Sunday, March 29, 2026

ಕರ್ನಾಟಕ ರಾಜ್ಯ ಕಾನೂನು ಸೇವೆ ಗಳ ಪ್ರಾಧಿಕಾರ ಬೆಂಗಳೂರು, ಕರ್ನಾಟಕ ಮಧ್ಯಸ್ಥಿರ ಕೇಂದ್ರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ

 


ವಿಜಯಪುರ ಮತ್ತು ಬಾಗಲಕೋಟೆ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಮದ್ಯಸ್ತಿಕದಾರರಿಗೆ ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಗೌರವಾನ್ವಿತ ಶ್ರೀ. ಹರೀಶ. ಎ., ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ಜಿಲ್ಲಾ ಕಾನೂನು ಸೇವೇಗಳ ಪ್ರಾಧಿಕಾರ ವಿಜಯಪುರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಎಲ್ಲಾ ಮಧ್ಯಸ್ಥಿಕೆದಾರರಿಗೆ ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳಲ್ಲಿ ಮಧ್ಯಸ್ಥಿಕೆಗೆ ಬಂದ ಎಲ್ಲ ಪಕ್ಷಗಾರರಿಗೆ ಮಧ್ಯಸ್ಥಿಕೆಯ ಬಗ್ಗೆ ತಿಳುವಳಿಕೆ ಹೇಳಿ, ಮರಳಿ ಕೂಡಿಸಿ ಕಳಿಸುವ ಪ್ರಯತ್ನವನ್ನು ಮಧ್ಯಸ್ಥಿಕೆ ದರರು ಮಾಡಬೇಕು, ಮತ್ತು ಮಧ್ಯಸ್ಥಿಕೆಗೆ ಬಂದ್ ಬೇರೆ ಬೇರೆ ಸ್ವರೂಪದ ಕೇಸುಗಳಲ್ಲಿ ಸಹ ಕೇಸುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮತ್ತು ವಾದಿ ಪ್ರತಿವಾದಿಯರ ಮನವೊಲಿಸುವಲ್ಲಿ ಹೆಚ್ಚು ಶ್ರಮವಹಿಸಬೇಕು ಮತ್ತು ಮಧ್ಯಸ್ಥಿಕೆಯ ತಿಳುವಳಿಕೆ ನೀಡಬೇಕು. ಗ್ರಾಮೀಣ ಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಮಧ್ಯಸ್ಥಿಕೆಯ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕೆಂದು ಈ ಸಂದರ್ಭದಲ್ಲಿ ಮಾತನಾಡಿದರು, ಅಧ್ಯಕ್ಷರಾಗಿ ಗೌರವಾನ್ವಿತ ಶ್ರೀ ಅರವಿಂದ ಎಸ್ ಹಾಗರಗಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿಜಯಪುರ ಮತ್ತು ಮುಖ್ಯ ಅತಿಥಿಗಳಾಗಿ ಶ್ರೀ ಡಿ ಜಿ ಬಿರಾದಾರ ಅಧ್ಯಕ್ಷರು ಜಿಲ್ಲಾ ನ್ಯಾಯಾಧೀಶ ಸಂಘ ವಿಜಯಪುರ, ಶ್ರೀ ಶಿವಾನಂದ ಮಲ್ಲನಗೌಡ ಪಾಟೀಲ್, ಅಧಿಕಾರೆತರ ಸದಸ್ಯರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಲಕ್ಷ್ಮೀಶ್ ರಾವ್ ಜಿ, ಹಿರಿಯ ತರಬೇತಿದಾರರು ಕರ್ನಾಟಕ ಮಧ್ಯಸ್ಥಿಕೆ, ಬೆಂಗಳೂರು ಮತ್ತು ಶ್ರೀಮತಿ ಅನಿತಾ ಆರ್ . ಮಧ್ಯಸ್ಥಿಕೆದಾರರು, ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ ಬೆಂಗಳೂರು ಮತ್ತು ಶ್ರೀಮತಿ ಬಿವುಲಾಸಿಂಗ್, ಮಧ್ಯಸಿಕೆದಾರರು ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ ಬೆಂಗಳೂರು, ಕಾರ್ಯಕ್ರಮದಲ್ಲಿ ಉಪಸ್ಥರಿದ್ದರು. ಈ ಕಾರ್ಯಕ್ರಮದಲ್ಲಿ ಡಿ. ಎಲ್. ಎಸ್. ಎ ವಿಜಯಪುರ TLSC ಮುದ್ದೇಬಿಹಾಳ, ಬಸವನ ಬಾಗೇವಾಡಿ, ಸಿಂದಗಿ ಮತ್ತು ಇಂಡಿ ಹಾಗೂ DLSA ಬಾಗಲಕೋಟ್ ಮತ್ತು ಎಲ್ಲ ತಾಲೂಕು ಕಾನೂನು ಸೇವಾ ಸಮಿತಿಯ ಮಧ್ಯಸ್ಥಿಕದಾರು ಭಾಗವಹಿಸಿದ್ದರು,

Monday, March 23, 2026

24-03-2026 EE DIVASA KANNADA DAILY NEWS PAPER

3 ದಿನದೊಳಗೆ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚನೆ ಜಿಲ್ಲೆಯಲ್ಲಿ ಬಿರುಗಾಳಿ, ಆಲಿಕಲ್ಲು ಮಳೆಯಿಂದ ಕೃಷಿ, ತೋಟಗಾರಿಕೆ ಬೆಳೆ ಹಾನಿ

ವಿಜಯಪುರ : ಇತ್ತೀಚಿಗೆ ಬೀಸಿದ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದಾಗಿ ಕೃಷಿ, ತೋಟಗಾರಿಕಾ ಬೆಳೆ ಹಾನಿಗೆ ಸಂಬAಧಿಸಿದAತೆ ಜಂಟಿ ಸಮೀಕ್ಷೆ ಕೈಗೊಂಡು ಮೂರು ದಿನದೊಳಗಾಗಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಅಧಿಕಾರಿಗಳಿಗೆ ಸೂಚಿಸಿದರು.

 ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಬೆಳೆ ವಿಮಾ ಕಂಪನಿಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡ ರಚಿಸಿ ಹಾನಿಗೊಳಗಾದ ಕ್ಷೇತ್ರಗಳಿಗೆ ಭೇಟಿ ನೀಡಿ ನಿಖರವಾದ ಸಮೀಕ್ಷೆ ಕೈಗೊಂಡು 3 ದಿನಗೊಳಗಾಗಿ ಜಂಟಿ ಸಮೀಕ್ಷೆ ನಡೆಸಿ ವರದಿಯನ್ನು ನೀಡಬೇಕು ಎಂದು ಸೂಚಿಸಿದರು.

 ಇತ್ತೀಚಿನ ದಿನಗಳಲ್ಲಿ ಬಿದ್ದ ಮಳೆ, ಗಾಳಿ ಹಾಗೂ ಆಲಿಕಲ್ಲು ಮಳೆಯಿಂದಾಗಿ ಕೃಷಿ ಬೆಳೆ ಹಾನಿಗೊಳಗಾದ ರೈತರು ಬೆಳೆ ವಿಮೆ ಮಾಡಿಸಿದ್ದರೆ ಅಂತಹ ರೈತರು ಮುಂದಿನ 3 ದಿನಗೊಳಗಾಗಿ (ಮುಂದಿನ 72 ಗಂಟೆಗೂಳಗಾಗಿ) ಓರಿಯಂಟಲ್ ಜನರಲ್ ಇನ್ಸೂರನ್ಸ್ ಕಂಪನಿ ಖಿoಟಟ ಈಡಿee ಓumbeಡಿ 1800 425 6678 ಗೆ ಕರೆ ಮಾಡಿ ವೈಯಕ್ತಿಕ ಸ್ಥಳ ನಿರ್ದಿಷ್ಟ ವಿಕೋಪಗಳ (Iಐಐಂ) ಕುರಿತು ದೂರು ದಾಖಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. 

 2025-26 ನೇ ಸಾಲಿನ ಖWಃಅIS ಯೋಜನೆಯಡಿ ದ್ರಾಕ್ಷಿ, ದಾಳಿಂಬೆ ಹಾಗೂ ಲಿಂಬೆ ಬೆಳೆಗಳಿಗೆ ಆಲಿಕಲ್ಲು ಮಳೆಯಿಂದಾಗಿ ಬೆಳೆಹಾನಿ ಸಂಭವಿಸಿದ್ದಲ್ಲಿ, ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾಗೂ ಮಾಹಿತಿಯನ್ನು 72 ಗಂಟೆಗಳೊಳಗಾಗಿ ಅಗ್ರಿಕಲ್ಟರ್ ಇನ್ಸುರನ್ಸ್ ಕಂಪನಿ ಆಪ್ ಇಂಡಿಯಾ ಲಿ. ರವರಿಗೆ ಖಿoಟಟ ಈಡಿee ಓumbeಡಿ 1800 425 0505 ಗೆ ಕರೆ ಮಾಡಿ ರೈತರು ಮಾಹಿತಿ ನೀಡಬಹುದಾಗಿದೆ ಎಂದರು.

 ವಿಮಾ ಕಂಪನಿಯ ಅಧಿಕಾರಿಗಳು ಹಾಗೂ ಎಲ್ಲಾ ಇಲಾಖಾ ಅಧಿಕಾರಿಗಳು 3 ದಿನಗಳೊಳಗಾಗಿ ಜಂಟಿ ಸಮೀಕ್ಷೆ ಕೈಗೊಂಡು ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


Sunday, March 22, 2026

23-03-2026 EE DIVASA KANNADA DAILY NEWS PAPER

ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದ ವಾಲ್‌ಪೋಸ್ಟ್ರ ಬಿಡುಗಡೆ

ಮೇ ಸಾಹಿತ್ಯ ಮೇಳ ವಿಜಯಪುರ ಬಳಗ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದ ವಾಲ್ ಪೋಸ್ಟರ್‌ರನ್ನು ಚಿಂತಕ ಬಸವರಾಜ ಸೂಳಿಭಾವಿ ಅವರು ಬಿಡುಗಡೆಗೊಳಿಸಿದರು.

ವಿಜಯಪುರ : ಮೇ ಸಾಹಿತ್ಯ ಮೇಳ ವಿಜಯಪುರ ಬಳಗ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದ ವಾಲ್ ಪೋಸ್ಟರ್‌ರನ್ನು ಚಿಂತಕ ಬಸವರಾಜ ಸೂಳಿಭಾವಿ ಅವರು ಬಿಡುಗಡೆಗೊಳಿಸಿದರು.

