Saturday, February 28, 2026
ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರಿಂದ ಇಂದು ಆರಂಭಗೊoಡ ದ್ವಿತೀಯ ಪಿಯು-1ರ ಪರೀಕ್ಷಾ ಕೇಂದ್ರಗಳಿಗೆ ಭೇಟಿ ಪರಿಶೀಲನೆ
ವಿಜಯಪುರ : ಜಿಲ್ಲೆಯ 64 ಪರೀಕ್ಷಾ ಕೇಂದ್ರಗಳಲ್ಲಿ (ಫೆ.28) ದ್ವಿತೀಯ ಪಿಯುಸಿ-1ರ ಪರೀಕ್ಷೆ ಆರಂಭಗೊAಡಿದ್ದು, ಶನಿವಾರ ಕನ್ನಡ ಮತ್ತು ಅರೆಬಿಕ್ ಪರೀಕ್ಷೆ ಜರುಗಿತು. ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ನಗರದ ವಿಬಿ ದರಬಾರ ಕಾಲೇಜ್, ಎಸ್.ಎಸ್.ಪದವಿಪೂರ್ವ ಕಾಲೇಜ್ ಹಾಗೂ ಖೇಡ ಕಾಲೇಜಿನಲ್ಲಿ ನಡೆದ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಸುಸೂತ್ರ ಹಾಗೂ ಸುಗಮ ಪರೀಕ್ಷೆ ನಡೆಸಲು ಕೈಗೊಳ್ಳಲಾದ ವ್ಯವಸ್ಥೆ ಕುರಿತಾಗಿ ಪರಿಶೀಲನೆ ನಡೆಸಿ,ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದರು.
ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೊಳಗಾಗದೇ ಅತ್ಯಂತ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವ ನಿಟ್ಟಿನಲ್ಲಿ ಅಗತ್ಯ ಗಾಳಿ ,ಬೆಳಕು ಕುಡಿಯುವ ನೀರು ಒದಗಿಸಬೇಕು.
ಪರೀಕ್ಷೆಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಿರುವುದರಿಂದ ಪರೀಕ್ಷಾ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಬಾರದ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕು. ಯಾವುದೇ ದೂರಿಗೆ ಆಸ್ಪದೆ ನೀಡದೇ ಪರೀಕ್ಷಾ ನಿಯಮಗಳನ್ನುನಸರಿಸಿ, ಪರೀಕ್ಷೆಗೆ ನಿಯೋಜಿಸಿದ ಅಧಿಕಾರಿ, ಸಿಬ್ಬಂದಿ ತಮಗೆ ವಹಿಸಿದ ಪರೀಕ್ಷಾ ಕಾರ್ಯಗಳನ್ನು ಅತ್ಯಂತ ಜವಾಬ್ದಾರಿಯಿಂದ ಹಾಗೂ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು.
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಹಾಜರಾತಿ, ಪರೀಕ್ಷಾ ಕೇಂದ್ರಗಳ ಕೊಠಡಿಗಳ ಮಾಹಿತಿ, ವಿದ್ಯಾರ್ಥಿಗಳಿಗೆ ಕಲ್ಪಿಸಿರುವ ಆಸನ ವ್ಯವಸ್ಥೆ, ಪರೀಕ್ಷಾ ಕೇಂದ್ರದಲ್ಲಿ ಮೂಲಭೂತ ಸೌಲಭ್ಯ, ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ ಪರಿಶೀಲಿಸಿದರು.ಪರೀಕ್ಷಾ ಕೇಂದ್ರಗಳಿಗೆ ಪೋಲಿಸ್ ಭದ್ರತಾ ಹಾಗೂ ವೈದ್ಯಕೀಯ ವ್ಯವಸ್ಥೆ ಕಲ್ಪಿಸಿರುವ ಕುರಿತು ಮಾಹಿತಿ ಪಡೆದುಕೊಂಡರು.
ಎಲ್ಲಾ ಕೇಂದ್ರಗಳಿಗೆ ಭದ್ರತೆ ಒದಗಿಸುವುದು, ವಿದ್ಯಾರ್ಥಿಗಳು ಭಯ ಮುಕ್ತ ಮತ್ತು ಪ್ರಶಾಂತ ವಾತಾವರಣದಲ್ಲಿ ಆತ್ಮ ವಿಶ್ವಾಸದಿಂದ ಪರೀಕ್ಷೆ ಬರೆಯುವಂತೆ ವ್ಯವಸ್ಥೆ ಮಾಡಬೇಕು. ಇದಕ್ಕೆ ಪೂರಕವಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ವಹಿಸಬೇಕು ಎಂದು ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ಅಧಿಕಾರಿಗಳು ಹಾಗೂ ವೆಬ್ ಕಾಸ್ಟಿಂಗ್ ಕೇಂದ್ರದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದೇ ವೇಳೆ ಪ್ರಥಮ ಚಿಕಿತ್ಸಾ ವ್ಯವಸ್ಥೆಯ ಕಿಟ್ ಗಳನ್ನು ಪರಿಶೀಲಿಸಿದರು. ಪರೀಕ್ಷಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಕಲ್ಪಿಸಿರುವ ಆಸನ ವ್ಯವಸ್ಥೆ, ಪರೀಕ್ಷಾ ಕೊಠಡಿ ಮೇಲ್ವಿಚಾರಕರ ನೇಮಕ, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಗಾಳಿ ಹಾಗೂ ಪ್ರಥಮ ಚಿಕಿತ್ಸಾ ವ್ಯವಸ್ಥೆಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕು. ಇನ್ನುಳಿದಂತೆ ಎಲ್ಲ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ಅಭಿರಕ್ಷಕರು, ಸ್ಥಾನಿಕ ಜಾಗೃತ ದಳದವರು ಹಾಗೂ ಮೊಬೈಲ್ ಸ್ವಾಧೀನಾಧಿಕಾರಿಗಳು ನಿಯಮಾನುಸಾರ ಕರ್ತವ್ಯ ನಿರ್ವಹಿಸುತ್ತಿರುವ ಕುರಿತು ಪರಿಶೀಲಿಸಿದರು. ಪರೀಕ್ಷಾ ಕೇಂದ್ರಗಳಲ್ಲಿ ಅನ್ಯ ಹಾಗೂ ಬಾಹ್ಯ ವ್ಯಕ್ತಿಗಳು ಇಲ್ಲದೇ ಇರುವುದನ್ನೂ ಸಹ ಪರಿಶೀಲಿಸಿದರು. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಸಮಸ್ಯೆಗಳು ಉಂಟಾಗದAತೆ ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ಶಿಸ್ತಿನಿಂದ ನಡೆಸುವುದು, ವಿದ್ಯಾರ್ಥಿಗಳು ಕುಳಿತುಕೊಳ್ಳುವ ಆಸನಗಳ ಮಧ್ಯದಲ್ಲಿ ಹೆಚ್ಚಿನ ಅಂತರ ಕಾಯ್ದುಕೊಳ್ಳಬೇಕು ಸೂಚಿಸಿದರು.
