Wednesday, March 19, 2025

"ಸನಾತನವಾದಿ ಬೇರುಗಳಿಗೆ ಬೆಂಕಿ ಇಟ್ಟ ಚೌಡಾರ ಕೆರೆ ಪ್ರವೇಶ "


 1987 ರ ಸುಮಾರಿಗೆ ಅಮೆರಿಕದಲ್ಲಿ ಒಂದು ಫುಟ್ಬಾಲ್ ಪಂದ್ಯ ನಡೆಯುತ್ತಿದ್ದಾಗ ಇಬ್ಬರು ಆಟಗಾರರು ಅಕಸ್ಮಾತಾಗಿ ಆಟ ನಿಲ್ಲಿಸಿ ವಾಂತಿ ಮಾಡಿಕೊಳ್ಳಲು ಆರಂಭಿಸಿದರು ಅದಕ್ಕೆ ಸ್ವಲ್ಪ ಮೊದಲು ವಿರಾಮ ಸಮಯದಲ್ಲಿ ಕುಡಿದ ಕೋಕೊ ಕೋಲಾದ ದುಷ್ಪರಿಣಾಮ ಎಂದು ಆರ್ಗನೈಸರ್ಗಳು ಭಾವಿಸಿದರು. ಮುಂಜಾಗ್ರತೆ ಕ್ರಮವಾಗಿ ಮೈಕಿನಲ್ಲಿ ದಯವಿಟ್ಟು ಪ್ರೇಕ್ಷಕರು ಯಾರೂ ಇಲ್ಲಿನ ಕೋಕೊಕೋಲಾ ಕುಡಿಯಬೇಡಿ, ಅದು ಬಹಳ ಹಳೆಯ ಸರಕಾಗಿರುತ್ತದೆ ಎಂದು ಪ್ರಕಟಿಸಿಬಿಟ್ಟರು ಅಷ್ಟೇ. ಮರುಕ್ಷಣ ಪ್ರೇಕ್ಷಕರಲ್ಲಿ ಗಲಿಬಿಲಿ ಆರಂಭವಾಯಿತು.ಆ ಪಾನಿಯ ಕುಡಿದವರೆಲ್ಲಾ ವಾಂತಿ ಮಾಡಲು ಶುರು ಮಾಡಿದರು..! ಕೆಲವರಂತೂ ತಲೆ ಸುತ್ತಿ ಗ್ಯಾಲರಿಯಿಂದ ಕೆಳಗೆ ಬಿದ್ದೆ ಹೋದರು ಅಲ್ಲಿನ ವಾತಾವರಣ ಎಲ್ಲಾ ಗಲಿಬಿಲಿ ಹಾಹಾಕಾರ,ಅಳುವುದು ಇತ್ಯಾದಿಗಳಿಂದ ತುಂಬಿಹೋಯಿತು. ಆಟವೇ ನಿಂತು ಹೋಯಿತು. ಆಂಬುಲೆನ್ಸ್ ಗಳು ಬಂದವು ಆಸ್ಪತ್ರೆಗಳು ತುಂಬಿ ಹೋದವು ಕೆಲವು ಪರಿಸ್ಥಿತಿ ವಿಷಮ ಸ್ಥಿತಿಗೆ ತಲುಪಿತು. ಇದೆಲ್ಲವೂ ಆದ ನಂತರ ತಿಳಿದ ರಹಸ್ಯವೇನೆಂದರೆ ಆ ಪಾನೀಯದಲ್ಲಿ ಯಾವುದೇ ವಿಧವಾದ ದೋಷವಿರಲಿಲ್ಲ ಆಟಗಾರರಿಬ್ಬರೂ ಬರುವ ಮುನ್ನ ಒಂದು ಹೋಟೆಲ್ನಲ್ಲಿ ಬಹಳ ಹುಳಿಯಾದ ಹಿಟ್ಟಿನಿಂದ ಮಾಡಿದ ಪಿಜ್ಜಾ ತಿಂದು ಬಂದಿದ್ದರು..!! ಸಹಜವಾಗಿ ನಾವು ಪಾಸಿಟಿವ್ ವಿಷಯಗಳು ತೆಗೆದುಕೊಳ್ಳುವಷ್ಟು ಸುಲಭವಾಗಿ ನೆಗೆಟಿವ್ ವಿಷಯಗಳನ್ನು ತೆಗೆದುಕೊಳ್ಳುವುದಿಲ್ಲ.ಆದ್ದರಿಂದ ನಾವು ಮಾತನಾಡುವಾಗ ಆದಷ್ಟುನೆಗಟಿವ್ಸಗಳನ್ನು ಕಡಿಮೆ ಮಾಡಿಕೊಳ್ಳಬೇಕು.