ನಗರದ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ಪುಸ್ತಕ ಮೇಳದ ಉಪಸಮಿತಿಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದ ಉಪಸಮಿತಿ ಸದಸ್ಯರು ಪುಸ್ತಕ ಮೇಳವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿಯ ಬಿ.ಎಚ್. ನಾಡಗಿರಿ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಚನ್ನು ಕಟ್ಟಿಮನಿ, ಮಾನವ ಬಂಧುತ್ವ ವೇದಿಕೆಯ ಪ್ರಭುಗೌಡ ಪಾಟೀಲ, ನಿ, ಬೌದ್ಧವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷ ರಾಜಶೇಖರ ಯಡಹಳ್ಳಿ, ಉಪಾಧ್ಯಕ್ಷ ಶಶಿಕಾಂತ ಹೊನವಾಡಕರ್, ಪ್ರಧಾನ ಕಾರ್ಯದರ್ಶಿ ನಾಗರಾಜ ಲಂಬು, ನಿರ್ದೇಶಕ ರಾಜೇಶ ತೊರವಿ, ಸಂಘಟಕರಾದ ಅನಿಲ ಹೊಸಮನಿ, ಯಮನಪ್ಪ ಗುಣಕಿ, ಕೆ.ಎಂ. ಕೂಡಲಗಿ, ಮಿಲನಕುಮಾರ ನಾಮದಾರ, ಅಪ್ಪಾಸಾಹೇಬ ಯರನಾಳ, ಸುಖದೇವ ಕಟ್ಟಿಮ ಸುಭಾಸ ಹೊನಕಂಠಿ, ದಾನೇಶ ಅವಟಿ, ಭೀಮರಾವ ತಳಕೇರಿ, ಸಂತೋಷ ಶಹಾಪುರ, ಮಹಾಂತೇಶ ಕಟ್ಟಿಮನಿ, ಸಂಘರ್ಷ ಹೊಸಮನಿ, ಬಿ.ಆರ್. ಬಮಸೋಡೆ ಎಂ.ಇ.ಬಿ. ಹಳ್ಳದಮನಿ ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


Friday, March 20, 2026

21-03-2026 EE DIVASA KANNADA DAILY NEWS PAPER

ಆಲಗೂರದಲ್ಲಿ ಸಿಡಿಲು ಬಡಿದು 12 ಕುರಿ ಸಾವು.

ದೇವರಹಿಪ್ಪರಗಿ: ತಾಲೂಕಿನ ಆಲಗೂರ ಗ್ರಾಮದಲ್ಲಿ ಗುರುವಾರ ಸಂಜೆ 5.45ಗಂಟೆಗೆ ಸಿಡಿಲು ಬಡಿದು 12 ಕುರಿಗಳು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. 

ಗ್ರಾಮದ ಮಡಿವಾಳಪ್ಪ ಶರಣಪ್ಪ ಮಾಕೊಂಡ ಎಂಬುವರ ಕುರಿಗಳು ಸಾವನ್ನಪ್ಪಿದೆ. 12 ಕುರಿಗಳ ಸಾವಿನಿಂದ ರೈತನಿಗೆ ಸುಮಾರು 2.5ಲಕ್ಷ ರೂಪಾಯಿ ನಷ್ಟವಾಗಿದೆ. ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತ ಒತ್ತಾಯಿಸಿದ್ದಾನೆ. 
ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಈ ಕುರಿತು ಪ್ರಕರಣ ದಾಖಲಾಗಿದೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಜಾಹೀರಾತು ನೀತಿ–೨೦೨೬ ವಿರುದ್ಧ ಪತ್ರಿಕೆಗಳ ಆಕ್ರೋಶ: ನೀತಿ ಸ್ಥಗಿತಕ್ಕೆ ಒತ್ತಾಯ” ಜಿಲ್ಲಾಧಿಕಾರಿಗಳಿಗೆ ಮನವಿ

ವಿಜಯಪುರ : ರಾಜ್ಯ ಸರ್ಕಾರವು ೨೦೨೬–೨೭ನೇ ಹಣಕಾಸು ವರ್ಷದಿಂದ ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ಜಾಹೀರಾತು ನೀತಿ–೨೦೨೬ ವಿರುದ್ಧ ರಾಜ್ಯದ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಈ ನೀತಿಯಲ್ಲಿ ಅಳವಡಿಸಿರುವ ಅನೇಕ ಅಂಶಗಳು ಸಣ್ಣ ಮತ್ತು ಪ್ರಾದೇಶಿಕ ಪತ್ರಿಕೆಗಳ ಬೆಳವಣಿಗೆಗೆ ಮಾರಕವಾಗಿದ್ದು, ಅವುಗಳ ಅಸ್ತಿತ್ವಕ್ಕೂ ಧಕ್ಕೆಯುಂಟುಮಾಡುವ ಸಾಧ್ಯತೆ ಇದೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿತು.

 ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವು ದಶಕಗಳಿಂದ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿವೆ. ಆದರೆ ಹೊಸ ಜಾಹೀರಾತು ನೀತಿಯಲ್ಲಿ ಈ ಪತ್ರಿಕೆಗಳ ಹಿತಾಸಕ್ತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಲಾಗಿದೆ. ವಿಶೇಷವಾಗಿ, ಈ ನೀತಿಯನ್ನು ರೂಪಿಸುವ ವೇಳೆ ಯಾವುದೇ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ತಯಾರಿಸಿರುವುದು ವಿಷಾದನೀಯವಾಗಿದೆ ಎಂದು ತಿಳಿಸಿದೆ.

ಈ ನೀತಿಯ ಪ್ರಮುಖ ಸಮಸ್ಯೆಗಳಾಗಿ, ಪ್ರಸಾರ ಸಂಖ್ಯೆಗೆ ಸಂಬAಧಿಸಿದ ಕಠಿಣ ನಿಯಮಗಳನ್ನು ಅಳವಡಿಸಿರುವುದು, ಪ್ರಾದೇಶಿಕ ಪತ್ರಿಕೆಗಳನ್ನು ಅವೈಜ್ಞಾನಿಕವಾಗಿ ಪಂಗಡ ಎ ಮತ್ತು ಬಿ ಎಂದು ವರ್ಗೀಕರಿಸಿರುವುದು, ಜಾಹೀರಾತು ದರ ಪರಿಷ್ಕರಣೆಯನ್ನು ಸಮರ್ಪಕವಾಗಿ ೬ ವರ್ಷಗಳಿಂದ ಮಾಡದೇ ಇರುವುದನ್ನು ಸಂಘಟನೆಗಳು ಗುರುತಿಸಿವೆ. ಕೋವಿಡ್ ನಂತರ ಹಾಗೂ ಡಿಜಿಟಲ್ ಮಾಧ್ಯಮಗಳ ಹೆಚ್ಚುತ್ತಿರುವ ಪ್ರಭಾವದಿಂದಾಗಿ ಈಗಾಗಲೇ ಸಣ್ಣ ಪತ್ರಿಕೆಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಇಂತಹ ನಿಯಮಗಳು ಅವುಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡಲಿವೆ ಎಂದು ಅಭಿಪ್ರಾಯಪಟ್ಟಿವೆ.

ಇದಲ್ಲದೆ, ಎಲ್ಲ ಬೆಲೆಗಳು ಗಗನಕ್ಕೆ ಏರುತ್ತಿರುವಾಗ ಜಾಹೀರಾತು ದರಗಳನ್ನು ಇಳಿಸುವ ಕ್ರಮ ಯಾವ ನ್ಯಾಯ, ಪತ್ರಿಕೆಗಳ ಅಭಿವೃದ್ದಿಗಾಗಿ ಪ್ರೋತ್ಸಾಹ ರೂಪದ ಜಾಹೀರಾತುಗಳನ್ನು ನೀಡುತ್ತಿರುವಾಗ ಪ್ರೋತ್ಸಾಹ ರೂಪದ ಜಾಹೀರಾತುಗಳನ್ನು ‘ಸನ್ಸೆಟ್ ಕ್ಲಾಜ್’ ಅಳವಡಿಸಿ ಜಾಹೀರಾತು ನಿಲ್ಲಿಸುವ ಕ್ರಮ ಹಾಗೂ ಟೆಂಡರ್ ಜಾಹೀರಾತುಗಳ ಹಂಚಿಕೆಯಲ್ಲಿ ಕಡಿತ ಮಾಡುವ ಕ್ರಮಗಳು ಸಣ್ಣ ಪತ್ರಿಕೆಗಳ ಆದಾಯ ಮೂಲಗಳನ್ನು ಕುಂಠಿತಗೊಳಿಸಲಿವೆ ಎಂದು ಸಂಘಟನೆಗಳು ಎಚ್ಚರಿಸಿವೆ. ಗಡಿ ಭಾಗದ ಕನ್ನಡ ಪತ್ರಿಕೆಗಳಿಗೆ ನೀಡಲಾಗುತ್ತಿದ್ದ ಜಾಹೀರಾತು ಬೆಂಬಲವನ್ನು ಮುಂದುವರಿಸಬೇಕೆAಬ ಬೇಡಿಕೆಯನ್ನೂ ಸಂಘಟನೆಗಳು ಮುಂದಿಟ್ಟಿವೆ.

 ಪ್ರೋತ್ಸಾಹ ರೂಪದ ಜಾಹೀರಾತುಗಳನ್ನು ಹಾಗೂ ಗಡಿ ಭಾಗದ ಜಾಹೀರಾತುಗಳನ್ನು

ಎರಡು ಮುಂದುವರೆಸಬೇಕು ಹಾಗೂ ಒಂದು ಕುಟುಂಬಕ್ಕೆ  ಮತ್ತು ಆವೃತ್ತಿಗಳಿಗೂ ಒಂದೇ ಸೌಲಭ್ಯ ಎಂದು ಹೇಳುವಾಗ, ಎಲ್ಲ ಖರ್ಚು ಮಾಡಿ ಪತ್ರಿಕೆಗಳು ಸಮಾಜದ ಮುಖವಾಣಿಯಾಗಿರುವಾಗ ಈ ನೀತಿ ಏಕೆ? ಈಗಿನ ಸೌಲಭ್ಯಗಳು ನಿರಂತರವಾಗಿ ಪತ್ರಿಕೆಗಳಿಗೆ ಮುಂದುವರೆಯಬೇಕು ಎಂದು ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡು, ಕರ್ನಾಟಕ ಜಾಹೀರಾತು ನೀತಿ–೨೦೨೬ ಅನ್ನು ತಕ್ಷಣ ಸ್ಥಗಿತಗೊಳಿಸಿ, ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಪುನರ್ ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿವೆ. ಪತ್ರಿಕೆಗಳ ಬೆಳವಣಿಗೆಗೆ ಪೂರಕವಾಗುವ ರೀತಿಯಲ್ಲಿ ನೀತಿಯಲ್ಲಿ ತಿದ್ದುಪಡಿ ಮಾಡಬೇಕು ಎಂದು ತಿಳಿಸಿವೆ.

ಒಟ್ಟಿನಲ್ಲಿ, ಸಣ್ಣ ಮತ್ತು ಪ್ರಾದೇಶಿಕ ಪತ್ರಿಕೆಗಳನ್ನು ಉಳಿಸುವುದು ಪ್ರಜಾಪ್ರಭುತ್ವದ ಬಲವರ್ಧನೆಗೆ ಅತ್ಯಗತ್ಯವಾಗಿದ್ದು, ಸರ್ಕಾರವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.

  ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ, ಇರ್ಪಾನ್ ಶೇಖ, ಹಿರಿಯ ಸಂಪಾದಕರಾದ ಮೋಹನ ಕುಲಕರ್ಣಿ, ರಶ್ಮಿ ಪಾಟೀಲ, ಪಾಂಡುರAಗ ಮಮದಾಪುರ, ಮಹೇಶ ಶೆಟಗಾರ, ಮಾಧವರಾವ ಕುಲಕರ್ಣಿ, ಸುಶೀಲೇಂದ್ರ ನಾಯಕ, ಸೀತಾರಾಮ ಕುಲಕರ್ಣಿ, ಇಂದುಶೇಖರ ಮಣೂರ, ಸಂಜೀವ ಕುಲಕರ್ಣಿ, ಶರದ ಅರ್ಜುಣಗಿ, ಸಿದ್ದಣ್ಣ ವಿಜಾಪುರ, ಅವಿನಾಶ ಬಿದರಿ, ಚಿದಂಬರ ಕುಲಕರ್ಣಿ, ಶರಣು ಮಸಳಿ, ಕೆ. ಕೆ. ಕುಲಕರ್ಣಿ, ಗುರು ಗದ್ದನಕೇರಿ, ಫಯಾಜ್ ಕಲಾದಗಿ, ಸಿದ್ದು ವಿಜಾಪುರ, ಕೌಶಲ್ಯ ಪನಾಳಕರ, ರಾಜು ಢವಳಗಿ, ಸಂಜಯ ಕೊಂಡಗೂಳಿ,  ಪುಂಡಲಿಕ ಮುರಾಳ ಮುಂತಾದವರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


ರಾಂಪುರ ಬೆನಕೋಟಗಿ, ಮಲಘಾಣ ಸೇರುವ ರಸ್ತೆಗೆ ರೂ.2ಕೋಟಿ ಅನುದಾನ ಮಂಜೂರು

 ಸಿಂದಗಿ: ರಾಂಪುರ ಬೆನಕೋಟಗಿ, ಮಲಘಾಣ ಸೇರುವ ರಸ್ತೆಗೆ ರೂ.2ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಅತೀ ಶೀಘ್ರದಲ್ಲಿಯೇ ಭೂಮಿ ಪೂಜೆ ಮಾಡಲಾಗುವುದು. ರಾಂಪುರ ಸಿಂದಗಿ ಪ್ರಮುಖ ರಸ್ತೆ ಸುಧಾರಣೆಗೆ ರೂ.4ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಶಾಸಕ ಅಶೋಕ ಹೇಳಿದರು.

 ತಾಲೂಕಿನ ರಾಂಪುರ ಪಿಎ ಗ್ರಾಮದ ಆರೂಢ ಸಂಗನಬಸವೇಶ್ವರ ಮಠದಲ್ಲಿ ಸಿಂದಗಿ ಲೋಕೋಪಯೋಗಿ ಇಲಾಖೆಯ 2025-26ನೆಯ ಸಾಲಿನ ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರೂ.25ಲಕ್ಷ ಸಮುದಾಯ ಭವನ ನಿರ್ಮಾಣ ಭೂಮಿ ಪೂಜೆ ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ವಿರೋಧ ಪಕ್ಷದವರು ಟೀಕೆ ಟಿಪ್ಪಣಿಗಳನ್ನು ಮಾಡುತ್ತಾರೆ ಅದಕ್ಕೆ ಕಿವಿಗೋಡದೆ ನಾನು ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತಾ ಹೋಗುತ್ತೇನೆ. ಅಭಿವೃದ್ಧಿಯೇ ನನ್ನ ಮೂಲ ಮಂತ್ರ. ಸಿಕ್ಕ ಅವಕಾಶವನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಂಡು ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತೇನೆ. ಗ್ಯಾರಂಟಿಯಿAದಾಗಿ ರಾಜ್ಯ ಸರಕಾರದಲ್ಲಿ ಹಣವಿಲ್ಲ ಎಂದು ಬೊಬ್ಬೆ ಹೊಡೆಯುವ ವಿರೋಧ ಪಕ್ಷದವರಿಗೆ ಒಂದು ಬಾರಿ ಸಿಂದಗಿ ಸುತ್ತಿ ನೋಡಲಿ ಎಂದರು. 

 ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಮಠ ನಿತ್ಯಾನಂದ ಮಹಾರಾಜರು ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ತಾಲೂಕಾಧ್ಯಕ್ಷ ವಾಯ್.ಸಿ.ಮಯೂರ, ಕುಮಾರ ದೇಸಾಯಿ, ಗುರುಗೌಡ ಬಿರಾದಾರ , ಡಾ.ಮಹಾಂತೇಶ ಹಿರೇಮಠ, ಅಮಿರಂಜಾನ ಮುಜಾವರ, ನಾಗೇಶ ಪತ್ತಾರ, ಶಶಿ ಗಾಯಕವಾಡ, ರಮೇಶ ಭಂಟನೂರ, ಗುರಣ್ಣ ಹುಮನಾಬಾದ, ಶಶಿಕಲಾ ಅಂಗಡಿ, ಶೇಕಪ್ಪ ಅಂಗಡಿ, ಕುಪೇಂದ್ರಗೌಡ ಬಿರಾದಾರ, ಅನಿಲಕುಮಾರ ದೊಡಮನಿ, ವಿಜಯ ಚವ್ಹಾಣ, ಶರಣಪ್ಪ ವಾರದ, ಶಿವಬಸವ ಅಂಗಡಿ, ಪುಟ್ಟು ದೇಸಾಯಿ, ಮಹೇಶ ಸಾವಳಸಂಗ, ಮಹಾಂತೇಶ ಪೂಜಾರಿ, ಈರಯ್ಯ ಹಿರೇಮಠ, ಅಪ್ಪು ರಾಠೋಡ, ಈರಣ್ಣ ನಾಯ್ಕೋಡಿ ಸೇರಿದಂತೆ ಶ್ರೀಮಠದ ಭಕ್ತರು ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


Tuesday, March 17, 2026

18-03-2026 EE DIVASA KANNADA DAILY NEWS PAPER

ಎಸ್ಸೆಸ್ಸೆಲ್ಸಿ ಸುಸೂತ್ರ ಪರೀಕ್ಷೆಗೆ ಜಿಲ್ಲಾಡಳಿತ ಸಂಪೂರ್ಣ ಸಜ್ಜು ಮಾ.೧೮ ರಿಂದ ಜಿಲ್ಲೆಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ

ವಿಜಯಪುರ  : ಜಿಲ್ಲೆಯಾದ್ಯಂತ ಒಟ್ಟು ೧೩೭ ಪರೀಕ್ಷಾ ಕೇಂದ್ರಗಳಲ್ಲಿ ಇದೇ ಮಾರ್ಚ್ ೧೮ ರಿಂದ ಎಸ್ ಎಸ್ ಎಲ್‌ಸಿ ಪರೀಕ್ಷೆ ಆರಂಭಗೊಳ್ಳಲಿದ್ದು, ನಕಲು ಮುಕ್ತ ಹಾಗೂ ಪಾರದರ್ಶಕ ಪರೀಕ್ಷೆ ನಡೆಸಲು  ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. 

ಏಪ್ರಿಲ್ ೨ ರವರೆಗೆ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು  ಜಿಲ್ಲೆಯ ೭ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ  ನೋಡಲ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ ಆನಂದ ಕೆ. ಅವರು ತಿಳಿಸಿದ್ದಾರೆ. 

ತಾಲೂಕುವಾರು ಮಾರ್ಗಗಳನ್ನು ನಿಗದಿಪಡಿಸಿ ಪ್ರಶ್ನೆಪತ್ರಿಕೆಗಳನ್ನು ಮಾರ್ಗಾಧಿಕಾರಿಗಳ ಮೂಲಕ ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಅವಧಿಯಲ್ಲಿ, ಸುರಕ್ಷಿತವಾಗಿ ಪೊಲೀಸ್ ಬಂದೋಬಸ್ತ್ ನಲ್ಲಿ ತಲುಪಿಸುವ  ವ್ಯವಸ್ಥೆಯನ್ನು ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಮಾರ್ಗಸೂಚಿ ಅಧಿಸೂಚನೆಯಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಸೂಚನೆಗಳನ್ನು ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. 

ವೆಬ್ ಕಾಸ್ಟಿಂಗ್ ವ್ಯವಸ್ಥೆ :ಪರೀಕ್ಷೆಯನ್ನು ನಕಲು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸಲು ಜಿಲ್ಲಾ ಮಟ್ಟದಲ್ಲಿ ಒಟ್ಟು ೧೩೭ ಪರೀಕ್ಷಾ ಕೇಂದ್ರಗಳ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದ ಪ್ರತಿಯೊಂದು ಕೊಠಡಿಯನ್ನು ಒಂದು ಪರೀಕ್ಷಾ ಕೇಂದ್ರಕ್ಕೆ ಒಬ್ಬರು ವೀಕ್ಷಕರಂತೆ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಬಿಗಿ ಪೋಲಿಸ್ ಬಂದೊಬಸ್ತ್: ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳು ಭಯಮುಕ್ತ ವಾತಾವರಣದಲ್ಲಿ ಪರೀಕ್ಷೆ ಬರೆಯಲು ಪ್ರಶ್ನೆ ಪತ್ರಿಕೆ ಸಾಗಾಣಿಕೆಗೆ ಹಾಗೂ ಪರೀಕ್ಷಾ ಕೇಂದ್ರಗಳ ಸುತ್ತ ಸೂಕ್ತ ಪೊಲೀಸ್ ಭದ್ರತೆಯ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿಗಳ ನೇತೃತ್ವದಲ್ಲಿ ಮಾಡಲಾಗಿದೆ. ಪರೀಕ್ಷಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳಿಗೆ ಮೊಬೈಲ್ ನಿಷೇಧಿಸಲಾಗಿದೆ. ಅಲ್ಲದೇ, ಪರೀಕ್ಷಾ ಕೇಂದ್ರದ ೨೦೦ ಮಿ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಯುವ ದಿನ ಬೆಳಿಗ್ಗೆ ೮.೩೦ ರಿಂದ ಪರೀಕ್ಷೆ ಮುಕ್ತಾಯದವರೆಗೆ ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ.

ಪರೀಕ್ಷಾ ಕೇಂದ್ರದ ೨೦೦ ಮೀ.  ವ್ಯಾಪ್ತಿಯಲ್ಲಿನ ಝರಾಕ್ಸ್ ಅಂಗಡಿಗಳು, ಸೈಬರ್ ಕೆಫೆಗಳು, ಕೊಚಿಂಗ್ ಸೆಂಟರ್‌ಗಳನ್ನು ಪರೀಕ್ಷೆ ಮುಗಿಯುವವರೆಗೆ ಮುಚ್ವುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೇ ಭಯ ಮುಕ್ತರಾಗಿ ಧೈರ್ಯದಿಂದ ಪರೀಕ್ಷೆಯನ್ನು ಬರೆಯಬಹುದಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ  ವೀರಯ್ಯ ಸಾಲಿಮಠ ಹಾಗೂ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಟಿ. ಎಸ್. ಕೊಲಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.




