ವಿಜಯಪುರ : ಬುದ್ಧ ಬಸವ ಡಾ ಬಿ ಆರ್ ಅಂಬೇಡ್ಕರ್ ಅವರು ಭಾರತ ದೇಶದ ಸಮಾಜ ಸುಧಾರಕರಲ್ಲಿ ಅಗ್ರಗಣ್ಯ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶರಾದ ಮಹೇಶ ಪೋದಾರ ಹೇಳಿದರು.
ವಿಜಯಪುರ :ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದ ಅಂಗವಾಗಿ ಬಸವೇಶ್ವರ ವೃತ್ತದಿಂದ ವೇದಿಕೆ ವರೆಗೆ ನಡೆದ ಮೆರವಣಿಗೆಗೆ ಚಾಲನೆ ಕೊಟ್ಟು ಮಾತನಾಡಿದರು.ಮೆರವಣಿಗೆ ನೇತೃತ್ವ ವಹಿಸಿ ವಿದ್ಯಾರಣಿ ತುಂಗಳ ಅವರು ಮಾತನಾಡಿ ಮಹಿಳೆಯರು ಇಂದು ಅರಿವಿಲ್ಲದೆ ಅನುಭವಿಸುತ್ತಿರುವ ಸ್ವಾತಂತ್ರ್ಯಕ್ಕೆ ಡಾ ಬಿ ಆರ್ ಅಂಬೇಡ್ಕರ್ ಅವರು ಕಾರಣವಾಗಿದ್ದರೆ ನಾವು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗಬೇಕಿದೆ ಎಂದು ಹೇಳಿದರು.
ಜಾಥಾಕ್ಕೆ ಚಾಲನೆ ನೀಡಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಗು ಯಾದವಾಡ ಹಾಗೂ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ವಿ ಸಿ ನಾಗಠಾಣ ಮಾತನಾಡಿ ಬುದ್ದ ಬಸವ ಅಂಬೇಡ್ಕರ್ ಹೆಸರಲ್ಲಿ ಪುಸ್ತಕ ಮೇಳ ಹಮ್ಮಿಕೊಂಡಿರುವುದು ಸ್ವಾಗತಾರ್ಹವಾದುದು.
ಮೆರವಣಿಗೆಯುದ್ಧಕ್ಕೂ ಬುದ್ದ ಬಸವ ಅಂಬೇಡ್ಕರ್ ಹಾಗೂ ಬಸವಾದಿ ಶರಣರಿಗೆ ಜಯಘೋಷ ಮೊಳಗಿದವು.
ಮೆರವಣಿಗೆಯಲ್ಲಿ ಚಂದ್ರಶೇಖರ ಗಂಟೆಪ್ಪಗೋಳ, ನಾಗರಾಜ ಲಂಬು, ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ, ಚೆನ್ನು ಕಟ್ಟಿಮನಿ, ಸುರೇಶ ಬಿಜಾಪುರ, ಜಗದೇವ ಸೂರ್ಯವಂಶಿ, ಬಸನಗೌಡ ಹರನಾಳ ,ದಾನೇಶ ಅವಟಿ, ಜೆ ಎಸ್ ಪಾಟೀಲ, ನೀಲಾಂಬಿಕಾ ಬಿರಾದಾರ , ಪ್ರಭುಗೌಡ ಪಾಟೀಲ, ಸಂಘರ್ಷ ಹೊಸಮನಿ , ಲಾಯಪ್ಪ ಇಂಗಳೆ, ಕಲ್ಲಪ್ಪ ಶಿವಶರಣ, ಶರಣು ಕಿರಣಗಿ, ಅಕ್ಷಯ ಅಜಮನಿ, ಗೌಡಪ್ಪ ಬಡಿಗೇರ ಸೇರಿ ನೂರಾರು ಜನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
.jpeg)
.jpeg)
No comments:
Post a Comment