Saturday, June 20, 2020

ನನ್ನ ಜೀವನದ ಜ್ಯೋತಿ ನನ್ನಪ್ಪ

 

'ಅಪ್ಪ' ಅನ್ನೊ ಅದ್ಭುತ 
ನನ್ನೊಂದಿಗಿದ್ದರೆ ಅದೇ ನನ್ನ ಜಗತ್ತು
 ಇವರು ಊಹಿಸಲಾಗದಂತ ಸಂಪತ್ತು .

ಕೇಳಿದ ತುಂಟ  ಪ್ರಶ್ನೆಗಳಿಗೆಲ್ಲ ತಾಳ್ಮೆಯಿಂದ ಉತ್ತರಿಸುವ 
ಕೈ ಮಾಡಿದ್ದನ್ನೆಲ್ಲ ಕೊಡಿಸುವ
 ನನ್ನ ಜೀವನದ ಜ್ಯೋತಿ ಇವರು 'ಅಪ್ಪ' .

ಗುರಿಯನ್ನು ಸೃಷ್ಟಿಸಿದ ಗುರು ಇವರು 
ಗುರಿಯತ್ತ ಸಾಗುವ ದಾರಿಯನ್ನು ತೋರಿಸಿದವರು 
ಪ್ರತಿ ಹೆಜ್ಜೆ ಗೂ ಜೋತೆಗಿರುವರು 'ಅಪ್ಪ '.

ಮೌನ ವಾಗಿರುವ ಮನದ ಮಾತನ್ನು ತಿಳಿದುಕೊಳ್ಳುವರು
ನೋವುನ್ನು ಬಚ್ಚಿಟ್ಟು ನಗುವಿನ ಸುರಿಮಳೆ ಸುರಿಸುವರು' ಅಪ್ಪ'.

ಗೆಲುವಿನ ಮೆಟ್ಟಿಲನ್ನು ಕಟ್ಟಿದವರು 
ಕಾಣದ ದೇವರನ್ನು ಅಡಗಿಸಿಕೊಂಡ 
ಸದಾ ಜೋತೆ-ಜೋತೆಯಾಗಿರುವ ಜ್ಯೋತಿ ಇವರು 'ನನ್ನಪ್ಪ'.  
           
 ✍️   - ಬಿಸ್ಮಿಲ್ಲಾ ಚಾ ಪಿಂಜಾರ 
         ವಿಜಯಪುರ.

ಅಪ್ಪಾ ನೀನೆ ಸರ್ವಸ್ವ


ಪ್ರತಿ ಮಗಳಿಗೂ 
ಅವರಪ್ಪನೇ ಹೀರೋ
ಮಗಳೆಂದು ಹೀಯಾಳಿಸುವವರ 
ನಡುವೆಯೂ
ತನಗೆ ಮಗಳು ಹುಟ್ಟಿದಳೆಂದು 
ಹಿಗ್ಗಿನಿಂದ ನಲಿವನು ಅಪ್ಪಾ.

ಮೊದಲ ಬಾರಿ ಮಗಳ
ಮುಖ ನೋಡುತ್ತಲೇ
ತನ್ನಮ್ಮ ಮಗುವಾಗಿಹಳೆಂದು
ಕಣ್ಣಂಚು ಒದ್ದೆಯಲ್ಲೇ
ಮೀಸೆ ಮರೆಯಲಿ ಹೆಮ್ಮೆಯಿಂದ ನಗುವನು.

ಕೈ ಹಿಡಿದು 
ಹೆಜ್ಜೆಯ ಮೇಲೆ ಹೆಜ್ಜೆ ಹಾಕಿಸಿ
ನಡೆಯುವುದನ್ನ ಕಲಿಸಿದೆ
ನೀ ಜೊತೆಗಿರು ಧೈರ್ಯದಿಂದ
ಮುಂದೆ ನಡೆಯುತ್ತಿರುವೆ ಅಪ್ಪಾ.