Monday, March 16, 2026

17-03-2026 EE DIVASA KANNADA DAILY NEWS PAPER

ಇಂಡಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಎಲ್ಲಾ ಸಿದ್ಧತೆ ಪೂರ್ಣ : ಬಿಇಒ

ಇಂಡಿ :  2025–26ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳು ಮಾರ್ಚ್‌ 18ರಿಂದ ಏಪ್ರಿಲ್‌ 2ರವರೆಗೆ ನಡೆಯಲಿದ್ದು, ಇಂಡಿ ತಾಲೂಕಿನಲ್ಲಿನ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಬ್ಲಾಕ್‌ ಶಿಕ್ಷಣಾಧಿಕಾರಿ (ಬಿಇಒ) ತಿಳಿಸಿದ್ದಾರೆ.

ಈ ವರ್ಷ ಇಂಡಿ ತಾಲೂಕಿನಿಂದ ಒಟ್ಟು 4,706 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಲಿದ್ದಾರೆ. ಇದರಲ್ಲಿ 2,481 ಹುಡುಗರು ಮತ್ತು 2,225 ಹುಡುಗಿಯರು ಸೇರಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.

ತಾಲೂಕಿನಲ್ಲಿ ಒಟ್ಟು 19 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅವುಗಳಲ್ಲಿ ಪಟ್ಟಣ ಪ್ರದೇಶದಲ್ಲಿ 9 ಕೇಂದ್ರಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ 10 ಕೇಂದ್ರಗಳು ಕಾರ್ಯನಿರ್ವಹಿಸಲಿವೆ.

ಪರೀಕ್ಷೆಗಳು ಯಾವುದೇ ಅಡಚಣೆ ಇಲ್ಲದೆ ಸುಗಮವಾಗಿ ನಡೆಯುವಂತೆ ತಹಸೀಲ್ದಾರ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ವೀಕ್ಷಕ ದಳಗಳನ್ನು ರಚಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಸ್ಥಳೀಯ ಮೇಲ್ವಿಚಾರಕರನ್ನು ನಿಯೋಜಿಸಲಾಗಿದ್ದು, ಭದ್ರತೆ ಹಾಗೂ ಪಾರದರ್ಶಕತೆಗೆ 5 ಗಂಟೆಗಳ ಬ್ಯಾಟರಿ ಬ್ಯಾಕಪ್ ಹೊಂದಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರನ್ನು ಪ್ರತಿ ಕೇಂದ್ರದಲ್ಲೂ ನಿಯೋಜಿಸಲಾಗಿದೆ. ಜೊತೆಗೆ ಕುಡಿಯುವ ನೀರು ಹಾಗೂ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ.

ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ ಫೋನ್ ಹಾಗೂ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ತರಲು ಕಟ್ಟುನಿಟ್ಟಿನ ನಿಷೇಧ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಶಾಂತಿಯುತವಾಗಿ ಹಾಗೂ ಕ್ರಮಬದ್ಧವಾಗಿ ನಡೆಯಲು ಅಗತ್ಯ ಎಲ್ಲಾ ವ್ಯವಸ್ಥೆಗಳು ಸಿದ್ಧವಾಗಿವೆ ಎಂದು ಬ್ಲಾಕ್‌ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.


ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.



Thursday, March 12, 2026

13-03-2026 EE DIVASA KANNADA DAILY NEWS PAPER

ಏ. 10 ರಿಂದ ಮೊದಲ ಬಾರಿಗೆ ಬುದ್ಧ, ಬಸವ, ಅಂಬೇಡ್ಕರ್ ಪುಸ್ತಕ ಮೇಳ: ಸೂಳಿಬಾವಿ

ವಿಜಯಪುರ: ಮೊದಲ ಬಾರಿಗೆ ನಗರದಲ್ಲಿ ಏ. 10 ರಿಂದ 14, 2026 ಐದು ದಿನಗಳ ಕಾಲ ಬಿಜಾಪುರ ಬುದ್ಧ, ಬಸವ ಹಾಗೂ ಬಾಬಾಸಾಹೇಬ ಅಂಬೇಡ್ಕರ್ ಬೃಹತ್ ಪುಸ್ತಕ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಪ್ರಗತಿಪರ ಚಿಂತಕ, ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಬೆಂಗಳೂರು, ಮೈಸೂರು ಭಾಗದಲ್ಲಿ ಸೀಮಿತಗೊಂಡಿದ್ದ ಪುಸ್ತಕ ಮೇಳ ಈ ಭಾಗದಲ್ಲಿ ನಡೆಯುತ್ತಿರುವುದು ವಿಶೇಷ. ಮಹಾತ್ಮ ಜ್ಯೋತಿಬಾ ಫುಲೆ, ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನ ನಿಮಿತ್ತ ಹಮ್ಮಿಕೊಂಡ ಈ ಕಾರ್ಯಕ್ರಮ ಇಲ್ಲಿನ ದರಬಾರ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ ಎಂದರು.
ಏ. 10 ಎಂದು ಪುಸ್ತಕ ಮೇಳೆ ಉದ್ಘಾಟನೆ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪುಸ್ತಕ ಮೇಳ ಸ್ಥಳದ ವರೆಗೆ ಪುಸ್ತಕಗಳ ಜೊತೆ ಲೇಖಕರ ಮೆರವಣಿಗೆ ನಡೆಯಲಿದೆ. ಏ. 11 ರಂದು ಮಹಾತ್ಮ ಜ್ಯೋತಿಬಾ ಫುಲೆ ಜನ್ಮದಿನ ನಿಮಿತ್ತ ಸಾವಿತ್ರಿಬಾಯಿ ಫುಲೆ ಮಾರ್ಗದಿಂದ ಪುಸ್ತಕ ಮೇಳದ ಸ್ಥಳದವರೆಗೆ ಶಿಕ್ಷಕ ದಂಪತಿಗಳ ಮೆರವಣಿಗೆ, ಏ. 12 ರಂದು ಬಸವಾದಿ ಶರಣರ ವಚನಗಳ ಕಟ್ಟುಗಳೊಂದಿಗೆ ಬಸವೇಶ್ವರ ವೃತ್ತದಿಂದ ಕಾರ್ಯಕ್ರಮ ಸ್ಥಳದ ವರೆಗೆ ಬಸವಾನುಯಾಯಿಗಳ ಮೆರವಣಿಗೆ, ಏ. 13 ರಂದು ಅಸ್ಪೃಶ್ಯರ ಶಿಕ್ಷಣಕ್ಕಾಗಿ ಶ್ರಮಿಸಿದ ಕಾಕಾ ಕಾರ್ಖಾನೀಸ್ ಸ್ಮರಣೆ ನಿಮಿತ್ತ ಅವರ ಬೋರ್ಡಿಂಗ್‌ನಲ್ಲಿದ್ದು, ಶಿಕ್ಷಣ ಪಡೆದವರು, ಅವರ ಕುಟುಂಬಸ್ಥರಿAದ ಕಾಕಾ ಕಾರ್ಖಾನೀಸ್ ಅವರ ಮನೆಯಿಂದ ಕಾರ್ಯಕ್ರಮ ಸ್ಥಳದ ವರೆಗೆ ಮೆರವಣಿಗೆ ಹಾಗೂ ಏ. 14 ರಂದು ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನ ನಿಮಿತ್ತ ನಗರದ ಅಂಬೇಡ್ಕರ್ ವೃತ್ತದಿಂದ ಕಾರ್ಯಕ್ರಮದ ಸ್ಥಳದವರೆಗೆ ಸಂವಿಧಾನ ಪೀಠಿಕೆ ಕಂಠಪಾಠ ಮಾಡಿದ ವಿದ್ಯಾರ್ಥಿ ಮತ್ತು ಶಿಕ್ಷಕರ ಮೆರವಣಿಗೆ ನಡೆಯಲಿದೆ ಎಂದರು.
ಇನ್ನು ಪ್ರತಿದಿನ ಸಂಜೆ 4 ರಿಂದ ರಾತ್ರಿ 9 ಗಂಟೆ ವರೆಗೆ ಕವಿಗೋಷ್ಠಿ, ವಿದ್ಯಾರ್ಥಿಗಳಿಂದ ಪುಸ್ತಕ ಕುರಿತು ಮಾತು, ಲೇಖಕರೊಂದಿಗೆ ಸಂವಾದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇAದಿನ ಯುವ ಪೀಳಿಗೆಯಲ್ಲಿ ಪುಸ್ತಕ ಓದುವ ಸಂಖ್ಯೆ ಕಡಿಮೆಯಾಗುತ್ತಿದ್ದು, ಈ ಪುಸ್ತಕ ಮೇಳದಿಂದ ಪುಸ್ತಕ ಓದುವ ಪ್ರೇಮ ಹಾಗೂ ಜಾಗೃತಿ ಹೆಚ್ಚಿಸುವ ಕಾರ್ಯ ಮಾಡಲಾಗುವುದು ಎಂದರು.
ಹಿರಿಯ ಮುಖಂಡ ಅನಿಲ ಹೊಸಮನಿ ಮಾತನಾಡಿ, ಈ ಪುಸ್ತಕ ಮೇಳ ವಿಶೇಷ ಕಾರ್ಯಕ್ರಮವಾಗಿದ್ದು, ಲಡಾಯಿ ಪ್ರಕಾಶನ, ಕವಿ ಪ್ರಕಾಶನ, ದಲಿತ ಕಲಾ ಮಂಡಳಿ, ಚಿತ್ತಾರ ಕಲಾಬಳಗ, ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಸೇರಿದಂತೆ ಹತ್ತಾರು ಸಂಘ, ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿದ್ದು, 50 ಪುಸ್ತಕ ಮಳಿಗೆಗಳು ಸ್ಥಾಪಿಸಲಾಗುತ್ತಿದ್ದು, 1 ಲಕ್ಷ ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಮುಖAಡರಾದ ಚನ್ನು ಕಟ್ಟಿಮನಿ, ಸಂಜು ಕಂಬಾಗಿ, ಶಿವಪುತ್ರ ಅಜಮನಿ, ಫಯಾಜ್ ಕಲಾದಗಿ, ಬೋಗೇಸ ಸೊಲ್ಲಾಪುರ, ಪ್ರಭುಗೌಡ ಪಾಟೀಲ, ಸುಖದೇವ ಕಟ್ಟಿಮನಿ, ಸಂಗೀತಾ ಪೂಜಾರಿ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Tuesday, March 10, 2026

11-03-2026 EE DIVASA KANNADA DAILY NEWS PAPER

ಪ್ರಶ್ನೆ ಮತ್ತು ಪ್ರತಿಭಟನೆಗಳೇ ಲೇಖಕನ ಮೂಲ ದ್ರವ್ಯ : ನಾಗತಿಹಳ್ಳಿ ಚಂದ್ರಶೇಖರ

ಬೆಂಗಳೂರು :  ಮನುಷ್ಯನಲ್ಲಿ ಒಡಮೂಡುವ ಪ್ರಶ್ನೆ ಮತ್ತು ಪ್ರತಿಭಟಿಸುವ ಆತನ ಮನೋಧರ್ಮಗಳೇ ಒಬ್ಬ ಲೇಖಕನ ಮೂಲ ದ್ರವ್ಯವಾಗಿದೆ. ಅವುಗಳಿಂದಲೇ ಬರಹ ಹೊಮ್ಮುತ್ತದೆ ಮತ್ತು ಸಾಹಿತ್ಯ ಗಟ್ಟಿಗೊಳ್ಳುತ್ತದೆ ಎಂದು ಖ್ಯಾತ ಲೇಖಕ ಮತ್ತು ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. 

 ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ ನಯನ ರಂಗಮಂದಿರದಲ್ಲಿ ಆಯೋಜಿಸಿದ್ದ 49 ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡುತಿದ್ದರು. ಸಾಮಾಜಿಕ ಜಾಲತಾಣಗಳ ಇಂದಿನ ಯುಗದಲ್ಲಿ ಹೊಸಬರಹಗಾರರು  ಏನನ್ನೇ ಬರೆದರೂ ಅದನ್ನು ಜಾಲತಾಣದಲ್ಲಿ ಮೊದಲು ಹಾಕುವ ಹವ್ಯಾಸ ಹೊಂದಿದ್ದಾರೆ. ಆದರೆ ಒಬ್ಬ ಲೇಖಕನ ಮೊದಲ ಬರಹ ಪುಸ್ತಕ ರೂಪದಲ್ಲಿ ಬಂದಾಗ ಸಿಗುವ ಸಂತೋಷ ಬೇರೆಯದ್ದೇ ಆಗಿರುತ್ತದೆ. ಆದ್ದರಿಂದ ಪುಸ್ತಕ ಬರೆಯುವ ಮತ್ತು ಪುಸ್ತಕ ಓದುವ ಹವ್ಯಾಸವನ್ನು ಇಂದಿನ ಯುವಪೀಳಿಗೆ ರೂಢಿಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು. ಕಥೆ ಬರೆಯುವ ತಲ್ಲಣ್ಣ ಸೃಷ್ಠಿಸುವ ಅನುಭವಗಳೇ ಒಬ್ಬ ಲೇಖಕನ ಮನೋಧರ್ಮವನ್ನು ರೂಪಿಸುತ್ತದೆ. ಕನ್ನಡ ಸಾಹಿತ್ಯ ಲೋಕ ಅತ್ಯಂತ ಸಮೃದ್ಧವಾದದ್ದು. ಅದನ್ನು ಓದಿದಾಗ ಮಾತ್ರವೇ ಅಲ್ಲಿನ ಅನುಭವವಗಳನ್ನು ಗ್ರಹಿಸಲು ಸಾಧ್ಯ. ಹಾಗಾಗಿ ಪುಸ್ತಕ ಲೋಕ ಕಟ್ಟಿಕೊಡಬಲ್ಲ ಅನುಭವ ಬೇರೆಯಾವುದೇ ಮಾಧ್ಯಮ ನೀಡಲು ಸಾಧ್ಯವಿಲ್ಲ ಎಂದು ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು. 


 ಇಂದು ಬಿಡುಗಡೆಯಾಗಿರುವ ಕೃತಿಗಳಲ್ಲಿ ಹೊಸತನ ಇದೆ. ಎಲ್ಲಾ ಪ್ರಕಾರಗಳ ಸಾಹಿತ್ಯ ಇಲ್ಲಿ ಕಾಣಸಿಗುತ್ತಿದೆ. ಅಂದರೆ ಇಂದಿನ ಯುವಬರಹಗಾರರು ಯಾವುದೇ ಒಂದು ಪ್ರಾಕಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಇಂದಿನ ಯುವ ಜನರಿಗೆ ಅವಶ್ಯವೂ ಹೌದು. ಪ್ರತಿಯೊಂದು ಪ್ರಕಾರದಲ್ಲಿಯೂ ತಮ್ಮ ಬರಹದ ಪ್ರಯೋಗವನ್ನು ಮಾಡಬೇಕು. ಯಾವುದೇ ಸಾಹಿತ್ಯ ಹಳತಲ್ಲ. ನಿತ್ಯ ನವೀಕರಣ ಪ್ರತಿಯೊಂದು ವಿಭಾಗಕ್ಕೂ ಅಗತ್ಯವಿದೆ ಎಂದು ಕಿವಿಮಾತು ಹೇಳಿದರು. 


 ಸಮಾರಂಭದಲ್ಲಿ ಭಾಗಿಯಾಗಿದ್ದ ಖ್ಯಾತ ಸಾಹಿತಿ ಸಂಶೋಧಕ ನಾಡೋಜ ಡಾ. ಹಂಪ ನಾಗರಾಜಯ್ಯ ಅವರು ಕನ್ನಡ ಸಾಹಿತ್ಯಕ್ಕೆ ಅಡಿ ಇಡುತ್ತಿರುವ ಎಲ್ಲಾ ಯುವಲೇಖಕರಿಗೆ ಶುಭ ಕೋರಿದರು.

 ಸಮಾರಂಭದ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಾಹಿತಿ ಸತೀಶ್ ಕುಲಕರ್ಣಿ ಅವರು ಎಲ್ಲಾ ಮೊದಲುಗಳು ಪ್ರತಿಯೊಬ್ಬರ ಜೀವನದಲ್ಲಿಯೂ ಸ್ಮರಣೀಯವಾಗಿ ಉಳಿಯುತ್ತದೆ. ಹಾಗಾಗಿ 49 ಬರಹಗಾರರ ಬದುಕಿನಲ್ಲೂ ಅವರ ಈ ಮೊದಲ ಕೃತಿಗಳು ಹಾಗೂ ಪ್ರಾಧಿಕಾರದ ಈ ಕಾರ್ಯಕ್ರಮ ಅವಿಸ್ಮರಣೀಯವಾಗಿರುತ್ತದೆ ಎಂದರು. ಹೊಸ ಲೇಖಕರು ಸಾಮಾಜಿಕ ಮಾಧ್ಯಮ ತಾಣಗಳಿಂದ ಹೊರಬಂದು ಪುಸ್ತಕ ಸಂಸ್ಕೃತಿಯ ಕಡೆಗೆ ಮನಸ್ಸು ಮಾಡಬೇಕು. ಸಮಕಾಲೀನ ಓದಿನ ವಿಧಾನ ಬದಲಾಗಿದೆ. ಓದಿನ ಪ್ರವೃತ್ತಿಯೂ ಬದಲಾಗಿದೆ. ಹಾಗಾಗಿ ಇಂದಿನ ಯುವಪೀಳಿಗೆ ಹೊಸ ಪ್ರಯೋಗಗಳಲ್ಲಿ ತೊಡಗಿಕೊಂಡಿದೆ. ಪುಸ್ತಕ ಸ್ಪರ್ಶ ಕೊಡುವ ಅನುಭವವನ್ನು, ಸಂತೋಷವನ್ನು, ಬೇರೆ ಯಾವುದೇ ಮಾಧ್ಯಮಗಳು ಕೊಡುವುದಿಲ್ಲ ಎಂದರು. ಉತ್ತರ ಕರ್ನಾಟಕದ, ಅದರಲ್ಲಿಯೂ ಗದಗದಂತಹ ಜಿಲ್ಲೆಯಲ್ಲಿ ಮುದ್ರಣಾಲಯಗಳು ದೊಡ್ಡ ಪ್ರಮಾಣದಲ್ಲಿ ಸ್ಥಾಪಿಸಲ್ಪಟ್ಟಿವೆ. ಪುಸ್ತಕ ಸಂಸ್ಕೃತಿ ಆ ಭಾಗದಲ್ಲಿ ಸಮೃದ್ಧವಾಗಿದೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ. ಬಿ.ಎಸ್. ಮಂಜುನಾಥ ಸ್ವಾಮಿ ಅವರು ಮಾತನಾಡಿ ಪುಸ್ತಕ ಪ್ರಾಧಿಕಾರದ ಈ ಯೋಜನೆ ಶ್ಲಾಘನೀಯವಾಗಿದೆ. ಕನ್ನಡ ಸಾಹಿತ್ಯಕ್ಕೆ 49 ಯುವಲೇಖಕರು ಅಡಿ ಇಡುತಿದ್ದಾರೆ. ಅವರು ಕನ್ನಡ ಸಾಹಿತ್ಯಕ್ಕೆ ದೊಡ್ಡಮಟ್ಟದ ಕೊಡುಗೆ ನೀಡುವಂತಾಗಲಿ ಎಂದು ಹಾರೈಸಿದರು. ಇಂತಹ ಯೋಜನೆಗಳು ಸಾಂಸ್ಕೃತಿಕ ಲೋಕವನ್ನು ಕಟ್ಟುವ ಕೆಲಸ ಮಾಡುತ್ತದೆ.  ಪ್ರಾಧಿಕಾರದ ಈ ಪ್ರಯತ್ನದ ಫಲವಾಗಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿಭೆಗಳು ಬೆಳಕಿಗೆ ಬರುವಂತಾಗಿದೆ ಎಂದು ಹೇಳಿದರು. 


 ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅವರು ಮಾತನಾಡಿ ಪುಸ್ತಕ ಪ್ರಾಧಿಕಾರ ನಿರಂತರವಾಗಿ ಯುವಲೇಖಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಮುಂದಿನ ದಿನಮಾನಗಳಲ್ಲಿ ಇಲ್ಲಿ ಪುಸ್ತಕ ಬಿಡುಗಡೆ ಮಾಡುತ್ತಿರುವ ಯುವಲೇಖಕರಲ್ಲಿ ಅನೇಕರು ಕನ್ನಡ ಸಾಹಿತ್ಯದ ದೊಡ್ಡ ಲೇಖಕರಾಗಿ ಬೆಳೆಯುವ ಎಲ್ಲಾ ಲಕ್ಷಣಗಳು ಅವರ ಕೃತಿಯಲ್ಲಿ ಕಾಣಸಿಗುತ್ತಿದೆ ಎಂದರು. 


ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಾಧಿಕಾರಕ್ಕೆ ಈ ಯೋಜನೆಯಡಿ ಒಟ್ಟು 156 ಹಸ್ತಪ್ರತಿಗಳು ಬಂದಿದ್ದವು ಅದರಲ್ಲಿ 51 ಹಸ್ತಪ್ರತಿಗಳನ್ನು ಪ್ರೋತ್ಸಾಹಧನಕ್ಕಾಗಿ ಆಯ್ಕೆ ಮಾಡಲಾಯಿತು. ಇಬ್ಬರು ಪುಸ್ತಕಗಳನ್ನು ಸಲ್ಲಿಸದ ಕಾರಣ ಇಂದು 49 ಯುವಬರಹಗಾರರ ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು. ಸಮಾರಂಭಲ್ಲಿ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಡಾ. ಬಿ.ಸಿ. ಕುಶಾಲ ಅವರು ಸ್ವಾಗತಿಸಿದರು. ಲಕ್ಷ್ಮಣ ಕೊಡಸೆ ಅವರು ವಂದಿಸಿರುವ ಹಾಗೂ ಬಿ.ಹೆಚ್. ನಿರಗುಡಿ ಅವರು ಕಾರ್ಯಕ್ರಮ ನಿರೂಪಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಮಹಿಳೆ ಇಂದು ಎಲ್ಲ ರಂಗದಲ್ಲಿಯೂ ಉನ್ನತವಾದ ಸಾಧನೆಯ ನಗೆ ಬೀರಿದ್ದಾಳೆ ; ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಿಗೇರಿ


ವಿಜಯಪುರ : ಮಹಿಳೆ ಇಂದು ಎಲ್ಲ ರಂಗದಲ್ಲಿಯೂ ಉನ್ನತವಾದ ಸಾಧನೆಯ ನಗೆ ಬೀರಿದ್ದಾಳೆ ಎಂದು ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಿಗೇರಿ ಹೇಳಿದರು.

ವಿಜಯಪುರದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಸಹಯೋಗದಲ್ಲಿ ಆಯೋಜಿಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ಅಂದು ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದಳು, ಅನೇಕ ಸವಾಲುಗಳನ್ನು ಎದುರಿಸಿ ತನ್ನ ಸ್ವ ಸ್ವಾಮರ್ಥ್ಯದ ಮೇಲೆ ಇಂದು ಎಲ್ಲ ರಂಗದಲ್ಲಿಯೂ ಸಾಧನೆ ತೋರಿದ್ದಾಳೆ, ವಿಮಾನ ನಡೆಸುವ ಜೊತೆಗೆ ಅಂತರಿಕ್ಷ ನೌಕೆಯನ್ನೂ ಸಹ ಸಮರ್ಥವಾಗಿ ಚಲಾಯಿಸುವ ಮಟ್ಟಕ್ಕೆ ಬೆಳೆದಿದ್ದಾಳೆ, ಪ್ರತಿ ಬಾರಿಯ ಫಲಿತಾಂಶದಲ್ಲಿಯೂ ಬಾಲಕಿಯರ ಮೇಲುಗೈ ಸಾಧಿಸುತ್ತಿದ್ದಾರೆ, ತೊಟ್ಟಿಲು ತೂಗುವ ಕೈ ವಿಶ್ವವನ್ನೇ ಆಳಬಲ್ಲದು ಎಂಬುದನ್ನು ನಿರೂಪಿಸಿದ್ದಾಳೆ ಎಂದರು.

ಮುಖ್ಯ ಅತಿಥಿಯಾಗಿದ್ದ ಉಷಾ ಹಿರೇಮಠ ಮಾತನಾಡಿ, ಮಹಿಳೆ ಅಪಾರ ಶಕ್ತಿವಂತಳು, ಕರುಣೆ, ವಾತ್ಸಲ್ಯ ದ ಪ್ರತಿರೂಪ, ಮಹಿಳೆಗೆ ಸಾಧನೆ ತೋರಲು ವೇದಿಕೆ ಬೇಕು, ಯಾವ ಸವಾಲನ್ನು ಆಕೆ ಸಮರ್ಥವಾಗಿ ನಿಭಾಯಿಸುವ ಗಟ್ಟಿತನ ಹೆಣ್ಣಿಗೆ ಇದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮಾಧುರಿ ಪಾಟೀಲ ಮಾತನಾಡಿದರು. ಕಾರ್ಯನಿರ್ವಾಹಕ ಅಭಿಯಂತರ ಸಂತೋಷ ಪಾಟೀಲ, ವಾಹೀದ ಜಹಾಗೀರದಾರ, ರೇಖಾ ತೋಟಗೇರ, ಶೋಭಾ ಅಹೇರಿಕರ, ಶಿಲ್ಪಾ ಗಮ್ಮ ಪಾಲ್ಗೊಂಡಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

Thursday, March 5, 2026

ವಿಜಯಪುರ ಮೆಡಿಕಲ್ ಕಾಲೇಜು ನನಸಾಗುವುದೇ ಕನಸು

ವಿಜಯಪುರ ಜಿಲ್ಲೆಯ ಐತಿಹಾಸಿಕವಾಗಿ ಸಾಂಸ್ಕೃತಿಕವಾಗಿ ಕೃಷಿ ಪ್ರಧಾನವಾದ ಜಿಲ್ಲೆ. 1956ರಲ್ಲಿ ಜಿಲ್ಲೆಯಾಗಿ ಆಡಳಿತ ನಡೆಸಿಕೊಂಡು ಬಂದರೂ ಇಲ್ಲಿ ಇನ್ನೂ ಸರ್ಕಾರಿ ವೈದ್ಯಕೀಯ ಕಾಲೇಜು ಆಗಿರಲಿಲ್ಲ; ಸುಮಾರು ಎರಡು ದಶಕಗಳಿಂದಲೂ ಸ್ಥಳೀಯ ವಿದ್ಯಾರ್ಥಿಗಳು ಮತ್ತು ಪ್ರಗತಿಪರ ಸಂಘಟನೆಗಳು ಸರಕಾರಕ್ಕೆ ಮತ್ತು ಈ ಭಾಗದ ಶಾಸಕರಿಗೆ, ಸಚಿವರುಗಳಿಗೆ ಮನವಿ ಪತ್ರ ಸಲ್ಲಿಸಿದರು ಯಾವುದೇ ಪ್ರಯೋಜನ ಆಗಿರಲಿಲ್ಲ; ಇಲ್ಲಿ ಎಲ್ಲ ಸೌಲಭ್ಯಗಳುಳ್ಳ ದೊಡ್ಡ ಜಿಲ್ಲಾ ಸರಕಾರಿ ಆಸ್ಪತ್ರೆ ಇದೆ. ಜಿಲ್ಲೆಯ ಸುತ್ತಮುತ್ತಲಿನ ಹಳ್ಳಿಗಳಿಂದ ಸುಮಾರು ಸಾವಿರದ ಐದುನೂರು ಹೊರರೋಗಿಗಳು ಮತ್ತು ಒಳರೋಗಿಗಳು ಬಂದು ಹೋಗುತ್ತಿದ್ದಾರೆ, ಉತ್ತಮ ಚಿಕಿತ್ಸೆ,ಮತ್ತು ರೋಗಿಗಳ ಮುತುವರ್ಜಿ ವಹಿಸಿ ಕಾಳಜಿ ಮಾಡುವ ದಾರಿಯರು ಮತ್ತು ವೈದ್ಯರಿದ್ದಾರೆ. ತಾಯಿ ಮಕ್ಕಳ ಆರೋಗ್ಯ ಆಸ್ಪತ್ರೆ ಇದೆ. ಆಧುನಿಕ ಉಪಕರಣಗಳುಳ್ಳ ಸ್ಕ್ಯಾನಿಂಗ್ ಸೆಂಟರ್ ಇದೆ. 149 ಎಕರೆ ಭೂಮಿ ಇದೆ. ಇಷ್ಟೆಲ್ಲಾ ಸಂಪನ್ಮೂಲಗಳುಳ್ಳ ಆಸ್ಪತ್ರೆ ಇದ್ದರೂ ಸರ್ಕಾರ ಆಸ್ಪತ್ರೆಯ ಪಕ್ಕದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಿಸಲು ಹಿಂದೇಟು ಹಾಕುತ್ತಿತ್ತು ಸಾರ್ವಜನಿಕ ಸಂಘ ಸಂಸ್ಥೆಗಳು ಹಲವು ವರ್ಷಗಳಿಂದ ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯಾಗಬೇಕೆಂದು ಒತ್ತಾಯಿಸುತ್ತಾ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಜಯಪುರದಲ್ಲಿ ಸರ್ಕಾರಿ ವೈದ್ಯಕಿಯ ಮಹಾವಿದ್ಯಾಲಯ ಸ್ಥಾಪಿಸಲು ನಿರ್ಧರಿಸಿತು. 

ದುರ್ದೈವದ ಸಂಗತಿ ಎಂದರೆ ಅದನ್ನು ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ಮುಂದಾಗಿರುವುದನ್ನು ಖಂಡಿಸಿ ವಿಜಯಪುರ ಜಿಲ್ಲೆಯಲ್ಲಿ 106 ದಿನಗಳ ಕಾಲ ಸುದೀರ್ಘ ಹೋರಾಟವನ್ನು ಮಾಡಿದ್ದರ ಪರಿಣಾಮ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಾವೇರಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಲೋಕಾರ್ಪಣೆ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ ಸಮ್ಮುಖದಲ್ಲಿ ಸಾರ್ವಜನಿಕವಾಗಿ ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಮಾಡುತ್ತೇನೆ ಎಂದು ಘೋಷಿಸಿದ್ದಾರೆ ಜೊತೆಗೆ ವಿಜಯಪುರ ನಗರದಕ್ಕೆ ಆಗಮಿಸಿದಾಗ ಮತ್ತೆ ಪುನಃ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸುತ್ತೇನೆ ಎಂದು ಹೇಳಿರುವುದು ಸಂತಸದ ವಿಷಯ.

ಹೋರಾಟದ ಸಂದರ್ಭದಲ್ಲಿ ಆರು ಜನ ಹೋರಾಟಗಾರರು 14 ದಿನಗಳ ಕಾಲ ಸೆರೆಮನೆವಾಸ. 27 ಜನ ಹೋರಾಟಗಾರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದು ಕೂಡ ಈಗ ಇತಿಹಾಸ. ಇಂತಹ ಸುದೀರ್ಘ ಹೋರಾಟದ ಫಲವಾಗಿ ಇಂದು ಮಂಡಿಸುವ ಬಜೆಟ್ ನಲ್ಲಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯಾಗುತ್ತದೆ ಎಂಬ ಬಹುದೊಡ್ಡ ನಿರೀಕ್ಷೆಯನ್ನು ಜಿಲ್ಲೆಯ ಜನ ಇಟ್ಟುಕೊಂಡಿದ್ದಾರೆ. ಜನರ ನಿರೀಕ್ಷೆಯನ್ನು ಹುಸಿಮಾಡದೆ ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಆಯ್ಯವ್ಯಯದಲ್ಲಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಘೋಷಿಸಿ ಅನುದಾನ ಕಾಯ್ದಿರಿಸಿ ಜಿಲ್ಲೆಯ ಜನರ ಬಹುದಿನದ ಕನಸು ನನಸುಮಾಡುತ್ತಾರೆ ಕಾಯ್ದು ನೋಡಬೇಕಿದೆ.

- ಲಲಿತಾ ಬಿಜ್ಜರಗಿ 

ಲೇಖಕಿ ಹಾಗೂ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿಯ ಸದಸ್ಯರು ವಿಜಯಪುರ.


ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ವಿಜಯಪುರದಲ್ಲಿ ಚಾಲುಕ್ಯರ ಶರಭದ ಉಬ್ಬು ಶಿಲ್ಪ ಪತ್ತೆ : ಸಂರಕ್ಷಣೆಗೆ ಇತಿಹಾಸ ಸಂಶೋಧಕ ಲಾಯಪ್ಪ ಇಂಗಳೆ ಆಗ್ರಹ

ವಿಜಯಪುರ : ನಗರದ ಪುರಾತನ ಕೋಟೆಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಶರಭ ದ ಉಬ್ಬು ಶಿಲ್ಪ ಪತ್ತೆಯಾಗಿದ್ದು, ವಿಜಯಪುರದ ರಾಷ್ಟ್ರೀಯ ಸಂಶೋಧನಾ ವೇದಿಕೆ ಅಧ್ಯಕ್ಷ ಲಾಯಪ್ಪ ಇಂಗಳೆ ಅವರು ಉಬ್ಬು ಶಿಲ್ಪವನ್ನು ಗುರುತಿಸಿದ್ದು. ವಿಜಯಪುರ ನಗರದ ಕೋಟೆಯು ಕಲ್ಯಾಣ ಚಾಲುಕ್ಯರು ಮತ್ತು ದೇವಗಿರಿ ಯಾದವರು ನಿರ್ಮಿಸಿರುವುದಕ್ಕೆ ಪ್ರಮುಖ ಐತಿಹಾಸಿಕ ದಾಖಲೆಯಾಗಿದೆ. ಎಂದು ಅವರು ತಿಳಿಸಿದ್ದಾರೆ.

