ವಿಜಯಪೂರ: ಇಂದಿನ ಸಮಾಜ ಮೂಢನಂಬಿಕೆಯಿಂದ ಬಳಲುತ್ತಿದೆ, ಇದು ದೇಶದ ಹಿನ್ನಡೆಗೆ ಕಾರಣವಾಗಿದೆ ವಿದ್ಯಾರ್ಥಿನಿಯರು ವೈಜ್ಞಾನಿಕ ಮನೋಭಾವನೆ ಬೆಳಿಸಿಕೊಂಡು ಆಧುನಿಕ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕೆಂದು ಕರಾಮವಿವಿ ಸ್ನಾತಕ ವಿಭಾಗದ (ಎನ್.ಇ.ಪಿ) ವಿಶೇಷಧಿಕಾರಿಗಳಾದ ಪ್ರೊ. ಸಕ್ಪಾಲ ಹೂವಣ್ಣ ಕರೆ ನೀಡಿದರು,
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಜಾನ ಶಕ್ತಿ ಆವರಣದಲ್ಲಿರುವ ಸ್ನಾತಕ (ಎನ್.ಇ.ಪಿ) ಪದವಿ ವಿಭಾಗದಲ್ಲಿ ಜರುಗಿದ ರಾಷ್ಟ್ರೀಯ ವಿಜ್ಞಾನ ದಿನ ಅಂಗವಾಗಿ ವಿದ್ಯಾರ್ಥಿನಿಯರಿಗೆ ವಿಜ್ಞಾನ ಪ್ರತಿಜ್ಞಾ ವಿಧಿ ಭೋದಿಸಿ ಅವರು ಮಾತನಾಡಿದರು.
ನಿತ್ಯಜೀನದಲ್ಲಿ ವೈಜ್ಞಾನಿಕ ವಿಚಾರಗಳು, ಆಚರಣೆಗಳು ಬಳಕೆಯಲ್ಲಿ ಇರಬೇಕು ವಿದ್ಯಾರ್ಥಿನಿಯರ ಜಿವನಕ್ರಮವೂ ವೈಜ್ಞಾನಿಕೆಯನ್ನು ಒಳಗೊಂಡಿರಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಭಾಗದ ಸಂಯೋಜಕರಾದ ಡಾ. ಜಿ ಸೌಭಾಗ್ಯ ಹಾಗೂ ಅತಿಥಿ ಉಪನ್ಯಾಸಕರಾದ ಮೊಹಸಿನಾ ಮಣಿಯಾರ ಕಾರ್ಯಕ್ರಮ ಆಯೋಜಿಸಿ ಸ್ವಾಗತಿಸಿದರು, ಭೋದಕ ಸಿಬ್ಬಂದಿಗಳು, ವಿದ್ಯಾಥಿನಿಯರು ಹಾಗೂ ವಿಭಾಗದ ವಿಷಯ ನಿರ್ವಾಹಕರಾದ ವಿನೋದ ಪಾಟೀಲ, ಮಲ್ಲಿಕಾರ್ಜುನ ಕಾಡಾಪುರೆ ಮತ್ತು ರಫೀಕ ಶಾನವಾಲೆ, ರೋಹಿತ, ನಜಮಾ, ಶೈಲೇಶ, ಶೈಲಾ ಕಾರ್ಯಕ್ರಮದಲ್ಲಿ ಹಾಜರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

.jpeg)

.jpeg)