Tuesday, July 18, 2023
ದೇಶದ ಬೆನ್ನೆಲುಬು.... ರೈತ
ದೇಶದ ಗಡಿ ಕಾಯಲು ಹೋದರೆ ಸೈನಿಕ
ಅನ್ನ ನೀಡುವ ರೈತನೇ ಈ ದೇಶದ ಪಾಲಕ
ಕಣ್ಣೀರಿಗಿಂತಲೂ ಕಠೋರ ಈತನ ಕಾಯಕ
ದೇಶದ ಉದ್ಧಾರಕ ನಿಂತಿಹ ನೀ ಸಾಧಕ...
ಹಸಿದು ಬಳಿದವರಿಗೆ ಅನ್ನ ದಾನ ಮಾಡುವನು
ಆದರೂ, ಸದಾ ತಾ.. ಕಷ್ಟದಲ್ಲಿ ಕೈ ತೊಳೆವನು
ಬರ, ಪ್ರವಾಹ, ಸಾಲಗಳ ಹೇಗೆ ತಡೆವನು
ಇದರಿಂದ ; ರೈತನ ಆತ್ಮಹತ್ಯೆಗೆ ಕೊನೆಯಿಲ್ಲ ಇನ್ನು...
ಹೆಣ್ಣು ಕೊಡಲು ಇರಬೇಕು ಜಮೀನು
ಆದರೆ, ರೈತನನಾಗಿರಬಾರದು ಅವನು
ಕೃಷಿ ಮಾಡುವ ಹೊಸ ಜನತೆಯ ಗತಿಯೇನು
ಯಂತ್ರೋಪಕರಣಗಳ ಬಳಕೆ ಹೆಚ್ಚಾಗಿದೆ ಇನ್ನು...
ಬದಲಾಗಬೇಕು ರೈತರ ಸ್ಥಾನಮಾನ
ರೈತರಿಗೆ ಸಿಗುವಂತಾಗಲಿ ದೊಡ್ಡ ಸನ್ಮಾನ....
ಪಾರ್ವತಿ ನಾ ಮೆಟಗೊಡ್ಲಿ
ಬಿ ಎ ಅಂತಿಮ ವರ್ಷ
ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳಿಗೆ, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.
ಕಲ್ಲಪ್ಪ ಶಿವಶರಣ
ವ್ಯವಸ್ಥಾಪಕ ಸಂಪಾದಕ
ಈ ದಿವಸ ಕನ್ನಡ ದಿನ ಪತ್ರಿಕೆ
ಮೊ: 7204279187/
9900378892
ತಾವು ಟೈಪಿಸಿ ವ್ಯಾಟ್ಸಪ್ ಅಥವಾ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.
ಸಾಂತ್ವನ ಕೇಂದ್ರ-ವೃದ್ಧಾಶ್ರಮಕ್ಕೆ ಜಿ.ಪಂ.ಸಿಇಓ ರಾಹುಲ್ ಶಿಂಧೆ ಭೇಟಿ-ಪರಿಶೀಲನೆ
ಈ ದಿವಸ ವಾರ್ತೆ
ವಿಜಯಪುರ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅನುದಾನದಲ್ಲಿ ವಿಜಯಪುರ ನಗರದಲ್ಲಿ ನಡೆಯುತ್ತಿರುವ ಸಾಂತ್ವನ ಕೇಂದ್ರ ಮತ್ತು ವೃದ್ಧಾಶ್ರಮಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಗಣೇಶ ನಗರದಲ್ಲಿ ಶ್ರೀಧರ ಸ್ವಾಮಿ ವಿದ್ಯಾವರ್ಧಕ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಿ, ಸಾಂತ್ವನ ಕೇಂದ್ರದ ಮುಖ್ಯಸ್ಥ ಕೆ.ಎನ್.ಮೇಟಿ ಅವರಿಂದ ಕೇಂದ್ರದ ಕಾರ್ಯನಿರ್ವಹಣೆ ಹಾಗೂ ಒದಗಿಸಲಾಗುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದ ಅವರು, ನೊಂದವರಿಗೆ ಸಮರ್ಪಕವಾಗಿ ಸ್ಪಂದಿಸುವುದರೊಂದಿಗೆ ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಅತ್ಯಂತ ತಾಳ್ಮೆಯಿಂದ ಅವರೊಡನೆ ಸಮಾಲೋಚನೆ ಮಾಡಬೇಕು. ಅವರ ಸಮಸ್ಯೆಗಳನ್ನು ಸರಿಯಾಗಿ ಅರ್ಥೈಸಿಕೊಂಡು