Tuesday, July 18, 2023

ಮಳೆ ಹುಡುಗಿ

ಓಡುವ ಮೋಡಗಳೇ

ಓಡದಿರಿ ನಿಲ್ಲಿ ನಿಂತು

ಒಂದಿಷ್ಟು ಹನಿಸಿ ಹೋಗಿ

ಈ ಮಿಂಚಿನ ಹುಡುಗಿಗಾಗಿ


ನಿನ್ನ ಹನಿಗೆ

ಮುತ್ತಾಗುವ ಆಸೆ

ಕಾಮನಬಿಲ್ಲಿನ ಕಣ್ಣಿನ 

ಈ ಹುಡುಗಿಗೆ


ಚೆದುರಿದ ಮೋಡಗಳೇ

ಮತ್ತೆ ಒಂದಾಗಿ

ನಿಮ್ಮ ಮಿಲನ

ಸ್ಪೂರ್ತಿ ಆಗಬಹುದು ಈ ಹುಡುಗಿಗೆ


ಹನಿಗೆ ಹಸಿಯಾಗುವಾಸೆ  

ಹೃದಯಾಳದಲ್ಲಿ ಹವಳವಾಗುವಾಸೆ

ಚೆಂದುಟಿಯ ಚೆಂದುಳ್ಳಿ

ಈ ಹುಡುಗಿಗೆ


ಜಿಟಿ ಜಿಟಿ ಮಳೆ

ಪುಳಕಗೊಂಡಿದೆ ಇಳೆ

ಉನ್ಮತ್ತವಾಗಿದೆ ಮನಸು

ಈ ಮಳೆ ಹುಡುಗಿಗೆ


ಹನಿ ಹನಿಯಾಗಿ

ಹನಿಸೋ ಸೊಲ್ಲಿಗೆ

ಜೇನಿಟ್ಟಿದೆ ಎದೆಯ ಗೂಡಲ್ಲಿ

ತೊಟ್ಟಿಕ್ಕುವಾಸೆ ಈ ಹುಡುಗಿಗೆ


ಮುಂಗಾರಿನ ಆರ್ಭಟ

ಕೇಳಿಸಲೇ ಇಲ್ಲ

ಯಾಕೆಂದರೆ ನಿನ್ನ ಪ್ರೇಮದ

ಪಿಸುದನಿ ಅನುರಣಿಸಿದೆ

ಈ ಮಳೆ ಹುಡುಗಿಯ ಎದೆಯಲ್ಲಿ



ಡಾ. ಮೀನಾಕ್ಷಿ ಪಾಟೀಲ್ 

ಉಪನ್ಯಾಸಕರು

ಬಾಲಿಕೆಯ ಸರ್ಕಾರಿ ಪದವಿ ಪೂರ್ವ ಕಾಲೇಜು

 ವಿಜಯಪುರ.


ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳಿಗೆ, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ಕಲ್ಲಪ್ಪ ಶಿವಶರಣ 

ವ್ಯವಸ್ಥಾಪಕ ಸಂಪಾದಕ

ಈ ದಿವಸ ಕನ್ನಡ ದಿನ ಪತ್ರಿಕೆ

 ಮೊ: 7204279187/     

          9900378892

ತಾವು ಟೈಪಿಸಿ ವ್ಯಾಟ್ಸಪ್ ಅಥವಾ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.


No comments:

Post a Comment