 ಇಂತಹದೇ ಸುದ್ದಿಯನ್ನು ಸವರ್ಣ ಹಿಂದುಗಳು, ನಿಮ್ನ ವರ್ಗದವರು ಮಹಾಡ್ ಕೆರೆ ಪ್ರವೇಶಿಸಲಿದ್ದಾರೆ ಎಂದು ತಿಳಿದ ತಕ್ಷಣ.....

 ಮಹಾಡ್ ನಗರದ ವೀರೇಶ್ವರ ಮಂದಿರವನ್ನು ಅಸ್ಪೃಶ್ಯರು ಪ್ರವೇಶಿಸಲಿದ್ದಾರೆ ಎಂಬ ಗಾಳಿ ಸುದ್ದಿಯನ್ನು ತೇಲಿ ಬಿಟ್ಟರು. ಅಂದುಕೊಂಡಂತೆಯೆ...ಇದು ಸವರ್ಣೀಯರನ್ನು ಕೆರಳಿಸಿತು ಅವರು ಏನೆಂದೂ ವಿಚಾರ ಮಾಡದೆ ಕೈಗೆ ಸಿಕ್ಕ ಬಡಿಗೆ, ಬಿದಿರು,ಚಾಕು, ಚೈನ್ ಹಿಡಿದು ಬೀದಿಗಿಳಿದರು. ಅಸ್ಪೃಶ್ಯರು ಮಂದಿರ ಪ್ರವೇಶಿಸಲಿದ್ದಾರೆ ಎಂಬ ಮಾತು ಅವರನ್ನು ಉದ್ರೇಕಗೊಳಿಸಿತ್ತು ಹಿಂದೂ ಧರ್ಮಕ್ಕೆ ಗಂಡಾಂತರ ಇರುವುದಾಗಿ ಬೊಬ್ಬೆ ಹಾಕಿದ ಆ ದುಷ್ಟರು ತಮ್ಮ ಆರಾಧ್ಯ ದೈವಕ್ಕೆ ಮೈಲಿಗೆಯಾಗುವುದನ್ನು ತಡೆಗಟ್ಟಲು ಪ್ರತಿಯೊಬ್ಬ ಹಿಂದು ಮುಂದಾಗಬೇಕೆಂದು ಕರೆ ನೀಡಿದರು. ಅಲ್ಲಿ ಒಂದು ರೀತಿಯ ಸಮೂಹ ಸನ್ನಿ ನಿರ್ಮಾಣವಾಗಿತ್ತು ಹಿಂದೂ ಸವರ್ಣಿಯರು ಸಮಚಿತ್ತದಿಂದ ವಿಚಾರ ಮಾಡಲು ಸಿದ್ದರಿರಲಿಲ್ಲ.ಮಂದಿರಕ್ಕೆ ಮೈಲಿಗೆ ಯಾಗಲಿದೆ ಎಂಬ ಭಯವನ್ನು ಬಹು ವ್ಯಾಪಕವಾಗಿ ಅವರು ಪ್ರಸಾರ ಮಾಡಿದರು.ಮೊದಲು ಅಂಬೇಡ್ಕರ್ ಕೆರೆಯ ನೀರು ಮುಟ್ಟಿ ಹೇಳಿದರು ಈ ಕೆರೆಯ ನೀರನ್ನು ಕುಡಿದರೆ ಮಾತ್ರ ನಾವು ಬದುಕುತ್ತೇವೆ ಅಂತ ಅಲ್ಲ ಆದರೆ ಈ ನೀರು ಕುಡಿಯುವ ಹಕ್ಕು ನಮಗೆಲ್ಲರಿಗೂ ಇದೆ. ತದನಂತರ ಸಾವಿರಾರು ಜನ ಮೆರವಣಿಗೆಕಾರರೂ ನೀರು ಮುಟ್ಟಿದರು. 