ಶರಭ ಎಂದರೆ ಹಿಂದೂ ಪುರಾಣಗಳಲ್ಲಿ ವರ್ಣಿಸಲಾದ, ಸಿಂಹದ ಮುಖ ಮತ್ತು ಹಕ್ಕಿಯ ರೆಕ್ಕೆಗಳು ಹಾಗೂ ಎಂಟು ಕಾಲುಗಳನ್ನು ಹೊಂದಿರುವ ಶಕ್ತಿಶಾಲಿ ಪ್ರಾಣಿಯಾಗಿದೆ. ಇದು ಆನೆ ಮತ್ತು ಸಿಂಹಕ್ಕಿAತ ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲ್ಪಟ್ಟಿದೆ. ನರಸಿಂಹನ ಕೋಪವನ್ನು ಶಾಂತಗೊಳಿಸಲು ಶಿವನು ಶರಭನ ಅವತಾರ (ಶರಭೇಶ್ವರ) ತಾಳಿದನು ಎಂದು ಶೈವ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ಇದು ಒಂದೇ ಜಿಗಿತದಲ್ಲಿ ಬೃಹತ್ ಕಣಿವೆಗಳನ್ನು ಜಿಗಿಯಬಲ್ಲಂತಹ ವೇಗ ಮತ್ತು ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಲಾಗಿದೆ.

ಹಿರಣ್ಯಕಶ್ಯಪನನ್ನು ವಧಿಸಿದ ನಂತರ ಉಗ್ರರೂಪಿಯಾಗಿದ್ದ ನರಸಿಂಹನನ್ನು ಪಳಗಿಸಲು ಶಿವನು ಈ ಅವತಾರ ಧರಿಸಿದ್ದು ಶರಭದ ಪೌರಾಣಿಕ ಹಿನ್ನಲೆಯಾಗಿದೆ.

ಬೌದ್ಧ ಜಾತಕ ಕಥೆಗಳಲ್ಲಿ, ಶರಭನು ಬುದ್ಧನ ಹಿಂದಿನ ಜನ್ಮದ ಸಂಕೇತವಾಗಿ ಕಾಣಿಸಿಕೊಳ್ಳುತ್ತದೆ, ಇದು ಶಕ್ತಿ ಮತ್ತು ಕರುಣೆಯನ್ನು ಪ್ರತಿನಿಧಿಸುತ್ತದೆ. 

ಕೆಲವೊಮ್ಮೆ ಇದನ್ನು ಗಂಡಭೇರುAಡದೊAದಿಗೆ ಹೋಲಿಸಲಾಗುತ್ತದೆ, ಗಂಡಭೇರುAಡವು ವಿಷ್ಣುವಿನ ಸಂಕೇತವಾದರೆ ಶರಭವು ಮುಖ್ಯವಾಗಿ ಶಿವನ ಶಕ್ತಿಯ ಸಂಕೇತವಾಗಿದೆ. 

ಪ್ರತಿಮಾಶಾಸ್ತ್ರದ ಪ್ರಕಾರ ಶರಭ ಎಂದರೆ ಬೇಟೆಗಾರ ಭಾಗಶಃ ಪ್ರಾಣಿ, ಭಾಗಶಃ ಪಕ್ಷಿ ಮತ್ತು ದೊಡ್ಡ ಕಿರೀಟವನ್ನು ಧರಿಸಿರುವ ಎರಡು ತಲೆಗಳೊಂದಿಗೆ ದೇಹವನ್ನು ಹೊಂದಿದ್ದಾನೆ ಎಂದು ವಿವರಿಸುತ್ತದೆ.

ಇಂತಹ ಅಪರೂಪದ ಐತಿಹಾಸಿಕ, ಪಾರಂಪರಿಕ ಹಿನ್ನಲೆ ಹೊಂದಿರುವ ಕಲ್ಯಾಣ ಚಾಲುಕ್ಯರು ಮತ್ತು ದೇವಗಿರಿ ಯಾದವರ ಇತಿಹಾಸ ಸಾರುವ ಶರಭದ ಉಬ್ಬು ಶಿಲ್ಪವು ವಿಜಯಪುರ ಕೋಟೆಯಲ್ಲಿ ಕೆತ್ತಿಸಿರುವುದು ಚಾಲುಕ್ಯರು ಮತ್ತು ಯಾದವರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಇತಿಹಾಸ ಸಂಶೋಧಕ ಲಾಯಪ್ಪ ಇಂಗಳೆ ತಿಳಿಸಿರುವ ಅವರು ಐತಿಹಾಸಿಕ ಶರಭದ ಶಿಲ್ಪ ಇರುವ ಕೋಟೆ ಭಾಗವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಸಂರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


06-03-2026 EE DIVASA KANNADA DAILY NEWS PAPER

Tuesday, March 3, 2026

04-03-2026 EE DIVASA KANNADA DAILY NEWS PAPER

ಮಾ.9ರಂದು ಭೀಮ ಗಾಯನ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ ಸಾರ್ವಜನಿಕರು-ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಮನವಿ

ವಿಜಯಪುರ  : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಮಾ.9ರಂದು ನಗರದಲ್ಲಿ ನಡೆಯಲಿರುವ ಭೀಮ ಗಾಯನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಲು ಅಧಿಕಾರಿಗಳು ಕೈಜೋಡಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಭೀಮ ಗಾಯನ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ ಅವರ ಜೀವನ, ಸಾಧನೆ ಸಮಾನತೆಯ ಹೋರಾಟ, ಅಸ್ಪಶ್ಯತೆ ನಿವಾರಣೆ, ಸ್ತ್ರೀ ಸಮಾನತೆ ಕುರಿತ ಗೀತೆಗಳ ಗಾಯನ ಅಂದು ನಡೆಯಲಿದೆ. ಸಮಾನತೆಯ ಸ್ವರ ಸಂಭ್ರಮ, ಭೀಮನ ಆದರ್ಶಗಳನ್ನು ಸ್ವರಗಳಲ್ಲಿ ಅಭಿವ್ಯಕ್ತಿಗೊಳಿಸುವ ಜಾಗೃತಿ, ಆತ್ಮಗೌರವ ಮತ್ತು ಸಮಾನತೆಯ ಸಂಗೀತ ಕಾರ್ಯಕ್ರಮವೇ ಭೀಮ ಗಾಯನವಾಗಿದೆ ಎಂದು ಎಡಿಸಿ ಡಾ. ಔದ್ರಾಮ ಕಾರ್ಯಕ್ರಮದ ಔಚಿತ್ಯವನ್ನು ವಿವರಿಸಿದರು.

ಚಿಂತಾಮಣಿಯ ಸಿದ್ಧಾರ್ಥ ಯುವ ಕ್ರೀಡಾ ಸಾಂಸ್ಕೃತಿಕ ಅಭಿವೃದ್ಧಿ ಸಂಘ ಈವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದರು. ಡಾ. ಬಿ.ಆರ್. ಅಂಬೇಡ್ಕರ ಅವರು ಭೇಟಿ ನೀಡಿರುವ ರಾಜ್ಯದ ಪ್ರಮುಖ ಸ್ಥಳಗಳ ಪೈಕಿ ಆಯ್ದ ಸ್ಥಳಗಳಲ್ಲಿ ಭೀಮ ಗಾಯನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. 

ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮಾ.9ರಂದು ಭೀಮ ಗಾಯನ ನಡೆಯಲಿರುವುದರಿಂದ ಎಲ್ಲರೂ ಕೈಜೋಡಿಸಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಲು ಸಹಕರಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಜನನಿಬಿಡ ಪ್ರದೇಶದಲ್ಲಿ ಕಾರ್ಯಕ್ರಮ ನಡೆಸಲಾಗುವದು.ಭೀಮ ಗಾಯನ ಕಾರ್ಯಕ್ರಮಕ್ಕೆ ಅವಶ್ಯಕ ವೇದಿಕೆ, ಆಸನ ವ್ಯವಸ್ಥೆ, ಕುಡಿಯುವ ನೀರು, ಧ್ವನಿವರ್ಧಕ, ಬೆಳಕು ವ್ಯವಸ್ಥೆ, ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆಯ ಮುದ್ರಣ,ನಿಗದಿತ ಅವಧಿಯಲ್ಲಿ ಹಂಚಿಕೆ, ಗಣ್ಯರನ್ನು ಆಹ್ವಾನಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಮೆರಗು ಹೆಚ್ಚಿಸಲು ಸಕಲ ಸಿದ್ಧತೆ ಕೈಗೊಳ್ಳಬೇಕು ಎಂದು ಸೂಚಿಸಿದರು.

ಅಡಿವೆಪ್ಪ ಸಾಲಗಲ್ ಮಾತನಾಡಿ, ಭೀಮ ಗಾಯನದ ಮೂಲಕ ಮಹನೀಯರ ಆದರ್ಶ ವಿಚಾರಧಾರೆಗಳನ್ನು ಜನಮಾನಸದಲ್ಲಿ ಜಾಗೃತಿಗೊಳಿಸುವ ಈ ಕಾರ್ಯಕ್ರವನ್ನು ಒಳಾಂಗಣ ರಂಗಮAದಿರದಲ್ಲಿ ಏರ್ಪಡಿಸದೇ ಜನನಿಬಿಡ ಪ್ರದೇಶದಲ್ಲಿ ಆಯೋಜಿಸಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾವಹಿಸುವುದರೊಂದಿಗೆ ಈ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ಬರಲಿದೆ ಎಂದು ಸಲಹೆ ನೀಡಿದರು.

ಶ್ರೀನಾಥ ಪೂಜಾರಿ ಮಾತನಾಡಿ, ಮಹನೀಯರ ವಿಚಾರಗಳು ಜನಮಾನಸಕ್ಕೆ ಮುಟ್ಟುವಂತಾಗಲು ಭೀಮ ಗಾಯನ ಮಹೋತ್ಸವವಾಗುವ ನಿಟ್ಟಿನಲ್ಲಿ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಬೇಕು ಎಂದು ಹೇಳಿದರು.

ಭೀಮರಾಯ ಜಿಗಜಿಣಗಿ ಮಾತನಾಡಿ, ಕಾರ್ಯಕ್ರಮವು ಹೆಚ್ಚು ಪ್ರಚಾರವಾಗುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಬೇಕು. ಪ್ರತಿಯೊಬ್ಬರಿಗೂ ತಲುಪುವಂತೆ ಜನನಿಬಿಡ ಪ್ರದೇಶಗಳಲ್ಲಿ ಬ್ಯಾನರ್ ಅಳವಡಿಸುವುದು ಹಾಗೂ ಕರಪತ್ರಗಳನ್ನು ಹಂಚುವುದರ ಮೂಲಕ ಪ್ರಚಾರ ಕೈಗೊಳ್ಳಲು ಸಲಹೆ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯ ನಿರ್ದೇಶಕರಾದ ಅಮರೇಶ ದೊಡಮನಿ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗಾಗಿ, ವಿವಿಧ ಇಲಾಖೆಯ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ, ಸಲಹೆ ಸೂಚನೆ ಅನುಸಾರ ನಿರ್ವಹಿಸಲಾಗುವುದು ಎಂದರು.