ಆಟ ಪಾಠವ ಕಲಿಸಿ
ಜೀವನ ತಿಳಿಸಿದೆ
ನೀ ನನ್ನ ಮೇಲೆ ಜೀವ ಇಟ್ಟರೂ
ಜೀವನ ಮಾಡು ಎಂದು
ಇನ್ನೊಂದು ಮನೆ ಬೆಳಗಲು ಕಳುಹಿಸಿದೆ.

ನಾ ಮದುವೆಯಾಗಿ
ನಿನಗೆ ಮೊಮ್ಮಗು ಸಿಕ್ಕರೂ
ನೀ ಇನ್ನು ನನ್ನನ್ನು 
ಮಗುವಂತೆ ಕಾಣುವೆ
ನೀನೆ ಪ್ರೀತಿ ಅಪ್ಪಾ.

ನನ್ನ ಜೀವ ಇರುವವರೆಗೂ
ನಿನ್ನನ್ನು ಹೊರತುಪಡಿಸಿ
ಬೇರೆಯಾರೂ ಸಿಗಲಿಲ್ಲ ನನಗೆ
ರಾಜಕುಮಾರಿಯಂತೆ ಕಾಣಲು
ಅಪ್ಪಾ ನೀನೆ ಸರ್ವಸ್ವ.

ಶುಭಾ ಹತ್ತಳ್ಳಿ
ವಿಜಯಪುರ

Friday, June 19, 2020

ಹಿರಿಯರು ಕಿರಿಯರ ಬಾಳ ದೀಪ



ಮೊಳಕೆ ಒಡೆಯಿತೊಂದು  ವಂಶ ವೃಕ್ಷದ ಚಿಗುರು 
ಅಪ್ಪ- ಅಮ್ಮನಾಗೋ ಭಾಗ್ಯವಂತರಾದರು 
ಕಂದನ ಆಗಮನದಿ ಖುಷಿ-ಖುಷಿಯಲಿ ದಿನ ಕಳೆಯುವರು  
ಹುಟ್ಟಿದ ಕೂಸಲಿ ಕನಸ ಕಟ್ಟಿಕೊಂಡರು ನೂರಾರು 
ಕಂದನ ನಗುವಲ್ಲಿ ಜೀವನದ  ಸಾರ್ಥಕ್ಯತೆ ಪಡೆದರು 
ಕಂದನ ಬಾಳು ಬೆಳಗಲು ಹಗಲು-ರಾತ್ರಿ ದುಡಿದರು..

ಹೆಗಲೆತ್ತರಕೆ ಬೆಳೆದು ನಿಂತ ಕಂದ..
ಸುಖದ ವ್ಯಾಮೋಹದಲ್ಲಿ ಬಿದ್ದ.. 
ಬಿಡಿಸಿಕೊಂಡ ಕರುಳ ಸಂಬಂಧ..
ಅಪ್ಪ- ಅಮ್ಮನ  ಅಂಧಕಾರದ ಮದದಿಂದ ತಾತ್ಸರಿದ..
ಹಿರಿಜೀವಗಳು ತಟ್ಟಿದವು ವೃದ್ಧಶ್ರಾಮದ ಕದ...

ಕಂದನೆಂಬ ಕಿರಿ ಜೀವದ ಮದದಲ್ಲಿ 
ಅಪ್ಪ-ಅಮ್ಮ ಅನ್ನೋ ಹಿರಿಜೀವಗಳಿಂದು ಬೀದಿಯಲಿ 
ಕಂದನ ಪಾಲಿಗೆ ಹಿರಿಜೀವ ಕೂಡಿ ಇಟ್ಟ ಆಸ್ತಿಯ  ಒಡೆತನ 
ಹೆತ್ತವರ ಪಾಲಿಗೆ ಕಂದನ ಹಗೆತನ..