ಸವರ್ಣ ಹಿಂದೂಗಳಿಗೆ

ಸತ್ಯಾಸತ್ಯತೆಯನ್ನು ಒರೆಗೆ ಹಚ್ಚುವ ತಾಳ್ಮೆ ಅವರಲ್ಲಿ ಉಳಿದಿರಲಿಲ್ಲ ಏಕೆಂದರೆ ಶಾಸನಸಭೆಯ ನಿರ್ಣಯ ಎರಡು ಬಾರಿ ಪಾಸ್ ಆಗಿ ಬಂದಾಗಲೂ ಅದನ್ನು ಹತ್ತಿಕ್ಕಿದ್ದರೂ ಅಸ್ಪೃಶ್ಯರು ಸಮಾವೇಶ ನಡೆಸಿ ಚೌಡರ ಕೆರೆ ನೀರು ಮುಟ್ಟಿದ್ದನ್ನು ಸಹಿಸಿಕೊಳ್ಳುವುದು ಹಿಂದೂಸ್ತಾನಿಯರಿಗೆ ಸಾಧ್ಯವಾಗಿರಲಿಲ್ಲ ಅಸ್ಪೃಶ್ಯರ ಸಮಾವೇಶ ಕೆರೆಯ ನೀರು ಮುಟ್ಟುವುದರೊಂದಿಗೆ ಮುಕ್ತಾಯಗೊಂಡಿದ್ದೇನೋ ನಿಜ ಆದರೆ ನಂತರದ ಬೆಳವಣಿಗೆಗಳು ಭಯಾನಕವಾಗಿದ್ದವು. ಮೆರವಣಿಗೆಯಲ್ಲಿ ಭಾಗವಹಿಸಿದ ಜನ ತಮ್ಮ ಊರ ದಾರಿ ಹಿಡಿಯುವಾಗ ವಿಶ್ರಾಂತಿಗಾಗಿ ವಿಶಾಲವಾದ ಮೈದಾನದಲ್ಲಿ ಕುಳಿತಿದ್ದರು ಇಂತಹ ಹೊತ್ತಿನಲ್ಲಿ ಹಿಂದೂ ಸವರ್ಣೀಯರ ನೂರಾರು ಗುಂಪುಗಳು ಮಾರಕಾಸ್ತ್ರಗಳನ್ನು ಹಿಡಿದು ಅಸ್ಪೃಶ್ಯರ ಮೇಲೆ ಹಲ್ಲೆ ನಡೆಸಿದರು.ಹಿಂದೂ ಸವರ್ಣೀಯರ ಗುಂಪು ಕಂಡ ಕಂಡವರನ್ನು ಹೊಡೆದು ಹಾಕಿತು, ತಲೆಗಳು ಒಡೆದವು!ಮಾಡಿದ್ದ ಅಡುಗೆಯನ್ನು ಮಣ್ಣಿಗೆ ಸೇರಿಸಲಾಯಿತು.! ಮಹಿಳೆಯರು, ಮಕ್ಕಳು,ವೃದ್ಧರು ಎನ್ನದೆ ಎಲ್ಲರನ್ನೂ ಹೊಡಿ,ಬಡಿ ಮಾಡಲಾಯಿತು.ಇದೆಲ್ಲವೂ ದಿಢೀರನೆ ನಡೆದು ಹೋಗಿತ್ತು  ದಲಿತರು ಅನಿರೀಕ್ಷಿತ ದಾಳಿಯಿಂದ ತತ್ತರಿಸಿದ್ದರು. ಸಮಾವೇಶದ ಸ್ಥಳದಲ್ಲಿ ಸಂಪೂರ್ಣ ಗೊಂದಲ ಆವರಿಸಿತು . ದಿಕ್ಕಾಪಾಲಾಗಿ ಜನರು ಓಡತೊಡಗಿದಾಗ ತಿರುಗಿ ಬಿದ್ದು ಕೆಲ ನಿಮ್ನ ವರ್ಗದ ಯುವಕರು ಹಿಂದೂ ಸವರ್ಣೀಯರನ್ನೂ ತಳಿಸಿದರು.!