ಈ ಸಂದರ್ಭ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಕೆ.ಹೊಸಮನಿ ಪರೀಕ್ಷೆಗೆ ನಿಯೋಜಿತ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
ದ್ವಿತೀಯ ಪಿಯುಸಿ ಪರೀಕ್ಷೆ 1356 ವಿದ್ಯಾರ್ಥಿಗಳು ಗೈರು
ವಿಜಯಪುರ : ಜಿಲ್ಲೆಯಲ್ಲಿ ಶನಿವಾರ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಕನ್ನಡ ಮತ್ತು ಅರೆಬಿಕ್ ಭಾಷಾ ಪರೀಕ್ಷೆಗೆ 25,834 ವಿದ್ಯಾರ್ಥಿಗಳು ನೋಂದಾಯಿಸಿಕೊAಡಿದ್ದು, 24,478 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, 1,356 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಡಾ. ಸಿ ಕೆ ಹೊಸಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
Friday, February 27, 2026
Thursday, February 26, 2026
Tuesday, February 24, 2026
Monday, February 23, 2026
Sunday, February 22, 2026
Saturday, February 21, 2026
ಬಡವರ ಹಾಗೂ ಎಲ್ಲರ ಕಲ್ಯಾಣಕ್ಕೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ವರದಾನ : ಅಪ್ಪಾಜಿ ಸಿ.ಎಸ್. ನಾಡಗೌಡ
ವಿಜಯಪುರ : ಬಡವರು ಮತ್ತು ಹಿಂದುಳಿದ ವರ್ಗದ ಜನರ ಜೀವನ ಮಟ್ಟವನ್ನು ಸುಧಾರಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಫಲಪ್ರದವಾಗಿದ್ದು, ಎಲ್ಲ ವರ್ಗದವರಿಗೆ ಆರ್ಥಿಕ ಸಬಲತೆ ತಂದುಕೊಟ್ಟಿವೆ ಎಂದು ಕರ್ನಾಟಕ ಸೋಪ್ಸ್ ಮತ್ತು ಡಿಜೆರ್ಂಟ್ ನಿಯಮಿತದ ಅಧ್ಯಕ್ಷರೂ ಆದ ಶಾಸಕ ಅಪ್ಪಾಜಿ ಸಿ.ಎಸ್. ನಾಡಗೌಡ ಅವರು ಹೇಳಿದರು.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಇವರ ಸಹಯೋಗದಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಕಾರ್ಯಗಾರ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ನೀಡುತ್ತಿರುವ 10 ಕೆಜಿ ಉಚಿತ ಅಕ್ಕಿಯಿಂದ ಬಡವರಿಗೆ, ಹಿಂದುಳಿದವರ ಜೀವನ ನೀರ್ವಹಣೆಯೊಂದಿಗೆ ವಿವಿಧ ಗ್ಯಾರಂಟಿ ಯೋಜನೆಯ ಹಣದಿಂದ ನೆಮ್ಮದಿಯ ಬದುಕು ಕಂಡುಕೊಂಡು ಸಂತೋಷದ ಜೀವನ ನಡೆಸುತ್ತಿರುವುದು ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ಹೇಳಿದರು. ನಮ್ಮ ಸರ್ಕಾರದ ಜಾರಿಗೆ ತಂದಿರುವ ಯೋಜನೆಗಳಿಂದ ಜನರ ಜೀವನ ಮಟ್ಟ ಸುಧಾರಣೆಯಾಗಿ ಆರ್ಥಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯವಾಗಿದೆ. ಮಹಿಳೆಯರು ಉಚಿತವಾಗಿ ರಾಜ್ಯಾದ್ಯಂತ ಬಸ್ಸಿನಲ್ಲಿ ಉಚಿತ ಪ್ರಯಾಣದ ಸೌಲಭ್ಯ ಜಾರಿಗೊಂಡಿರುವ ಶಕ್ತಿ ಯೋಜನೆಯು ರಾಜ್ಯದ ಹಲವಾರು ಕುಟುಂಬಗಳಿಗೆ ಆರ್ಥಿಕ ನೆಮ್ಮದಿ ನೀಡಿದ್ದು, ಇದರಿಂದ ಮಹಿಳೆಯರಿಗೆ ದೈನಂದಿನ ವರದಾನವಾಗಿ ಪರಿಣಮಿಸಿದೆ ಎಂದು ಹೇಳಿದರು.
ಗೃಹ ಜ್ಯೋತಿ ಯೋಜನೆಯಡಿ 200 ಯುನಿಟ್‍ವರೆಗೆ ಉಚಿತ ವಿದ್ಯುತ್ ವಿದ್ಯುತ್ ಒದಗಿಸಿರುವುದರಿಂದ ಎಲ್ಲ ವರ್ಗದವರಿಗೆ ಅನುಕೂಲವಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿ ಮಹಿಳೆಗೆ ದೊರೆಯುತ್ತಿರುವ ಹಣದಿಂದ ಮನೆಗಳಲ್ಲಿ ಸಂತೋಷ ಮತ್ತು ಆರ್ಥಿಕ ಭದ್ರತೆ ವಾತಾವರಣ ನಿರ್ಮಾಣವಾಗಿದೆ ಎಂದು ಅಭಿಪ್ರಾಯಪಟ್ಟರು.ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆ ನಿರುದ್ಯೋಗಿ ಯುವಕರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಈ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಆರ್ಥಿಕವಾಗಿ ಸದೃಢತೆ ಹೊಂದಲು ಎಲ್ಲರಿಗೂ ಸಹಕಾರಿಯಾಗಿದ್ದು, ಜನವರ ಜೀವನ ಮಟ್ಟ ಹಸನಾಗಲು ಮತ್ತು ಅವರನ್ನು ಮೇಲಕ್ಕೆತ್ತುವ ಕಾರ್ಯ ಮಾಡಿರುವ ನಮ್ಮ ಸರ್ಕಾರ ಇನ್ನೂ ಹತ್ತು ಹಲವಾರು ಯೋಜನೆಗೊಳಿಸಿ ಜನರ ಬದುಕಿಗೆ ಆಸರೆಯಾಗಿವೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಅನುμÁ್ಟನ ತಂದ ಪಂಚಾಗ್ಯಾರಂಟಿ ಯೋಜನೆಗಳು 98 ಪ್ರತಿಶತ ಕಾರ್ಯರೂಪಕ್ಕೆ ಬಂದಿದ್ದು ಈ ಮನೆ ಮನೆಗಳಲ್ಲಿ ಹಾಗೂ ಪ್ರತಿಯೊಬ್ಬರಿಗೂ ಈ ಯೋಜನೆಗಳ ಮಾಹಿತಿ ತಲುಪುವಂತಾಗಬೇಕು ಎಂದು ರಾಜ್ಯದ ಪಂಚ ಗ್ಯಾರಂಟಿ ಯೋಜನೆಗಳ ಅನುμÁ್ಠನ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಎಂ ರೇವಣ್ಣ ಹೇಳಿದರು.
ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಹಾಗೂ ಯಶಸ್ವಿಯಾಗಿ ಇಲ್ಲಿಯವರೆಗೆ ಶೇ.98 ಅನುಷ್ಟಾನÀಗೊಂಡಿವೆÉ. ಇವೆಲ್ಲ ಅಭಿವೃದ್ಧಿಯ ಸಂಕೇತವಾಗಿವೆ. ಜನÀರ ಬದುಕನ್ನು ಹಸನಗೊಳಿಸಲು ನಮ್ಮ ಉದ್ದೇಶವಾಗಿದೆ. ನಾವು ಎಂದೆಂದೂ ರೈತರು, ಯುವಕರು ಹಾಗೂ ಮಹಿಳೆಯರ ಪರವಾಗಿದ್ದೇವೆ ಇದರಿಂದ ಅಭಿವೃದ್ಧಿ ಪರ್ವ ಕಂಡಿದೆ. ಪಂಚ ಗ್ಯಾರಂಟಿಗಳಿಂದ ಉಳಿತಾಯವಾಗುತ್ತಿರುವ ಹಣ ವಿವಿಧ ಬಗೆಯ ವಸ್ತುಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು, ತೆರಿಗೆ ಕೂಡ ವೃದ್ಧಿಯಾಗಿ ಅದಾಯವೂ ಹೆಚ್ಚಾಗಿದೆ. ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು. ಮುಂಬರುವ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯೂ ಪಂಚ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರಗಳನ್ನು ಏರ್ಪಡಿಲಾಗುವುದು. ಮನೆ ಮನೆ ಗ್ಯಾರಂಟಿ ಮನೆ ಮುಂದೆ ರಂಗೋಲಿ ಎನ್ನುವ ಅಭಿಯಾನವನ್ನು ಏರ್ಪಡಿಸಿ ಉತ್ತಮ ರಂಗೋಲಿ ಬಿಡಿಸುವವರಿಗೆ ಬಹುಮಾನ ವಿತರಿಸಲು ಕ್ರಮ ವಹಿಸುವುದಾಗಿ ತಿಳಿಸಿದ ಅವರು, ಪ್ರತಿಯೊಬ್ಬರಿಗೂ ಈ ಯೋಜನೆÀಗಳ ಮಾಹಿತಿ ಒದಗಿಸಬೇಕು ಎಂದು ಅವರು ಹೇಳಿದರು.