ಸೂಕ್ತ ಪರಿಹಾರ ಒದಗಿಸಬೇಕು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 6 ಸಾಂತ್ವನ ಕೇಂದ್ರಗಳ ಕುರಿತು ಹಾಗೂ ಕೇಂದ್ರಗಳ ಕಾರ್ಯನಿರ್ವಹಣೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಗ್ರಾಮೀಣ ಭಾಗದಲ್ಲಿ ಹೆಚ್ಚಿಗೆ ಸಾಂತ್ವನ ಕೇಂದ್ರಗಳ ಬಗ್ಗೆ ವ್ಯಾಪರ ಪ್ರಚಾರ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಹೊರವಲಯದಲ್ಲಿರುವ ಶ್ರೀ ಸಿದ್ದೇಶ್ವರ ವಿದ್ಯಾಪೀಠ ಸಂಸ್ಥೆಯ ವತಿಯಿಂದ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅನುದಾನದಲ್ಲಿ ನಡೆಯುತ್ತಿರುವ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕೇಂದ್ರದ ಮುಖ್ಯಸ್ಥೆ ಶ್ರೀಮತಿ ಅನ್ನಪೂರ್ಣಾ ಬಿರಾದಾರ ಅವರಿಂದ ಮಾಹಿತಿ ಪಡೆದ ಅವರು, ವೃದ್ಧಾಶ್ರಮದ ಕಟ್ಟಡವು ಅತ್ಯಂತ ಸುಸಜ್ಜಿತವಾಗಿದ್ದು ಇನ್ನೂ ಸಾಕಷ್ಟು ಸ್ಥಳಾವಕಾಶವಿದೆ. ಹೀಗಾಗಿ ವೃದ್ಧಾಶ್ರಮಕ್ಕೆ ನೀಡಲಾದ 25 ಜನರ ಮಿತಿಯನ್ನು 40ಕ್ಕೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ವೃದ್ಧಾಶ್ರಮದಲ್ಲಿರುವ ವೃದ್ಧರೊಡನೆ ಸಮಾಲೋಚನೆ ನಡೆಸಿ, ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ನಂತರ ವೃದ್ಧಾಶ್ರಮದ ಪಕ್ಕದಲ್ಲಿ ಸಿದ್ಧಗೊಳ್ಳುತ್ತಿರುವ ಮಕ್ಕಳ ತೆರೆದ ತಂಗುದಾಣಕ್ಕೆ ಭೇಟಿ ನೀಡಿ ಅಲ್ಲಿ ಮಕ್ಕಳಿಗಾಗಿ ಸಿದ್ಧಪಡಿಸಲಾದ ಕೋಣೆಗಳನ್ನು ವೀಕ್ಷಣೆ ಮಾಡಿ, ಹೊಸ ಕಟ್ಟಡದಲ್ಲಿ ಮಕ್ಕಳ ತೆರೆದ ತಂಗುದಾಣ ಪ್ರಾರಂಭಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಕೆ.ಚವ್ಹಾಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ದೀಪಾಕ್ಷಿ ಜಾನಕಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರಾಜಶೇಖರ ದೈವಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳಿಗೆ, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.
ಕಲ್ಲಪ್ಪ ಶಿವಶರಣ
ವ್ಯವಸ್ಥಾಪಕ ಸಂಪಾದಕ
ಈ ದಿವಸ ಕನ್ನಡ ದಿನ ಪತ್ರಿಕೆ
ಮೊ: 7204279187/
9900378892
ತಾವು ಟೈಪಿಸಿ ವ್ಯಾಟ್ಸಪ್ ಅಥವಾ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.