 ಊರಿಗೆ ಹೋಗೋ ರಸ್ತೆಗಳಲ್ಲಿ, ಹೊಲಗದ್ದೆಗಳಲ್ಲಿ ಊರ ಹೊರಭಾಗಗಳಲ್ಲಿ, ಎಲ್ಲೆಂದರಲ್ಲಿ  ಹೊಡೆದಾಟ ನಡೆಯಿತು.ಈ ಸಮಾವೇಶ ಮುಗಿದ ಬಳಿಕ ಬೆಂಬಲಿಗರೊಂದಿಗೆ ಅತಿಥಿಗಳ ಆರೈಕೆಗೆಂದು ಅಂಬೇಡ್ಕರ್ ಹೋದಾಗ ಈ ಸುದ್ದಿ ತಲುಪುತ್ತದೆ.ಅವರು ಕೂಡಲೇ ಮಹಾಡಿನ ಮಾಮಲೇದಾರ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಅವರನ್ನು ಭೇಟಿ ಮಾಡಲು ಮುಂದಾಗ್ತಾರೆ ರಸ್ತೆ ರಸ್ತೆಯಲ್ಲಿ ನಡೆದಿದ್ದ ಹಲ್ಲೆಗಳ ಮಧ್ಯೆ ಅವರು ತಮ್ಮ ಹತ್ತಾರು ಜನ ಅನುಯಾಯಿಗಳೊಂದಿಗೆ ಬೀದಿಯಲ್ಲಿ ಹೋಗುತ್ತಿದ್ದಾಗ ಈ ಇಬ್ಬರು ಅಧಿಕಾರಿಗಳು ಎದುರಿಗೆ ಬಂದು 'ನಿಮ್ಮ ಜನರನ್ನು ನೀವು ಹತೋಟಿಗೆ ತೆಗೆದುಕೊಳ್ಳಿ, ಇಲ್ಲದೆ ಹೋದರೆ ಇಲ್ಲಿ ಹಣಗಳ ರಾಶಿ ಬೀಳುತ್ತದೆ ' ಎಂದು ಗೋಗರೆಯುತ್ತಾರೆ.

ಮಹಾಡ್ ನಗರದ ಪ್ರತಿಯೊಂದು ರಸ್ತೆಯನ್ನು ಸುತ್ತಿ ಬಂದ ಅಂಬೇಡ್ಕರ್ ಅಸ್ಪೃಶ್ಯರಿಗೆ ಸಾಂತ್ವನ ಹೇಳುತ್ತಾ ಸಾಗಿದರು.'ವೀರೇಶ್ವರ ಮಂದಿರ ಪ್ರವೇಶಿಸುವ ವಿಚಾರವೇ ತಮಗಿಲ್ಲ 'ಎಂದು ಹಿಂದೂ ಸವಣೀಯರಿಗೆ ಸ್ಪಷ್ಟಪಡಿಸಿದರು. ಎಲ್ಲಾ ಕಡೆ ಗಲಭೆ ಕೊಂಚ ಇಳಿಮುಖವಾಯಿತು ಆ ಹೊತ್ತಿಗಾಗಲೇ 20 ರಿಂದ 25 ಜನ ದಲಿತರು ಹಲ್ಲೆಗೆ ಗುರಿಯಾಗಿದ್ದರು.

 ಆ ರಾತ್ರಿ ಮತ್ತೆ ಗಲಭೆ 

ಮರುಕಳಿಸುತ್ತದೆ. ಹಿಂದೂ ಸವರ್ಣೀಯರು,ಗುಂಪು ಕಟ್ಟಿಕೊಂಡು ಗೂಂಡಾಗಳಂತೆ ತಿರುಗಲು ಆರಂಭಿಸುತ್ತಾರೆ . ಪರಸ್ಥಳದವರೆಂದು ಕಂಡ ಕಂಡವರ ಮೇಲೆ ಎಲ್ಲಾ ಕಡೆಗೂ ಹಲ್ಲೆ ನಡೆಸುತ್ತಾರೆ. ಮಹಾಡ್ ನಗರದ ಕಾಲೋನಿಗಳ ಮೇಲೆಯೂ ಹಲ್ಲೆ ನಡೆಯುತ್ತದೆ ಸಮಾವೇಶದ ಸ್ಥಳದಲ್ಲಿ ಇನ್ನೂ ಕುಳಿತಿದ್ದ ಗುಂಪುಗಳನ್ನೂ ಸಹ ಥಳಿಸಲಾಗುತ್ತದೆ. ಆಗ ಪೊಲೀಸರು ಮೂಕ ಪ್ರೇಕ್ಷಕರಾಗುತ್ತಾರೆ.


