Thursday, August 28, 2025

ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡ ತರಬೇತಿ ಎಣ್ಣೆಕಾಳು ಉತ್ಪಾದನೆ ಹೆಚ್ಚಳಕ್ಕೆ ಕ್ರಮವಹಿಸಿ

ವಿಜಯಪುರ : ಇತ್ತೀಚೆಗೆ ಎಣ್ಣೆಕಾಳು ಬೆಳೆಗಳ ಉತ್ಪಾದನೆ ಕುಂಠಿತಗೊಳ್ಳುತ್ತಿದ್ದು, ಇವುಗಳ ಉತ್ಪಾದನೆ ಹೆಚ್ಚಳಕ್ಕಾಗಿ ಸರಕಾರದ ವಿಶೇಷ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ನಿವೃತ್ತ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು. 

2025-26ನೇ ಸಾಲಿನ ರಾಷ್ಟಿçÃಯ ಖಾದ್ಯತೈಲ ಅಭಿಯಾನ ಎಣ್ಣೆಕಾಳು ಯೋಜನೆ ಅಡಿಯಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡ ತರಬೇತಿದಾರರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಣ್ಣೆಕಾಳುಗಳನ್ನು ಪ್ರಮುಖವಾಗಿ ಅಡುಗೆಗಾಗಿ, ಸೌದರ್ಯವರ್ದಕವಾಗಿ, ಜೈವಿಕ ಇಂದನ ಉತ್ಪಾದನೆಯಲ್ಲಿ ಬಳಸಲಾಗುತ್ತಿದೆ. ನಮ್ಮ ಪ್ರದೇಶದಲ್ಲಿ ಶೇಂಗಾ, ಸೂರ್ಯಕಾಂತಿ, ಸೋಯಾಬೀನ್ ಅಗಸೆ, ಎಳ್ಳು, ಸಾಸಿವೆ ಇತ್ಯಾದಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಇವುಗಳು ಹೇರಳ ವಿಟಮನ್, ಖನಿಜಾಂಶ ಹಾಗೂ ಓಮೇಗಾ-3 ಹೊಂದಿದ್ದು, ಪ್ರತಿಯೊಬ್ಬನ ಆರೋಗ್ಯವೃದ್ಧಿಗೆ ಸಹಕಾರಿಯಾಗಲಿದ್ದು, ಕೃಷಿ ಅಧಿಕಾರಿಗಳು ರೈತರಿಗೆ ಈ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕೆಂದರು. 

 ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಡಾ. ಬಾಲರಾಜ ಬಿರಾದಾರ ಮಾತನಾಡಿ, ರೈತರಿಗೆ, ಅಧಿಕಾರಿಗಳಿಗೆ ಕಾಲಕಾಲಕ್ಕೆ ವಿವಿಧ ವಿಷಯಗಳ ಕುರಿತು ಸಾಂಸ್ಥಿಕ ತರಬೇತಿಗಳನ್ನು ಆಯೋಜಿಸಿ, ಅವರ ಜ್ಞಾನ, ಕೌಶಲ್ಯ ವೃದ್ಧಿಸಲಾಗುತ್ತಿದೆ. ಈ ಸಲ ಹವಾಮಾನ ವೈಪರೀತ್ಯದಿಂದಾಗಿ ವಿವಿಧ ಬೆಳೆಗಳಲ್ಲಿ ಇಳುವರಿಯಲ್ಲಿ ವ್ಯತ್ಯಾಸವಾಗಿದೆ. ಎಣ್ಣೆಕಾಳು ಯೋಜನೆಯಡಿಯಲ್ಲಿ ಸೂರ್ಯಕಾಂತಿ ಬೆಳೆಯ ಪ್ರದೇಶ ಹೆಚ್ಚಳವಾಗಿದ್ದು, ಇದರ ಉತ್ಪಾದನೆ, ಕೀಟರೋಗ ಹತೋಟಿ ಕುರಿತು ಸಮಗ್ರ ಮಾಹಿತಿ ನೀಡಲಾಗುತ್ತಿದೆ ಎಂದರು. 

ಕ್ರಿಬ್ಕೋ ಸಂಸ್ಥೆಯ ಬಾಬು ಎ. ಜಿ. ಮಾತನಾಡಿ, ವಿವಿಧ ಎಣ್ಣೆಕಾಳು ಬೆಳೆಗಳಲ್ಲಿ ರಸಗೊಬ್ಬರ ಬಳಕೆ, ಪೋಷಕಾಂಶ ನಿರ್ವಹಣೆ ಮಾಡಬೇಕು. ಪ್ರಸಕ್ತ ಸಂದರ್ಭದಲ್ಲಿ ರಸಗೊಬ್ಬರ ಬೆಲೆ ಏರಿಕೆಯಾಗಿದ್ದು, ಪರ್ಯಾಯ ರಸಗೊಬ್ಬರ ಬಳಕೆ ಮಹತ್ವ ಕುರಿತು ಮಾಹಿತಿ ನೀಡಿದರು. 

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಎಸ್. ಎಂ. ವಸ್ತçದ, ಎಣ್ಣೆಕಾಳು ಬೆಳೆಗಳ ಸಮಗ್ರರೋಗ ನಿರ್ವಹಣೆ, ಡಾ. ಶಿಲ್ಪಾ ಚೋಗಟಾಪೂರ ಎಣ್ಣೆಕಾಳು ಬೇಸಾಯ ಕ್ರಮಗಳು, ಡಾ. ಎಸ್. ಎಸ್. ಕರಬಂಟನಾಳ ಎಣ್ಣೆಕಾಳು ಬೆಳೆಗಳಿಗೆ ತಗಲುವ ವಿವಿಧ ಕೀಟ ಹತೋಟಿ ಕುರಿತು ಉಪನ್ಯಾಸ ನೀಡಿದರು. ತರಬೇತಿಯಲಿ, ಡಾ. ಶ್ರೀಕಾಂತ ಚವ್ಹಾಣ, ಕೃಷಿ ಅಧಿಕಾರಿಗಳಾದ ಗೀತಾ ಭಜಂತ್ರಿ, ಲಕ್ಷಿö್ಮÃ ಕಾಮಗೊಂಡ, ವೆಂಕನಗೌಡ ಪಾಟೀಲ, ತಮಗೊಂಡ, ಸೋಮನಗೌಡ ಬಿರಾದಾರ, ಶಿಲ್ಪಾ, ಜಯಪ್ರದಾ ದಶವಂತ, ತಹಜೀಬ, ಶಹಾನನವಾಜ್ ಸೇರಿದಂತೆ ಜಿಲ್ಲೆಯ ಕೃಷಿ ಅಧಿಕಾರಿಗಳು, ರೈತ ಭಾಂದವರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ  ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ  ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


No comments:

Post a Comment