ವಿಜಯಪುರ : ಕಲೆಯು ಒಂದು ಅಭೂತಪೂರ್ವ ಸಿದ್ಧಿ, ರಂಗ ಕಲೆ ಒಂದು ಸಾಮಾಜಿಕ ಮಾಧ್ಯಮವಾಗಿದೆ ಎಂದು ರಂಗವೈಭವದ ಅಧ್ಯಕ್ಷ ಅಂಬಾದಾಸ ಜೋಶಿ ಹೇಳಿದರು.
ನಗರದ ವಿರೇಶ್ವರ ನಾಟ್ಯ ಸಂಘದ ರಂಗ ಮಂದಿರದಲ್ಲಿ ರಂಗವೈಭವ ಮತ್ತು ಕರ್ನಾಟಕ ಕಬ್ಲಿಕ್ ಪವರ್ ಸಂಘಟನೆಯ ಸಂಯುಕ್ತಾಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚಾರಣೆ ನಿಮಿತ್ಯ ಹಾಸ್ಯ ಕಲಾವಿದ ಸಿದ್ದು ನಾಲವತವಾಡ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ವಿಶ್ವರಂಗಭೂಮಿ ದಿನಾಚಾರಣೆ ಬರಿ ದಿನಾಚರಣೆಯಾಗಬಾರದು, ಕಲಾವಿದರ ಬದುಕು ಇಂದಿನ ಅನಾರೋಗ್ಯ ವಾತವಾರಣದಲ್ಲಿ ಆತಂಕದ ಪರಿಸ್ಥಿತಿಯಲ್ಲಿದ್ದರೂ ಕೂಡ ಎದೆಗುಂದದೆ, ನಮ್ಮ ಕಲೆಯ ಮೇಲೆ ನಮ್ಮ ಪ್ರಯತ್ನದ ಮೇಲೆ ನಮ್ಮ ಮೇಲೆ ವಿಶ್ವಾಸ ಇನ್ನು ಗಟ್ಟಿಯಾಗುತ್ತಾ ಹೋಗಬೇಕು. ಎದೆ ಗುಂದಬಾರದು ಇದಕ್ಕೆ ನಮ ಕಲಾ ತಪಸ್ಸು ನಮ್ಮ ಪರಂಪರೆ, ನಮ್ಮ ಕಲಾ ಪ್ರಯತ್ನ ಹಾಗೂ ಜನ ಸಂಪರ್ಕ ಕಳೆದುಕೊಳ್ಳದೇ ವಿಸ್ವಾದದಿಂದ ಜೀವನ ಸಾಗಿಸುವಂತೆ ಈ ರಂಗಭೂಮಿ ಕಲಾವಿದರಿಗೆ ಭಗವಂತ ಅನುಗ್ರಹಿಸಲಿ ಎಂದರು.
ಈ ಸಂದರ್ಭ ಕೆಪಿಪಿ ಅಧ್ಯಕ್ಷ ಪ್ರಕಾಶ ಕುಂಬಾರ ಮಾತನಾಡಿ, ಅಂತರಜಾಲದ ಮೋಹದಲ್ಲಿ ಇಂದು ಇಂತಹ ಅಪರೂಪದ ಜಾನಪದ ಕಲೆ, ದೇಶಿಕ್ರೀಡೆ ಮತ್ತು ಗ್ರಾಮೀಣ ಭಾಗದ ಮನರಂಜನೆಯ ಅನೇಕ ಮಾಧ್ಯಮಗಳು ಮಾಯವಾಗಿ ಇಂದು ಎಲ್ಲರ ಕೈಯಲ್ಲಿ ಪ್ರಪಂಚವನ್ನೇ ತೋರುವ ಮೊಬೈಲ್‍ಗಳ ಹಾವಳಿ ಹೆಚ್ಚಾಗಿದೆ. ಇದರಿಂದ ರಂಗ ಮಾಧ್ಯಮ ಸೊರಗಿ ಹೋಗಿ ಇಂದು ರಂಗಭೂಮಿ ಕಲಾವಿದರು ಸಹ ಬೀದಿಗೆ ಬಿದ್ದಿದ್ದಾರೆ. ಹಲವಾರು ನಾಟ್ಯ ಸಂಘಗಳು ಬಾಗಿಲು ಮುಚ್ಚಿಕೊಂಡಿವೆ. ಚಲನ ಚಿತ್ರ ಮಾಧ್ಯಮವೇ ಇಂದು ನಮ್ಮಿಂದ ದೂರುವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜಾತಿ ಸಮುದಾಯಗಳನ್ನು ಓಲೈಸುವ ಕೆಲಸದಲ್ಲಿ ತೊಡಗಿದ ಸರ್ಕಾರಗಳು ಸೊರಗಿ ಹಾಗೂ ನಶಿಸಿ ಹೋಗುತ್ತಿರುವ ಇಂತಹ ನಾಟ್ಯ ಸಂಘಗಳನ್ನ ಹಾಗೂ ರಂಗಭೂಮಿ ಕಲಾವಿದರನ್ನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕಿದೆ.
