Friday, June 19, 2020

ಪಿತೃ ದೇವೋಭವ



ನನ್ನಪ್ಪನೆಂದರೇ?
ನನ್ನ ಬಾಳ ನೇಕಾರ ಇವ
ಆತ್ಮವಿಶ್ವಾಸದ ಕಿಚ್ಚು ಹೊತ್ತಿಸಿದವ
ಅಪಾರ ನಂಬಿಕೆಯ ಜ್ವಾಲೆ ಉರಿಸಿದವ
ನನ್ನ ಬಾಳ ಬಂಗಾರದ ಕಳಶನಿವ।

ಅಗಾಧ ಪ್ರೀತಿಯ ಕಡಲಿವ
ಅಗಣ್ಯ ಗುಣಗಳ ಹೊಂದಿದವ 
ನನ್ನ ಸ್ಪೂರ್ತಿಯ ಸೆಲೆ ಇವ 
ನನ್ನ ಉನ್ನತ ಏಳಿಗೆಯ 
ಸಹಕಾರ ಮೂರ್ತಿ  ಇವ।

ನನ್ನ ಪ್ರತಿ ಹೆಜ್ಜೆಗೂ 
ಪ್ರೋತ್ಸಾಹಿಸುವ ಸನ್ಮೀತ್ರನಿವ 
ಆಗಸ ತಾರೆ ಹಿಡಿಯುವಾಸೆ ಮೂಡಿಸಿದವ 
ಕಾಮನ ಬಿಲ್ಲಿನ ಕನಸಿನ ಗೋಪುರವ ಕಟ್ಟಿಕೊಟ್ಟವ।

ನನ್ನಪ್ಪನ ಬಾಳಿಗೆ 
ಮೀನುಗುವ ತಾರೆಯು ನಾ
ಸದಾ ನನ್ನ ಖುಷಿಯ ಬಯಸೋ
ಮಮತಾಮಯಿ ಇವ
ಅಪ್ಪನ  ಪ್ರಪಂಚವೇ ಸದಾ ನಾನಾಗಿರಲು 
ಅವನ ಯೋಚನೆಯು ಸದಾ  
 ನನ್ನ  ಬಗ್ಗೆಯು।

ನನ್ನಪ್ಪನೆಂದರೆ ಇವ
ನನ್ನ ರಕ್ಷಣೆಯ ಹೊಣೆ ಹೊತ್ತವ 
ಇವನ ದಿನದಂದು 
ಶುಭಾಶಯ ಕೋರಲು ನಾ ಬರೆದೆ
ನನ್ನದೆ ಆದ ಸುಂದರ ಸಾಲುಗಳ ಕವನವು॥

-ಮಮತಾ ಗುಮಶೆಟ್ಟಿ
ವಿಜಯಪುರ

No comments:

Post a Comment