ಈ ದಿವಸ ವಾರ್ತೆ
ವಿಜಯಪುರ: ಮಕ್ಕಳಲ್ಲಿ, ಯುವಕರಲ್ಲಿ ದೇಶಭಕ್ತಿ, ರಾಷ್ಟ್ರೀಯ ಭಾವೈಕ್ಯ, ಶಿಸ್ತು, ಕ್ರಿಯಾಶೀಲತೆ ಪರಿಕಲ್ಪನೆ ಮೂಡಿಸುವ ಉದ್ದೇಶದಿಂದ ದಿ,ಡಾ,ನಾ,ಸು, ಹಡೀ೯ಕರ ಅವರು ಭಾರತ ಸೇವಾದಳ ಸ್ಥಾಪಿಸಿದ್ದಾರೆ ಎಂದು ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ಹೇಳಿದರು. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕನ್ನಾಳ ಗ್ರಾಮದಲ್ಲಿ ಎಸ್,ಬಿ, ಕಲಾ ಹಾಗೂ ಕೆ, ಸಿ, ಪಿ ವಿಜ್ಞಾನ ಮಹಾವಿದ್ಯಾಲಯ ವಿಜಯಪುರ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಇವರುಗಳ ಸಹಯೋಗದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು. ಇಂದಿನ ಯುವಕರಲ್ಲಿ ರಾಷ್ಟ್ರಾಭಿಮಾನ ಕಡಿಮೆ ಆಗುತ್ತಿದೆ,ಆ ನಿಟ್ಟಿನಲ್ಲಿ ಭಾರತ ದೇಶದ ಪ್ರಜೆಗಳಾದ ನಾವುಗಳು ನನ್ನ ರಾಷ್ಟ್ರ, ನನ್ನ ರಾಷ್ಟ್ರಧ್ವಜ, ನನ್ನ ರಾಷ್ಟ್ರಗೀತೆಯ ಬಗ್ಗೆ ಅಭಿಮಾನ ಹೊಂದಬೇಕು ಎಂದರು. ಹಾಗೇ ಶಿಬಿರಾರ್ಥಿಗಳಿಗೆ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಹಾಗೂ ವಂದೇಮಾತರಂ ಕುರಿತು ಉಪನ್ಯಾಸ ನೀಡಿದರು. ರಾಜ್ಯ ಸಂಪನ್ಮೂಲ ಶಿಕ್ಷಕ ಸೋಮಶೇಖರ್ ರಾಠೋಡ ಬ್ಯಾಂಡ ವಾದನ ಹಾಗೂ ರಾಷ್ಟ್ರಧ್ವಜದ ಪ್ರಾಯೋಗಿಕ ತರಬೇತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ,ಸಿ,ಪಿ ಕಾಲೇಜಿನ ಪ್ರೊಫೆಸರ್ ಡಾ, ಹೆಚ್ ಎಮ್ ಮುಜಾವರ ಮಾತನಾಡಿ ವಿದ್ಯಾರ್ಥಿಗಳಲ್ಲಿ ಆರಂಭದಿಂದಲೇ ದೇಶಭಕ್ತಿ, ಶಿಸ್ತು ಬೆಳೆಸಬೇಕು ಹಾಗಾದಾಗ ಮಾತ್ರ ದೇಶಾಭಿಮಾನ ಮೂಡಿಸುಲು ಸಾದ್ಯ, ದೇಶಕ್ಕೆ ವಿಪತ್ತು ಸಂಭವಿಸಿದಾಗ ಸೇವಾದಳ ಯುವಕರ ತಂಡ ದೇಶಸೇವೆ ಮಾಡುವಂತ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ನಾನು ಕೂಡಾ ಭಾರತ ಸೇವಾದಳ ತರಬೇತಿ ಪಡೆದವನಾಗಿದ್ದು ಸಂಸ್ಥೆಯ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದ್ಧೇನೆ ಎಂದರು.
ಇದೇ ಸಂದರ್ಭದಲ್ಲಿ ಕೆ,ಸಿ,ಪಿ ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿ ಪ್ರೊಫೆಸರ್ ಕ್ರಷ್ಣಾ, ಕಾಲೇಜಿನ ಉಪನ್ಯಾಸಕ ಸಿಬ್ಬಂದಿ ವರ್ಗ ಹಾಗೂ ೧೦೦ ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.