ಓ ಮನುಜ
ನೀ ಇರು ಬಲು ಎಚ್ಚರದಿಂದ
ತುಸು ನೀ ಎಚ್ಚರ ತಪ್ಪಿದರ
ಹೋಗತಿ ನೀ
ಯಾರ ಕೈಗೂ ಸಿಗದಂಗ।
ಮಹಾಮಾರಿ ಕೊರೋನಾ
ವಕ್ರಸೈತಿ ನೋಡು ಈ ಜಗದ ತುಂಬ
ಹಬ್ಬಿ ನಿಂತೈತಿ ನಮ್ಮನ ಬಿಡದಂಗ
ಬೆನ್ನಿಗಿ ಬಿದ್ದ ಬೇತಾಳದಂಗ।
ನೀ ಸಿಕ್ಕರ ಕೊರೋನಾ ಕೈಗಿ
ಹೇಳದಂಗ ಹೊಗತಿ ನೀ ದೂಳಿಪಟದಂಗ
ದುಷ್ಟ ಕೊರೋನಾ ಕಣ್ಣಿಗೆ ಬಿದ್ದರ
ಆಗತಿ ನೀ ಅನಾಥ ಶವದಂಗ।
ಎಷ್ಟಿದ್ದರ ಏನು ಬಂಧುಬಳಗ
ಆಗ ಬರುದಿಲ್ಲ ನೋಡ
ಯಾರು ನಿನ್ನ ನೋಡಾಕ
ನೀ ಸೇರತಿ ನೋಡ ಮಣ್ಣಾಗ
ಶವಸಂಸ್ಕಾರದ ಯಾವ ಆಚಾರ ವಿಚಾರ ಸಂಪ್ರದಾಯವಿಲ್ಲದಂಗ ।
ಅದಕ ಹೇಳುದು ನೋಡು
ಬರಬ್ಯಾಡ ನೀ ಮನಿ ಬಿಟ್ಟು ಹೋರಗ
ನೀ ಬಂದರ ಹೊರಗ
ಕಾದು ಕುತದ ಅನಿಷ್ಠ
ಈ ಕೊರೋನಾ ಎಂಬ ಜಡ್ಡ
ಎಚ್ಚರದಿಂದ ಇರು ನೀನು
ಜರ ತಪ್ಪಿದರ ನೀ ಎಚ್ಚರ
ಹೇಗಲೇರಿ ಕುರುತದ ನೋಡು
ಈ ದರಿದ್ರ ಕೊರೋನಾ ರೋಗ
ಬಿಡುದಿಲ್ಲ ನೋಡು ನಿನ್ನ
ನೀ ವಿನಾಶವಾಗುವತನಕ॥
ಮಮತಾ ಗುಮಶೆಟ್ಟಿ
ವಿಜಯಪುರ