ರಾಜ್ಯದ ಪಂಚ ಗ್ಯಾರಂಟಿ ಯೋಜನೆಗಳ ಅನುμÁ್ಠನ ಪ್ರಾಧಿಕಾರದ ಮೈಸೂರು ವಿಭಾಗದ ಉಪಾಧ್ಯಕ್ಷರಾದ ಪುμÁ್ಪ ಅಮರನಾಥ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಭರವಸೆಯ ಬದಕನ್ನು ಕಟ್ಟಿಕೊಳ್ಳಲು ತುಂಬಾ ಸಹಕಾರಿಯಾಗಿದೆ. ಈ ಯೋಜನೆಗಳು ಮಹಿಳೆಯರಿಗಾಗಿ ಸ್ವಾವಲಂಬನೆಯ ಭಾಗವಾಗಿವೆ. ಮಹಿಳೆಯರು ಅಭಿವೃದ್ಧಿ ಹೊಂದಿದಲ್ಲಿ ದೇಶದ ಅಭಿವೃದ್ಧಿಯಾಗಬಲ್ಲದು. ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮುಂದೆ ಬರಬೇಕು ಸರ್ವರಿಗೂ ಸಮಬಾಳು ಸಮಪಾಲು ಎಂಬ ಮನೋಭಾವ ಹೊಂದಿರಬೇಕು ಈ ಯೋಜನೆಗಳು ನಮಗೆ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರಲಿವೆ ಎಂಬುದನ್ನು ನಾವು ಮರೆಯಬಾರದು ಎಂದು ಅವರು ಹೇಳಿದರು.
ರಾಜ್ಯದ ಪಂಚ ಗ್ಯಾರಂಟಿ ಯೋಜನೆಗಳ ಅನುμÁ್ಠನ ಪ್ರಾಧಿಕಾರದ ಬೆಳಗಾವಿ ವಿಭಾಗದ ಉಪಾಧ್ಯಕ್ಷರಾದ ಎಸ್.ಆರ್ ಪಾಟೀಲ (ಬ್ಯಾಡಗಿ) ಮಾತನಾಡಿ, ಈ ವಿಭಾಗ ಮಟ್ಟದಲ್ಲಿ ಈಗಾಗಲೇ 7 ಜಿಲ್ಲೆಗಳಲ್ಲಿಯೂ ಅತ್ಯಂತ ಯಶಸ್ವಿಯಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಗ್ಯಾರಂಟಿ ಯೋಜನೆಗಳು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಎಲ್ಲ ವರ್ಗದವರಿಗೂ ತುಂಬಾ ಸಹಕಾರಿಯಾಗಿವೆ.
ಮಹಿಳೆಯರು ಮನಸ್ಸಿದ್ದರೆ ಮಾರ್ಗ ಎಂಬುದನ್ನು ಸಾಧಿಸಿ ತೋರಿಸುವ ಶಕ್ತಿ ಮಹಿಳೆಯರಲ್ಲಿದೆ. ಇದಕ್ಕೆ ಇಂಡಿ ತಾಲೂಕಿನ ಬಬಲಾದ ಗ್ರಾಮದ ಒಡಲ ಧ್ವನಿ ಮಹಿಳಾ ಸಂಘವು ಇದಕ್ಕೊಂದು ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ಈ ಕಾರ್ಯಕ್ರಮವೂ ಇಂದು ಯಶಸ್ವಿಯಾಗಿ ಜರುಗಿದ್ದು ಶ್ರಮ ವಹಿಸಿದ ಎಲ್ಲರೂಗೂ ಧನ್ಯವಾದ ತಿಳಿಸಿದರು.
ಫಲಾನುಭವಿಗಳಾದ ಶ್ರೀಮತಿ ಪರ್ನಾಜ ಮುತುವಲ್ಲಿ, ಸರುಬಾಯಿ ಹಿರೇಮಠ, ಭುವನೇಶ್ವರಿ ಹಾಗೂ ಶ್ರೀಮತಿ ಶೃತಿ ಝಂಡೆ ಇವರುಗಳು ಈ ಯೋಜನೆಗಳ ಅನುಕೂಲ ಕುರಿತು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಪ್ರಾಸ್ತಾವಿಕ ನುಡಿ ನುಡಿದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಇಲಿಯಾಸ್ ಬೋರಾಮಣಿ ಅವರು, ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡುವ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ರಾಜ್ಯದ ಜನತೆಗೆ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಮತ್ತು ಯುವನಿಧಿ ಯೋಜನೆಗಳನ್ನು ಜಾರಿಗೊಳಿಸಿ ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳಲು ಅನುಕೂಲ ಒದಗಿಸಿವೆ ಎಂದು ಹೇಳಿದರು.
ಕರ್ನಾಟಕ ಜಾಗೃತಿ ಸಂಚಾಲಕರಾದ ಡಾ. ವಾಸು ಅವರು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಹಾಗೂ ಯುವನಿಧಿ ಯೋಜನೆಗಳ ಫಲಾನುಭವಿಗಳಿಗೆ ಯಾವುದೇ ಮಧ್ಯÀ್ಯವರ್ತಿಗಳಿಲ್ಲದೆ ನೇರವಾಗಿ ಅವರ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾವಣೆಯಾಗುತ್ತಿದೆ.ಶಕ್ತಿ ಯೋಜನೆಯಿಂದ ಸುಮಾರು 49 ರಷ್ಟು ಮಹಿಳೆಯರು ಉದ್ಯೋಗಕ್ಕಾಗಿ ಸಾರಿಗೆ ಬಸ್ಸನ್ನು ಅವಲಂಬಿಸಿದ್ದಾರೆ ಇದರಿಂದ ಅವರ ಆರ್ಥಿಕ ಮಟ್ಟವು ಕೂಡ ಉತ್ತಮವಾಗಿದೆ. ಶೇ 90 ರಷ್ಟು ಜಮೆ ಆದ ತಿಂಗಳಲ್ಲಿ ಖರ್ಚು ಮಾಡಿ ಆ ಹಣದಿಂದ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯಕ್ಕಾಗಿ ಹೆಚ್ಚು ಉಪಯೋಗಿಸುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಸ್ವಾಗತಿಸಿದರು. ಕ್ರೀಡಾಧಿಕಾರಿ ರಾಜಶೇಖರ ಧೈವಾಡಿ ನಿರೂಪಿಸಿದರು. ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ಸಿ.ಬಿ.ಕುಂಬಾರ ವಂದಿಸಿದರು. ಗಾಯನ ಕಾರ್ಯಕ್ರಮವನ್ನು ವಿರೇಶ ವಾಲಿ ಹಾಗೂ ತಂಡ ನಡೆಸಿಕೊಟ್ಟಿತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ,ಕರ್ನಾಟಕ ರಾಜ್ಯಲಿಂಬೆ ಅಭಿವೃದ್ಧಿ ಮಂಡಳಿ ಆಧ್ಯಕ್ಷರಾದ ಬಿ.ಎಸ್.ಕವಲಗಿ,ಶಾಸಕರಾದ ಅಶೋಕ ಮನಗೂಳಿ,ಸುನೀಲಗೌಡ ಪಾಟೀಲ,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಗಂಗಾಧರ ಸಂಬಣ್ಣಿ, ಮಹಾನಗರ ಪಾಲಿಕೆ ಗ್ಯಾರಂಟಿ ಯೋಜನೆಗಳ ಅನುμÁ್ಠನ ಸಮಿತಿ ಅಧ್ಯಕ್ಷರಾದ ಶಬ್ಬೀರ ಅಹ್ಮದ ಜಾಗೀರದಾರ, ಜಿಲ್ಲಾಧಿಕಾರಿ ಡಾ.ಆನಂದ.ಕೆ,ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುμÁ್ಠನ ಸಮಿತಿಯ ಉಪಾಧ್ಯಕ್ಷರು ಹಾಗೂ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
Tuesday, February 17, 2026
Monday, February 16, 2026
Sunday, February 15, 2026
Saturday, February 14, 2026
Wednesday, February 11, 2026
ರಾಜ್ಯ ಮಟ್ಟದ ಕಲಾ ಪ್ರತಿಭೋತ್ಸವಕ್ಕೆ ಕು. ಸಮೀರ ಶೇಖ ಆಯ್ಕೆ
ವಿಜಯಪುರ : ಇತ್ತೀಚೆಗೆ ಬೆಳಗಾವಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡ ಕಲಾ ಪ್ರತಿಭೋತ್ಸವದಲ್ಲಿ ಶಾಸ್ತ್ರೀಯ ಸಂಗೀತ ಪ್ರಕಾರದಲ್ಲಿ ಬಾಲ ಪ್ರತಿಭೆ ಕು. ಸಮೀರ ಶೇಖ ಅವರು ವಲಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿ, ರಾಜ್ಯ ಮಟ್ಟದ ಕಲಾಪ್ರತಿಭೋತ್ಸವಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆ ವಿಜಯಪುರ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರು ಬಾಲ ಪ್ರತಿಭೆಗೆ ಬೆಂಗಳೂರಿನಲ್ಲಿ ನಡೆಯುವ ಕಲಾ ಪ್ರತಿಭೋತ್ಸವದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ ಆಹ್ವಾನಿಸಿದ್ದಾರೆ.
