ವಿಜಯಪುರ : ನಿರ್ಗತಿಕ, ಬಡ ಕುಟುಂಬಗಳಿಗೆ ರಂಜಾನ್ ಹಬ್ಬದ ಪ್ರಯುಕ್ತ ಚಂದ್ರಶೇಖರ ಬುರಾಣಪುರ ಕುಟುಂಬದ ವತಿಯಿಂದ ಸುಮಾರು ೧೫೦ ಕುಟುಂಬಕ್ಕೆ ಆಹಾರ ಕಿಟ್ ನಗರದ ಮುಳಗಸಿಯಲ್ಲಿ ನೀಡಲಾಯಿತು.
ಜಿಲ್ಲಾ ಪಂಚಾಯತ್ ಸಾಂಕಿಕ ಅಧಿಕಾರಿ ರಾ ಬಹಾದ್ಧೂರ ಮಾತನಾಡಿ, ರಂಜಾನ್ ಹಬ್ಬವು ದಾನ ಧರ್ಮದ ಸಂಕೇತವಾಗಿದ್ದು, ಅದನ್ನು ಯಾವುದೇ ಜಾತಿ, ಧರ್ಮಕ್ಕೆ ಹೊಲಿಸದೇ ಮಾನವ ಧರ್ಮ ಒಂದೇ ಎಂಬ ಉದ್ದೇಶದಿಂದ ಎಲ್ಲ ಬಡ ಕುಟುಂಬಕ್ಕೆ ಆಹ್ವಾನ ಕೋರಿ ಆಹಾರ ಕಿಟ್ ವಿತರಣೆ ಮಾಡಿರುವುದು ಸಂತಸ ತಂದಿದೆ. ಇವರು ದೀಪಾವಳಿ, ರಮಜಾನ್ ಮುಂತಾದವ ಯಾವುದೇ ಹಬ್ಬವಿದ್ದರು ಬಡವರಿಗೆ ಆಹಾರ ಕಿಟ್ ನಿಡುವುದು, ನಿರಾಶ್ರಿತರಿಗೆ ಕೈಲಾದ ಸಹಾಯ ಮಾಡುವ ಮನೋಭಾವನೆಯೂ ನಿಜಕ್ಕೂ ಶ್ಲಾö್ಯಘನೀಯ ಚಂದ್ರಶೇಖರ ಬುರಾಣಪೂರ ಕುಟುಂಬವು ಬಡ ಬಲಿದರಿಗೆ ಇದೇ ರೀತಿಯಾಗಿ ಸಹಾಯ ಮಾಡುವಲ್ಲಿ ಮುಂದಾಗಲಿ ದೇವರು ಇವರ ಕುಟುಂಬಕ್ಕೆ ಇನಷ್ಟು ದಾನ ಮಾಡಲು ಶಕ್ತಿ ಕರುಣಿಸಲಿ ಎಂದರು.
ಇದೇ ಸಂದರ್ಭದಲ್ಲಿ ಪೂಜಾ ಬುರಾಣಪೂರ ಮಾತನಾಡಿ, ಪ್ರತಿ ವರ್ಷ ನಮ್ಮ ಕುಟುಂಬದಿAದ ನಮ್ಮ ತಂದೆ ತಾಯಿ ಸರ್ವಜನಾಂಗಕ್ಕೂ ಆಹಾರ ಕಿಟ್ ವಿತರಿಸುತ್ತಿರುವುದು ನನಗೆ ಹೆಮ್ಮೆಯಾಗುತ್ತಿದೆ. ಇಂತಹ ತಂದೆ ತಾಯಿಗೆ ಮಗಳಾಗಿರುವುದು ನಾನೇ ಪುಣ್ಯವಂತೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಲೆಕ್ಕಾಧಿಕಾರಿ ಅನ್ವರ ನದಾಫ್ ಮಾತನಾಡಿ, ಚಂದ್ರಶೇಖರ ಬುರಾಣಪೂರ ಇವರು ಜಾತಿ ಮತ ತೊರೆದು ಸರ್ವಜನಾಂಗದ ಕಷ್ಟಕ್ಕೇ ಮುಂದಾಗುವ ಕಾಳಜಿವುಳ್ಳ ವ್ಯಕ್ತಿಯಾಗಿದ್ದಾರೆ. ಪ್ರತಿ ಹಬ್ಬದಲ್ಲಿ ತಮ್ಮ ಸಂತೋಷವನ್ನು ಬಡವರಿಗೆ ಸಹಾಯ ಮಾಡುವುದರ ಮೂಲಕ ಹಬ್ಬ ಆಚರಿಸಿಕೊಳ್ಳುತ್ತಾರೆ ಆದ ಕಾರಣ ಇವರು ಕುಟುಂಬಕ್ಕೇ ಭಗವಂತ ನೆಮ್ಮದಿ ನೀಡಲೆಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಅಂಬಿಕಾ ಚಂದ್ರಶೇಖರ ಬುರಾಣಪೂರ, ಹಾಗೂ ಕುಟುಂಬದ ಸದಸ್ಯರು ಇದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


No comments:
Post a Comment