ನಗರದ ಮನಗೂಳಿ ರಸ್ತೆಯ ಬಾಲಕಿಯರ ಬಾಲಮಂದಿರದಲ್ಲಿ ಏರ್ಪಡಿಸಿದ್ದ ದೀಪಾವಳಿ ಸಂಭ್ರಮ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ನ್ಯಾಯವಾದಿ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಶ್ರೀಧರ ಕುಲಕರ್ಣಿಯವರಿಗೆ ಏರ್ಪಡಿಸಿದ ಸನ್ಮಾನ್ಯ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಫಲಾಪೇಕ್ಷೆ ಇಲ್ಲದ ಸೇವೆ ಮಾಡಿದರೆ ಪದವಿ ಪ್ರಶಸ್ತಿ ತಾನಾಗಿಯೇ ಲಭಿಸುತ್ತವೆ. ಅವುಗಳ ಹಿಂದೆ ನಾವು ಹೋಗದೆ ಸದ್ದಿಲ್ಲದೆ ಸಮರ್ಪಣಾಭಾವದಿಂದ ಸೇವೆ ಮಾಡಬೇಕು. ಅದು ಭಗವಂತನಿಗೂ ಇಷ್ಟವಾಗುವದಲ್ಲದೇ ಆತ್ಮತೃಪ್ತಿಯನ್ನು ನೀಡುತ್ತದೆ. ಮಕ್ಕಳು ತಮ್ಮ ಪ್ರತಿಭೆ ಸ್ವ ಸಾಮಥ್ರ್ಯವನ್ನು ಗುರುತಿಸಿಕೊಂಡು ಆಯಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬೇಕು ಹಾಗೂ ಕೀರ್ತಿವಂತರಾಗಬೇಕೆಂದು ಹಾರೈಸಿ. ತಮಗೆ ದೊರೆತ ಪ್ರಶಸ್ತಿ ಮಕ್ಕಳಿಗೆ ಸಮರ್ಪಿತ ಎಂದರು.
ಉದ್ಘಾಟಕರಾಗಿ ಆಗಮಿಸಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಹಾಗೂ ನ್ಯಾಯವಾದಿ ದಾನೇಶ ಅವಟಿ ಸಸಿಗೆ ನಿರೇರೆದು ಕಾರ್ಯಕ್ರಮ ಉದ್ಘಾಟಿಸಿ ಮಾನವನ ಅಂತರಂಗದಲ್ಲಿ ಹುದುಗಿದ ಪ್ರತಿಭೆಯನ್ನು ಹೊರಗೆಡಹುದೇ ಶಿಕ್ಷಣ. ಅಂತಹ ಒಳ್ಳೆಯ ಶಿಕ್ಷಣ ಸಂಸ್ಕಾರ ಹೊಂದಿ ಜೀವನದಲ್ಲಿ ಮಕ್ಕಳು ಮುಂದೆ ಬರಬೇಕೆಂದು ಕರೆ ನೀಡಿದರು.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಮತ್ತು ನ್ಯಾಯವಾದಿಗಳಾದ ಸೂರ್ಯಕಾಂತ ಬಿರಾದಾರ, ಹಾಗೂ ಯಲ್ಲಪ್ಪ ಈರಕಲ್ ಮಕ್ಕಳ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು. ಹಾಗೂ ದೀಪಾವಳಿ ಸಂಭ್ರಮ ಪ್ರತಿಯೊಬ್ಬರಿಗೂ ಸುಖ ಶಾಂತಿ ನೆಮ್ಮದಿ ತರಲಿ ಎಂದು ಹಾರೈಸಿದರು.
ರೋಹಿಣಿ ದೇಸಾಯಿ, ಜಯಶ್ರಿ ಗುಗ್ಗರಿ, ರೇಣುಕಾ ಕಾಂಬಳೆ, ಲತಾ ಹಿರೇಮಠ, ಈರಮ್ಮ ಶ್ರೀಕಂಡೆ, ವಿದ್ಯಾ ನಾಗೋಡ, ಗೀತಾ ಮಾದರ, ರಾಧಾ ಜಗದಾಳೆ, ಭುವನೇಶ್ವರಿ ಗುಗ್ಗರಿ, ಶೋಭಾ ಸದಲಗಿ, ರೇಣುಕಾ ಪಾಟೀಲ ಉಪಸ್ಥಿತರಿದ್ದರು. ಮಕ್ಕಳಿಂದ ವಿವಿಧ ಹಾಡು ನೃತ್ಯ, ಮನರಂಜನಾ ಕಾರ್ಯಕ್ರಮ ಜರುಗಿದವು.
ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿ ಶ್ರೀಮತಿ ಸುಮಂಗಲಾ ಕರಿಗಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾದ್ಯಾಯಿನಿ ಸರ್ವ ಮಂಗಳ ಹಿರೇಮಠ ನಿರೂಪಿಸಿದರು. ಗೃಹಮಾತೆ ರಂಜಿತಾ ಬೋಳಬಂಡಿ ವಂದಿಸಿದರು.
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು
No comments:
Post a Comment