ವಿಜಯಪುರ: ನಗರದ ಶಂಕರ್ ಲಿಂಗ ಗುಡಿ ಹತ್ತಿರವಿರುವ ಡಿ ದೇವರಾಜ್ ಅರಸು ಮ್ಯಾಟ್ರಿಕ್ ನಂತರದ ವೃತ್ತಿಪರ ಬಾಲಕರ ವಸತಿ ನಿಲಯದ ಅವ್ಯವಸ್ಥೆ ಖಂಡಿಸಿ, ವಿದ್ಯಾರ್ಥಿಗಳು ನಡೆಸಿದರು.
ಕುಡಿಯುವ ನೀರು, ಸ್ನಾನದ ನೀರು, ಬೆಳಕಿನ ವ್ಯವಸ್ಥೆ, ಸ್ವಚ್ಛತೆ, ಗ್ರಂಥಾಲಯ, ಕ್ರೀಡಾ ಸಾಮಗ್ರಿಗಳು, ದಿನ ಪತ್ರಿಕೆಗಳು, ಪ್ಲೇಟು, ಹಾಸಿಗೆ ಹೊದಿಕೆಗಳು ಕೊಡದಿರುವುದನ್ನು ಖಂಡಿಸಿ, ವಸತಿ ನಿಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ತಾಲೂಕು ವಿಸ್ತರಣಾಧಿಕಾರಿಗಳಾದ ಆರ್ ಎಸ್ ಬೈರೋಡಗಿ ಮಾತನಾಡಿ, ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ತಾತ್ಕಾಲಿಕವಾಗಿ ಮುಂದೊಡಿದರು.
ಮುಖಂಡರಾದ ಗೌಡಪ್ಪ ಬಡಿಗೇರ, ಸುಭಾಶ್ಚಂದ್ರ ಹೋನ್ನಕಂಠಿ, ಮಂಜುನಾಥ್ ಕವಳೆ, ಕಿರಣ್ ಬಿರಾದಾರ, ನಿಲಯ ಪಾಲಕರಾದ ಎಸ್ ಎಸ್ ಕಬಾಡೆ, ಪೊಲೀಸ್ ರಕ್ಷಣಾ ಸಿಬ್ಬಂದಿಗಳು ಹಾಜರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
No comments:
Post a Comment