 ಹಿಂದೂ ಸವರ್ಣೀಯರು ಇಷ್ಟಕ್ಕೆ ಸುಮ್ಮನಾಗದೆ ಮಹಾಡ್ ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ಸುದ್ದಿಯನ್ನು ಕಳಿಸುತ್ತದೆ, ಆ ಸಮಾವೇಶಕ್ಕೆ ಬಂದಿದ್ದ ಅಸ್ಪೃಶ್ಯರಿಗೆ ಬಹಿಷ್ಕಾರ ಹಾಕಲು ಹೇಳುತ್ತದೆ,ಅವರಿಗೆ ಯಾವ ಕೆಲಸವನ್ನೂ ನೀಡದಿರಲು ಆದೇಶ ಮಾಡಿ ಕಳಿಸುತ್ತದೆ ಇದರಿಂದ ಗಲಭೆಗಳು ನಡೆಯುತ್ತವೆ. ಹಳ್ಳಿಯಿಂದ ನಗರದತ್ತ ಬರಬೇಕೆಂದು ಅಸ್ಪೃಶ್ಯರಿಗೆ ನಗರದಲ್ಲೂ ದಾಳಿ ನಡೆಯುತ್ತದೆ ಎಂಬುದನ್ನು ತಿಳಿದು ಗೊಂದಲಕ್ಕೆ ಒಳಗಾಗುತ್ತಾರೆ.

 ಅಂಬೇಡ್ಕರ ಅತಿಥಿ ಗ್ರಹಕ್ಕೆ ಬಂದಾಗ ಅಲ್ಲಿ ನೂರಾರು ಜನ ಅಸ್ಪೃಶ್ಯರು ಕಣ್ಣು ಕೆಂಪಗೆ ಮಾಡಿಕೊಂಡು ನಿಂತಿದ್ದರು. ಅವರ ದನಿ ನಡುಗುತ್ತಿತ್ತು ಅವರ ಕೈಯಲ್ಲಿ ಬಡಿಗೆಗಳಿದ್ದು ಕಾಲುಗಳನ್ನು ನೆಲಕ್ಕೆ ಅಪ್ಪಳಿಸುತ್ತಿದ್ದರವರು ತಮ್ಮ ಜನರ ಮೇಲೆ ಹಲ್ಲೆ ಮಾಡಿದ ಹಿಂದೂ ಸವರ್ಣೀಯರನ್ನು ಬಲಿ ಪಡೆಯಲು ಸಜ್ಜಾಗಿ ನಿಂತಿದ್ದರು. ಅವರಿಗೆ ಅಂಬೇಡ್ಕರ್ ಅನುಮತಿ ಬೇಕಾಗಿತ್ತು ಅಷ್ಟೇ. ಆತ್ಮ ರಕ್ಷಣೆ ಮಾಡಿಕೊಳ್ಳದಿದ್ದರೆ ತಾವು ಸರ್ವನಾಶವಾಗುತ್ತೇವೆ ಎಂಬ ಆತಂಕ ಅವರಲ್ಲಿ ಮೂಡಿತ್ತು ಆದರೆ ಅಂಬೇಡ್ಕರರಿಂದ ಅವರಿಗೆ ಸಹನೆಯಿಂದ ಇರುವ ಸಲಹೆ ಸಿಕ್ಕಿತು..! ಶಿಸ್ತು ಮತ್ತು ಶಾಂತಿಯಿಂದ ವರ್ತಿಸುವ ಮೂಲಕ ದಮನವನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂಬುದನ್ನು ಅವರು ತಮ್ಮ ಮಾತಿನ ಮೂಲಕ ತಿಳಿಸಿ ಹೇಳಿದ್ದರು. ನಮ್ಮ ತಾಳ್ಮೆಯನ್ನು ಹೇಡಿತನವೆಂದು ಪರಿಗಣಿಸಬಾರದು ಎಂದೂ ಎಚ್ಚರಿಸಿದ್ದರು. 

 