ಅಂದು  ಇತ್ತು ಸುಖದ  ಕಣ್ಣೀರು 
ಕಂದನ ಹುಟ್ಟಲಿ
ಇಂದು ಇದೆ ದುಃಖದ  ಕಣ್ಣೀರು 
ಕಂದನ ನಡವಳಿಕೆಯಲಿ 

ಬುದ್ಧಿ ಹೇಳಿ ತಿದ್ದುವ ಹಿರಿಯರು 
ಎಲ್ಲಾ ದೊರೆತ ಮೇಲೆ ಬೇಡವಾದರು 
ನನಗೆ ನೀನು, ನಿನಗೆ ನಾನು ಅನ್ನುತಾ ಹಿರಿಯರು 
ವೃದ್ದಾಶ್ರಮದ ಪಾಲಾದರು.. 

ಅರಿಯೋ ನೀ ಹೆತ್ತವರೇ ನಿನ್ನ  ಆಸ್ತಿ.. 
ಉಳಿದೆಲ್ಲವೂ ಬರಿ ಶೂನ್ಯ
ಅವರ ಪ್ರೀತಿ ಒಂದೇ ಸ್ಥಿರಾಸ್ತಿ 
ಜಗದಲಿ  ಹೆತ್ತವರ ಪ್ರೀತಿಯೊಂದೇ ಅನನ್ಯ..
ವೃದ್ಧಶ್ರಾಮಕೆ ಹಿರಿಜೀವಗಳ ಅಟ್ಟದಿರೋಣ...
ಇದ್ದಷ್ಟು ದಿನ ಪ್ರೀತಿ – ಕಾಳಜಿ  ತೋರೋಣ... 
ನಮ್ಮ ಬಾಲ್ಯದಲಿ ನೀಡಿದ ಪ್ರೀತಿಯ ನೀಡೋಣ...
ಬಾಳಿಗೆ ಬೆಳಕಾದ ಹಿರಿಯರ ಗೌರವಿಸೋಣ.. 

ಸಮಿತ ಶೆಟ್ಟಿ 
ಸಿದ್ಧಕಟ್ಟೆ

ಪಿತೃ ದೇವೋಭವ



ನನ್ನಪ್ಪನೆಂದರೇ?
ನನ್ನ ಬಾಳ ನೇಕಾರ ಇವ
ಆತ್ಮವಿಶ್ವಾಸದ ಕಿಚ್ಚು ಹೊತ್ತಿಸಿದವ
ಅಪಾರ ನಂಬಿಕೆಯ ಜ್ವಾಲೆ ಉರಿಸಿದವ
ನನ್ನ ಬಾಳ ಬಂಗಾರದ ಕಳಶನಿವ।

ಅಗಾಧ ಪ್ರೀತಿಯ ಕಡಲಿವ
ಅಗಣ್ಯ ಗುಣಗಳ ಹೊಂದಿದವ 
ನನ್ನ ಸ್ಪೂರ್ತಿಯ ಸೆಲೆ ಇವ 
ನನ್ನ ಉನ್ನತ ಏಳಿಗೆಯ 
ಸಹಕಾರ ಮೂರ್ತಿ  ಇವ।

ನನ್ನ ಪ್ರತಿ ಹೆಜ್ಜೆಗೂ 
ಪ್ರೋತ್ಸಾಹಿಸುವ ಸನ್ಮೀತ್ರನಿವ 
ಆಗಸ ತಾರೆ ಹಿಡಿಯುವಾಸೆ ಮೂಡಿಸಿದವ 
ಕಾಮನ ಬಿಲ್ಲಿನ ಕನಸಿನ ಗೋಪುರವ ಕಟ್ಟಿಕೊಟ್ಟವ।

ನನ್ನಪ್ಪನ ಬಾಳಿಗೆ 
ಮೀನುಗುವ ತಾರೆಯು ನಾ
ಸದಾ ನನ್ನ ಖುಷಿಯ ಬಯಸೋ
ಮಮತಾಮಯಿ ಇವ
ಅಪ್ಪನ  ಪ್ರಪಂಚವೇ ಸದಾ ನಾನಾಗಿರಲು 
ಅವನ ಯೋಚನೆಯು ಸದಾ  
 ನನ್ನ  ಬಗ್ಗೆಯು।

