Thursday, November 16, 2023
ನ.18ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
ವಿಜಯಪುರ : 110 ಕೆವಿ ದೇವರಹಿಪ್ಪರಗಿ-ಸಿಂದಗಿ ವಿದ್ಯುತ್ ಪ್ರಸರಣ ಜೋಡಿ ಮಾರ್ಗದಲ್ಲಿ ವಾಹಕಗಳ ಮತ್ತು ಗೋಪುರಗಳ ಬದಲಾವಣೆ ಕಾಮಗಾರಿ ಕೈಗೊಂಡಿರುವುದರಿಂದ ಈ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ 33 ಕೆವಿ ಗೋಲಗೇರಿ ಹಾಗೂ 33 ಕೆವಿ ಕಲಕೇರಿ ಮತ್ತು 11 ಕೆವಿ ಬ್ಯಾಕೋಡ ಹಾಗೂ 11 ಕೆವಿ ಬಂದಾಳ ಐಪಿ ಮಾರ್ಗಗಳಲ್ಲಿ ನವೆಂಬರ್ 18ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಇಂಡಿ ಹೆಸ್ಕಾಂನ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಅತೀಸಾರ ಬೇಧಿಯಿಂದಾಗುವ ಸಾವಿನ ಪ್ರಮಾಣ ಶೂನ್ಯಕ್ಕೆ : ಡಾ.ಬಸವರಾಜ ಹುಬ್ಬಳ್ಳಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ತೀವ್ರತರ ಅತೀಸಾರ ನಿಯಂತ್ರಣ ಪಾಕ್ಷಿಕ, ರಾಷ್ಟ್ರೀಯ ನವಜಾತ ಶಿಶು ಸಪ್ತಾಹ ಹಾಗೂ ನ್ಯುಮೋನಿಯಾವನ್ನು ಯಶಸ್ವಿಯಾಗಿ ಕೊನೆಗೊಳಿಸಲು ಸಾಮಾಜಿಕ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನ್ಯುಮೋನಿಯಾವನ್ನು ಯಶಸ್ವಿಯಾಗಿ ಕೊನೆಗೊಳಿಸಲು ಸಾಮಾಜಿಕ ಜಾಗೃತಿ ಮತ್ತು ಕ್ರಿಯೆ ಕಾರ್ಯಕ್ರಮದ ಬಗ್ಗೆ ಆಶಾ ಮತ್ತು ಪಿ.ಹೆಚ್.ಸಿ.ಓ ಅವರು ಮನೆ ಮನೆಗೆ ತೆರಳಿ ನ್ಯೂಮೊನಿಯಾ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಮಕ್ಕಳಲ್ಲಿ ಶ್ವಾಸಕೋಶದ ಸೋಂಕು, ಕಫ ಗಟ್ಟುವಿಕೆಯ ಲಕ್ಷಣಗಳು ಕಂಡು ಬಂದರೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಉಚಿತ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕರು ಮಾತನಾಡಿ, ನವಜಾತ ಶಿಶು ಕಾರ್ಯಕ್ರಮ ಬಹು ಮುಖ್ಯವಾದದ್ದು, ಶಿಶು ಮರಣ ದರ ಕಡಿಮೆ ಮಾಡಲು ಇದೊಂದು ಪ್ರಮುಖ ಅಸ್ತ್ರವಾಗಿದೆ. ಬಾಲ್ಯದಿಂದ 7 ದಿನದೊಳಗಾಗಿ ನವಜಾತ ಶಿಶುಗಳಿಗೆ ತೊಂದರೆಯಾದರೆ ತಕ್ಷಣ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಕೆ.ಡಿ.ಗುಂಡಬಾವಡಿ ಅವರು ಮಾತನಾಡಿ, ಈ ಕಾರ್ಯಕ್ರಮ ಸಮರ್ಪಕ ಅನುಷ್ಠಾನಕ್ಕೆ ಇಲಾಖೆಯ ಸಮನ್ವಯತೆ ಅಗತ್ಯವಾಗಿದ್ದು, ತೀವ್ರತರ ಅತೀಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ರೂಪಿಸಿ ಅನುಷ್ಟಾನಕ್ಕೆ ತರಲಾಗುತ್ತಿದ್ದು, ಅತೀಸಾರ ಭೇದಿಯಿಂದ ಅಪೌಷ್ಟಿಕತೆ, ನಿರ್ಜಲೀಕರಣ ಮತ್ತು ಧೀರ್ಘಾವಧಿ ಕಾಯಿಲೆಗಳಿಗೆ ಶಿಶುಗಳು ತುತ್ತಾಗುತ್ತಾರೆ. ಅತೀಸಾರ ಬೇಧಿಗೆ ಪ್ರಮುಖವಾಗಿ ಅನೈರ್ಮಲ್ಯ, ಕಲುಷಿತ ನೀರು, ಸ್ವಚ್ಛತೆಯ ಕೊರತೆ, ಅನಕ್ಷರತೆ ಕಾರಣಗಳಾಗಿದ್ದು ಈ ಬಗ್ಗೆ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡಿ ಅರಿವು ಮೂಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸ್ಥಾನಿಕ ವೈದ್ಯಾಧಿಕಾರಿ ಡಾ. ಇಕಲು ರಾಠೋಡ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಆರ್.