Monday, August 25, 2025

26-08-2025 EE DIVASA KANNADA DAILY NEWS PAPER

ಕೈ ಎತ್ತದೆ.. ಕೈಪಿಡಿ ಹೊರ ತಂದ ಬಸವರಾಜ ಜಾಲವಾದಿ". ಪ್ರಾಚಾರ್ಯ ಕೆ. ಜಿ. ಲಮಾಣಿ


 ಕೂಡಗಿ: ವೆಬ್ ಕ್ಯಾಮೆರಾದ ಕೆಳಗೆ ಕೂತು ಆನಂದದಿಂದ ಪರೀಕ್ಷೆ ಬರೆಯಬೇಕೆ ವಿನಹ ಭಯದಿಂದಲ್ಲ. ಹಾಗಾದರೆ ಪ್ರತಿ ಘಟಕದ ಅಂಶಗಳನ್ನು ಸಹಿತ ನೀವು ಓದಿಕೊಳ್ಳಬೇಕಾಗುತ್ತದೆ. ಅದಕ್ಕೆ ಇಂತಹ ಕೈಪಿಡಿಗಳು ಮಾದರಿಯಾಗಿ ನಿಲ್ಲುತ್ತವೆ. ಕೈ ಎತ್ತದೆ  ಕೈಪಿಡಿಯನ್ನು ಹೊರ ತಂದಿರುವ ಬಸವರಾಜ ಜಾಲವಾದಿಯವರು ನಿಜಕ್ಕೂ ಅಭಿನಂದನಾರ್ಹರು ಎಂದು ಪ್ರಾಚಾರ್ಯ ಕೆಜಿ ಲಮಾಣಿ ಹೇಳಿದರು.

 ಪ್ರೊ: ಬಸವರಾಜ ಜಾಲವಾದಿ ಅವರು ಬರೆದ ದ್ವಿತೀಯ ಪಿಯುಸಿಯ ಸಮಾಜ ಶಾಸ್ತ್ರದ ಕೈಪಿಡಿ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಆಳವಾಗಿ ಓದುವುದು ಕಡಿಮೆಯಾದಷ್ಟು ಸಮಸ್ಯೆಗಳನ್ನೆದುರಿಸಬೇಕಾಗುತ್ತದೆ ಇಂತಹ ಸಂದರ್ಭದಲ್ಲಿ ಈ ತರನಾದ ಕೈಪಿಡಿಗಳು ಪಾಠದ ಅಂಶಗಳಾದ ಜ್ಞಾನ, ಕೌಶಲ್ಯ, ತಿಳುವಳಿಕೆ, ಅಳವಡಿಕೆ, ಅನ್ವಯ, ಹೋಲಿಕೆ ಎಲ್ಲ ಅಂಶಗಳನ್ನು ಒಳಗೊಂಡಿರುವ ಸೃಜನಾತ್ಮಕವಾದ ಇಂಥಹ ಕೈಪಿಡಿ ಹೊರ ತಂದ ಪ್ರೊ ಬಸವರಾಜ ಜಾಲವಾದಿ ಅಭಿನಂನಾರ್ಹರು. ಉಪನ್ಯಾಸಕರಾದವರು ಪ್ರತಿಯೊಂದು  ಕಾಲೇಜಿನಲ್ಲಿ ಈ ತರದ ಕೈಪಿಡಿ ಮಾಡಿದರೆ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಎದುರಿಸುವುದು ಸುಲಭವಾಗುತ್ತದೆ. ಆ ದಿಶೆಯಲ್ಲಿ ಪ್ರೊ ಬಸವರಾಜ ಜಾಲವಾದಿಯವರು ಮಾದರಿಯಾಗಿ  ನಿಲ್ಲುತ್ತಾರೆ ಎಂದರು.

 ಸ್ವಾಗತ ಹಾಗೂ ಪ್ರಾಸ್ತಾನಿಕ ಮಾತುಗಳನ್ನಾಡಿದ ಬಸವರಾಜ ಜಾಲವಾದಿಯವರು ಓದುವುದನ್ನು ಕಲಿತರೆ ಬರೆಯಲು ಮಾತನಾಡಲು ತಾನಾಗಿಯೇ ಬರುತ್ತದೆ ವಿನಯ ವೃದ್ಧಿಯಾಗುತ್ತದೆ ನಮ್ಮ ಮನಸ್ಥಿತಿ ಸರಿಯಾದ ಮಾರ್ಗದತ್ತ ನಮ್ಮನ್ನು ಕೊಂಡೊಯ್ಯುತ್ತದೆ ಪಿಯುಸಿ ಎಂಬುದು ವಿದ್ಯಾರ್ಥಿ ಜೀವನದಲ್ಲಿ ಬಹಳ ಮಹತ್ತರ ತಿರುವುಗಳಿಗೆ ಕಾರಣವಾಗಬಲ್ಲ ಹಂತ 2015 ರಿಂದ ನಿರಂತರವಾಗಿ ನಾನು ಪ್ರತಿ ವರ್ಷ ಇಂತಹ ಕೈಪಿಡಿಗಳನ್ನು ಹೊರ ತರುತ್ತಿದ್ದೇನೆ ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡಿಸಿಕೊಳ್ಳಬೇಕೆಂದು ತಿಳಿ ಹೇಳಿದರು.

 ಕಳೆದ ಮೂರು ಘಟಕಗಳ ಮೇಲಿನ ರಸಪ್ರಶ್ನೆ ಕಾರ್ಯಕ್ರಮಗಳನ್ನು ಏರ್ಪಡಿಸಿ ಹಾಗೂ ಘಟಕ ಪರೀಕ್ಷಗಳನ್ನ ಏರ್ಪಡಿಸಿ ಅದರಲ್ಲಿ ಪ್ರಥಮ ದ್ವಿತೀಯ, ತೃತೀಯ, ಬಂದ ಎಲ್ಲ ವಿದ್ಯಾರ್ಥಿಗಳಿಗೂ ಬಹುಮಾನವನ್ನು ಕೈಪಿಡಿಯ ರೂಪದಲ್ಲಿ ನೀಡಲಾಯಿತು. ವೇದಿಕೆಯ ಮೇಲೆ 

ಪ್ರೊ:ಎಸ್. ಬಿ.ದೇಸಾಯಿ ಪ್ರೊ ವ್ಹಿ.ಜಿ ಕಿವುಡಜಾಡರ್, ಡಾ ಲಕ್ಷ್ಮಿ ಅಂಗಡಿ, ಡಾ ಅಮರೇಶಗೌಡ ಪಾಟೀಲ್, ಮೇಘನಾ ಹೆರಕಲ್ ರಾಜೇಶ್ವರಿ ಜಾಧವ್ ಹಾಜರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

25-08-2025 EE DIVASA KANNADA DAILY NEWS PAPER