Tuesday, July 18, 2023

"ಅಕ್ಕ".. ನೀನೆಷ್ಟು ಬೆರಿಕಿ...?!

 ಅವ್ವ ನಿನಗ ಹೇಳಾಕಿ..

ತಮ್ಮಂದಿರನ ನೋಡ್ಕೋ ಅಂತ

ತಾ ಕೆಲಸಕ್ಕೆ ಹೋಗಾಕಿ.. 

ನೀನರೆ ಎಷ್ಟೊತ್ತು ನೋಡಾಕಿ 

ಒಂದು ಏಟ ಕೊಟ್ಟು ನೀ ಆಟಕ್ಕೆ ಹೋಗಾಕಿ 

ನೀನರೆ ಏನ್ ಮಾಡಾಕಿ..!?

ಆವಾಗ ನೀ ಬಾಳ ಸಣ್ಣಾಕಿ..!

 

ಹದ ಮಾಡಿಕೊಂಡು ರೊಟ್ಟಿ ಮುಟ್ಗಿ ನೀ ತಿನ್ನಾಕಿ ನನಗೂ ಬೇಕು ಅಂತ ಜಗಳ ಮಾಡಿದ್ರೆ 

ಸೊಂಡಿ ಮ್ಯಾಗ ಒಂದು ಬಿಟ್ಟಾಕಿ..

ಅವ್ವ ನಿನಗೆ ಬೈತಾಳ ಅಂತ ಹೇಳಿ 

ನನ್ನ ಮ್ಯಾಗ ಹಾಕಾಕಿ,

ನೀನರೆ ಏನ್ ಮಾಡಾಕಿ..!?

ಆವಾಗ ನೀ ಬಾಳ ಸಣ್ಣಾಕಿ...!


ಅನ್ನ ಮಾಡು ಅಂದ್ರೆ ಕಿಚಡಿ ಮಾಡಾಕಿ, 

ಅತ್ತಿ ಬೈತಾಳ ಅಂತ ಹೇಳಿ 

ಅದಕ್ಕೆ ಮಜ್ಜಿಗಿ ಕೂಡಿಸಾಕಿ...! 

ಮಾವುಗ ಕೊಟ್ರೆ ಏನರೆ ಅಂದಾನೋ 

ಅಂತ ಹೇಳಿ ನೀನೇ ಖಾಲಿ ಮಾಡ್ದಾಕಿ 

ನೀನರೆ ಏನ್ ಮಾಡಾಕಿ..!? 

ಆವಾಗ ನೀ ಬಾಳ ಸಣ್ಣಾಕಿ...! 


ನಿನ್ನ ಮಕ್ಕಳಿಗಿ ನಾ ಹೊಡದಾಗ 

ನೀ ಗುರ್ ಅನ್ನಾಕಿ... ಆ ಮ್ಯಾಲ ಮಾರಿ ಕ್ಯೂಚಾಕಿ..

ನೀನರೆ ಏನ್ ಮಾಡಾಕಿ..!?

ಆವಾಗ ನೀ ಬಾಳ ಸಣ್ಣಾಕಿ...!


ನನ್ನ ಹೆಂಡ್ತಿ ನಾನು ಜಗಳ ಮಾಡಿದ್ರೆ 

ನೀನು ನನಗೆ ಬಯಾಕಿ... 

ಅಂತಿದ್ದಿ ನಿನ್ನ ಹೆಂಡ್ತಿ ಬಹಳ ಸಣ್ಣಾಕಿ.. 

ನೀನರೆ ಏನ್ ಮಾಡಾಕಿ...!? 

ಆವಾಗಲು ನೀ ಬಾಳ ಸಣ್ಣಾಕಿ...! 


ಇಷ್ಟೆಲ್ಲ ಇದ್ದಾಕಿ ನೀ.. 

ನಮ್ಮ ಮ್ಯಾಗ ಬಹಳ ಪ್ರೀತಿ ಇಟ್ಟಾಕಿ 

ಎರಡನೇ ಅವ್ವ ಅಂತ "ಅಕ್ಕ" ಆಗಿ 

ಹುಟ್ಟಿ ಬಂದಾಕಿ...!

✍🏼 ಕೆ. ವೆಂಕೋಬಾ,

       ವಿಜಯಪುರ

ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ  ಲೇಖನ, ಕಥೆ, ಕವನ , ಶಾಲಾ ಕಾಲೇಜಿನ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳ ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಸಂಪರ್ಕಿಸಿರಿ.

ಕಲ್ಲಪ್ಪ ಶಿವಶರಣ

ವ್ಯವಸ್ಥಾಪಕ ಸಂಪಾದಕ

ಈ ದಿವಸ ಕನ್ನಡ ದಿನ ಪತ್ರಿಕೆ

 ಮೊ: 7204279187/     

          9900378892

ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಮಾಡಿರಿ.

No comments:

Post a Comment