ಈ ಸಂದರ್ಭಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಚವ್ಹಾಣ ಕೆ.ಕೆ.ಚವ್ಹಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿವಾನಂದ ಬ್ಯಾಹಟ್ಟಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಸ್ಯಾಸಕರಾದ ರುದ್ರಯ್ಯ ಸಿ.ಹಿರೇಮಠ, ವಾರ್ತಾ ಇಲಾಖೆಯ ಸುರೇಶ ಅಂಬಿಗೇರ ಸೇರಿದಂತೆ ಡಾ. ಎಂ.ಆರ್. ಗುರಿಕಾರ, ಸೋಮನಗೌಡ ಕಲ್ಲೂರ, ದೇವೇಂದ್ರ ಮೀರೆಕರ್, ವಿದ್ಯಾವತಿ ಅಂಕಲಗಿ, ಪಿ.ಎಸ್. ರೋಣಿಹಾಳ, ಎಂ.ಆರ್ ದೊಡಮನಿ, ಕಿರಣ, ಶಂಕರಗೌಡ ಪಾಟೀಲ, ಅಭಿಷೇಕ ಪತ್ತಾರ, ಕಲಾವಿದರಾದ ರಂಗನಾಥ ಬತ್ತಾಸೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಾರ್ವಜನಿಕರು ಇದ್ದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಹೇಶ ಪೋತದಾರ ಕಾರ್ಯಕ್ರಮದ ಮೊದಲಿಗೆ ಗೀತಗಾಯನದ ಮೂಲಕ ಸಭೆಗೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿ, ಸಲಹೆ ಸೂಚನೆ ನೀಡುವಂತೆ ಮನವಿ ಮಾಡಿದರು. ಜಿಲ್ಲಾ ವಾರ್ತಾಧಿಕಾರಿ ಅಮರೇಶ ದೊಡಮನಿ ವಂದಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


7 ರಂದು ಉದ್ಯಾನದಲ್ಲಿ ಸಸಿ ನೆಡುವ ಕಾರ್ಯಕ್ರಮ

ವಿಜಯಪುರ: ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಆಫ್ ಬಿಜಾಪುರ ಪರಿವಾರ ಆಶ್ರಯದಲ್ಲಿ ಮಹಾನಗರ ಪಾಲಿಕೆ ವಾರ್ಡ್ ನಂ.4ರ ಸದಸ್ಯರಾದ ರಾಜು ಚವ್ಹಾಣ, ವಿ.ಡಿ.ಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ ಹಾಗೂ ಡಾ.ಎಂ.ಬಿ.ಪಾಟೀಲ ನಗರ ಸಿ ಬ್ಲಾಕ್‌ನ ಸರ್ವ ಸದಸ್ಯರ ಸಹಯೋಗದೊಂದಿಗೆ ಉದ್ಯಾನದಲ್ಲಿ ಸಸಿ ನೆಡುವ ಕಾರ್ಯಕ್ರಮವು ಮಾ.7 ರಂದು ಸಂಜೆ 4 ಗಂಟೆಗೆ ವಿಜಯಪುರದ ಡಾ.ಎಂ.ಬಿ.ಪಾಟೀಲ ನಗರ ಸಿ ಬ್ಲಾಕ್‌ನಲ್ಲಿ ಜರುಗಲಿದೆ. ವಿಜಯಪುರ ಲಯನ್ಸ್ ಕ್ಲಬ್ ಆಫ್ ಬಿಜಾಪುರ ಪರಿವಾರದ ಅಧ್ಯಕ್ಷ ಚಿದಾನಂದ ನಿಂಬಾಳ ಅಧ್ಯಕ್ಷತೆ ವಹಿಸಲಿದ್ದು, ಮಹಾನಗರ ಪಾಲಿಕೆಯ ಆಯುಕ್ತ ವಿಜಯ ಮೆಕ್ಕಳಕಿ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಶ್ರೀ ತುಳಸಿಗಿರೀಷ ಫೌಂಡೇಶನ್‌ ಸಂಸ್ಥಾಪಕ ಹಾಗೂ ಖ್ಯಾತ ಮದುಮೇಹ ತಜ್ಞ ಡಾ.ಬಾಬುರಾಜೇಂದ್ರ ನಾಯಕ ಆಗಮಿಸುವರು ಎಂದು ಲಯನ್ಸ್ ಪರಿವಾರದ ಸಂಸ್ಥಾಪಕ ಹಾಗೂ ಕಾರ್ಯಕ್ರಮದ ಸಂಚಾಲಕ ಡಾ.ಅಶೋಕಕುಮಾರ ಜಾಧವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಲಯನ್ಸ್ ಪರಿವಾರ ಕಾರ್ಯದರ್ಶಿ ವಿದ್ಯಾ ಕೊಟೆನ್ನವರ, ಖಜಾಂಚಿ ಪುಷ್ಪಾ ಮಹಾಂತಮಠ, ಕಾರ್ಯಕ್ರಮದ ಸಹ ಸಂಚಾಲಕ ಸಿದ್ದರಾಮ ಪೂಜಾರಿ ಸೇರಿದಂತೆ ಲಯನ್ಸ್ ಕ್ಲಬ್ ಆಫ್ ಬಿಜಾಪುರ ಪರಿವಾರದ ಸರ್ವ ಸದಸ್ಯರು, ಡಾ.ಎಂ.ಬಿ.ಪಾಟೀಲ ನಗರದ ಸಿ ಬ್ಲಾಕ್ ಬಡಾವಣೆಯ ಸರ್ವ ಸದಸ್ಯರು ಕಾರ್ಯಕ್ರಮಕ್ಕೆ ಸ್ವಾಗತಿಸಿ, ಯಶಸ್ವಿಗೊಳಿಸುವಂತೆ ಕೋರಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


Monday, March 2, 2026

ಮಾರ್ಚ್ 6 ರಂದು ಬೃಹತ್ ಪ್ರತಿಭಟನೆ

ವಿಜಯಪುರ : ವಿಜಯಪುರ ಜಿಲ್ಲಾ ಗುತ್ತಿಗೆದಾರರ ಸಂಘ ವಿಜಯಪುರ ವತಿಯಿಂದ ಗುತ್ತಿಗೆದಾರರ ಬೃಹತ್ ಪ್ರತಿಭಟನೆಯನ್ನು ದಿನಾಂಕ : 06-03-2026 ರಂದು ಶುಕ್ರವಾರ ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಹಮ್ಮಿಕೊಳ್ಳಲಾಗಿದೆ.

ಮಾರ್ಚ್ 6 ರಂದು ನಡೆಯಲಿರುವ ರಾಜ್ಯ ಮಟ್ಟದ ಗುತ್ತಿಗೆದಾರರ ಬೃಹತ್ ಪ್ರತಿಭಟನೆ ಬೆಂಗಳೂರಿನ ಪ್ರಿಡಂ ಪಾರ್ಕ್ನಲ್ಲಿ ನಡೆಯಲಿದ್ದು ಅದರ ಅಂಗವಾಗಿ ವಿಜಯಪುರ ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ ಕಾಮಗಾರಿಗಳನ್ನು ಸಂಪೂರ್ಣ ಬಂದ್ ಮಾಡಿ ವಿಜಯಪುರ ಜಿಲ್ಲಾ ಎಲ್ಲಾ ಗುತ್ತಿಗೆದಾರರು ಒಂದು ದಿನ ನಡೆಯುತ್ತಿರುವ ಬಹೃತ್ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾಧ್ಯಕ್ಷರಾದ ಸಿ.ಆರ್. ರೂಡಗಿ, ಗೌರವ ಅಧ್ಯಕ್ಷರಾದ ಅರುಣ ಎಸ್. ಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಯ್.ಎಂ. ಪಟ್ಟಣಶೆಟ್ಟಿ, ಮುದ್ದೇಬಿಹಾಳ ತಾಲೂಕಾ ಅಧ್ಯಕ್ಷರಾದ ಸುರೇಶಗೌಡ ಪಾಟೀಲ (ಇಂಗಳಗೇರಿ), ಇಂಡಿ ತಾಲೂಕಾಧ್ಯಕ್ಷ ರಮೇಶಗೌಡ ಪಾಟೀಲ, ಸಿಂದಗಿ ತಾಲೂಕಾಧ್ಯಕ್ಷ ಮುತ್ತು ಮುಂಡೇವಾಡಿ, ಬಸವನ ಬಾಗೇವಾಡಿ ತಾಲೂಕಾಧ್ಯಕ್ಷ ಎ.ಬಿ. ನರಸರೆಡ್ಡಿ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


03-03-2026 EE DIVASA KANNADA DAILY NEWS PAPER

Sunday, March 1, 2026

02-03-2026 EE DIVASA KANNADA DAILY NEWS PAPER

ರಕ್ತದಾನ ಜೀವ ಉಳಿಸುವ ಪುಣ್ಯದ ಕಾರ್ಯ

ಮುದೋಳ : ಜನ್ಮದಿನದಂದು ರಕ್ತದಾನ ಮಾಡುವುದು ಒಂದು ಶ್ರೇಷ್ಠ ಮತ್ತು ಅರ್ಥಪೂರ್ಣ ಆಚರಣೆಯಾಗಿದೆ. ಇದು ಕೇವಲ ಒಂದು ಕೇಕ್ ಕತ್ತರಿಸುವ ಸಮಾರಂಭವಾಗಿರದೆ ಬೇರೆಯವರ ಜೀವ ಉಳಿಸುವ ಪುಣ್ಯದ ಕಾರ್ಯವಾಗಿದೆ. ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬಹುದು ಮತ್ತು ರಕ್ತದಾನವು ಕನಿಷ್ಠ ಮೂರು ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ. ಇಂತಹ ಕಾರ್ಯ ಮುಧೋಳ ತಾಲೂಕಿನ ನಿಂಗಾಪುರ ಗ್ರಾಮದ ಶಿಕ್ಷಕ ಶ್ರೀಶೈಲ ಜಂಬಗಿ ಅವರು ಜನ್ಮ ದಿನದ ಪ್ರಯುಕ್ತ ಶ್ರೀ ವೀರಭದ್ರೇಶ್ವರ ರಕ್ತ ಕೇಂದ್ರದಲ್ಲಿ ರಕ್ತದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. 

ಈ ಸಂದರ್ಭದಲ್ಲಿ ಬ್ಲಡ್ ಬ್ಯಾಂಕ ಟೆಕ್ನಿಷಿಯನ್‌ಗಳಾದ ಪವಿತ್ರ ಕೌಜಲಗಿ, ವಿಜಯಲಕ್ಷ್ಮೀ ಗೊಳಸಂಗಿ, ಅಕ್ಷಯಕುಮಾರ ದಳವಾಯಿ, ಈ ದಿವಸ ಕನ್ನಡ ದಿನ ಪತ್ರಿಕೆ ಸಂಪಾದಕ ಉಮೇಶ ಶಿವಶರಣ ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.