2025-26 ನೇ ಸಾಲಿನ ರಾಜ್ಯ ಮಟ್ಟದ ಕಲಾ ಪ್ರತಿಭೋತ್ಸವದ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ: 13-02-2026 ರಂದು ಬೆಳಿಗ್ಗೆ 10.30 ಗಂಟೆಗೆ ಬೆಂಗಳೂರಿನ ಕನ್ನಡ ಭವನದ ನಯನ ಕಲ್ಯಾಣ ಕನ್ನಡ ಮತ್ತು ಸಂಸ್ಕøತಿ ಇಲಾಖಾ ಸಚಿವರು ಉದ್ಘಾಟಿಸಲಿರುವ ಕಾರ್ಯಕ್ರಮದಲ್ಲಿ ಕು. ಸಮೀರ ಶೇಖರವರು ತಮ್ಮ ಶಾಸ್ತ್ರೀಯ ಸಂಗೀತದ ಕಲೆ ಪ್ರದರ್ಶನವನ್ನು ಪ್ರಸ್ತುತ ಪಡಿಸಲಿದ್ದಾರೆ.
ರಾಜ್ಯ ಮಟ್ಟದ ಕಲಾಪ್ರತಿಭೋತ್ಸವವನ್ನು ಇದೇ 2026ರ ಪೆಭ್ರುವರಿ 13 ಮತ್ತು 14 ರಂದು ಬೆಳಿಗ್ಗೆ 10.30 ಗಂಟೆಗೆ ಕನ್ನಡ ಭವನದ ನಯನ ಸಭಾಂಗದಲ್ಲಿ ಭಾಗವಹಿಸಬೇಕೆಂದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಬೆಳಗಾವಿ ವಿಭಾಗದ ಬೆಳಗಾವಿ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆ ಕು. ಸಮೀರ ಬಾಲಪ್ರತಿಭೆಗೆ ಪಾಲಕರಾದ ಎಲ್.ಬಿ.ಶೇಖಮಾಸ್ತರ್, ಬಾಬು ಶೇಖ, ಕು. ತನ್ವೀರ ಸೇರಿದಂತೆ ಬಂದು ಬಳಗದವರು ಶುಭ ಹಾರೈಸಿದ್ದಾರೆ.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
Tuesday, February 10, 2026
ಸಾವು ಗೆದ್ದವನಿಗೆ ಸೀರೆ ಉಡುಗೊರೆ, ಇದು ಧಗೆ.. ಜೀವನದ ಬಗೆ!
ಧಗೆಯಲ್ಲಿ ಬೆಂದ ಜೀವಕ್ಕೆ ಒಂದು ಹನಿ ಕಣ್ಣೀರು, ಅದರೊಂದಿಗೆ ನೀರ ಮಜ್ಜಿಗೆ ಆಸರೆಯಾಗುವ ಹೊತ್ತಿಗೆ ಪ್ರೇಕ್ಷಕನ ಕಣ್ಣಲ್ಲಿ ನೀರು ನಿಲ್ಲದೇ ,ಕೆನ್ನೆಯ ಮೇಲೆ ಇಳಿದು, ನಿಮ್ಮ ಹೃದಯವನ್ನು ಹಸಿಗೊಳಿಸಿರುತ್ತದೆ. ಬಡವನ ಸ್ವಾಭಿಮಾನದ ಬದುಕು ಕತ್ತಲೆಯಲ್ಲಿ ಹುಡುಕಿದಂತೆ ಬೆಳಕು, ಅದು ಸೂರ್ಯನಿಂದಾದರೂ ಸರಿ, ಚಂದ್ರನಿAದಾದರೂ ಸರಿ, ದೀಪದಿಂದಾದರು ಸರಿ, ಉರಿಯುವ ಒಲೆಯಿಂದಾದರೂ ಸರಿ, ಎಲ್ಲಮ್ಮನ ಮುಂದೆ ಹೊಗೆಯಾಡುವ ಅಗರಬತ್ತಿಯಿಂದಾದರೂ ಸರಿ, ಹಿತ್ತಲಿನ ಕತ್ತಲಲ್ಲಿ ಹಾರಾಡುವ ಮಿಂಚು ಹುಳದ ಬಾಲದ ತುದಿಯಿಂದಾದರೂ ಸರಿ, ಬೆಳಕು ಬಂದೀತೆAದು ಚಂದಪ್ಪ ಕಾಯುತ್ತಾನೆ! ಬೆಳಕು ಸಿಗದಿರುವಾಗ ಸಾವಿಗೆ ಹತ್ತಿರವಾಗುತ್ತಾನೆ. ಅಲ್ಲಿ ಅವ್ವನ ಸೀರೆಯ ಸೆರಗಿನಲ್ಲಿ ಬದುಕಿನ ಬೆಳಕು ರೂಪ ರೂಪಾಯಿ ರೂಪದಲ್ಲಿ ನೆಲ ಆವರಿಸುತ್ತದೆ.
ಆಗ ಕಥಾ ನಾಯಕ ಚಂದಪ್ಪ , ಈಶ್ವರನ ಜಡೆಯಿಂದ ಜಾರಿ, ಹುಣ್ಣಿಮೆಯ ಚಂದ್ರ ಮಜ್ಜಿಗೆಯ ಮಡಿಕೆಯಲ್ಲಿ ಬಿದ್ದಂತೆ ಕಂಗೊಳಿಸುವ. ಅದೇ ಹೊತ್ತಿಗೆ ಸಿನಿಮಾ ನೋಡುವ ಪ್ರೇಕ್ಷಕನ ಕಂಗಳಲ್ಲಿ ನೋವಿನ ಕಣ್ಣೀರು ಚಿಮ್ಮಿ ಬರುತ್ತದೆ. ಎದೆಯೊಳಗಿನ ದುಃಖದ ಕಟ್ಟೆಯೊಡೆದು, ಗಂಟಲಕ್ಕೆ ಬಂದು, ಕೊರಳ ಸೆರೆಯಾಗಿ ನಿಟ್ಟುಸಿರು ಬಿಡುವಂತೆ ಮಾಡುತ್ತದೆ. ಇನ್ನೇನು ಬದುಕು ಬದಲಾಯಿತು ಎನ್ನುವಷ್ಟರಲ್ಲಿ ಕಥಾ ನಾಯಕ ಚಂದಪ್ಪನಿಗೆ, ಸಾವು ಗೆದ್ದ ಸಂದರ್ಭ ಸೀರೆಯ ಉಡುಗೊರೆ ನೀಡುತ್ತದೆ. ಅವನು ಚಂದಪ್ಪ, ಚಂದ್ರಿಕೆಯಾಗಿ ಚಿಂದಿಯಾದ ಬದುಕನ್ನು ಚಂದಗೊಳಿಸಿ ಅವ್ವನ ಕಾಯಕದಲ್ಲಿ ಪರಕಾಯ ಪ್ರವೇಶ ಮಾಡುತ್ತಾನೆ.