ನನ್ನಪ್ಪನೆಂದರೆ ಇವ
ನನ್ನ ರಕ್ಷಣೆಯ ಹೊಣೆ ಹೊತ್ತವ 
ಇವನ ದಿನದಂದು 
ಶುಭಾಶಯ ಕೋರಲು ನಾ ಬರೆದೆ
ನನ್ನದೆ ಆದ ಸುಂದರ ಸಾಲುಗಳ ಕವನವು॥

-ಮಮತಾ ಗುಮಶೆಟ್ಟಿ
ವಿಜಯಪುರ

ನನ್ನ ಭಾಗದ ದೇವರು ನನ್ನ ಅಪ್ಪನು



ನನ್ನಪ್ಪನ ಪ್ರಪಂಚಕೆ 
ನಾನೇ ಮೇರು ನಾಯಕ
ಅಪ್ಪನ ಒಲವ ಧಾರೆಯ 
ಪ್ರತಿರೂಪ ನಾ...

ನನ್ನ ಜೀವನದ ನಗುವಿಗೆ 
ಸತತದಿ ಪರಿಶ್ರಮ ಪಟ್ಟವ
ನನ್ನ ಸೌಭಾಗ್ಯದಾತ ನನ್ನಪ್ಪ
ನನ್ನ ಒಲವ ಸುದೆ ಇವನಪ್ಪ।

ಏಳು ಜನುಮದ ಬಂಧದಲು
ಹೀಗೆ ಇರಲಿ ಅಪ್ಪ ಮಗನ ಸಂಬಂಧವು
ನನ್ನಪ್ಪನ ಮಗನಾಗಿ ಜನಿಸುವೇ 
 ಪುನರ್ಜನ್ಮವಿದ್ದರೆ ನನಗೆ।

ಅಪ್ಪನ ನೆರಳು 
ಮಹಾ ಪರ್ವತಗಿಂತಲು ಮಿಗಿಲು
ಆಗಸದಷ್ಟೆ ವಿಶಾಲತೆಯ ಹೊಂದಿದವನು
ನನ್ನಪ್ಪನ ಗುಣಗಾನ 
ಪದಗಳಿಗೆ ನಿಲುಕದ ಮಹಾ ಗೌರವಗಾನ।

ಸೂರ್ಯ ಚಂದ್ರರ ಸಾಕ್ಷಿ
ನನ್ನಪ್ಪನ ಬಾಳಿಗೆ ನಾನಾಗುವೇ
ಸಂಭ್ರಮದ ದಿನಚರಿಯ ಮಗನಂತೆ
ಅಪ್ಪನ ಖುಷಿಗಳಿಗೆ ನನ್ನೊಲವಿನ ಮನಸ್ಸಾಕ್ಷಿ ಧಾರೆಯೆರೆವೆ ಸತತದಿ।

ಅಪ್ಪನ ಕುರುಹು ನಾನಾಗಿರಲು
ಅಪ್ಪನಹಾಗೆ ಬದುಕುವದನು ಕಲಿತಿರುವೇ
ನನ್ನಪ್ಪ ನನ್ನ ಬಾಳ ಬೆಳಗಿದ 
ಮಹಾ ಮಾಹಾನ್ ಜ್ಯೋತಿ
ಅವರ ಪ್ರೀತಯ ಕಂದನು ನಾನು
ಋಣಿಯಗಿರುವೆ ನನ್ನಪ್ಪನ
ಆರೈಕೆಗೆ
ನನ್ನ ಭಾಗದ ದೇವರು
ನನ್ನ ಅಪ್ಪನು॥



ವಿಜುಗೌಡ ಕಾಳಶೆಟ್ಟಿ 
ಅಧ್ಯಕ್ಷರು , ತನು ಫೌಂಡೇಶನ್ ವಿಜಯಪುರ.

20-06-2020 EE DIVASA KANNADA DAILY NEWS PAPER