Thursday, December 5, 2024

ಆಲಮಟ್ಟಿ ಅಣೆಕಟ್ಟೆ 524 ಮೀ. ಎತ್ತರವಾಗಲೇಬೇಕು: ಶಾಸಕ ಯಶವಂತರಾಯಗೌಡ ಪಾಟೀಲ


ವಿಜಯಪುರ: ಜಿಲ್ಲೆಗೆ ಸಂಬAಧಿಸಿದ ಎಲ್ಲ ಯೋಜನೆಗಳನ್ನು ವರ್ಷೊಪ್ಪತ್ತು ಕಾಲ ನಿಲ್ಲಿಸಿದರೂ ಚಿಂತೆಯಿಲ್ಲ, ಆಲಮಟ್ಟಿ ಅಣೆಕಟ್ಟೆ 524 ಮೀ. ವರೆಗಿನ ಎತ್ತರ ಹೆಚ್ಚಿಸುವ ಕಾರ್ಯ ಆಗಬೇಕು ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಒತ್ತಾಯಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರ್ಥಿಕ ಸೇರಿದಂತೆ ಇತರೆ ಕಾರಣವಲ್ಲದೇ ಯಾವ ಕಾರಣಕ್ಕೂ ಅಣೆಕಟ್ಟೆ ಎತ್ತರ ಹೆಚ್ಚಳ ನಿಲ್ಲಿಸಬಾರದು, ಎತ್ತರ ಹೆಚ್ಚಳಕ್ಕೆ ನಡೆಯುತ್ತಿರುವ ಹೋರಾಟಕ್ಕೆ ನಾನು ಸಂಪೂರ್ಣ ಬೆಂಬಲ ನೀಡುವೆ ಎಂದರು.

ಈ ಭಾಗದ ರೈತರ ತ್ಯಾಗದ ಪ್ರತಿಫಲ ಸಾಕಾರಗೊಳ್ಳಲು ಅಣೆಕಟ್ಟು ಎತ್ತರವಾಗಲೇಬೇಕಿದೆ. ಸರ್ಕಾರಗಳು ಕೃಷ್ಣೆ, ಕಾವೇರಿಗೆ ನೀಡಿದ ಆದ್ಯತೆಯನ್ನು ಉಳಿದ ನದಿಗಳಿಗೂ ನೀಡಲಿ, ಭೀಮೆಯ ಬಗ್ಗೆ ಗಮನ ಹರಿಸಲಿ ಎಂದರು.

ಅಣೆಕಟ್ಟು ಎತ್ತರ ಹೆಚ್ಚಳ ನಮ್ಮ ಪಕ್ಷದ ಹಾಗೂ ಸರ್ಕಾರ ಬದ್ಧತೆ ಕೂಡ ಆಗಿದೆ. ಸರ್ಕಾರ ಈ ಕಾರ್ಯ ಸಾಧನೆ ಮಾಡಲಿದೆ ಎನ್ನುವ ವಿಶ್ವಾಸವಿದೆ, ರೈತರ ಹಾಗೂ ಇಂತಹ ವಿಷಯ ಬಂದಾಗ ಪಕ್ಷ ಭೇದ ಮರೆತು ಒಂದಾಗುತ್ತೇವೆ ಎಂದರು.

ಸರ್ಕಾರ ನಿರೀಕ್ಷಿತ ಪ್ರಮಾಣದಲ್ಲಿ ಕೃಷ್ಣೆಗೆ ಅನುದಾನ ನೀಡಿಲ್ಲ, ಆದರೆ ಇನ್ನೂ ಮೂರು ವರ್ಷಗಳಿವೆ ಖಂಡಿತವಾಗಿಯೂ ಆದ್ಯತೆಯ ದೊಡ್ಡ ಅನುದಾನ ದೊರಕುವ ನಿರೀಕ್ಷೆ ಇದೆ ಎಂದರು.

ಗ್ಯಾರAಟಿ ಯೋಜನೆ ಕಡು ಬಡವರಿಗೆ ದೊಡ್ಡ ಪ್ರಯೋಜನವಾಗಿದೆ, ಇದು ನಮ್ಮ ಬದ್ಧತೆ, ಇದನ್ನು ಕೊಡಲೇಬೇಕು, ಅದರ ಜೊತೆಗೆ ಉಳಿದ ಅಭಿವೃದ್ಧಿ ಯೋಜನೆಗಳಿಗೂ ಆದ್ಯತೆ ನೀಡಬೇಕು ಎಂದರು.

ಸರ್ಕಾರ ಈ ವಿಷಯದಲ್ಲಿ ರೈತರಿಗೆ ಅನ್ಯಾಯ ಮಾಡಬಾರದು, ಈ ವಿಷಯದಲ್ಲಿ ಆತಂಕ್ಕೊಳಗಾಗಿರುವ ರೈತರು ಪ್ರತ್ಯೇಕತೆ ಬೇಡಿಕೆ ಇರಿಸಿದ್ದಾರೆ. ನಮ್ಮ ನಾಡು ಕಟ್ಟಲು ಅನೇಕ ಮಹನೀಯರು ಶ್ರಮಿಸಿದ್ದಾರೆ, ಹೀಗಾಗಿ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಂಡು ಪ್ರತ್ಯೇಕತೆ ಭಾವನೆ ಬೆಳೆಯದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕಿದೆ. ರೈತರ ವಿಷಯದಲ್ಲಿ ರಾಜಕಾರಣ ಮಾಡಿದರೆ ಅದು ಅನ್ನದಾತನಿಗೆ ಮಾಡುವ ಮೋಸ, ಹೀಗಾಗಿ ರೈತರಿಗೆ ಅನ್ಯಾಯವಾದಾಗ ನಮ್ಮದೇ ಸರ್ಕಾರ ಇದ್ದಾಗಲೇ ಟೀಕಿಸಿದ್ದೆ ಎಂದರು.

ಕೃಷ್ಣಾ ಕೊಳ್ಳ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ನಾವೆಲ್ಲ ಜನಪ್ರತಿನಿಧಿಗಳು ಶ್ರಮಿಸುತ್ತಿದ್ದೇವೆ, ನ್ಯಾಯಾಧೀಕರಣ ಸೇರಿ ಇತರೆ ವಿಷಯಕ್ಕೆ ಸಂಬAಧಿಸಿದAತೆ, ಈ ಯೋಜನೆ ಸಕಾಲಕ್ಕೆ ಪೂರ್ಣಗೊಳ್ಳುತ್ತಿಲ್ಲ, ಹೀಗಾಗಿ ಆಮೆ ವೇಗ ಪಡೆದಿದೆ. ಆದ್ದರಿಂದ ಈ ಯೋಜನೆ ಸಾಕಾರಕ್ಕೆ ಈ ಭಾಗದ ಜನಪ್ರತಿನಿಧಿಗಳ ವೈಫಲ್ಯ ಕಾರಣವಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment