Monday, August 4, 2025

ಶ್ರೀ ರಾಘವೇಂದ್ರ ಸ್ವಾಮೀಜಿಗಳ 354 ನೇ ಆರಾಧನಾ ಮಹೋತ್ಸವ

 ವಿಜಯಪುರ : ದಿವಟಗೇರಿ ಗಲ್ಲಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಸನ್ನಿಧಾನದಲ್ಲಿ ಇದೇ ದಿ.10 ರಿಂದ ಮೂರು ದಿನಗಳ ಕಾಲ ಶ್ರೀ ರಾಘವೇಂದ್ರ ಸ್ವಾಮೀಜಿಗಳ 354 ನೇ ಆರಾಧನಾ ಮಹೋತ್ಸವ ಶ್ರದ್ಧಾ-ಭಕ್ತಿಯಿಂದ ನೆರವೇರಲಿದೆ.

ದಿ.10 ರಂದು ಪೂರ್ವಾರಾಧನೆ ನಡೆಯಲಿದ್ದು, ಬೆಳಿಗ್ಗೆ 5 ಕ್ಕೆ ಸುಪ್ರಭಾತ, ಬೆಳಿಗ್ಗೆ 6 ರಿಂದ ಗೋಪೂಜೆ, ಧ್ವಜಾರೋಹಣ, ಬೆಳಿಗ್ಗೆ 7 ಕ್ಕೆ ಶ್ರೀ ಗುರುರಾಜರ ಭಾವಚಿತ್ರದ ಮೆರವಣಿಗೆ, ನಂತರ ಶ್ರೀಹರಿ ವಾಯುಸ್ತುತಿ ಪುನಶ್ಚರಣ, ಶ್ರೀ ಗುರುಸ್ತೋತ್ರ ಪಠಣ, ನಂತರ ಶ್ರೀ ಗುರು ಸಾರ್ವಭೌಮರಿಗೆ ಕ್ಷೀರಾಭೀಷೇಕ, ಪಂಚಾಮೃತಮಹಾಭಿಷೇಕ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ನೈವೇದ್ಯ, ಅಲಂಕಾರ, ಹಸ್ತೋದಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5 ಕ್ಕೆ ಪಲ್ಲಕ್ಕಿ ಸೇವೆ, ರಜತ ರಥೋತ್ಸವ, ಡೋಲೋತ್ಸವ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ಮಂತ್ರಪುಷ್ಪ, ಶ್ರೇಯ:ಪ್ರಾರ್ಥನೆ ನಡೆಯಲಿದೆ.

ದಿನಾಂಕ 11 ರಂದು ಮಧ್ಯಾರಾಧನೆ ಪ್ರಯುಕ್ತ ಬೆಳಿಗ್ಗೆ 5 ಕ್ಕೆ ಸುಪ್ರಭಾತ, ನಂತರ ಶ್ರೀಹರಿ ವಾಯುಸ್ತುತಿ ಪುನಶ್ಚರಣ ಸಪ್ತಕಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಮಧ್ಯಾಹ್ನ 12 ಕ್ಕೆ ಪೂರ್ಣಾಹುತಿ ಸಮರ್ಪಣೆ ನಡೆಯಲಿದೆ, ಮಧ್ಯಾಹ್ನ 12 ರಿಂದ ಪೂರ್ಣಾಹುತಿ ಸಮರ್ಪಣೆ, ಮಹಾಪೂಜೆ, ನೈವೇದ್ಯ, ಅಲಂಕಾರ, ತೀರ್ಥಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5 ಕ್ಕೆ ಪಲ್ಲಕ್ಕಿ ಸೇವೆ ಮೊದಲಾದ ಕಾರ್ಯಕ್ರಮಗಳು ಜರುಗಲಿವೆ.

ದಿನಾಂಕ 12 ರಂದು ಉತ್ತರಾರಾಧನೆ ನಡೆಯಲಿದ್ದು, ಬೆಳಿಗ್ಗೆ 5 ಕ್ಕೆ ಸುಪ್ರಭಾತ, ಬೆಳಿಗ್ಗೆ 7 ಕ್ಕೆ ರಥಾಂಗ ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಇದಕ್ಕೂ ಮುನ್ನ ದಿ.7 ರಂದು ಸಂಜೆ 7 ಕ್ಕೆ ಕಲಬುರ್ಗಿಯ ಖ್ಯಾತ ಸಂಗೀತಕಾರ ಡಾ.ರಮೇಶ ಕುಲಕರ್ಣಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

05-08-2025 EE DIVASA KANNADA DAILY NEWS PAPER