ಮಳೆ ಹುಡುಗಿ
ಓಡುವ ಮೋಡಗಳೇ
ಓಡದಿರಿ ನಿಲ್ಲಿ ನಿಂತು
ಒಂದಿಷ್ಟು ಹನಿಸಿ ಹೋಗಿ
ಈ ಮಿಂಚಿನ ಹುಡುಗಿಗಾಗಿ
ನಿನ್ನ ಹನಿಗೆ
ಮುತ್ತಾಗುವ ಆಸೆ
ಕಾಮನಬಿಲ್ಲಿನ ಕಣ್ಣಿನ
ಈ ಹುಡುಗಿಗೆ
ಚೆದುರಿದ ಮೋಡಗಳೇ
ಮತ್ತೆ ಒಂದಾಗಿ
ನಿಮ್ಮ ಮಿಲನ
ಸ್ಪೂರ್ತಿ ಆಗಬಹುದು ಈ ಹುಡುಗಿಗೆ
ಹನಿಗೆ ಹಸಿಯಾಗುವಾಸೆ
ಹೃದಯಾಳದಲ್ಲಿ ಹವಳವಾಗುವಾಸೆ
ಚೆಂದುಟಿಯ ಚೆಂದುಳ್ಳಿ
ಈ ಹುಡುಗಿಗೆ
ಜಿಟಿ ಜಿಟಿ ಮಳೆ
ಪುಳಕಗೊಂಡಿದೆ ಇಳೆ
ಉನ್ಮತ್ತವಾಗಿದೆ ಮನಸು
ಈ ಮಳೆ ಹುಡುಗಿಗೆ
ಹನಿ ಹನಿಯಾಗಿ
ಹನಿಸೋ ಸೊಲ್ಲಿಗೆ
ಜೇನಿಟ್ಟಿದೆ ಎದೆಯ ಗೂಡಲ್ಲಿ
ತೊಟ್ಟಿಕ್ಕುವಾಸೆ ಈ ಹುಡುಗಿಗೆ
ಮುಂಗಾರಿನ ಆರ್ಭಟ
ಕೇಳಿಸಲೇ ಇಲ್ಲ
ಯಾಕೆಂದರೆ ನಿನ್ನ ಪ್ರೇಮದ
ಪಿಸುದನಿ ಅನುರಣಿಸಿದೆ
ಈ ಮಳೆ ಹುಡುಗಿಯ ಎದೆಯಲ್ಲಿ
ಡಾ. ಮೀನಾಕ್ಷಿ ಪಾಟೀಲ್
ಉಪನ್ಯಾಸಕರು
ಬಾಲಿಕೆಯ ಸರ್ಕಾರಿ ಪದವಿ ಪೂರ್ವ ಕಾಲೇಜು
ವಿಜಯಪುರ.
ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳಿಗೆ, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.
ಕಲ್ಲಪ್ಪ ಶಿವಶರಣ
ವ್ಯವಸ್ಥಾಪಕ ಸಂಪಾದಕ
ಈ ದಿವಸ ಕನ್ನಡ ದಿನ ಪತ್ರಿಕೆ
ಮೊ: 7204279187/
9900378892
ತಾವು ಟೈಪಿಸಿ ವ್ಯಾಟ್ಸಪ್ ಅಥವಾ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.
"ಅಕ್ಕ".. ನೀನೆಷ್ಟು ಬೆರಿಕಿ...?!
ಅವ್ವ ನಿನಗ ಹೇಳಾಕಿ..
ತಮ್ಮಂದಿರನ ನೋಡ್ಕೋ ಅಂತ
ತಾ ಕೆಲಸಕ್ಕೆ ಹೋಗಾಕಿ..
