ಫಾತಿಮಾ ಶೇಖ, ಶಂ.ಗು. ಬಿರಾದಾರ, ಸಿಸು ಸಂಗಮೇಶ ವೇದಿಕೆ ವಿಜಯಪುರ : ಲಿಂಗಾಯತ ಧರ್ಮದ ಚರ್ಚೆ ನಡೆದಾಗ ಮಠದ ಸ್ವಾಮೀಜಿಗಳನ್ನು ಕ್ರಿಶ್ಚಿಯನ್ ಚರ್ಚ್ ಗಳಿಗೆ ಪಾದ್ರಿಗಳನ್ನು ವರ್ಗಾವಣೆ ಮಾಡಿದಂತೆ ವರ್ಗಾವಣೆ ಮಾಡಬೇಕು ಎಂದು ಬರೆದೆ ಅದು ಸಾಕಷ್ಟು ಚರ್ಚೆಯಾಯಿತು ಮುಕ್ತವಾಗಿ ಸುದ್ದಿ ಪ್ರಸಾರ ಮಾಡುವುದು ಪತ್ರಕರ್ತನ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಸಂಗಮೇಶ ಮೆಣಸಿನಕಾಯಿ ಹೇಳಿದರು.
ಇತ್ತೀಚಿಗೆ ಕರ್ನಾಟಕದಲ್ಲಿ ಕೆಲವು ಸ್ವಾಮೀಜಿಗಳು ತಮ್ಮ ಖಾಸಗಿ ವಿಡಿಯೋ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಜೊತೆಗೆ ಪೊಲೀಸ್ ಪ್ರಕರಣ ಕೂಡಾ ದಾಖಲಾಗಿದೆ ನಮ್ಮ ಪತ್ರಕರ್ತರು ಪ್ರಕರಣ ದಾಖಲಾದ ಬಗ್ಗೆ ಸುದ್ದಿ ಮಾಡಲು ನಮ್ಮ ಪತ್ರಕರ್ತರು ಹಿಂಜರಿಯುತ್ತಿದ್ದಾರೆ ಇದು ನಮ್ಮ ಪತ್ರಕರ್ತರು ಎತ್ತ ಸಾಗುತ್ತಿದ್ದಾರೆ ಎಂಬುದು ತೋರಿಸುತ್ತದೆ ಎಂದರು.ಪತ್ರಕರ್ತರು ಗಣಿಗಾರಿಕೆ ವಿರುದ್ಧ ಪುಟಗಟ್ಟಲೆ ಬರೆಯುತ್ತೇವೆ ಆದರೆ ಗಣಿಗಾರಿಕೆ ಕಾರ್ಮಿಕರ ಬಗ್ಗೆಯು ನಾವು ವರದಿ ಮಾಡಬೇಕು ಏಕೆಂದರೆ ಗಣಿಗಾರಿಕೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಪರಿಸರ ಬಗ್ಗೆ ಕಾಳಜಿ ತೋರುವ ನಾವು ಕಾರ್ಮಿಕರಿಗೆ ಆಗುವ ತೊಂದರೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.
ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದಲ್ಲಿ ಎರಡನೇ ದಿನದ ಎರಡನೇ ಗೋಷ್ಠಿ ಸಾಮಾಜಿಕ ಬದ್ಧತೆ ಪತ್ರಕರ್ತನಾಗಿ ನನ್ನ ಅನುಭವಗಳು ಕುರಿತು ವಿಷಯ ಮಂಡನೆ ಮಾಡಿ ಅವರು ಮಾತನಾಡಿದರು.

ಸಂವಾದದಲ್ಲಿ ಪತ್ರಕರ್ತ ಕಲ್ಲಪ್ಪ ಶಿವಶರಣ ಅವರು ಮಾತನಾಡಿ ಪತ್ರಕರ್ತನಾದವವನು ಪೂರಕ ಮಾಹಿತಿ ಸಂಗ್ರಹ ಮಾಡಿ ನಿಖರವಾಗಿ ಸುದ್ದಿ ಪ್ರಸಾರ ಮಾಡಬೇಕು ಸುದ್ದಿಗಳು ಸಮಾಜದ ಅಂಕು-ಡೊAಕು ತಿದ್ದುವಂತಿರಬೇಕು ಎಂದರು.
ಸAವಾದದಲ್ಲಿ ಪತ್ರಕರ್ತ ಸುನೀಲ ಗೋಡೆನ್ನವರ ಮಾತನಾಡಿ ದೃಶ್ಯ ಮಾಧ್ಯಮದ ಪತ್ರಕರ್ತರು ಅಪಘಾತ ಸಂಭವಿಸಿದಾಗ ಮೊದಲು ಗಾಯಾಳುಗಳನ್ನು ರಕ್ಷಣೆ ಮಾಡಲು ಪ್ರಯತ್ನ ಮಾಡಬೇಕು ಇದು ಪತ್ರಕರ್ತನ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದರು.
ಪತ್ರಕರ್ತ ಚಂದ್ರಶೇಖರ ಹೊಸಮನಿ ಅವರು ಮಾತನಾಡಿ ಪತ್ರಕರ್ತ ಸುದ್ದಿ ಪ್ರಸಾರ ಮಾಡುವಾಗ ನೇರ ನಿಷ್ಠುರ ನಿರ್ಭಯತೆ ಹೊಂದಿರಬೇಕು ಎಂದರು.
ಹಿರಿಯ ಪತ್ರಕರ್ತ ರಾಜು ಕೊಂಡಗೂಳಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ,ಬೋಗೇಶ ಸೋಲಾಪುರ ಅರವಿಂದ ಲಂಬು ಸಂಗಮೇಶ ಚೂರಿ ರವಿ ಕಿತ್ತೂರ ಸುರೇಶ ಬಿಜಾಪುರ, ಚೆನ್ನು ಕಟ್ಟಿಮನಿ ವೈ ಎಸ್ ಗುಣಕಿ. ಸಂಘರ್ಷ ಹೊಸಮನಿ, ಲಾಯಪ್ಪ ಇಂಗಳೆ ಶಿವು ಕಟ್ಟಿಮನಿ, ಸೋಮು ರಣದೇವಿ ರಾಜೇಶ ಚಲವಾದಿ,ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:
Post a Comment