ಈ ಮೊದಲು ಮಹಾಡ್ ದ ಚೌಡಾರ್ ಕೆರೆಗೆ ಪ್ರವೇಶ ದೊರಕದಿದ್ದುದಕ್ಕೆ ಕಾರಣ, ಸವರ್ಣ ಹಿಂದುಗಳ ಪ್ರಬಲ ಪ್ರತಿರೋಧವನ್ನೇ ಒಡ್ಡಿದ್ದರು. ಈ ಹಿನ್ನೆಲೆಯಲ್ಲಿ ಕೋಲಾಬ ಜಿಲ್ಲಾ ವರ್ಗಗಳ ಸಂಘವು ಮಹಾಡ್ ನಲ್ಲಿ ಮಾರ್ಚ್ 19- 20 -1927ರಂದು ಸಮಾವೇಶವೊಂದನ್ನು ನಡೆಸಲು ನಿರ್ಧರಿಸಿತು. ಡಾ// ಅಂಬೇಡ್ಕರರು ಈ ಸಮಾವೇಶದ ಮುಖ್ಯ ಅತಿಥಿಗಳಾಗಿದ್ದರು. ಸುರೇಂದ್ರನಾಥ ಟಿಪ್ಣಿಸ್,,ಸುಬೇದಾರ ಸಾವಡ್ಕರ್, ಆನಂತರಾವ್ ಚಿತ್ರೆ ಮುಂತಾದವರು ಸಮಾವೇಶದ ಸಕಲ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಮಾಡಿದ್ದರು . ಒಟ್ಟಿನಲ್ಲಿ ಸಮಾವೇಶದ ಮಹತ್ವವನ್ನು ನಿಮ್ನ ವರ್ಗಗಳಿಗೆ ಮನಗಾಣಿಸಿ ಕೊಟ್ಟಿದ್ದಾರೆ ಮಹಾರಾಷ್ಟ್ರ ಗುಜರಾತ್ ಗಳಿಂದ ಬಂದ ನಿಮ್ನ ವರ್ಗಗಳ ಜನರ ಸಂಖ್ಯೆ 10,000 ರ ದಾಟಿತ್ತು ಸಮಾವೇಶವು ಯಶಸ್ವಿಯಾಗಿ ನಡೆಯಲು ಎಲ್ಲ ಸಿದ್ಧತೆಗಳನ್ನು ಮಾಡಲಾಗಿತ್ತು ಹಿಂದೂ ಸವರ್ಣಿಯರಿಂದ ನೀರು ಖರೀದಿಸಿಟ್ಟು ಸಮಾವೇಶದ ಪ್ರತಿನಿಧಿಗಳಿಗೆ ಒದಗಿಸಲಾಯಿತು ಏಕೆಂದರೆ ಸಮಾವೇಶದ ಸ್ಥಳದಲ್ಲಿ ನೀರಿನ ಕೊರತೆ ಇತ್ತು.ಅಂಬೇಡ್ಕರ್ ದನಿಯಲ್ಲಿ ಹೋರಾಟದ ಕಾವಿತ್ತು ಅವರ ಮಾತುಗಳು ಬೆಟ್ಟಗುಡ್ಡಗಳಲ್ಲಿ ಮಾರ್ದನಿಗೊಂಡವು. ಹಳ್ಳಿ ಪಟ್ಟಣ ಸೇರಿದವು. ನಿರ್ಬಂಧ ಹಾಕಿರುವುದನ್ನು ಪ್ರಸ್ತಾಪಿಸಿದ ಅವರು ಮಿಲಿಟರಿಯಲ್ಲಿ ಭರ್ತಿಯಾಗುವ ಮೂಲಕ ನಾವು ನಮ್ಮ ಜೀವನಮಟ್ಟವನ್ನು ಉತ್ತಮಪಡಿಸಿಕೊಂಡಿದ್ದೆವು. ನಮ್ಮ ಧೈರ್ಯ ಕ್ಕೆಚ್ಚು ಪ್ರತಿಭೆಗಳನ್ನು ಸಾಬೀತುಪಡಿಸಿದ್ದೆವು ನಮ್ಮವರು ಮಿಲಿಟರಿ ಶಾಲೆಗಳ ಮುಖ್ಯಸ್ಥರಾಗಿದ್ದರು . ಮಿಲಿಟರಿ ಕ್ಯಾಂಪಸ್ ಶಾಲೆಗಳಲ್ಲಿ ಅಸ್ಪೃಶ್ಯರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುತ್ತಿತ್ತು ಅಸ್ಪೃಶ್ಯರಿಗೆ ಸೇನೆ ಸೇರುವ ಅವಕಾಶವನ್ನು ನಿರಾಕರಿಸುವುದು ದ್ರೋಹವಲ್ಲದೆ ಮತ್ತೇನು?ಎಂದು ಪ್ರಶ್ನಿಸಿದ್ದರು. ನೆಪೋಲಿಯನ್ ಯುದ್ಧದಲ್ಲಿ ಫ್ರೆಂಚ್ ಸೇವೆಯನ್ನು ಎದುರಿಸುವಲ್ಲಿ ಬ್ರಿಟಿಷ್ ಸೇನೆ ನಿರತವಾಗಿದ್ದಾಗ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ  ಉರುಳಿ ಬೀಳದಂತೆ ಕಾವಲಿದ್ದುದ್ದು ಅಸ್ಪೃಶ್ಯ ಸೈನಿಕರೇ ಎಂಬುದನ್ನು ಬ್ರಿಟಿಷ್ ಆಡಳಿತ ಮರೆಯಬಾರದು ಎಂದು ಗುಡುಗಿದರು.

