Sunday, October 27, 2024

ಡಾ. ಆನಂದ ಸಂಕೇಶ್ವರಗೆ ಲಾಜಿಸ್ಟಿಕ್ ಐಕಾನ್ ಪ್ರಶಸ್ತಿ


 ಬೆಂಗಳೂರು: ಜೆಕೆ ಟೈರ್ ಕಂಪನಿ 20 ವರ್ಷಗಳ ಸಂಭ್ರಮಾಚರಣೆ ನಿಮಿತ್ತ ಇತ್ತೀಚೆಗೆ ಸಿಂಗಾಪುರದಲ್ಲಿ ಆಯೋಜಿಸಿದ್ದ ಉನ್ನತ ಮಟ್ಟದ ಸಮ್ಮೇಳನದಲ್ಲಿ ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರಿಗೆ ವರ್ಷದ ಲಾಜಿಸ್ಟಿಕ್ ಐಕಾನ್ ಪ್ರಶಸ್ತಿ ನೀಡಿ ಗೌರವಿಸಿದೆ.

ಆಧುನಿಕ ಲಾಜಿಸ್ಟಿಕ್ಸ್ ನಿರ್ವಹಣೆಯಲ್ಲಿ ಪರಿವರ್ತನೆಯ ಪಾತ್ರ ನಿರ್ವಹಿಸಿದ ಸರಕು ಸಾಗಣೆ ಉದ್ಯಮದ ಅಗ್ರ ವ್ಯಕ್ತಿಯೆಂದು ಗುರುತಿಸಿ ಡಾ. ಆನಂದ ಸಂಕೇಶ್ವರ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಸಮ್ಮೇಳನದಲ್ಲಿ ದೇಶ ಅಗ್ರ 100 ಫ್ಲೀಟ್ ಮಾಲೀಕರು, ಉದ್ಯಮದ ಪ್ರಮುಖರು, ಪಾಲುದಾರರು ಭಾಗವಹಿಸಿದ್ದರು.

ದೇಶದ ಅತಿ ದೊಡ್ಡ ಮತ್ತು ಅತ್ಯಂತ ಗೌರವಾನ್ವಿತ ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರೆಂಬ ಹೆಗ್ಗಳಿಕೆಗೆ ವಿಆರ್‌ಎಲ್ ಲಾಜಿಸ್ಟಿಕ್ಸ್ ಪಾತ್ರವಾಗಲು ಡಾ. ಆನಂದ ಸಂಕೇಶ್ವರ ಅವರ ನಾಯಕತ್ವವೇ ಕಾರಣವೆಂದು ಗುರುತಿಸಲಾಗಿದೆ. ಅವರ ಹೊಸ ವಿಧಾನ ಮತ್ತು ಸುರಕ್ಷತೆಯ ಉನ್ನತ ಗುಣಮಟ್ಟ, ದಕ್ಷತೆ ಮತ್ತು ಸುಸ್ಥಿರತೆ ಮಾನದಂಡಗಳನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. 