ಧಗೆ ಎಂಬ ಸೂರ್ಯ ಮಂಕಾಗಿರುತ್ತಾನೆ. ಗಗನ ವಾರಿಧಿಯಲ್ಲಿ ಹೂ ಬಿಟ್ಟು, ಕಾಯಾಗಿ, ಹಣ್ಣಾದ ಕಲ್ಲಂಗಡಿಯAತಿರುತ್ತಾನೆ. ಚಂದಪ್ಪ ಆ ಕಲ್ಲಂಗಡಿ ಹಣ್ಣು ತನ್ನ ಹೃದಯವೇ ಎಂದುಕೊAಡು, ಕಲ್ಲಂಗಡಿಯನ್ನು ದಿಟ್ಟಿಸಿ, “ಎಲಾ ಕಲ್ಲಂಗಡಿ, ಕಲ್ಲಂಗಡಿಯAತಿರುವ ಸೂರ್ಯಾ ನಿನ್ನ ಕೊಯ್ದರೆ ಕೆಂಪು, ತಿಂದರೆ ತಂಪು’’ ಸ್ವಗತದಲ್ಲಿ ರೂಪಕ ಮೂಡುತ್ತಿರುವಾಗಲೇ ಮೂಡಣದ ಮನೆಯಿಂದ ಪಡುವಣದ ಮನೆಗೆ ಸಾಗುವ ದಾರಿಯಲ್ಲಿ ಚಂದಪ್ಪನ ಸಾಕು ತಾಯಿ , ಕಲ್ಲಿಗೆ ಎಡವಿ ಹೆಬ್ಬೆರೆಳು ಒಡೆದುಕೊಂಡಾಗ, ರಕ್ತ ಚಿಮ್ಮಿದ ಹೆಬ್ಬರೆಳು, ಅಕ್ಷರಶಃ ಕಲ್ಲಂಗಡಿ ಹಣ್ಣು ಸೀಳಿದಂತೆ ಭಾಸವಾಗುತ್ತದೆ. ಎಡವಿದ ಹೆಬ್ಬೆರೆಳು, ಅದರಿಂದ ಚಿಮ್ಮುವ ರಕ್ತ, ತಾಯಿ ಮಗನ ಸಂಬAಧ ಅವ್ಯಕ್ತ ಎಂಬುವುದನ್ನು ಪ್ರೇಕ್ಷಕ ಅರಿಯುವಷ್ಟರಲ್ಲಿ ಧಗೆ ಹೆಚ್ಚಾಗಿರುತ್ತದೆ! ಚಿತ್ರದ ಕಥೆ ವೇಗವಾಗಿ ಬಯಲು ಬಿಸಿಲಿನ, ಬದುಕಿನ ಮರೀಚಿಕೆಯನ್ನು, ಬೇಟೆಯಾಡಲು ಚಂದಪ್ಪ ಸಜ್ಜಾಗುತ್ತಾನೆ.
ಧಗೆ ಬಿಸಿಲಿನಂತೆ ಶ್ರೀಮಂತಿಕೆ, ಆ ಕ್ಷಣಕ್ಕೆ ಬಂದಾಗ ಜೂಜು-ಮೋಜು ಚಂದಪ್ಪನನ್ನು ದಾರಿ ತಪ್ಪಿಸುತ್ತದೆ. ಆಜು-ಬಾಜು ಇದ್ದ ಭಟ್ಟಂಗಿಗಳು ಮಂಗ ಮಾಯ, ಹೆಂಡ ಕುಡಿದ ಕೋತಿ, ಮಜ್ಜಿಗೆ ಮಡಿಕೆ ಹಿಡಿದು, ಹೊಸ ಬದುಕು ಸಾಗಿಸುತ್ತೇನೆಂದಾಗ, ಧಗೆ ಸುಮ್ಮನೇ ಬಿಡುವುದಿಲ್ಲ. ಪ್ರೇಮ-ಕಾಮದ ನಶೆ ಇಳಿಯಲಾಗದು, ತಿಳಿಯಲಾಗದು. ಕುಡಿದ ಹೆಂಡದ ನಶೆಗಿಂತ, ಕಂಡವರ ಹೆಂಡತಿಯ ಪಡೆಯುವ ನಶೆ ಇಳಿಯಲಾಗದು.. ತಿಳಿಯಲಾಗದು! ಕಥೆಗೆ ಕಷ್ಟಗಳ ಹೊಟ್ಟೆ ಹರಿದು, ಸುಖ ಹುಡುಕುವ ಶಕ್ತಿಯಿದೆ. ಇದು ನಿರ್ದೇಶಕ ಈಶ್ವರ್ ಕೆರ್ನಳ್ಳಿ, ನಾಯಕ ನಟ ಸಂಗಮೇಶ ಉಪಾಸೆಗೂ ಸಮನಾಗಿ ಹಂಚಿಕೆಯಾಗಿದೆ. ಜೋಗತಿ ಮಂಜಮ್ಮ ಭೂಮಿ ತೂಕದ ಮಡಿಕೆ ಹೊತ್ತು, ಜಲ ರೂಪಿ ಮಾಯೆಯಾಗಿ, ಕೊಡ ಹೊತ್ತು ಕುಣಿಯುವ ಜಗದಂಬೆ ಶಕ್ತಿಯಾಗಿ, ತೆರೆಯ ಮೇಲೆ ರಾರಾಜಿಸಿದರೆ, ಧಗೆಯೆಂಬುದು ಮನುಷ್ಯನ ನೂರಾರು ಅವ್ಯಕ್ತ ಸಹ್ಯಗಳನ್ನು ಸುಟ್ಟು ಹಾಕುತ್ತದೆ. ಅರಿವೆಂಬ ಗುರುವಿಗೆ ಗುಲಾಮನಾದರೆ, ಶಿಷ್ಯ ಗುರುವಿನ ಸರಿಸಮಾನವಾಗುವ ಅಭಿನಯ ಶೃಂಗ ಮುಟ್ಟುವ ಸಂಗಮೇಶ ಉಪಾಸೆ ಅಭಿನಯ ಮನ ಮುಟ್ಟಿ, ಕಲಕುತ್ತದೆ.
ಚಿತ್ರ ಮುಗಿಯುವ ಹೊತ್ತಿಗೆ ಉತ್ತರ ಕರ್ನಾಟಕದ ಬಿಸಿಲ ಬಿಸಿ ಧಗೆಯನ್ನು ಕ್ಯಾಮೆರಾ ಕಣ್ಣಲ್ಲಿ ಕಂಡ, ಛಾಯಾಗ್ರಾಹಕ ಆನಂದ್ ದಿಂಡ್ವರ್ ಅವರ ಶ್ರಮ ಉತ್ತುಂಗಕ್ಕೇರಿದೆ.ನಿರ್ಮಾಪಕರಾದ ದೀಪಾ ಬಿ.ಎಮ್, ಮಂಜುನಾಥ್ ಎಂ.ಸಿ, ಬರಗಾಲದ ಬಯಲಿನಲ್ಲಿ ದಾಸೋಹದ ಗಂಜಿ ತೆರೆದು, ನೀರ ಮಜ್ಜಿಗೆ, ನೀಡಿದ ದಾನಿಗಳಂತೆ ಕಾಣುತ್ತಾರೆ. ಚಿತ್ರಕ್ಕೆ ಹಣ ಸುರಿದಿ, ಮರಳಿ ಲಾಭದ ಲಾಲಸೆಗೆ ಒಳಗಾಗದೇ, ಸಮಾಜಮುಖಿಯಾಗಿ, ಕೆರೆಯ ನೀರನ್ನು ಕೆರೆಗೆ ಚೆಲ್ಲುವುದರ ಜೊತೆ ಮಜ್ಜಿಗೆಯನ್ನೂ ಸುರಿದಿದ್ದಾರೆ. ಕೆರೆಯೆಂಬುದು ಧಗೆಯಲ್ಲಿ ಮಜ್ಜಿಗೆ ಮಡಿಕೆಯಲ್ಲಿ, ಹಸಿ ಬೆಣ್ಣೆ ತುಂಬಿಕೊAಡು, ಬಿಸಿ ಮಜ್ಜಿಗೆ ನೀರಿನೊಂದಿಗೆ ಬಾಯಾರಿದವರ ಒಡಲ ಸೇರುವ ಕಡಲ ನೀರಾಗಿದೆ. ಇಡೀ ಚಿತ್ರದ ಸರ್ವ ತಂತ್ರಜ್ಞರೂ, ತಾಂತ್ರಿಕ ಅಘೋರಿಗಳಂತೆ, ತಮ್ಮ ಕಲಾ ತಪಸ್ಸಿನ ಮೂಲಕ ಚಿತ್ರವನ್ನು ಕಲಾತ್ಮಕವಾಗಿ ರೂಪಿಸಿದ್ದಾರೆ.