 ಮಹಾಡ್ ಸತ್ಯಾಗ್ರಹ ಮೆರವಣಿಗೆಯಲ್ಲಿ 500 ಜನ ಸ್ತ್ರೀಯರು ಪಾಲ್ಗೊಂಡಿದ್ದರು. ಕಾಲಾರಾಂ ದೇವಾಲಯ ಪ್ರವೇಶ ಸಂದರ್ಭದಲ್ಲಿ ಕೂಡ ಮಹಿಳೆಯರಿದ್ದರು 1927ರಲ್ಲಿ 3000 ಹಿಂದುಳಿದ ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಾ ನಿಮ್ಮ ಬಟ್ಟೆ ತೇಪೆಯಿಂದ ಕೂಡಿದರೆ ಏನಾಯಿತು? ಸ್ವಚ್ಛವಾಗಿರಿ ನಿಮ್ಮನ್ನು ನೀವೇ ಮುಟ್ಟಿಸಿಕೊಳ್ಳದವರೆಂದು ಭಾವಿಸಬೇಡಿ ನಿಮ್ಮ ಮಕ್ಕಳನ್ನು ಅದರಲ್ಲೂ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಿ ಮಕ್ಕಳ ಮನಸ್ಸಿನ ಕೀಳರಿಮೆ ತೆಗೆದುಹಾಕಿ ಅಂತ ಬಾಬಾಸಾಹೇಬರು ಹೇಳಿದ್ದರು. ಬಾಬಾ ಸಾಹೇಬರು ಕೊನೆಗೊಂದು ಮಾತು ಹೇಳುತ್ತಾರೆ ಕೆಲವು ಬ್ರಾಹ್ಮಣರು ಮತ್ತು ಕೆಲವು ಬ್ರಾಹ್ಮಣೇತರರು ತಮ್ಮ ಬೇಳೆಯನ್ನು ಭೇಯಿಸಿಕೊಳ್ಳಲು ಹಿಂದುಳಿದವರನ್ನು ನಿಮ್ನ ವರ್ಗಗಳವರನ್ನು ಮತ್ತು ಅಸ್ಪೃಶ್ಯರನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಅಸ್ಪೃಶ್ಯರು ಯಾವುದೇ ವರ್ಗದ 

ಕೈದಾಳಗಳಾಗಕೂಡದು ಮುಸ್ಲಿಮರ ಬಗ್ಗೆ ಹೊಂದಿರುವ ಭಯ ಮತ್ತು ಆತಂಕಗಳಿಂದಾಗಿ ಸವರ್ಣೀಯ ಹಿಂದುಗಳು ನಮ್ಮನ್ನು ಪ್ರೀತಿಸುವ ನಾಟಕವಾಡಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ , ಅಸ್ಪೃಶ್ಯರನ್ನು ತಮ್ಮ ಸರಿ ಸಮಾನರೆಂದು ಪರಿಗಣಿಸದ ಯಾರನ್ನೂ ನಂಬಬೇಡಿ ಎಂದು ಹೇಳಿದರು. ಹಿಂದೂ ಸವರ್ಣೀಯರ ಮೆದು ಮಾತುಗಳಿಗೆ ಮಾರುಹೋಗದೆ ನಿಮ್ಮ ವರ್ಗಗಳು ತಮ್ಮ ಹಕ್ಕುಗಳನ್ನು ನಿರ್ಭೀತಿಯಿಂದ ಚಲಾಯಿಸಲು ಮುಂದಾಗಬೇಕಾಗಿದೆ ಎನ್ನುವುದು ಬಾಬಾ ಸಾಹೇಬ್ ಅಂಬೇಡ್ಕರ್ ರು ಕರೆಕೊಟ್ಟರು.

ಲೇಖಕರು : ಬಸವರಾಜ ಜಾಲವಾದಿ, ವಿಜಯಪುರ

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.



