Friday, March 7, 2025

ಅಮ್ಮ

ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ವತಿಯಿಂದ ಪ್ರಕಟಗೊಂಡ ಸಾಹಿತಿ ಹಾಗೂ ಪತ್ರಕರ್ತ ಕಲ್ಲಪ್ಪ ಶಿವಶರಣ ಅವರ ವಿರಚಿತ ‘ಕಲ್ಲು ಮನಸ್ಸು’ ಕವನ ಸಂಕಲನ ಕೃತಿಯಲ್ಲಿನ ಕವನ. 


ಅಮ್ಮ ನನ್ನಮ್ಮ

ನನ್ನೀ ಜೀವಕೆ ಬೆಳಕಮ್ಮ

ನನ್ನುಸಿರಿಗೆ ಕಾರಣವೇ ನೀನಮ್ಮ

ನೀ ನಿಲ್ಲದ ಬಾಳು ನನಗೇಕಮ್ಮ...


ನಿನ್ನ ಸಹನೆಗೆ ನಾನು

ಮಾಡುವೆ ಪ್ರಣಾಮ...

ನಿನಗೆ ಯಾರಿಲ್ಲ ಸಮ ಸಮ 

ನಾನಾದೆ ನಿನ್ನ ಮಡಿಲ ಗುಲಾಮ


ನನ್ನನ್ನು ಭೂಮಿಗೆ ತಂದಿರುವ 

ನೀನು ದೇವರಗಿಂತ ಮಿಗಿಲಮ್ಮ

ನಿನ್ನ ಪಾದ ಸ್ಪರ್ಶಕ್ಕೆ

ಭೂಮಿಯೇ ಪಾವನವಮ್ಮ


ನಿಷ್ಕಲ್ಮಶ, ನಿಸ್ವಾರ್ಥ ತ್ಯಾಗ, ಮಮತೆಯ, ಪ್ರೀತಿಗೆ

ಇನ್ನೊಂದು ಹೆಸರೇ ನೀನಮ್ಮ.. ನನ್ನಮ್ಮ

ನೀ ಕೊಟ್ಟ ಜೀವ ಭಿಕ್ಷೆಗೆ 

ನಾ ಏಳು ಜನ್ಮ ಹುಟ್ಟಿ ಬಂದರೂ

ನಿನ್ನ ಋಣ ತೀರಿಸಲಾಗದಮ್ಮ


ನೀ ಹಾಕಿಕೊಟ್ಟ ಮಾರ್ಗದಲ್ಲೆ

ನಡೆಯುತ್ತಿರುವೇನು ನಾನಮ್ಮ

ಹಿಗ್ಗದೆ, ಕುಗ್ಗದೆ, ಆತ್ಮ ವಿಶ್ವಾಸದಿ


ಸಾರ್ಥಿಗಳ ಲೋಕದಿ

ಮುಖವಾಡಗಳ ಮಧ್ಯೆ

ಜೀವಿಸಲು ಸಾಕಾಗಿದೆ ನನಗಮ್ಮ

ನೀನಿದ್ದ ಊರಿಗೆ ನನ್ನನ್ನು ಕರೆದುಕೋ ನನ್ನಮ್ಮ...



ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


No comments:

Post a Comment