Tuesday, February 25, 2025
ಕನಿಷ್ಟ ವೇತನ ಮರು ಪರಿಶೀಲಿಸಲು ಒತ್ತಾಯಿಸಿ ಪ್ರತಿಭಟನೆ
ಬೆಂಗಳೂರು : ಗುತ್ತಿಗೆ ಶುಶೂಷಾಧಿಕಾರಿಗಳ ಕನಿಷ್ಟ ವೇತನವನ್ನು "ಮರು ಪರಿಶೀಲಿಸಿ ಪರೀಷ್ಕರಣೆ ಮಾಡುವಂತೆ ಒತ್ತಾಯಿಸಿ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರಿಗೆ ಬೆಂಗಳೂರಿನ ಪ್ರೀಡಂಪಾರ್ಕನಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರೂಷಾಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಕಾರ್ಮಿಕ ಸಚಿವರಿಗೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೆವೆಗಳ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶುಶ್ರೂಷಕ ಸತೀಶ ಸವನಳ್ಳಿ ಮಾತನಾಡಿ, ದಿನಾಂಕ: 13-01-2023 ರಂದು ತಮ್ಮ ಇಲಾಖೆಯಿಂದ ಎಲ್ಲಾ ನೌಕರರಿಗೂ ಕನಿಷ್ಠ ವೇತನ ಕಾಯ್ದೆ ಜಾರಿಯಾಗಿರುತ್ತದೆ. ಆದರೆ ಇದರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗುತ್ತಿಗೆ ಶುಶ್ರೂಷಾಧಿಕಾರಿಗಳಿಗೆ ಅನ್ಯಾಯವಾಗಿದೆೆ. ಶೂಶ್ರೂಷಾಧಿಕಾರಿಗಳ ಹುದ್ದೆಗೆ ಕನಿಷ್ಠ ವೇತನ 33,450=00 ರೂಗಳಾಗಿದ್ದು ಇದನ್ನು ಈಗಾಗಲೇ ವೈದ್ಯಕೀಯ ಶಿಕ್ಷಣ ಇಲಾಖೆ, ಇ.ಎಸ್.ಐ. ಆಸ್ಪತ್ರೆ ಆರೋಗ್ಯ ಕವಚ 108 ಅಂಬುಲೇನ್ಸ್ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶುಶೂಷಾಧಿಕಾರಿಗಳಿಗೆ ಇತರೆ ಇಲಾಖೆಯ ಗುತ್ತಿಗೆ ಶುಕ್ರೂಷಾಧಿಕಾರಿಗಳ ನೇಮಕಾತಿಯಲ್ಲೂ ಕನಿಷ್ಠ ವೇತನ 37000 ರೂ. ನಿಗಧಿಪಡಿಸಲಾಗಿದೆ. ಅಷ್ಟೇ ಅಲ್ಲದೇ ಆರೋಗ್ಯ ಇಲಾಖೆಯಲ್ಲಿ ಬರುವ ಆಯುಷ್ ವೈದ್ಯಾಧಿಕಾರಿಗಳಿಗೂ ಕೂಡ ಕನಿಷ್ಠ ವೇತನವನ್ನು 46,894.76 ರೂ.ಗಳನ್ನು ನಿಗದಿಪಡಿಸಿ ಆದೇಶಿಸಲಾಗಿದೆ ಎಂದರು. ಕೂಡಲೇ ಪರಿಸ್ಕರಣೆ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆರ್. ರಜಿನಿ, ವಿನೋದ ಹೆಚ್.ಆರ್, ರಘುನಾಥ್ ಎಸ್. ಜೆ, ಅಶ್ವಿನಿ ಟಿ., ಶೈಲಾ ಹುಲಕುಂದ, ಚಿದಾನಂದ ಸುತಾ, ನೀಲಾಬಾಯಿ ಯಾದಗಿ, ಅನೀತಾಕುಮಾರಿ, ವಿನೋದಕುಮಾರ, ಉಮಾದೇವಿ ಆರ್., ಪುಷ್ಪ ಹೆಚ್, ಸುನಿತ ಎಮ್, ಶಾಂತ , ವಿನಾಐಕ್ ಪಿ.ಓ, ಕವಿತಾ ಕೆ., ತಹಸೀನ್ ಎಂ., ಸುಮಯ, ವಾಣಿ, ದಿಲೀಪ್ ಕುಮಾರ್ ಎಂ.ಆರ್., ಹೇಮಾ.ಡಿ, ವಿಜಯಕಲಾ ಕೆ.ಎ, ಜಗದೀಶ ಆರ್., ಕಲ್ಪನಾ ಎನ್., ಕಲಾ ಡಿ.ಕೆ. ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು
ಕರವೇ ಕಾರ್ಯಕರ್ತರ ಬಂಧನ
ಬೆಳಗಾವಿ : ಬಸ್ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣ ಹಾಗೂ ಪೋಕ್ಸೋ ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿವಿಧ ಸಂಘಟನೆಗಳಿಂದ ನಗರದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಚನ್ನಮ್ಮ ವೃತ್ತದಲ್ಲಿ ಕರವೇ ನಾರಾಯಣಗೌಡರ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಜಿಲ್ಲಾಧಿಕಾರಿ ಕಚೇರಿಯತ್ತ ಮೆರವಣಿಗೆ ಸಾಗಿದ್ದ ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ, ಎಂಇಎಸ್, ಶಿವಸೇನೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ಮುಖಂಡರನ್ನು ಪೊಲೀಸರು ವಾಹನದಲ್ಲಿ ತುಂಬಿ ಕರೆದೊಯ್ದಿದ್ದಾರೆ.