ಕರವೇ ಮುಖಂಡ ರವಿ ಕಿತ್ತೂರ, ಫಯಾಜ್ ಕಲಾದಗಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಇರುವ 2 ರಂಗಮಂದಿರಗಳು ಇದ್ದು, ಅದರಲ್ಲಿ ವಿಜಯಪುರದ ಕಿತ್ತೂರು ಚೆನ್ನಮ್ಮ ನಾಟ್ಯಮಂದಿರ ಬಹಳಷ್ಟು ಕಲಾವಿದರ ಬದುಕಿಗೆ ಆಸರೆಯಾಗಿತ್ತು. ಅಲ್ಲದೇ ಈ ನಾಟ್ಯಮಂದಿರದಲ್ಲಿ ಅನೇಕ ಹೆಸರಾಂತ ಖ್ಯಾತ ಚಲನಚಿತ್ರ ನಟರು ಸಹ ಇಲ್ಲಿ ಅಭಿನಯಿಸಿ ತಮ್ಮ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಅದರಲ್ಲಿ ಕಲ್ಪನಾ, ಸುದೀರ, ಎನ್.ಬಸವರಾಜ, ದೀರೇಂದ್ರ ಗೋಪಾಲ, ಅಲ್ಲದೇ ಕರ್ನಾಟಕ ರಾಜ್ಯ ಸರ್ಕಾರದ ಮಾಜಿ ಸಚಿವೆ ಉಮಾಶ್ರೀ ಸಹಿತ ಹಲವಾರು ನಟರು ನಟಿಸಿದಂತಹ ಅಮೂಲ್ಯವಾದ ನಾಟ್ಯ ಮಂದಿರ ಸದ್ಯ ಸರ್ಕಾರ ಮತ್ತು ಜಿಲ್ಲಾಡಳತದ ದಿವ್ಯ ನಿರ್ಲಕ್ಷ್ಯದ ಪರಿಣಾಮ ಪೂರ್ಣ ನಿರ್ನಾಮವಾಗಿದೆ. ಇಂತಹ ರಂಗಭೂಮಿ ದಿನಾಚಾರಣೆಯನ್ನು ನೆಪಕ್ಕೆ ಆಚರಿಸಿದೆ ರಂಗ ಕಲಾವಿದರು, ರಂಗಾಸಕ್ತರು, ರಂಗಾಭಿಮಾನಿಗಳು ಸರ್ಕಾರವನ್ನು ಒತ್ತಾಯಿಸಿ ಈ ನಾಟ್ಯಮಂದಿರವನ್ನು ಉಳಿಸಬೇಕಿದೆ. ಕೂಡಲೇ ಜಿಲ್ಲಾಡಳಿತ ಇತ್ತ ಗಮನ ಹರಿಸಬೇಕೆಂದು ಈ ವೇದಿಕೆಯ ಮುಖಾಂತರ ಮನವಿ ಮಾಡಿದರು.
ಈ ಸಂದರ್ಭದ ಸುಭಾಸ ಕನ್ನೂರ, ಪರ್ತಕತ್ರ ಪರಶುರಾಮ ಶಿವಶರಣ, ಶಿವಾನಂದ ದುದ್ದಗಿ, ರಜಾಕ ಕಾಖಂಡಕಿ, ಕಲಾವಿದ ಅಮೋಘಸಿದ್ದ ಆಜೂರ ಇನ್ನಿತರರು ಇದ್ದರು.