ಈ ದಿವಸ ವಾರ್ತೆ
ವಿಜಯಪುರ: ಭಾರತೀಯ ಅಂಚೆ ಸೇವೆ ದೇಶದ ಅವಿಭಾಜ್ಯ ಅಂಗವಾಗಿದ್ದು, ಇದು ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ. ತಂತ್ರಜ್ಞಾನ ಬೆಳೆದಂತೆ ಇಂದಿನ ಜನರು ಅಂಚೆ ಸೇವೆಗಳ ಬಳಕೆಯನ್ನು ಕಡಿಮೆ ಮಾಡಿದ್ದು ಕಳವಳಕಾರಿಯಾಗಿದೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಅವರು ಗುರುವಾರದಂದು ನಾಗಠಾಣ ಗ್ರಾಮದ ಅಂಚೆ ಕಚೇರಿಯಲ್ಲಿ ಹಮ್ಮಿಕೊಂಡ 'ರಾಷ್ಟ್ರೀಯ ಅಂಚೆ ದಿನ' ವನ್ನು ಉದ್ಧೇಶಿಸಿ ಮಾತನಾಡಿದರು.
ಪ್ರಪಂಚದಾದ್ಯಂತ ಜನರ ದೈನಂದಿನ ಜೀವನದಲ್ಲಿನ ವ್ಯವಹಾರ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿ ಅಂಚೆ ಇಲಾಖೆಯ ಪಾತ್ರದ ಬಗ್ಗೆ ಜನರಿಗೆ ಅರಿವು ಮೂಡಿಸಿ,
ಗ್ರಾಮೀಣ ಅಂಚೆ ಜೀವ ವಿಮೆಯಂತಹ ಮಾಹಿತಿ ಎಲ್ಲರಿಗೂ ವ್ಯಾಪಕವಾಗಿ ತಿಳಿಸುವ ಅಗತ್ಯವಿದೆ ಎಂದು ಹೇಳಿದರು.
ಸಾರ್ವಜನಿಕ ಯೋಜನೆಗಳನ್ನು ಸುಲಭಗೊಳಿಸುವಲ್ಲಿ ಅಂಚೆ ಸೇವೆಗಳ ಪಾತ್ರ ಅನನ್ಯ.ಪ್ರಪಂಚದ ನಾನಾ ಭಾಗಗಳ ಜನತೆ, ಸಂಸ್ಥೆಗಳ ನಡುವಿನ ಸಂಪರ್ಕಕ್ಕೆ ಅತ್ಯಂತ ಹಳೆಯ ಸಾಧನವಾಗಿ ಅಂಚೆ ಸೇವೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಶಾಖಾ ಅಂಚೆ ಅಧಿಕಾರಿ ಹಣಮಂತ ಅರಕೇರಿ ಮಾತನಾಡಿ, ಅಂಚೆ ಇಲಾಖೆ ಉತ್ತಮ ಗ್ರಾಹಕ ಸ್ನೇಹಿಯಾಗಿದ್ದು, ಇದು ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಪಿಂಚಣಿ ಸೌಲಭ್ಯಗಳ ಅಡಿಯಲ್ಲಿ ವೇತನ ವಿತರಣೆಯಂತಹ ಸೇವೆಯ ಜತೆಗೆ ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ವಿಶೇಷಚೇತನ ಗ್ರಾಹಕರಿಗೆ ಮತ್ತಷ್ಟು ಸವಲತ್ತುಗಳನ್ನು ಒದಗಿಸುವ ಮೂಲಕ ದೇಶದ ವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ ಎಂದು ಹೇಳಿದರು.
ಸಹಾಯಕ ಅಂಚೆ ಅಧಿಕಾರಿ ಪ್ರಸಾದ ನಾಯ್ಕೋಡಿ, ಯುವ ಮುಖಂಡ ರಾಜು ಕತ್ನಳ್ಳಿ, ಪಿಕೆಪಿಎಸ್ ನಿರ್ದೇಶಕ ಪ್ರಭಾಕರ ಅರಕೇರಿ, ಗ್ರಾಮಸ್ಥರಾದ ಚನ್ನಯ್ಯ ನಂದಿಕೋಲ,
ಶ್ರೀಕಾಂತ ಗುಜ್ಜಲಕರ, ಕಾಶೀನಾಥ ಬಡಿಗೇರ, ಶರಣಪ್ಪ ಬಂಥನಾಳ, ಸಂತೋಷ ಸಂಗೋಗಿ, ಮಲ್ಲಿಕಾರ್ಜುನ ಸಮಗೊಂಡ, ಶರಣಪ್ಪ ಕತ್ನಳ್ಳಿ, ಕಲ್ಲಪ್ಪ ವಾಲೀಕಾರ, ಶಂಕ್ರೆಪ್ಪ ಅರಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಖಾ ಅಂಚೆ ಅಧಿಕಾರಿ ಹಣಮಂತ ಅರಕೇರಿ ಅವರನ್ನು ಸನ್ಮಾನಿಸಲಾಯಿತು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.