶ್ರೀ ನಿಜು ಮೇಲಿನಕೇರಿ, ವೈಶಾಲಿ ವಿಜಯಾನಂದ ಮುದ್ದೇಬಿಹಾಳ, ವಿಜಯಲಕ್ಷ್ಮಿ  ಜಗದೀಶ ಹುಲ್ಯಾಳ, ಎಲ್ ಟಿ ಕೊಣ್ಣೂರ ಎಸ್ ಎ ಬಿರಾದಾರ, ಎಸ್ ಎಸ್ ಕುಲಕರ್ಣಿ ಕೆ ಎಚ್ ಪೂಜಾರಿ ಶಿಕ್ಷಕ ದಂಪತಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ, ಸುರೇಶ ಘೊಣಸಗಿ, ಚೆನ್ನು ಕಟ್ಟಿಮನಿ, ಸುರೇಶ ಬಿಜಾಪುರ, ವೈ ಎಸ್ ಗುಣಕಿ, ವೈ ಎಚ್ ಲಂಬು ದೊಡ್ಡಣ್ಣ ಭಜಂತ್ರಿ, ಅನಿಲ ಇಕ್ಕಡೆ , ಚಂದ್ರಶೇಖರ ಹೊಸಮನಿ, ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ, ಗುರುರಾಜ ಹಂದ್ರಾಳ, ಶರಣು ಕಿರಣಗಿ, ಸಂಘರ್ಷ ಹೊಸಮನಿ,  ಸೇರಿ ನೂರಾರು ಜನ ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.