ಶರಣ ಅಲ್ಲಮಪ್ರಭು, ಶರಣ ಸಿದ್ದರಾಮೇಶ್ವರ ವೇದಿಕೆ
ವಿಜಯಪುರ: ಆಧುನಿಕ ಎಲ್ಲ ಕವಿಗಳಿಗೆ ಬಸವಣ್ಣ ಆವರಿಸಿದ್ದಾನೆ.ಬಸವಣ್ಣನ ಸಮ ಸಮಾಜದ ಆರ‍್ಶ ಎಲ್ಲರಿಗೂ ಇಂದಿಗೂ ಮಾದರಿಯಾಗಿದ್ದಾವೆ ಎಂದು ಹಿರಿಯ ಕವಿ ಸುಭಾಸ ಯಾದವಾಡ ಹೇಳಿದರು.
ಅವರು ಬಸವ ಜಯಂತಿ ಉತ್ಸವ ಸಮಿತಿ ಹಾಗೂ ವಿಜಯಪುರ ಜಿಲ್ಲಾಡಳಿತದಿಂದ ನಗರದ ಕಂದಗಲ್ಲ ಹಣಮಂತರಾಯ ರಂಗಮಂದಿರದಲ್ಲಿ ಏಪ್ರಿಲ್ 19, ಮತ್ತು 20ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ವಿಶ್ವಗುರು ಬಸವಣ್ಣನವರ 893 ನೇ ಜಯಂತಿ ಉತ್ಸವದಲ್ಲಿ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಧುನಿಕ ಕನ್ನಡ ಕಾವ್ಯಲೋಕದಲ್ಲಿ ಬಸವಣ್ಣನ ಪ್ರಭಾವ ಅತೀವ ಗಾಢವಾಗಿದೆ. ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಮಹತ್ವವನ್ನು ಸಾರಿದ ಬಸವಣ್ಣನ ವಚನಗಳು ಇಂದಿಗೂ ಎಲ್ಲ ಕವಿಗಳಿಗೆ ಪ್ರೇರಣೆಯಾಗಿವೆ. ವರ್ಣಭೇದ, ಜಾತಿ ಅಸಮಾನತೆ, ಅಂಧಶ್ರದ್ಧೆಗಳ ವಿರುದ್ಧ ಬಸವಣ್ಣ ಹೋರಾಡಿದ ರೀತಿ ಇಂದಿನ ಸಮಾಜಕ್ಕೂ ಪ್ರಸ್ತುತವಾಗಿದೆಯೆಂದು ಹೇಳಿದರು. ದುಡಿಮೆ ಮತ್ತು ಸತ್ಯನಿಷ್ಠ ಜೀವನದ ಮಹತ್ವವನ್ನು ಪ್ರತಿಪಾದಿಸುತ್ತದೆ. ಆಧುನಿಕ ಕವಿಗಳು ತಮ್ಮ ಕಾವ್ಯಗಳಲ್ಲಿ ಬಸವಣ್ಣನ ತತ್ವಗಳನ್ನು ಅಳವಡಿಸಿಕೊಂಡು, ಸಮಾಜದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸಮಾನತೆ ಮತ್ತು ಸಹಿಷ್ಣುತೆ ಎಂಬ ಮೌಲ್ಯಗಳು ಇಂದಿನ ಜಗತ್ತಿನಲ್ಲಿ ಅತ್ಯಂತ ಅಗತ್ಯವಾಗಿವೆ. ಈ ಹಿನ್ನೆಲೆಯಲ್ಲಿ ಬಸವಣ್ಣನ ಆದರ್ಶಗಳು ಮಾದರಿಯಾಗಿವೆ ಎಂದರು. .ಸಾಹಿತಿ ಶೇಷರಾವ ಮಾನೆ ಅವರು ಮಾತನಾಡಿ ಕವಿಗಳಲ್ಲಿ ಹನ್ನೆರಡನೇ ಶತಮಾನದ ಶರಣರ ಚಿಂತನೆಗಳು ಕಾಣುತ್ತಿವೆ, ಕನ್ನಡದಲ್ಲಿ ಮೊದಲ ಬಾರಿಗೆ ಸಾಹಿತ್ಯ ರಚನೆ ಮಾಡುವ ಮೂಲಕ ಕನ್ನಡ ಸಾಹಿತ್ಯದ ಮಾದರಿ ಪುರುಷ ಎಂದರು.