ನೀನರೆ ಎಷ್ಟೊತ್ತು ನೋಡಾಕಿ
ಒಂದು ಏಟ ಕೊಟ್ಟು ನೀ ಆಟಕ್ಕೆ ಹೋಗಾಕಿ
ನೀನರೆ ಏನ್ ಮಾಡಾಕಿ..!?
ಆವಾಗ ನೀ ಬಾಳ ಸಣ್ಣಾಕಿ..!
ಹದ ಮಾಡಿಕೊಂಡು ರೊಟ್ಟಿ ಮುಟ್ಗಿ ನೀ ತಿನ್ನಾಕಿ ನನಗೂ ಬೇಕು ಅಂತ ಜಗಳ ಮಾಡಿದ್ರೆ
ಸೊಂಡಿ ಮ್ಯಾಗ ಒಂದು ಬಿಟ್ಟಾಕಿ..
ಅವ್ವ ನಿನಗೆ ಬೈತಾಳ ಅಂತ ಹೇಳಿ
ನನ್ನ ಮ್ಯಾಗ ಹಾಕಾಕಿ,
ನೀನರೆ ಏನ್ ಮಾಡಾಕಿ..!?
ಆವಾಗ ನೀ ಬಾಳ ಸಣ್ಣಾಕಿ...!
ಅನ್ನ ಮಾಡು ಅಂದ್ರೆ ಕಿಚಡಿ ಮಾಡಾಕಿ,
ಅತ್ತಿ ಬೈತಾಳ ಅಂತ ಹೇಳಿ
ಅದಕ್ಕೆ ಮಜ್ಜಿಗಿ ಕೂಡಿಸಾಕಿ...!
ಮಾವುಗ ಕೊಟ್ರೆ ಏನರೆ ಅಂದಾನೋ
ಅಂತ ಹೇಳಿ ನೀನೇ ಖಾಲಿ ಮಾಡ್ದಾಕಿ
ನೀನರೆ ಏನ್ ಮಾಡಾಕಿ..!?
ಆವಾಗ ನೀ ಬಾಳ ಸಣ್ಣಾಕಿ...!
ನಿನ್ನ ಮಕ್ಕಳಿಗಿ ನಾ ಹೊಡದಾಗ
ನೀ ಗುರ್ ಅನ್ನಾಕಿ... ಆ ಮ್ಯಾಲ ಮಾರಿ ಕ್ಯೂಚಾಕಿ..
ನೀನರೆ ಏನ್ ಮಾಡಾಕಿ..!?
ಆವಾಗ ನೀ ಬಾಳ ಸಣ್ಣಾಕಿ...!
ನನ್ನ ಹೆಂಡ್ತಿ ನಾನು ಜಗಳ ಮಾಡಿದ್ರೆ
ನೀನು ನನಗೆ ಬಯಾಕಿ...
ಅಂತಿದ್ದಿ ನಿನ್ನ ಹೆಂಡ್ತಿ ಬಹಳ ಸಣ್ಣಾಕಿ..
ನೀನರೆ ಏನ್ ಮಾಡಾಕಿ...!?
ಆವಾಗಲು ನೀ ಬಾಳ ಸಣ್ಣಾಕಿ...!
ಇಷ್ಟೆಲ್ಲ ಇದ್ದಾಕಿ ನೀ..
ನಮ್ಮ ಮ್ಯಾಗ ಬಹಳ ಪ್ರೀತಿ ಇಟ್ಟಾಕಿ
ಎರಡನೇ ಅವ್ವ ಅಂತ "ಅಕ್ಕ" ಆಗಿ
ಹುಟ್ಟಿ ಬಂದಾಕಿ...!
✍🏼 ಕೆ. ವೆಂಕೋಬಾ,
ವಿಜಯಪುರ
ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.
ಕಲ್ಲಪ್ಪ ಶಿವಶರಣ
ವ್ಯವಸ್ಥಾಪಕ ಸಂಪಾದಕ
ಈ ದಿವಸ ಕನ್ನಡ ದಿನ ಪತ್ರಿಕೆ
ಮೊ: 7204279187/
9900378892
ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.