Friday, June 19, 2020

ಹಿರಿಯರು ಕಿರಿಯರ ಬಾಳ ದೀಪ



ಮೊಳಕೆ ಒಡೆಯಿತೊಂದು  ವಂಶ ವೃಕ್ಷದ ಚಿಗುರು 
ಅಪ್ಪ- ಅಮ್ಮನಾಗೋ ಭಾಗ್ಯವಂತರಾದರು 
ಕಂದನ ಆಗಮನದಿ ಖುಷಿ-ಖುಷಿಯಲಿ ದಿನ ಕಳೆಯುವರು  
ಹುಟ್ಟಿದ ಕೂಸಲಿ ಕನಸ ಕಟ್ಟಿಕೊಂಡರು ನೂರಾರು 
ಕಂದನ ನಗುವಲ್ಲಿ ಜೀವನದ  ಸಾರ್ಥಕ್ಯತೆ ಪಡೆದರು 
ಕಂದನ ಬಾಳು ಬೆಳಗಲು ಹಗಲು-ರಾತ್ರಿ ದುಡಿದರು..

ಹೆಗಲೆತ್ತರಕೆ ಬೆಳೆದು ನಿಂತ ಕಂದ..
ಸುಖದ ವ್ಯಾಮೋಹದಲ್ಲಿ ಬಿದ್ದ.. 
ಬಿಡಿಸಿಕೊಂಡ ಕರುಳ ಸಂಬಂಧ..
ಅಪ್ಪ- ಅಮ್ಮನ  ಅಂಧಕಾರದ ಮದದಿಂದ ತಾತ್ಸರಿದ..
ಹಿರಿಜೀವಗಳು ತಟ್ಟಿದವು ವೃದ್ಧಶ್ರಾಮದ ಕದ...

ಕಂದನೆಂಬ ಕಿರಿ ಜೀವದ ಮದದಲ್ಲಿ 
ಅಪ್ಪ-ಅಮ್ಮ ಅನ್ನೋ ಹಿರಿಜೀವಗಳಿಂದು ಬೀದಿಯಲಿ 
ಕಂದನ ಪಾಲಿಗೆ ಹಿರಿಜೀವ ಕೂಡಿ ಇಟ್ಟ ಆಸ್ತಿಯ  ಒಡೆತನ 
ಹೆತ್ತವರ ಪಾಲಿಗೆ ಕಂದನ ಹಗೆತನ..

ಅಂದು  ಇತ್ತು ಸುಖದ  ಕಣ್ಣೀರು 
ಕಂದನ ಹುಟ್ಟಲಿ
ಇಂದು ಇದೆ ದುಃಖದ  ಕಣ್ಣೀರು 
ಕಂದನ ನಡವಳಿಕೆಯಲಿ 

ಬುದ್ಧಿ ಹೇಳಿ ತಿದ್ದುವ ಹಿರಿಯರು 
ಎಲ್ಲಾ ದೊರೆತ ಮೇಲೆ ಬೇಡವಾದರು 
ನನಗೆ ನೀನು, ನಿನಗೆ ನಾನು ಅನ್ನುತಾ ಹಿರಿಯರು 
ವೃದ್ದಾಶ್ರಮದ ಪಾಲಾದರು.. 

ಅರಿಯೋ ನೀ ಹೆತ್ತವರೇ ನಿನ್ನ  ಆಸ್ತಿ.. 
ಉಳಿದೆಲ್ಲವೂ ಬರಿ ಶೂನ್ಯ
ಅವರ ಪ್ರೀತಿ ಒಂದೇ ಸ್ಥಿರಾಸ್ತಿ 
ಜಗದಲಿ  ಹೆತ್ತವರ ಪ್ರೀತಿಯೊಂದೇ ಅನನ್ಯ..
ವೃದ್ಧಶ್ರಾಮಕೆ ಹಿರಿಜೀವಗಳ ಅಟ್ಟದಿರೋಣ...
ಇದ್ದಷ್ಟು ದಿನ ಪ್ರೀತಿ – ಕಾಳಜಿ  ತೋರೋಣ... 
ನಮ್ಮ ಬಾಲ್ಯದಲಿ ನೀಡಿದ ಪ್ರೀತಿಯ ನೀಡೋಣ...
ಬಾಳಿಗೆ ಬೆಳಕಾದ ಹಿರಿಯರ ಗೌರವಿಸೋಣ.. 

ಸಮಿತ ಶೆಟ್ಟಿ 
ಸಿದ್ಧಕಟ್ಟೆ

No comments:

Post a Comment