ಸವಿತಾ ಬಿ ಎನ್
ಕವಿಗೋಷ್ಠಿಯಲ್ಲಿ ಸವಿತಾ ಬಿ ಎನ್, ಶಿವಬಾಳಮ್ಮ ಕೊಂಡಗೂಳಿ, ಲಾಯಪ್ಪ ಇಂಗಳೆ , ಕಲ್ಲಪ್ಪ ಶಿವಶರಣ, ದೀಪಕ ಶಿಂಧೆ, ಮಯೂರ ಸಜ್ಜನ, ಲಕ್ಷ್ಮಿ ಗೋಡೆಕರ, ಭರತಕುಮಾರ ಎಚ್ ಟಿ, ಅನುಪ್ರಿಯಾ ಬಿರಾದಾರ, ಸುನೀತಾ ಮೋರೆ, ಕಾವೇರಿ ಹೊಸಮನಿ, ವಿದ್ಯಾಶ್ರೀ ಪೂಜಾರಿ, ಯಲ್ಲಾಲಿಂಗ ಜಮಾದಾರ, ಸುಧಾರಾಣಿ ಬಿರಾದಾರ, ಶಿವಾಜಿ ಮೋರೆ, ಮುರುಗೇಶ ಸಂಗಮ, ಬಿ.ಎಸ್. ಪೂಜಾರಿ, ಚೇತನ ಹಿರೇಕುರುಬರ., ಬೋರಮ್ಮ ಬೇನೂರ, ಮಲ್ಲಿಕರ‍್ಜುನ ಹಡಪದ, ಮಹಾದೇವಿ ಪಾಟೀಲ, ಚಂದ್ರಶೇಖರ,ಅಕ್ಷಯ ಬಲತಿ, ಸುರೇಖಾ ಜಾಲವಾದಿ, ಡಾ. ವನಜಾಕ್ಷಿ ಬಡಿಗೇರ, ದಾನಮ್ಮ ಹೂಗಾರ , ಶಿವರಾಜ ಬಡಿಗೇರ, ತೇಜಸ್ವಿನಿ ಚಾಂದಕವಟೆ,ಅರುಣಕುಮಾರ ರಾಜಮಾನೆ, ರೇಣುಕಾ ಬಿಸನಾಳ, ಗೀತಾ ದೊಡಮನಿ, ಮಂಜುಳಾ ಜಾಲವಾದಿ, ಸುನಂದಾ ಕೋರಿ, ರುಕ್ಷಿಣಿ ಅಗಸರ, ರತ್ನಾ ಬೊಮ್ಮನಹಳ್ಳಿ, ಸುಜ್ಞಾನಿ ಪಾಟೀಲ,ಸಂತೋಷ ಎಸ್.ಎನ್,ವಿದ್ಯಾಶ್ರೀ ರಾಠೋಡ ಸೇರಿದಂತೆ 41 ಜನ ಕವಿಗಳು ಕವಿತೆ ವಾಚಿಸಿದರು.
ಶಿವಬಾಳಮ್ಮ ಕೊಂಡಗೂಳಿ
ವೇದಿಕೆಯಲ್ಲಿ ನಂದಾ ತಿಕೋಟಿ, ರಾಜಶೇಖರ ಉಮರಾಣಿ, ವಿಜಯಕುಮಾರ ಘಾಟಗೆ ಬಸವರಾಜ ಜಾಲವಾದಿ ಕುಮಾರಗೌಡ ಹರನಾಳ ದಾನೇಶ ಅವಟಿ, ಉಪಸ್ಥಿತರಿದ್ದರು.
ಕರ‍್ಯಕ್ರಮದಲ್ಲಿ ಪ್ರಭುಗೌಡ ಪಾಟೀಲ ವಿ ಸಿ ನಾಗಠಾಣ,ಜಂಬನಾಥ ಕಂಚಾಣಿ ಡಾ ವಿ ಡಿ ಐಹೊಳ್ಳಿ, ಭಾರತಿ ಪಾಟೀಲ ಮಹಾದೇವಿ ಗೋಕಾಕ, ಶರಣಗೌಡ ಪಾಟೀಲ ದಾನೇಶ ಅವಟಿ, ಸವಿತಾ ಶಹಾಪುರ, ಶ್ರೀಧರ ಕನ್ನೂರ, ಶರಣು ಕಾಟಕರ,ಶರಣು ಕಿರಣಗಿ, ಚಂದ್ರಶೇಖರ ಹೊಸಮನಿ, ತನ್ಮಯ ಚಂದಕಾವಟೆ ಸೇರಿ ಹಲವರು ಇದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.



No comments:
Post a Comment