ವಿಜಯಪುರ: ಹಿಂದೂಗಳಿಗೆ ಶ್ರಾವಣ ಮಾಸ ಒಂದು ಪವಿತ್ರ ಹಬ್ಬ. ಸತ್ಸಂಗದಲ್ಲಿ ಪಾಲ್ಗೊಂಡು ಪುರಾಣ ಪ್ರವಚನಗಳನ್ನು ಶ್ರವಣ ಮಾಡಿದರೆ ಆತ್ಮಾನಂದ ಪ್ರಾಪ್ತಿಯಾಗುವುದು.ಎಲ್ಲರೂ ಕ್ರಮವಾಗಿ ಶ್ರವಣ,ಜಪ,ತಪ,ಧ್ಯಾನ ಮತ್ತು ದಾನಗಳೆಂಬ ಪಂಚ ಕ್ರಿಯೆಗಳನ್ನು ಸಿದ್ಧಿಸಿಕೊಳ್ಳಬೇಕೆಂದು ಡಾ.ಸಂಗಮೇಶ ಮೇತ್ರಿಯವರು ಹೇಳಿದರು.
ಅವರು ವಿಜಯಪುರ ಕೀರ್ತಿನಗರದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರವಚನವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರವಚನಕಾರರಾದ ಪ.ಪೂ.ಶ್ರೀ ಸಂಗಮೇಶ ಸ್ವಾಮಿಗಳು ಶ್ರೀ ಸಿದ್ಧಾರೂಢರ ಆಧ್ಯಾತ್ಮಿಕ ಪ್ರವಚನವನ್ನು ಶುಭಾರಂಭ ಮಾಡಿದರು. ಸದ್ಭಕ್ತರು ಪ್ರಪಂಚದೊಡನೆ ಪರಮಾರ್ಥ ಸಾಧಿಸಲು ಗುರು ತೋರುವ ಪಥದಲ್ಲಿ ಸಾಗಬೇಕು.ಸಾಧು ಸಂತರನ್ನು ಸ್ಮರಿಸಿ ಅವರ ವಚನಾಮೃತವನ್ನು ಸವಿದು ಪುನೀತರಾಗಬೇಕೆಂದು ಹೇಳಿದರು.
ಶ್ರೀ ಶಿರಡಿ ಸಾಯಿಬಾಬ ದೇವಸ್ಥಾನ ಟ್ರಸ್ಟ ಕಮಿಟಿ, ಸಮಾನ ಮನಸ್ಕರ ಸೇವಾಸಂಸ್ಥೆ,ಜೀಜಾ ಮಾತಾ ಮಾತೃ ಸಂಸ್ಥೆ, ಹಾಗೂ ಶ್ರೀ ಸಾಯಿಗಜಾನನ ಯುವಕ ಮಂಡಳದವರ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದ ವೇದಿಕೇಯಲ್ಲಿ ಅಧ್ಯಕ್ಷರಾದ ಶ್ರೀ ಎ.ಎ.ಪಾರ್ಸಿ,ಶ್ರೀ ಪ್ರೇಮಾನಂದ ಬಿರಾದಾರ, ಶ್ರೀಮತಿ ಭುವನೇಶ್ವರಿ
ಕೋರವಾರ,ಅರ್ಜುನ ಜಾಧವ ಅತಿಥಿಗಳಾಗಿ ಭಾಗವಹಿಸಿದ್ದರು.ಬಿ. ಎಸ್. ಬಿರಾದಾರ ಸ್ವಾಗತಿಸಿದರು.ಜಂಬುನಾಥ ಕಂಚ್ಯಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕುಮಾರಿ ನಕ್ಷತ್ರಾ ಜಾಧವ,ಶ್ರೀಮತಿ ಕುಲಕರ್ಣಿ, ಎಂ.ಎನ್.ಕೆರೂರ,ಎ.ವಾಯ್. ಹಿರೇಗೌಡರ,ಎಂ.ಪಿ.ತಂಗಾ, ಸುರೇಶ,ಆಶೋಕ ಕೋರವಾರ , ಕೆ.ಎಂ.ಕಾರಜೋಳ,ಎಚ್.ಬಿ.ಗೂಗಿಹಾಳ,ಕವಿತಾ, ಸುನಂದಾ ಮುಂತಾದವರು ಉಪಸ್ತಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.



