Friday, April 10, 2026

ಬಸವ ನಾಡಿನಲ್ಲಿ ನಿಂತು ಅಂಬೇಡ್ಕರ್ ಜಯಂತಿಯನ್ನು ಪುಸ್ತಕ ಮೇಳದ ಮೂಲಕ ಹಮ್ಮಿಕೊಂಡಿರುವುದು ದೇಶಕ್ಕೆ ಗುಣಾತ್ಮಕ ಸಂದೇಶ ನೀಡುತ್ತಿದೆ : ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ ಎಂ ಜಾನಕಿ


 ಪ್ರೊ ಎ ಎಸ್ ಹಿಪ್ಪರಗಿ, ಈಶ್ವರಚಂದ್ರ ಚಿಂತಾಮಣಿ, ಕಾ ಹು ಬಿಜಾಪುರ ವೇದಿಕೆ 
ವಿಜಯಪುರ:  ಬಸವ ನಾಡಿನಲ್ಲಿ ನಿಂತು ಅಂಬೇಡ್ಕರ್ ಜಯಂತಿಯನ್ನು ಪುಸ್ತಕ ಮೇಳದ ಮೂಲಕ ಹಮ್ಮಿಕೊಂಡಿರುವುದು ದೇಶಕ್ಕೆ ಗುಣಾತ್ಮಕ ಸಂದೇಶ ನೀಡುತ್ತಿದೆ ಎಂದು ಬೆಳಗಾವಿಯ ಪ್ರಾದೇಶಿಕ ಆಯುಕ್ತರಾದ ಕೆ ಎಂ ಜಾನಕಿ ಅವರು ಹೇಳಿದರು. 

ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕಾದರೆ ಸರ್ವರೂ ಸಾಮಾಜಿಕ ಬದ್ಧತೆ ಅಳವಡಿಸಿಕೊಳ್ಳಬೇಕು ಎಲ್ಲರು ಇಂತಹ ಪುಸ್ತಕ ಮೇಳದಲ್ಲಿ ಭಾಗವಹಿಸುವ ಮೂಲಕ ಎಲ್ಲರು ತಮ್ಮ ಜ್ಞಾನದ ಬಲವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಪುಸ್ತಕ ಮೇಳದ ದಿಕ್ಸೂಚಿ ಭಾಷಣ ಮಾಡಿ ಮುಂಬೈನ ದಲಿತ ಪ್ಯಾಂಥ ರ್ಸ್ ಸಂಸ್ಥಾಪಕ ಜೆ ವಿ ಪವಾರ ಅವರು ಮಾತನಾಡಿ
ಬುದ್ಧ, ಬಸವ ಬಾಬಾಸಾಹೇಬ ಪುಸ್ತಕ ಮೇಳವು ಇಂದಿನ ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಹಮ್ಮಿಕೊಂಡಿರುವುದು ಒಂದು ಐತಿಹಾಸಿಕ ಸಂಗತಿಯಾಗಿದೆ 
ಅಂಬೇಡ್ಕರ್ ಅವರು ಪುಸ್ತಕಗಳ ಒಡನಾಟಿಯಾಗಿದ್ದರು ಅವರು ತಮ್ಮ ಇಡಿ ಜೀವನವನ್ನು ಪುಸ್ತಕಗಳೊಂದಿಗೆ ಕಳೆದಿದ್ದಾರೆ ಅಂತಹ ಮಹಾನ್ ವ್ಯಕ್ತಿ ಜಯಂತಿ ಮತ್ತು ಜ್ಯೋತಿಬಾ ಪುಲೆ ಅವರ 200ನೇ ಜಯಂತಿ ಸಂದರ್ಭದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿರುವುದು ಪ್ರಸ್ತುತ ಸಂದರ್ಭದಲ್ಲಿ ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದ ಅವರು ಬಾಬಾಸಾಹೇಬರ ಪತ್ನಿ ರಾಮಬಾಯಿ ಅವರ ಜೀವನ ಅವರ ಸಾಮಾಜಿಕ ಕೊಡುಗೆ ಬಗ್ಗೆ ಅಧ್ಯಯನ ಮಾಡುವುದು ಅವಶ್ಯಕತೆ ಇದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಡಿ ಎಸ್ ಎಸ್ ನ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ ಅವರು ಮಾತನಾಡಿ
ಪುಸ್ತಕಗಳನ್ನು ಜನರ ಬಳಿಗೆ ಹೋಗಬೇಕು ಜನರಿಗೆ ಕೊಳ್ಳುವ ಶಕ್ತಿ ಬರಬೇಕು ಎಂಬ ದೃಷ್ಟಿಕೋನದಲ್ಲಿ ಬುದ್ಧ, ಬಸವ ಬಾಬಾಸಾಹೇಬರ ಪುಸ್ತಕ ಮೇಳವನ್ನು ಬಸವರಾಜ ಸೂಳಿಬಾವಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವುದು ಸಾಂದರ್ಭಿಕ ಸೂಕ್ತವಾಗಿದೆ ಎಂದು ಹೇಳಿದ ಅವರು
ಬಾಬಾಸಾಹೇಬರ ಜನ್ಮದಿನದ ಸಂದರ್ಭದಲ್ಲಿ ಪುಸ್ತಕ ಮೇಳವನ್ನು ಹಮ್ಮಿಕೊಂಡಿರುವುದು ದೇಶಕ್ಕೆ ವೈಚಾರಿಕತೆಯ ಸಂದೇಶ ಕೊಡುತ್ತಿದೆ ಎಂದು ಹೇಳಿದ ಅವರು ಅಂಬೇಡ್ಕರ್ ಅವರ ಜೀವನ ಪುಸ್ತಕಗಳಿಂದ ರುಪುಗೊಂಡಿದೆ, ಇತಿಹಾಸದಲ್ಲಿ ಪ್ರಭುತ್ವಕ್ಕೆ ಪುಸ್ತಕಗಳ ಭಯ ಕಾಡುತ್ತಿದೆ. ಅದು ಇವತ್ತಿನ ವಿಷಯವಲ್ಲ ಬಸವಾದಿ ಶರಣರ ಕಾಲದಿಂದಲೂ ಪ್ರಭುತ್ವವು ಪುಸ್ತಕಗಳ ವೈಚಾರಿಕತೆಗೆ ಅಂಜುತ್ತಿದೆ ಎಂದರು.
ಪ್ರಕಾಶಕರ ಸಂಫದ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ ಅವರು ಮಾತನಾಡಿ ಅಂಬೇಡ್ಕರ್ ಅವರು ಪ್ರೀತಿಸುವ ಪುಸ್ತಕಗಳ ಮೇಳ ಹಮ್ಮಿಕೊಳ್ಳುವ ಮೂಲಕ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಯೋಜನೆ ಮಾಡಿರುವುದು ಅಭಿನಂದನಾರ್ಹವಾದುದು ಎಂದು ಹೇಳಿದ ಅವರು ಸಾರ್ವಜನಿಕ ಗ್ರಂಥಾಲಯ ಇಲಾಖೆ ಲೇಖಕರ ಮತ್ತು ಪ್ರಕಾಶಕರ ಪುಸ್ತಕ ಖರೀದಿಸಲು ಹಿಂದೇಟು ಹಾಕುತ್ತಿದೆ. ಇದರಿಂದ ಲೇಖಕರು ಮತ್ತು ಪ್ರಕಾಶರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಕೂಡಲೇ ಸರಕಾರ ಪುಸ್ತಕ ಖರೀದಿ ಮಾಡಲು ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅನಿಲ ಹೊಸಮನಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ ಅರುಣಕುಮಾರ ಇಂಗಳೆ, ಹಾಸಿಂಪೀರ ವಾಲಿಕಾರ, ಆರತಿ ಶಹಾಪುರ, ಸುಭಾಸ ಬೆಳ್ಳುಳ್ಳಿ, ಶ್ರೀನಿವಾಸ ಜಾಲವಾದಿ ಹೇಮಂತ ಭೂತನಾಳ, ಸುರೇಶ ಗೆಜ್ಜಿ, ಹೇಮಂತ ಭೂತನಾಳ, ಸಿದ್ದರಾಮ ಉಪ್ಪಿನ ಅಡಿವೆಪ್ಪ ಸಾಲಗಲ್ಲ ಬಸವರಾಜ ಸೂಳಿಬಾವಿ ಉಪಸ್ಥಿತರಿದ್ದರು.

ಸುರೇಶ ಬಿಜಾಪುರ ನಿರೂಪಿಸಿದರು, ಸಂಜು ಕಂಬಾಗಿ ವಂದಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.