Tuesday, August 19, 2025
ಆಗಸ್ಟ್ 22 ಮೂರು ದಿನಗಳವರೆಗೆ ಲಕ್ಷ್ಮೀ ಹಾಗೂ ಮಾಳಿಂಗೇಶ್ವರ ಜಾತ್ರಾ ಮಹೋತ್ಸವ
ವಿಜಯಪುರ : ಪ್ರತಿವರ್ಷದಂತೆ ಈ ಬಾರಿಯೂ ಮಲಕನದೇವರಹಟ್ಟಿ ಗ್ರಾಮದೇವತೆಯಾದ ಲಕ್ಷ್ಮೀ ಹಾಗೂ ಮಾಳಿಂಗೇಶ್ವರ ಜಾತ್ರಾ ಮಹೋತ್ಸವ ಮೂರು ದಿನಗಳವರೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಲಕ್ಷ್ಮೀ ಮಾಳಿಂಗೇಶ್ವರ ಕಮಿಟಿಯವರು ತಿಳಿಸಿದರು.
ತಿಕೋಟಾ ತಾಲೂಕಿನ ಮಲಕನದೇವರಹಟ್ಟಿ ಗ್ರಾಮದೇವತೆಯಾದ ಲಕ್ಷ್ಮೀ ಹಾಗೂ ಮಾಳಿಂಗೇಶ್ವರ ಜಾತ್ರಾ ಮಹೋತ್ಸವವು ಮೂರ ದಿನಗಳ ಕಾಲ ಅದ್ದೂರಿಯಾಗಿ ನಡಿಯಲಿದೆ. ಇದೆ ಆಗಸ್ಟ್ 22 ಶುಕ್ರವಾರ ಹೊಳೆಗಂಗೆ ಪೂಜೆ ಮುಗಿಸಿಕೊಂಡು ರಾತ್ರಿ ವಿಜೃಂಭಣೆಯಿಂದ ದೇವರ ಭೇಟಿ ಜರುಗಲಿದೆ. ಮರುದಿನ ಶನಿವಾರ ಆಗಸ್ಟ್ 23 ಬೆಳಗ್ಗೆ ಎಲ್ಲ ದೇವರ ಗಂಗೆ ಪೂಜೆ ಮಾಡಿಕೊಂಡು ವಾಲಗ ಸಂಘದ ಜೊತೆಗೆ ವಿಜೃಂಭಣೆಯಿಂದ ಊರಲ್ಲಿ ಸಬೀಣಿ ಜರುಗುವುದು, ರಾತ್ರಿ ಡೊಳ್ಳಿನ ಗಾಯನದ ಜೊತೆ ಜಾಗರಣೆ ನಡೆಸಲಾಗುವದು. ಅ. 24 ರವಿವಾರ ಭಾರ ಎತ್ತುವ ಸ್ಪರ್ಧೆಯ ಕಾರ್ಯಕ್ರಮ ನಡಿಯಲಿದೆ.
ಈ ಜಾತ್ರೆಯಲ್ಲಿ ಮಹೋತ್ಸವದಲ್ಲಿ ಲಕ್ಷ್ಮೀ ಮಾಳಿಂಗೇಶ್ವರ ಚೌಕಿ ಜೊತೆಯಲ್ಲಿ ಮಡ್ಡಿ ಮಾಳಿಂಗೇಶ್ವರ ಪಲ್ಲಕ್ಕಿ,ಹುಲಿಗೆಮ್ಮದೇವಿ ಚೌಕಿ ಮಲಕನದೇವರಹಟ್ಟಿ,ಕರಿಸಿದ್ದೇಶ್ವರ ಪಲ್ಲಕ್ಕಿ ಹಾಗೂ ಲಕ್ಷ್ಮೀ ಪಲ್ಲಕ್ಕಿ ತಿಕೋಟಾ,ಮಡ್ಡಿ ಸಿದ್ದೇಶ್ವರ ಪಲ್ಲಕ್ಕಿ ಹೊನವಾಡ,ಲಾಯಮ್ಮ ದೇವಿ ಪಲ್ಲಕ್ಕಿ ಸಂಖ, ಮಾಳಿಂಗೇಶ್ವರ ಪಲ್ಲಕ್ಕಿ ಕಳ್ಳಕವಟಗಿ,ಬೀರದೇವರ ಪಲ್ಲಕ್ಕಿ ಘೋಣಸಗಿ ಈ ಜಾತ್ರಾ ಮಹೋತ್ಸವದ ದೇವರ ಭೇಟಿಯಲ್ಲಿ ಪಾಲ್ಗೊಳ್ಳುವುವು. ಲಕ್ಷ್ಮೀ ಮಾಳಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಮೂರುದಿನ ಅನ್ನಪ್ರಸಾದ ಇರುವುದು. ಲಕ್ಷ್ಮೀಮಾಳಿಂಗೇಶ್ವರ ಜಾತ್ರಾ ಮಹೋತ್ಸವ ಕಮಿಟಿ,ಊರಿನ ಹಿರಿಯರು ಹಾಗೂ ಎಲ್ಲ ಸದ್ಭಕ್ತರು ಸೇರಿ ಈ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಿಕೊಡಲಿದ್ದಾರೆ.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
