Saturday, June 20, 2020

ಅಪ್ಪಾ ನೀನೆ ಸರ್ವಸ್ವ


ಪ್ರತಿ ಮಗಳಿಗೂ 
ಅವರಪ್ಪನೇ ಹೀರೋ
ಮಗಳೆಂದು ಹೀಯಾಳಿಸುವವರ 
ನಡುವೆಯೂ
ತನಗೆ ಮಗಳು ಹುಟ್ಟಿದಳೆಂದು 
ಹಿಗ್ಗಿನಿಂದ ನಲಿವನು ಅಪ್ಪಾ.

ಮೊದಲ ಬಾರಿ ಮಗಳ
ಮುಖ ನೋಡುತ್ತಲೇ
ತನ್ನಮ್ಮ ಮಗುವಾಗಿಹಳೆಂದು
ಕಣ್ಣಂಚು ಒದ್ದೆಯಲ್ಲೇ
ಮೀಸೆ ಮರೆಯಲಿ ಹೆಮ್ಮೆಯಿಂದ ನಗುವನು.

ಕೈ ಹಿಡಿದು 
ಹೆಜ್ಜೆಯ ಮೇಲೆ ಹೆಜ್ಜೆ ಹಾಕಿಸಿ
ನಡೆಯುವುದನ್ನ ಕಲಿಸಿದೆ
ನೀ ಜೊತೆಗಿರು ಧೈರ್ಯದಿಂದ
ಮುಂದೆ ನಡೆಯುತ್ತಿರುವೆ ಅಪ್ಪಾ.

ಆಟ ಪಾಠವ ಕಲಿಸಿ
ಜೀವನ ತಿಳಿಸಿದೆ
ನೀ ನನ್ನ ಮೇಲೆ ಜೀವ ಇಟ್ಟರೂ
ಜೀವನ ಮಾಡು ಎಂದು
ಇನ್ನೊಂದು ಮನೆ ಬೆಳಗಲು ಕಳುಹಿಸಿದೆ.

ನಾ ಮದುವೆಯಾಗಿ
ನಿನಗೆ ಮೊಮ್ಮಗು ಸಿಕ್ಕರೂ
ನೀ ಇನ್ನು ನನ್ನನ್ನು 
ಮಗುವಂತೆ ಕಾಣುವೆ
ನೀನೆ ಪ್ರೀತಿ ಅಪ್ಪಾ.

ನನ್ನ ಜೀವ ಇರುವವರೆಗೂ
ನಿನ್ನನ್ನು ಹೊರತುಪಡಿಸಿ
ಬೇರೆಯಾರೂ ಸಿಗಲಿಲ್ಲ ನನಗೆ
ರಾಜಕುಮಾರಿಯಂತೆ ಕಾಣಲು
ಅಪ್ಪಾ ನೀನೆ ಸರ್ವಸ್ವ.

ಶುಭಾ ಹತ್ತಳ್ಳಿ
ವಿಜಯಪುರ

No comments:

Post a Comment