ಉತ್ತರ ಕರ್ನಾಟಕದ ಬಹುತೇಕ ಕಲಾವಿದರು ಈ ಚಿತ್ರದಲ್ಲಿ ಜೀವಿಸಿದ್ದಾರೆ. ಸುನೀಲಕುಮಾರ ಸುಧಾಕರ, ನೀತು ಪಾಟೀಲ್, ಪಲ್ಲವಿ ಪಾಟೀಲ್ ಸೇಡಂ, ರಾಮಚಂದ್ರ ಕಾಂಬಳೆ, ಬಾಬುಗೌಡ ಬಿರಾದಾರ, ಪರಶುರಾಮ, ಮುತ್ತು, ಕಪಿಲ್, ಸಚಿನ್, ಬಾಬು ತಡಲಗಿ, ಅಂಬಣ್ಣ ದೇಸಾಯಿ, ಮಲ್ಲಿಕಾರ್ಜುನ ಮೇತ್ರಿ ಇನ್ನೂ ಅನೇಕ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರ ಧಗೆಯೆಂಬುದು ಕೇವಲ ಮನರಂಜನೆ ನೀಡುವ ಚಲನಚಿತ್ರವಲ್ಲ, ಅದು ಸಮಾಜಮುಖಿಯ ತಲ್ಲಣದ, ಮಾನವೀಯ ಸಂವೇದನೆಯ, ಜೀವನ್ಮುಖಿ ಚಿತ್ರವಾಗಿದೆ. ಇದೇ ಕಾರಣಕ್ಕೆ ಚಿತ್ರವನ್ನು 17ನೇ ಬೆಂಗಳೂರು ಅಂತಾರಾಷ್ಟಿçÃಯ ಚಲನಚಿತ್ರೋತ್ಸವದಲ್ಲಿ ಅದ್ದೂರಿ ಪ್ರದರ್ಶನ ಕಂಡು ಜನ ಮನ ಗೆದ್ದಿತು. ಸಾಮಾಜಿಕ ಜಾಲತಾಣದಲ್ಲಿ ಧಗೆ ಸಿನಿಮಾ ಸದ್ದು ಮಾಡುತ್ತಿದೆ. ಸದ್ಯ ಚಿತ್ರ ಯಾವಾಗ ರಾಜ್ಯದ ಎಲ್ಲಾ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ ,ಎಂದು ತೆರೆದ ಕಣ್ಣಿನಿಂದ ಬೆಳ್ಳೆತೆರೆಯತ್ತ ನೋಡುತ್ತಿದ್ದಾರೆ. ಚಿತ್ರ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ನೋಡಿ ಆನಂದಿಸಿ. ಧಗೆ ನಿಮ್ಮೊಳಗೆ ಸದಾಯಿದೆ.. ಅದೇ ಎಲ್ಲಾ ಬಗೆಯ ಧಗೆ!
- ಸುನೀಲಕುಮಾರ ಸುಧಾಕರ,ವಿಜಯಪುರ
ಮೊ : 9972918790
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
ಸ್ಕಿಲ್ ಕೋರ್ಸುಗಳಲ್ಲಿ ವಿದ್ಯಾರ್ಥಿನಿಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು ಇಂದಿನ ಅಗತ್ಯ : ಹಿರಿಯ ನೋಡಲ್ ಅಧಿಕಾರಿ ಪ್ರೊ. ಜಿ. ಬಿ ಸೋನಾರ್
ವಿಜಯಪುರ: ವೃತ್ತಿಪರ, ತಾಂತ್ರಿಕ ಹಾಗೂ ಉದಯೋನ್ಮುಖ ತಂತ್ರಜ್ಞಾನ ಶಿಕ್ಷಣದಲ್ಲಿ ಮಹಿಳೆಯರ ಪ್ರವೇಶವನ್ನು ವಿಸ್ತರಿಸುವುದು, ಪಠ್ಯಕ್ರಮ ಮತ್ತು ಬೋಧನಾ ವಿಧಾನಗಳಲ್ಲಿ ಅಗತ್ಯ ಸುಧಾರಣೆಗಳನ್ನು ತರಿಸುವುದು ಹಾಗೂ ಸ್ಕಿಲ್ ಕೋರ್ಸುಗಳಲ್ಲಿ ವಿದ್ಯಾರ್ಥಿನಿಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು ಇಂದಿನ ಅಗತ್ಯವೆಂದು ಹಿರಿಯ ನೋಡಲ್ ಅಧಿಕಾರಿ ಪ್ರೊ. ಜಿ. ಬಿ ಸೋನಾರ್ ಹೇಳಿದರು.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ಲೇಸ್‌ಮೆಂಟ್ ಮತ್ತು ವೃತ್ತಿ ಮಾರ್ಗದರ್ಶನ ಕೋಶ ಹಾಗು ಸಮಾಜ ಶಾಸ್ತ್ರ ಅಧ್ಯಯನ ವಿಭಾಗದ ಸಂಯುಕ್ತಾಶ್ರಯದಲ್ಲಿ ಪ್ರಧಾನಮಂತ್ರಿ ಉಚ್ಚತರ ಶಿಕ್ಷಣ ಅಭಿಯಾನ ಪಿಎಂ ಉಷಾ ಭಾರತ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಪರಿಷತ್ತಿನ ಅನುದಾನದೊಂದಿಗೆ ಇತ್ತೀಚಿಗೆ ಹಮ್ಮಿಕೊಂಡಿದ್ದ ಮಹಿಳೆಯರಿಗೆ ವೃತ್ತಿಪರ, ತಾಂತ್ರಿಕ ಮತ್ತು ಉದಯೋನ್ಮುಖ ತಂತ್ರಜ್ಞಾನ ಶಿಕ್ಷಣದಲ್ಲಿ ಪ್ರವೇಶವನ್ನು ಸುಲಭಗೊಳಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಮಹಿಳೆಯರು ತಾಂತ್ರಿಕ ಹಾಗೂ ನವೀನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು, ಶಿಕ್ಷಣ ಸಂಸ್ಥೆಗಳು ಕೈಗಾರಿಕಾ ಬೇಡಿಕೆಗೆ ಹೊಂದಿಕೊಳ್ಳುವ ರೀತಿಯಲ್ಲಿ ಪಠ್ಯಕ್ರಮಗಳನ್ನು ಪರಿಷ್ಕರಿಸಬೇಕು, ಕೃತಕ ಬುದ್ಧಿಮತ್ತೆ, ಡೇಟಾ ವಿಜ್ಞಾನ, ಸೈಬರ್ ಸುರಕ್ಷತೆ, ರೋಬೋಟಿಕ್ಸ್ ಮುಂತಾದ ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ವಿದ್ಯಾರ್ಥಿನಿಯರಿಗೆ ನೈಪುಣ್ಯ ಒದಗಿಸುವುದರಿಂದ ಭವಿಷ್ಯದ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದು ತಿಳಿಸಿದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ವಿಜಯಪುರದ ಎಸ್.ಬಿ. ಆರ್ಟ್ಸ್ ಮತ್ತು ಕೆ.ಸಿ.ಪಿ. ಸೈನ್ಸ್ಕಾಲೇಜಿನ ಕಾಲೇಜಿನ ಗಣಕಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀಧರ್ ಜೋಶಿ ಮಾತನಾಡಿ, ಇಂದಿನ ಜಗತ್ತು ಸಂಪೂರ್ಣವಾಗಿ ತಂತ್ರಜ್ಞಾನ ಆಧಾರಿತವಾಗಿದೆ. ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್, ಸೈಬರ್ ಸುರಕ್ಷತೆ, ಕ್ಲೌಡ್ ಕಂಪ್ಯೂಟಿAಗ್, ಇಂಟರ್ನೆಟ್ ಆಫ್ ಥಿಂಗ್ಸ್ ಮುಂತಾದ ಉದಯೋನ್ಮುಖ ತಂತ್ರಜ್ಞಾನಗಳು ನಮ್ಮ ಜೀವನಶೈಲಿ ಹಾಗೂ ಉದ್ಯೋಗಕ್ಷೇತ್ರವನ್ನು ವೇಗವಾಗಿ ಬದಲಾಯಿಸುತ್ತಿವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ತಾಂತ್ರಿಕ ಮೂಲಾಧಾರಗಳನ್ನು ಗಟ್ಟಿಗೊಳಿಸಿಕೊಳ್ಳುವುದು ಅತ್ಯಂತ ಅವಶ್ಯಕ, ಎಂದು ಹೇಳಿದರು.