ಪ್ರಶಸ್ತಿ ಸ್ವೀಕರಿಸಿದ ಡಾ. ಆನಂದ ಸಂಕೇಶ್ವರ ಮಾತನಾಡಿ, ಲಾಜಿಸ್ಟಿಕ್ಸ್ನ ಯಶಸ್ಸಿಗೆ ತಮ್ಮ ತಂಡ ಹಾಗೂ ತಂದೆ ಡಾ. ವಿಜಯ ಸಂಕೇಶ್ವರರ ಮಾರ್ಗದರ್ಶನ ಕಾರಣವಾಗಿದೆ. ಜೆಕೆ ಟೈರ್ ಕಂಪನಿಯ ಪಾತ್ರ ಸೇರಿ ಅಸಂಖ್ಯಾತ ಪಾಲುದಾರರು ಮತ್ತು ಗ್ರಾಹಕರ ನಂಬಿಕೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಜೆಕೆ ಟೈರ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ರಘುಪತಿ ಸಿಂಘಾನಿಯಾ ಮಾತನಾಡಿ, ಕಳೆದ ಎರಡು ದಶಕಗಳಲ್ಲಿ ಜೆಕೆ ಟೈರ್ ಭಾರತದ ಲಾಜಿಸ್ಟಿಕ್ಸೃ ವಲಯದ ಕಾರ್ಯಾಚರಣೆಯ ದಕ್ಷತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ಬದ್ಧತೆಯೊಂದಿಗೆ ಟೈರ್ ತಂತ್ರಜ್ಞಾನ ಮತ್ತು ಫ್ಲೀಟ್ ನಿರ್ವಹಣೆಯಲ್ಲಿ ಪ್ರಗತಿಯನ್ನು ಸಾಧಿಸಿದೆ. ಇಂದು ಈ ಉದ್ಯಮವನ್ನು ಪರಿವರ್ತಿಸಲು ಸಹಾಯ ಮಾಡಿದ ವ್ಯಕ್ತಿಗಳ ಸಾಧನೆಗಳನ್ನು ಗುರುತಿಸಿ ಗೌರವಿಸುತ್ತಿದ್ದೇವೆ. ಅವರಲ್ಲಿ ಡಾ. ಆನಂದ ಸಂಕೇಶ್ವರ ಅಗ್ರಗಣ್ಯರು. ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಅವರ ಕೊಡುಗೆ ಅನನ್ಯ ಎಂದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

28-30 ರಂದು ಮಹಿಳಾ ವಿವಿ ಪ್ರವೇಶ ಕೌನ್ಸೆಲಿಂಗ್

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ, ಪಿಜಿ ಡಿಪ್ಲೋಮಾ, ವ್ಯಾಲ್ಯು ಆಡೆಡ್ ಡಿಪ್ಲೋಮಾ, ವ್ಯಾಲ್ಯು ಆಡೆಡ್ ಅಡ್ವಾನ್ಸ್ ಡಿಪ್ಲೋಮಾ ಮತ್ತು ಸರ್ಟಿಫೀಕೇಟ್ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಇದೇ ಅಕ್ಟೋಬರ್ 28ರಂದು ಬೆಳಿಗ್ಗೆ 10.30ರಿಂದ ಕೌನ್ಸೆಲಿಂಗ್ ಆರಂಭವಾಗಲಿದೆ ಎಂದು ಕುಲಸಚಿವ ಶಂಕರಗೌಡ ಸೋಮನಾಳ ತಿಳಿಸಿದ್ದಾರೆ. 

ಮಹಿಳಾ ವಿವಿಯ ವಿವಿಧ ಕೋರ್ಸ್ಗಳಿಗೆ ಈಗಾಗಲೇ ಯುಯುಸಿಎಂಎಸ್ ಮೂಲಕ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿನಿಯರು ದಿನಾಂಕ 28ರಂದು ಅಗತ್ಯ ಮೂಲ ದಾಖಲೆಗಳೊಂದಿಗೆ ಕಡ್ಡಾಯವಾಗಿ ಹಾಜರಿದ್ದು ಪ್ರವೇಶ ಪಡೆದುಕೊಳ್ಳಬಹುದಾಗಿದೆ. ದಿನಾಂಕ 29 ರಂದು ಸೂಪರ್ ನ್ಯೂಮರಿ ಕೋಟಾದ ಅಡಿಯಲ್ಲಿ ಪ್ರವೇಶ ಪಡೆದುಕೊಳ್ಳಬಹುದಾಗಿದ್ದು ದಿನಾಂಕ 30ರಂದು ಸೆಲ್ಪ್ ಸಪೋರ್ಟಿಂಗ್ ಯೋಜನೆ ಅನ್ವಯ ಪ್ರವೇಶ ಪಡೆದುಕೊಳ್ಳಬಹುದಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಶಂಕರಗೌಡ ಸೋಮನಾಳ, ಕುಲಸಚಿವರು, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರÀ- 586108. ದೂರವಾಣಿ ಸಂಖ್ಯೆ: 08352-297062, 7795122960, 7204889855 ಮತ್ತು 9901827696; website: www.kswu.ac.inಸಂಪರ್ಕಿಸಬಹುದಾಗಿದೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

28-10-2024 EE DIVASA KANNADA DAILY NEWS PAPER

27-10-2024 EE DIVASA KANNADA DAILY NEWS PAPER