ಎಸ್. ಪಾಟೀಲ, ತಾಲೂಕಾ ಆರೋಗ್ಯಾಧಿಕಾರಿ ಡಾ. ಪರುಶುರಾಮ ಹಿಟ್ನಳಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಆರ್ ಬಾಗವಾನ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಮತ್ತು ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಮಹಾದೇವ ನಿಲಂಗಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು
ಪಂಢರಾಪುರ ಜಾತ್ರೆಗೆ ವಿಶೇಷ ಸಾರಿಗೆ ವ್ಯವಸ್ಥೆ
ಒಂದೇ ಗುಂಪಿನಿಂದ ಪ್ರಾಯಾಣಿಸುವ ಕನಿಷ್ಠ 55 ಜನ ಪ್ರಯಾಣಿಕರು ಲಭ್ಯವಾದಲ್ಲಿ ಅವರ ಸ್ವಸ್ಥಳದಿಂದಲೇ ನೇರವಾಗಿ ಪಂಢರಪುರಕ್ಕೆ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರಯಾಣಿಕರು ಸಾರಿಗೆ ಸೌಲಭ್ಯಕ್ಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಬಸ್ ನಿಲ್ದಾಣ ವಿಜಯಪುರ ಸಹಾಯಕ ಸಂಚಾರ ವ್ಯವಸ್ಥಾಪಕರ ಮೊಬೈಲ್ ಸಂಖ್ಯೆ: 7760992258, ಘಟಕ ವ್ಯವಸ್ಥಾಪಕರು ವಿಜಯಪುರ-1: ಮೊ: 7760992263, ವಿಜಯಪುರ-2 ಮೊ: 7760992264, ವಿಜಯಪುರ-3 ಮೊ: 7760914008, ಇಂಡಿ ಮೊ: 7760992265, ಸಿಂದಗಿ ಮೊ: 7760992266, ಮುದ್ದೇಬಿಹಾಳ ಮೊ: 7760992267, ತಾಳಿಕೋಟ ಮೊ: 7760992268, ಬಸವನಬಾಗೇವಾಡಿ ಮೊ: 7760992269, ಕೇಂದ್ರ ಬಸ್ ನಿಲ್ದಾಣ ವಿಜಯಪುರ ದೂರವಾಣಿ ಸಂಖ್ಯೆ 08352-251344 ಗೆ ಸಂಪರ್ಕಿಸಬಹುದಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು
ಪದವಿ ಪ್ರಶಸ್ತಿಗಳಿಗಿಂತ ಸಾಧನೆಯೇ ಸರ್ವಶ್ರೇಷ್ಠ: ನ್ಯಾಯವಾದಿ ಶ್ರೀಧರ ಕುಲಕರ್ಣಿ
ನಗರದ ಮನಗೂಳಿ ರಸ್ತೆಯ ಬಾಲಕಿಯರ ಬಾಲಮಂದಿರದಲ್ಲಿ ಏರ್ಪಡಿಸಿದ್ದ ದೀಪಾವಳಿ ಸಂಭ್ರಮ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ನ್ಯಾಯವಾದಿ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಶ್ರೀಧರ ಕುಲಕರ್ಣಿಯವರಿಗೆ ಏರ್ಪಡಿಸಿದ ಸನ್ಮಾನ್ಯ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಫಲಾಪೇಕ್ಷೆ ಇಲ್ಲದ ಸೇವೆ ಮಾಡಿದರೆ ಪದವಿ ಪ್ರಶಸ್ತಿ ತಾನಾಗಿಯೇ ಲಭಿಸುತ್ತವೆ. ಅವುಗಳ ಹಿಂದೆ ನಾವು ಹೋಗದೆ ಸದ್ದಿಲ್ಲದೆ ಸಮರ್ಪಣಾಭಾವದಿಂದ ಸೇವೆ ಮಾಡಬೇಕು. ಅದು ಭಗವಂತನಿಗೂ ಇಷ್ಟವಾಗುವದಲ್ಲದೇ ಆತ್ಮತೃಪ್ತಿಯನ್ನು ನೀಡುತ್ತದೆ. ಮಕ್ಕಳು ತಮ್ಮ ಪ್ರತಿಭೆ ಸ್ವ ಸಾಮಥ್ರ್ಯವನ್ನು ಗುರುತಿಸಿಕೊಂಡು ಆಯಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬೇಕು ಹಾಗೂ ಕೀರ್ತಿವಂತರಾಗಬೇಕೆಂದು ಹಾರೈಸಿ. ತಮಗೆ ದೊರೆತ ಪ್ರಶಸ್ತಿ ಮಕ್ಕಳಿಗೆ ಸಮರ್ಪಿತ ಎಂದರು.