ಕಾರ್ಯಾಗಾರದ ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರಿನ ನೆತ್ರೆಕಾನ್ ಸೊಲ್ಯೂಷನ್ಸ್ನ ಕಾರ್ಪೊರೇಟ್ ತರಬೇತುದಾರ ಪವನ್ ಜಿ ಮಾತನಾಡಿ, ತಾಂತ್ರಿಕ ಜ್ಞಾನವು ಉದ್ಯೋಗಕ್ಕೆ ಪ್ರವೇಶದ್ವಾರವಾಗಿದ್ದರೆ, ಸಾಫ್ಟ್ ಸ್ಕಿಲ್ಸ್ ಯಶಸ್ಸಿನ ಪಥವಾಗಿದೆ. ಇಂದಿನ ಕಾರ್ಪೊರೇಟ್ ಲೋಕದಲ್ಲಿ ಕೇವಲ ತಾಂತ್ರಿಕ ಕೌಶಲ್ಯ ಮಾತ್ರವಲ್ಲ, ಸಂವಹನ ಕೌಶಲ್ಯ, ತಂಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ನಾಯಕತ್ವ ಗುಣಗಳು ಹಾಗೂ ಸಮಯ ನಿರ್ವಹಣೆ ಅತ್ಯಂತ ಮುಖ್ಯ, ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕ ಡಾ. ಸಿ. ಎಂ. ಮಠಪತಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ತ ಪ್ರೊ. ಎಂ. ಪಿ. ಬಳಿಗಾರ್, ವಿವಿಧ ವಿಭಾಗಗಳ ವಿದ್ಯಾರ್ಥಿನಿಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
Monday, February 9, 2026
ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು 11 ಸಾವಿರ ರೂ. ಪ್ರೋತ್ಸಾಹ ಧನಕ್ಕೆ ಪ್ರಸಕ್ತ ಬಜೆಟ್ನಲ್ಲಿ ಸೇರ್ಪಡೆ ಮಾಡಿ ಬಸವ ತತ್ವದ ಪುನರುತ್ಥಾನಕ್ಕಾಗಿ ಬಜೆಟ್ನ ಶೇ.10 ರಷ್ಟು ಅನುದಾನವನ್ನು ಮೀಸಲಿಡಿ ; ವಿಶ್ರಾಂತ ಅಧಿಕಾರಿ ಬಾಳಾಸಾಹೇಬ ಈಶ್ವರಗೊಂಡ ಒತ್ತಾಯ
ವಿಜಯಪುರ : ವಿಶ್ವ ಗುರು ಬಸವಣ್ಣನವರು ಪ್ರತಿಪಾದಿಸಿದ ಬಸವ ತತ್ವದ ಮೂಲ ಬೇರುಗಳಾದ ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು 11 ಸಾವಿರ ರೂ. ಪೆÇ್ರೀತ್ಸಾಹ ಧನವನ್ನು ನೀಡುವ ಅಂಶವನ್ನು ಪ್ರಸಕ್ತ ಬಜೆಟ್ನಲ್ಲಿ ಸೇರ್ಪಡೆ ಮಾಡಿ ಬಸವ ತತ್ವದ ಪುನರುತ್ಥಾನಕ್ಕಾಗಿ ಬಜೆಟ್ನ ಶೇ.10 ರಷ್ಟು ಅನುದಾನವನ್ನು ಮೀಸಲಿರುಸುವಂತೆ ವಿಶ್ರಾಂತ ಕೃಷಿ ಅಧಿಕಾರಿ ಬಾಳಾಸಾಹೇಬ ಈಶ್ವರಗೊಂಡ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೈಲ ತತ್ವ ಆಧಾರಿತ ಟ್ರ್ಯಾಕ್ಟರ್ ಸಂಸ್ಕøತಿಯ ಕೃಷಿಯಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ, ಬಸವ ತತ್ವಾಧಾರಿತ ಕೃಷಿ ಮಣ್ಣಿನ ಆರೋಗ್ಯ, ಮಾನವ ಆರೋಗ್ಯ ಹೀಗೆ ಎಲ್ಲವನ್ನೂ ಕೇಂದ್ರಿಕರಿಸಿದೆ, ಹೀಗಾಗಿ ಜೋಡೆತ್ತಿನ ಕೃಷಿಯನ್ನು ಈ ಹಿಂದೆಂದಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಪೆÇ್ರೀತ್ಸಾಹಿಸಬೇಕಾದ ಅವಶ್ಯಕತೆ ಇದೆ ಎಂದರು.
ಹೊಸ ತಂತ್ರಜ್ಞಾನಗಳಿಂದ ನಂದಿ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡು ವಿದ್ಯುತ್, ಗ್ಯಾಸ್, ಅಡುಗೆ ಎಣ್ಣೆ, ಸಾವಯವ ಉತ್ಪನ್ನಗಳು. ಆರೋಗ್ಯ ವರ್ಧಕಗಳನ್ನು ಉತ್ಪಾದಿಸುವ ವಿವಿಧ ಯೋಜನೆಗಳನ್ನು ತರುವ ಮೂಲಕ ಗ್ರಾಮಗಳನ್ನು ಸ್ವಾವಲಂಬಿ ಗೊಳಿಸುವುದು ರೈತರ ಬಸವ ತತ್ವದ ಉದ್ದೇಶವಾಗಿದೆ. ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಕೃಪೆಯಿಂದ ಪ್ರಾರಂಭಿಸಿದ ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆಯು ಸರ್ಕಾರದ ಮೂಲಕ ರೈತರ ಬಸವ ತತ್ವಕ್ಕೆ ಪೂರಕ ಯೋಜನೆಗಳನ್ನು ಜಾರಿಗೆ ತಂದು ಮುಂದಿನ 10 ವರ್ಷಗಳಲ್ಲಿ 10 ಪಟ್ಟು ನಂದಿ ಸಂಪತ್ತು ಹೆಚ್ಚಿಸಿ ಗ್ರಾಮಗಳನ್ನು ಸ್ವಾವಲಂಬಿಗೊಳಿಸುವ ಗುರಿ ಹೊಂದಿದೆ ಎಂದು ವಿವರಿಸಿದರು.