20-03-2025 EE DIVASA KANNADA DAILY NEWS PAPER

ನೀರಿನ ಸಮಸ್ಯೆಯನ್ನು ಪರಿಹರಿಸಲು ಒತ್ತಾಯ


 

ವಿಜಯಪುರ: ನೀರು ಸಮಸ್ಯೆಯನ್ನು ಪರಿಹರಿಸಬೇಕೆಂದು ಒತ್ತಾಯಿಸಿ ಕಾನ್ಫೆರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (CREDAI), ವಿಜಯಪುರ ವತಿಯಿಂದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ವಿಜಯಪುರ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕ್ರೇಡೈ ಜಿಲ್ಲಾಧ್ಯಕ್ಷ ಮಹಾವೀರ ಪಾರೇಕ ಮಾತನಾಡಿ, ನಮ್ಮದು ರಿಯಲ್ ಎಸ್ಟೇಟ್ ಉದ್ಯಮದ ಭವಿಷ್ಯವನ್ನು ರೂಪಿಸಲು ಮೀಸಲಾಗಿರುವ ವೃತ್ತಿಪರರ ಕ್ರಿಯಾತ್ಮಕ ಜಾಲವಾಗಿದೆ. ವಿಜಯಪುರ ಜಿಲ್ಲಾ ಎಲ್ಲಾ ಲೇಔಟನಲ್ಲಿ ನೀರಿನ ವ್ಯವಸ್ಥೆ ಸರಿಯಾಗಿ ಮಾಡಿರುವುದಿಲ್ಲ. ಗುಂಟಾ ಪ್ಲಾಟಗಳಲ್ಲಿ ನೀರಿನ ಸೌಲಭ್ಯ ಒದಗಿಸಿದರೂ, ನಮ್ಮ ಎನ್.ಎ. ಪ್ಲಾಟ್ ಡೆವಲಪ್ಮೆಂಟ್ ವತಿಯಿಂದ ಸರ್ಕಾರಿ ಖರ್ಚು ವೆಚ್ಚಗಳನ್ನು ವೆಚ್ಚ ಭರಿಸಿದ್ದರೂ ಸಹ ನಮಗೆ ಸರಿಯಾಗಿ ನೀರು ನೀಡದಿರುವುದು ಸಮಸ್ಯೆಯಾಗಿದೆ. ಕೂಡಲೇ ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನಮಗೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.

 ನಮ್ಮ ಸಂಸ್ಥೆಯು ಸಾರ್ವಜನಿಕರ ಕುಂದು ಕೊರತೆಗಳನ್ನು ಪರಿಹರಿಸಿ ಅವರ ಬೆಳವಣಿಗೆಗೆ ಮತ್ತು ಅವರ ಏಳ್ಗೆಯನ್ನು ಹೊಂದಲು ಕಾರ್ಯಕೈಗೊಳ್ಳಲಾಗುತ್ತಿದೆ. ನಮ್ಮ ಶ್ರೇಣಿಯಲ್ಲಿ ಸಹಯೋಗ, ನಾವೀನ್ಯತೆ ಮತ್ತು ಶ್ರೇಷ್ಠತೆಯನ್ನು ಬೆಳೆಸುವುದು ನಮ್ಮ ಧ್ಯೇಯವಾಗಿದೆ. ಆದ ಕಾರಣ ನೀರಿನ ಸಮಸ್ಯೆಯನ್ನು ತಕ್ಷಣ ಪೂರೈಸಬೇಕೆಂದು ಹೇಳಿದರು.

ಈ ಸಂದರ್ಭ ಕಾರ್ಯದರ್ಶಿ ಮುಖೇಶ ಮೆಹ್ತಾ, ವಿಮಲ ಶಹಾ, ಖಜಾಂಚಿ ವಿನಯ ರುಣವಾಲ್, ಶರದ್ ರೋಡಗಿ, ಅನುಪಮ ರುಣವಾಲ, ರಾಜೇಂದ್ರ ರುಣವಾಲ, ಸಲೀಂ ಪಠಾಣ, ಎಮ್.ಎಮ್. ಶಾರಪ್ಯಾದೆ, ಅಮೃತ ಪೋರವಾಲ, ಮೆಹಬೂಬ ಅಥಣಿ, ಮನಿಷ್ ಪಾರೇಕ, ದಿನೇಶ ತೋಸನಿವಾಲ, ಅನೀಲ ಅವಳೆ, ಸಚೀನ ಬೊಂಬಳೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.