Thursday, March 12, 2026
ಏ. 10 ರಿಂದ ಮೊದಲ ಬಾರಿಗೆ ಬುದ್ಧ, ಬಸವ, ಅಂಬೇಡ್ಕರ್ ಪುಸ್ತಕ ಮೇಳ: ಸೂಳಿಬಾವಿ
ವಿಜಯಪುರ: ಮೊದಲ ಬಾರಿಗೆ ನಗರದಲ್ಲಿ ಏ. 10 ರಿಂದ 14, 2026 ಐದು ದಿನಗಳ ಕಾಲ ಬಿಜಾಪುರ ಬುದ್ಧ, ಬಸವ ಹಾಗೂ ಬಾಬಾಸಾಹೇಬ ಅಂಬೇಡ್ಕರ್ ಬೃಹತ್ ಪುಸ್ತಕ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಪ್ರಗತಿಪರ ಚಿಂತಕ, ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಬೆಂಗಳೂರು, ಮೈಸೂರು ಭಾಗದಲ್ಲಿ ಸೀಮಿತಗೊಂಡಿದ್ದ ಪುಸ್ತಕ ಮೇಳ ಈ ಭಾಗದಲ್ಲಿ ನಡೆಯುತ್ತಿರುವುದು ವಿಶೇಷ. ಮಹಾತ್ಮ ಜ್ಯೋತಿಬಾ ಫುಲೆ, ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನ ನಿಮಿತ್ತ ಹಮ್ಮಿಕೊಂಡ ಈ ಕಾರ್ಯಕ್ರಮ ಇಲ್ಲಿನ ದರಬಾರ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ ಎಂದರು.ಏ. 10 ಎಂದು ಪುಸ್ತಕ ಮೇಳೆ ಉದ್ಘಾಟನೆ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪುಸ್ತಕ ಮೇಳ ಸ್ಥಳದ ವರೆಗೆ ಪುಸ್ತಕಗಳ ಜೊತೆ ಲೇಖಕರ ಮೆರವಣಿಗೆ ನಡೆಯಲಿದೆ. ಏ. 11 ರಂದು ಮಹಾತ್ಮ ಜ್ಯೋತಿಬಾ ಫುಲೆ ಜನ್ಮದಿನ ನಿಮಿತ್ತ ಸಾವಿತ್ರಿಬಾಯಿ ಫುಲೆ ಮಾರ್ಗದಿಂದ ಪುಸ್ತಕ ಮೇಳದ ಸ್ಥಳದವರೆಗೆ ಶಿಕ್ಷಕ ದಂಪತಿಗಳ ಮೆರವಣಿಗೆ, ಏ. 12 ರಂದು ಬಸವಾದಿ ಶರಣರ ವಚನಗಳ ಕಟ್ಟುಗಳೊಂದಿಗೆ ಬಸವೇಶ್ವರ ವೃತ್ತದಿಂದ ಕಾರ್ಯಕ್ರಮ ಸ್ಥಳದ ವರೆಗೆ ಬಸವಾನುಯಾಯಿಗಳ ಮೆರವಣಿಗೆ, ಏ. 13 ರಂದು ಅಸ್ಪೃಶ್ಯರ ಶಿಕ್ಷಣಕ್ಕಾಗಿ ಶ್ರಮಿಸಿದ ಕಾಕಾ ಕಾರ್ಖಾನೀಸ್ ಸ್ಮರಣೆ ನಿಮಿತ್ತ ಅವರ ಬೋರ್ಡಿಂಗ್ನಲ್ಲಿದ್ದು, ಶಿಕ್ಷಣ ಪಡೆದವರು, ಅವರ ಕುಟುಂಬಸ್ಥರಿAದ ಕಾಕಾ ಕಾರ್ಖಾನೀಸ್ ಅವರ ಮನೆಯಿಂದ ಕಾರ್ಯಕ್ರಮ ಸ್ಥಳದ ವರೆಗೆ ಮೆರವಣಿಗೆ ಹಾಗೂ ಏ. 14 ರಂದು ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನ ನಿಮಿತ್ತ ನಗರದ ಅಂಬೇಡ್ಕರ್ ವೃತ್ತದಿಂದ ಕಾರ್ಯಕ್ರಮದ ಸ್ಥಳದವರೆಗೆ ಸಂವಿಧಾನ ಪೀಠಿಕೆ ಕಂಠಪಾಠ ಮಾಡಿದ ವಿದ್ಯಾರ್ಥಿ ಮತ್ತು ಶಿಕ್ಷಕರ ಮೆರವಣಿಗೆ ನಡೆಯಲಿದೆ ಎಂದರು.
ಇನ್ನು ಪ್ರತಿದಿನ ಸಂಜೆ 4 ರಿಂದ ರಾತ್ರಿ 9 ಗಂಟೆ ವರೆಗೆ ಕವಿಗೋಷ್ಠಿ, ವಿದ್ಯಾರ್ಥಿಗಳಿಂದ ಪುಸ್ತಕ ಕುರಿತು ಮಾತು, ಲೇಖಕರೊಂದಿಗೆ ಸಂವಾದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇAದಿನ ಯುವ ಪೀಳಿಗೆಯಲ್ಲಿ ಪುಸ್ತಕ ಓದುವ ಸಂಖ್ಯೆ ಕಡಿಮೆಯಾಗುತ್ತಿದ್ದು, ಈ ಪುಸ್ತಕ ಮೇಳದಿಂದ ಪುಸ್ತಕ ಓದುವ ಪ್ರೇಮ ಹಾಗೂ ಜಾಗೃತಿ ಹೆಚ್ಚಿಸುವ ಕಾರ್ಯ ಮಾಡಲಾಗುವುದು ಎಂದರು.
ಹಿರಿಯ ಮುಖಂಡ ಅನಿಲ ಹೊಸಮನಿ ಮಾತನಾಡಿ, ಈ ಪುಸ್ತಕ ಮೇಳ ವಿಶೇಷ ಕಾರ್ಯಕ್ರಮವಾಗಿದ್ದು, ಲಡಾಯಿ ಪ್ರಕಾಶನ, ಕವಿ ಪ್ರಕಾಶನ, ದಲಿತ ಕಲಾ ಮಂಡಳಿ, ಚಿತ್ತಾರ ಕಲಾಬಳಗ, ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಸೇರಿದಂತೆ ಹತ್ತಾರು ಸಂಘ, ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿದ್ದು, 50 ಪುಸ್ತಕ ಮಳಿಗೆಗಳು ಸ್ಥಾಪಿಸಲಾಗುತ್ತಿದ್ದು, 1 ಲಕ್ಷ ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಮುಖAಡರಾದ ಚನ್ನು ಕಟ್ಟಿಮನಿ, ಸಂಜು ಕಂಬಾಗಿ, ಶಿವಪುತ್ರ ಅಜಮನಿ, ಫಯಾಜ್ ಕಲಾದಗಿ, ಬೋಗೇಸ ಸೊಲ್ಲಾಪುರ, ಪ್ರಭುಗೌಡ ಪಾಟೀಲ, ಸುಖದೇವ ಕಟ್ಟಿಮನಿ, ಸಂಗೀತಾ ಪೂಜಾರಿ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
Subscribe to:
Comments (Atom)
