ಈ ದಿವಸ ವಾರ್ತೆ
ವಿಜಯಪುರ: ಕರ್ನಾಟಕ ವ್ಹೀಲ್ ಚೇರ್ ಪ್ರೀಮಿಯರ್ ಲೀಗ್ ಬಿಜಾಪುರ ಬ್ಲಾಸ್ಟರ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಕರ್ನಾಟಕ ವ್ಹೀಲ ಚೇರ ಪ್ರೀಮಿಯ ಲೀಗ್ ಎರಡನೇಯ ಆವೃತ್ತಿಯಲ್ಲಿ ಸಾಗರ ಲಮಾಣಿ ಅವರ ಮೊದಲ ನಾಯಕತ್ವದಲ್ಲಿ ಬಿಜಾಪುರ ಬ್ಲಾಸ್ಟರ್ ತಂಡ ಚಾಂಪಿಯನಾಗಿ ಟೋಪಿ ತನ್ನದಾಗಿಸಿಕೊಂಡಿದೆ.
ಫಾಯಿನಲ್ ಪಂದ್ಯದಲ್ಲಿ ಬೆಂಗಳೂರ ಈಗಲ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಬೆಂಗಳೂರ ಈಗಲ್ಸ್ ತಂಡ 6 ವಿಕೆಟ್ ಕಳೆದುಕೊಂಡು 108 ರನ್ ಕಲೆ ಹಾಕಿತ್ತು 108 ರನ್ ಗುರಿ ಇಟ್ಟುಕೊಂಡ ಬಿಜಾಪುರ ಬ್ಲಾಸ್ಟರ್ ತಂಡವು ಯಾವುದೇ ವಿಕೆಟ್ ನಷ್ಟ ಇಲ್ಲದೆ 11.3 ಓವರಗಳಲ್ಲಿ 111 ರನ್ ಗಳಸಿ ಸುಲಬವಾಗಿ ಬಿಜಾಪುರ ಬ್ಲಾಸ್ಟರ ತಂಡವು ಗೆಲವು ತನ್ನದಾಗಿಸಿ ಕೊಂಡಿದೆ.
ಈ ಟೂರ್ನಿಯು ಬೆಂಗಳೂರಿನ ವಾಯ್ ಎಂಸಿಎ ಕ್ರಿಕೇಟ್ ಮೈದಾನದಲ್ಲಿ ದಿವ್ಯಾಂಗ್, ಮೈತ್ರಿ ಸ್ಪೋಟ್ಸ್ ಆಕಾಡೆಮಿಯ ನೇತೃತ್ವದಲ್ಲಿ ಜರುಗಿತು. ಸೆಮಿ ಫಾಯಿನಲ್ ಪಂದ್ಯದಲ್ಲಿ ಸಾಗರ ಲಮಾಣಿ 20 ಎಸೆತಗಳಲ್ಲಿ 35 ರನ್ ಗಳಿಸಿ ಮತ್ತೆ ಉತ್ತಮ ವಿಕೇಟ್ ಕೀಪಿಂಗ್ ಮಾಡುವುದರ ಮೂಲಕ ತನ್ನ ತಂಡವನ್ನು ಫಾಯಿನಲ್ ಪ್ರವೇಶಿಸಲು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.