ನಂದಿ ಸಂತತಿ ನಾಶವಾಗಿ ತಿನ್ನುವ ಅನ್ನ ವಿಷವಾಗುವ ಮುಂಚೆ ನಾವೆಲ್ಲರೂ ಒಗ್ಗೂಡಿ ಪರಿಹಾರ ಕಂಡುಕೊಳ್ಳುವ ಅವಶ್ಯಕತೆಯಿದೆ. ನಂದಿ ಕೃಷಿಕರಿಗೆ ಪೂರಕವಾದ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೆ ತಂದು ಗ್ರಾಮಗಳನ್ನು ಸ್ವಾವಲಂಬಿ ಹಾಗೂ ಆರೋಗ್ಯಯುತವಾಗಿ ಇಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಸಾಲೋಟಗಿಯಲ್ಲಿ ಜೋಡೆತ್ತುಗಳ ಸಮಾವೇಶ
ನಂದಿ ಸೇನೆಯ ಪ್ರಮುಖರಾದ ಸೋಮನಾಥ ಶಿವೂರ ಮಾತನಾಡಿ, ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಕೃಪೆಯಿಂದ ಕೃಷಿ ಪದವೀಧರರಿಂದ ಪ್ರಾರಂಭವಾದ ನಂದಿ ಕೂಗು ಅಭಿಯಾನದ ಅಡಿಯಲ್ಲಿ ರೈತರ ಬಸವ ತತ್ವದ ಪುನರುತ್ಥಾನಕ್ಕೆ ಪೂರಕ ಯೋಜನೆ ಹಾಗೂ ಕಾನೂನು ಜಾರಿಗಾಗಿ ಹಕ್ಕೊತ್ತಾಯ ಮಾಡುವುದಕ್ಕಾಗಿ 108 ಗ್ರಾಮಗಳ ಜೋಡೆತ್ತಿನ ರೈತರ ಐತಿಹಾಸಿಕ ಸಮಾವೇಶವು ಇದೇ ದಿ.13 ರಂದು ಬೆಳಿಗ್ಗೆ 10 ಕ್ಕೆ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಜರುಗಲಿದೆ. ಸಮಾವೇಶದಲ್ಲಿ ವಿಶೇಷ ಎತ್ತುಗಳು ಹಾಗೂ ಬೀಜದ ಹೋರಿಗಳ ಪ್ರದರ್ಶನವಿರುತ್ತದೆ. ನಂದಿ ಹಾಗೂ ಗೋ ಉತ್ಪನ್ನಗಳ ಮಾರಾಟ ವ್ಯವಸ್ಥೆ ಇರುವುದು. ಆದ ಕಾರಣ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಮಹಾಸ್ವಾಮೀಜಿ, ಸಿಂದಗಿಯ ಸಾರಂಗಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ, ಬುರಣಾಪುರದ ಮಾತೋಶ್ರೀ ಯೋಗೇಶ್ವರಿ ಮಾತಾಜಿ, ಸಾಲೋಟಗಿಯ ಶ್ರೀ ಸಿದ್ದೇಶ್ವರ ಆಶ್ರಮದ ಶ್ರೀ ಸಂಗಮೇಶ್ವರ ಸ್ವಾಮೀಜಿಜಿ, ನಂದಿ ಕೂಗು ಅಭಿಯಾನದ ಮಾರ್ಗದರ್ಶಕರಾದ ಬಿಜ್ಜರಗಿಯ ಸೋಮಲಿಂಗ ಅಜ್ಜನನವರು ಸಾನಿಧ್ಯ ವಹಿಸಲಿದ್ದಾರೆ ಎಂದರು.
ನಂದಿ ಕೂಗು ಅಭಿಯಾನದ ಪ್ರಮುಖರಾದ ಸೋಮನಾಥ ಶಿವೂರ, ಶಿವರಾಜ್ ಪಾರಗೊಂಡ, ಸಂಗಮೇಶ ಕಾಮನ್ನವರ, ಅಭಿμÉೀಕ ಬಿರಾದಾರ, ಬಸವರಾಜ ಬಿರಾದಾರ ಮೊದಲಾದವರು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
Sunday, February 8, 2026
Friday, February 6, 2026
Thursday, February 5, 2026
Wednesday, February 4, 2026
17 ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಧಗೆ ಚಲನಚಿತ್ರ ಪ್ರದರ್ಶನ
ಬೆಂಗಳೂರಿನಲ್ಲಿ ನಡೆಯುತ್ತಿರುವ 17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ಸ್ಪೆಷಲ್ ಜ್ಯೂರಿ ಪ್ಯಾನಲ್ ಅಡಿ ಆಯ್ಕೆಯಾಗಿರುವ "ಧಗೆ" ಚಲನಚಿತ್ರವು ನಾಳೆ ಸಂಜೆ 6 ಗಂಟೆಗೆ ಲೂಲು ಮಾಲ್ ನ ಥರ್ಡ್ ಸ್ಕ್ರೀನ್ ಪ್ರದರ್ಶನ ಕಾಣಲಿದೆ.
ಧಗೆ ಚಲನಚಿತ್ರವು ಉತ್ತರಕರ್ನಾಟಕದ ನೆಲ ಸಂಸ್ಕೃತಿಯ ಕಥೆಯನ್ನು ಹೊಂದಿದೆ. ಬೇಸಿಗೆಯ ಬಿಸಿಲು ಕೂಡಾ ಒಂದು ಪಾತ್ರವಾಗಿ ಚಿತ್ರದಲ್ಲಿ ಕಂಗೊಳಿಸಿದೆ.
ಸಿನಿಸ್ಟಾರ್ ನಿರ್ಮಾಣದ ಧಗೆ ಚಲನಚಿತ್ರ ನಿರ್ಮಾಪಕರು ಶ್ರೀ ಈಶ್ವರಪ್ಪ. ಕೆ ಮತ್ತು ಶ್ರೀಮತಿ ದೀಪ ಬಿ. ಎಂ.. ಸಹ ನಿರ್ಮಾಪಕರು ಮಂಜುನಾಥ್ ಎಂ. ಸಿ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ನಿರ್ದೇಶನವನ್ನು ಕೆರ್ನಳ್ಳಿ ಈಶ್ವರ್ ಅವರು ನಿರ್ವಹಿಸಿದ್ದಾರೆ. ಆನಂದ್ ದಿಂಡ್ವರ್ ಅವರ ಛಾಯಾಗ್ರಹಣವಿದೆ. ಸಂಗೀತ ಕೆ. ಎಂ. ಇಂದ್ರ, ಸಂಕಲನ ಜೀವನ್ ಪ್ರಕಾಶ್, ಸಹ ನಿರ್ದೇಶನ ಬಸು ನರೋಣಿ, ಡಾ. ಸಂಗಮೇಶ ಉಪಾಸೆ, 5.1;ಪಳನಿ ಡಿ ಸೇನಾಪತಿ, ನೃತ್ಯ ಮಾಲೂರು ಶ್ರೀನಿವಾಸ್, ಪ್ರಸಾದನ ಪ್ರಭಾಕರ, ವಸ್ತ್ರವಿನ್ಯಾಸ ಬಾಬುರಾಯ ರಾಮಚಂದ್ರ ಬಿರಾದಾರ, ಸಾಹಸ ಜಾನಿ, ಕಲೆ ಅಂಬಣ್ಣ ದೇಸಾಯಿ, ಸಹಾಯಕ ನಿರ್ದೇಶನ ನಾಗೇಂದ್ರ ಹೊಸಪೇಟೆ, ಪ್ರಚಾರ ಕಲೆ ವಾದಿರಾಜ್. ವಿ, ಚೌಡ್ಕಿ ಪದ ಸಿದ್ದಮ್ಮ ಮನಗೂಳಿ ಮತ್ತು ತಂಡದವರು ಒದಗಿಸಿದ್ದಾರೆ. ಲೈವ್ ಮಿಕ್ಸಿಂಗ್ ಸ್ಟುಡಿಯೋ ಹಂಸಲೇಖ, ಸುನೀಲಕುಮಾರ ಸುಧಾಕರ ಅವರ ಸ್ಥಿರ ಚಿತ್ರಣ ಚಲನಚಿತ್ರಕ್ಕಿದೆ.
ಈ ಚಿತ್ರದಲ್ಲಿ ಬಹುತೇಕ ಕಲಾವಿದರು, ತಂತ್ರಜ್ಞರು, ವಿಜಯಪುರ ಜಿಲ್ಲೆಯವರಾಗಿದ್ದಾರೆ. ಚಿತ್ರದ ನಾಯಕರಾಗಿ ಡಾ. ಸಂಗಮೇಶ ಉಪಾಸೆ, ಜೋಗತಿ ಮಂಜಮ್ಮ, ನೀತು ಪಾಟೀಲ್, ಡಾ. ಪಲ್ಲವಿ ಪಾಟೀಲ್ ( ಸೇಡಂ ), ಮುತ್ತು, ಪರಶು, ಸಚಿನ್ ಅಳ್ಳಿಕಟ್ಟಿ, ಸುನೀಲಕುಮಾರ ಸುಧಾಕರ, ಕಪಿಲ್, ಮಲ್ಲಿಕಾರ್ಜುನ ಮೇತ್ರಿ, ಸುರೇಶ್ ಅವರು ಅಭಿನಯಿಸಿದ್ದಾರೆ.





