Sunday, July 7, 2024

ಘನತೆಯ ಬದುಕು ಸಾಗಿಸಲು ಕಾರಣ ನಮ್ಮ ಶ್ರೇಷ್ಠ ಸಂವಿಧಾನ

 


ಈ ದಿವಸ ಕನ್ನಡ ದಿನ ಪತ್ರಿಕೆ ವಾರ್ತೆ

ವಿಜಯಪುರ : ಬದುಕಿರುವಾಗಲೂ ಬಾಬಾ ಸಾಹೇಬರು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಡೆಗೆ ಇದ್ದರು ಅವರ ಸಾವಿನ ನಂತರವೂ ಬಡವರನ್ನು ನಿಕೃಷ್ಟರನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಕಾಪಾಡುತ್ತಿರುವುದು ಬಾಬಾ ಸಾಹೇಬರು ಬರೆದ ಸಂವಿಧಾನವೇ ವಿನಹ ಯಾವ ವ್ಯಕ್ತಿಯೂ ಅಲ್ಲ ಸರಕಾರವೂ ಅಲ್ಲ. ಅಲ್ಲ ವೆಂದು ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪ ಡಾ. ಅಪ್ಪಗೆರೆ ಸೋಮಶೇಖರ್ ಹೇಳಿದರು.

 ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ  ಕರ್ನಾಟಕ ರಾಜ್ಯ ಛಲವಾದಿ ಸರಕಾರಿ ನೌಕರರ ಸಂಘದ ಉದ್ಘಾಟನೆ ಹಾಗೂ ಚಲವಾದಿ ಸರಕಾರಿ ನೌಕರರ ಸಂಘಟನೆಯ ಸಭೆಯ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

 ನಮ್ಮೆಲ್ಲರ ಘನತೆಯ ಬದುಕಿಗೆ ಕಾರಣವಾದದ್ದು ಈ ಸಂವಿಧಾನ ಇಂದು ಅಪಾಯದಲ್ಲಿದೆ ಅದನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಹೆಗಲ ಮೇಲಿದೆ ಎಂದರು.

 ಇನ್ನೋರ್ವ ಮುಖ್ಯ ಅತಿಥಿ ಪ್ರೊ ಬಸವರಾಜ ಜಾಲವಾದಿ ಮಾತನಾಡಿ ಆರ್ಥಿಕ ಭದ್ರತೆ ಇಲ್ಲದಿದ್ದರೆ ಮದುವೆಯನ್ನು ಮುಂದೂಡಿ. ನಿಮ್ಮ ಗಂಡ ಕುಡಿದು ಮನೆಗೆ ಬರುತ್ತಿದ್ದರೆ ಅವನಿಗೆ ಊಟ ಹಾಕಬೇಡಿ ಎಂದು ಮಾರ್ಮಿಕವಾಗಿ ನುಡಿದರು. ಪೂರ್ವಗ್ರಹ ಪೀಡಿತ ಸಾಹಿತ್ಯವನ್ನು ಓದದೆ,ಅತಿ ಹೆಚ್ಚು ಮೊಬೈಲ್ ಬಳಸದೆ  ಧನಾತ್ಮಕ ಸಾಹಿತ್ಯವನ್ನು ಓದುವುದರ ಮೂಲಕ ಬದುಕು ಮತ್ತು ಸಮಾಜವನ್ನು ಸರಿದಾರಿಗೆ ತರಬಹುದಾಗಿದೆ ಎಂದು ಎಂದು ಸಲಹೆ ನೀಡಿದರು.

 ಹೆಚ್ ಬಿ ಸಿಂಗ್ಯಾಗೋಳ್ ಮಾತನಾಡಿ ಸಮಾಜದ ಪ್ರತಿಭೆಗಳನ್ನು ಗುರುತಿಸಿ ದಾರಿ ತೋರಿಸುವ ಕೆಲಸ ದಲಿತ ನೌಕರರ ಹೆಗಲ ಮೇಲಿದೆ ಎಂದರು.

 ಸುರೇಶ ಸಿಂಧೂರ್ ಹಾಗೂ ಚಿದಾನಂದ ಕಾಂಬಳೆ ಮಾತನಾಡಿದರು. ಪೂಜ್ಯ ನಾಗರತ್ನ ಬಂತೇಜಿ ದಿವ್ಯ ಸಾನಿಧ್ಯ  ವಹಿಸಿ  ತ್ರಿಸರಣ ಬೋಧಿಸಿದರು. 



 ಜಗದೀಶ್ ಚೌರ್ , ಶ್ರೀಮತಿ ಅನುರಾಧ ಚಂಚಲಕರ್, ಡಿವೈಎಸ್ಪಿ ಸುನಿಲ್ ಕಾಂಬಳೆ, ಚಂದ್ರಕಾಂತ್ ಕಾಂಬಳೆ, ಶಿವಲಿಂಗ ಕುರಿಯನ್ನವರ್, ಮುದ್ದಣ್ಣ ಭೀಮನಗರ್ , ರಾಹು ಸಾಹೇಬ್ ಗವಾರಿ, ರಾಕೇಶ್ ಇಂಗಳಗಿ, ಡಾ. ಅರವಿಂದ ಲಂಬು ಹಾಜರಿದ್ದರು.



ರಾಜೇಶ್ ಚಲವಾದಿ  ಕ್ರಾಂತಿ ಗೀತೆ ಹಾಡಿದರು. ಶಶಿಕಾಂತ್ ಹಾರಿಮನಿ ಕಾರ್ಯಕ್ರಮ ನಿರ್ವಹಿಸಿದರು. 

ಇದೇ ಸಂದರ್ಭದಲ್ಲಿ ಛಲವಾದಿ ವಧು ವರರ ಸಮಾವೇಶ ಜರುಗಿತು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.