ಉದ್ಘಾಟಕರಾಗಿ ಆಗಮಿಸಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಹಾಗೂ ನ್ಯಾಯವಾದಿ ದಾನೇಶ ಅವಟಿ ಸಸಿಗೆ ನಿರೇರೆದು ಕಾರ್ಯಕ್ರಮ ಉದ್ಘಾಟಿಸಿ ಮಾನವನ ಅಂತರಂಗದಲ್ಲಿ ಹುದುಗಿದ ಪ್ರತಿಭೆಯನ್ನು ಹೊರಗೆಡಹುದೇ ಶಿಕ್ಷಣ. ಅಂತಹ ಒಳ್ಳೆಯ ಶಿಕ್ಷಣ ಸಂಸ್ಕಾರ ಹೊಂದಿ ಜೀವನದಲ್ಲಿ ಮಕ್ಕಳು ಮುಂದೆ ಬರಬೇಕೆಂದು ಕರೆ ನೀಡಿದರು.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಮತ್ತು ನ್ಯಾಯವಾದಿಗಳಾದ ಸೂರ್ಯಕಾಂತ ಬಿರಾದಾರ, ಹಾಗೂ ಯಲ್ಲಪ್ಪ ಈರಕಲ್ ಮಕ್ಕಳ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು. ಹಾಗೂ ದೀಪಾವಳಿ ಸಂಭ್ರಮ ಪ್ರತಿಯೊಬ್ಬರಿಗೂ ಸುಖ ಶಾಂತಿ ನೆಮ್ಮದಿ ತರಲಿ ಎಂದು ಹಾರೈಸಿದರು.
ರೋಹಿಣಿ ದೇಸಾಯಿ, ಜಯಶ್ರಿ ಗುಗ್ಗರಿ, ರೇಣುಕಾ ಕಾಂಬಳೆ, ಲತಾ ಹಿರೇಮಠ, ಈರಮ್ಮ ಶ್ರೀಕಂಡೆ, ವಿದ್ಯಾ ನಾಗೋಡ, ಗೀತಾ ಮಾದರ, ರಾಧಾ ಜಗದಾಳೆ, ಭುವನೇಶ್ವರಿ ಗುಗ್ಗರಿ, ಶೋಭಾ ಸದಲಗಿ, ರೇಣುಕಾ ಪಾಟೀಲ ಉಪಸ್ಥಿತರಿದ್ದರು. ಮಕ್ಕಳಿಂದ ವಿವಿಧ ಹಾಡು ನೃತ್ಯ, ಮನರಂಜನಾ ಕಾರ್ಯಕ್ರಮ ಜರುಗಿದವು.
ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿ ಶ್ರೀಮತಿ ಸುಮಂಗಲಾ ಕರಿಗಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾದ್ಯಾಯಿನಿ ಸರ್ವ ಮಂಗಳ ಹಿರೇಮಠ ನಿರೂಪಿಸಿದರು. ಗೃಹಮಾತೆ ರಂಜಿತಾ ಬೋಳಬಂಡಿ ವಂದಿಸಿದರು.
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು