ಈ ದಿವಸ ವಾರ್ತೆ ವಿಜಯಪುರ
: ಟಿಕ್ ಟಾಕ್ ಖಾತೆ ಕ್ಲೋಜ್
ಮಾಡಿ ಚೀನಾದ ವಿರುದ್ದ ಆಕ್ರೋಶ
ಹೊರಹಾಕಿದ ಗುಮ್ಮಟನಗರಿ ಗಾನಯೋಗಿ ಸಂಘದ ಟಿಕ್ ಟಾಕ್ ಕಲಾವಿದರು.
ಕಾಲ್ಕೆರೆದು
ಜಗಳಕ್ಕೆ ನಿಂತು ಭಾರತದ ವಿರುದ್ಧ
ಮಸಲತ್ತು ನಡೆಸುತ್ತಿರುವ ಡ್ರ್ಯಾಗನ್ ದೇಶ
ಚೀನಾದ ವಿರುದ್ಧ ಆ ದೇಶದ
ಉತ್ಪನ್ನಗಳು ಹಾಗೂ ಆ್ಯಪ್ ಗಳ
ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚೀನಾ ವಿರುದ್ಧದ
ಜನಸಾಮಾನ್ಯರ ಆಕ್ರೋಶ ವಿಭಿನ್ನ ರೀತಿಯಲ್ಲಿ
ವ್ಯಕ್ತವಾಗುತ್ತಿದ್ದು, ದಿನೇ ದಿನೇ ಹೆಚ್ಚಾಗುತ್ತಿದೆ.ಸಾಮಾಜಿಕ ಜಾಲತಾಣಗಳಲ್ಲೂ ಚೀನಾ
ಆ್ಯಪ್ ಬ್ಯಾನ್ ಮಾಡಿ ಎನ್ನುವ
ಸಂದೇಶ ವ್ಯಾಪಕವಾಗಿ ಹರಿದಾಡಿದೆ. ಸಾಮಾಜಿಕ ತಾಣದಲ್ಲಿ ಟ್ರೆಂಡ್ ಚೀನಾ
ಆ್ಯಪ್ ವಿರುದ್ಧದ ಅಭಿಯಾನ ವಿವಿಧ ಸಾಮಾಜಿಕ
ತಾಣಗಳಲ್ಲಿ ಟ್ರೆಂಡ್ ಸೃಷ್ಟಿಸಿದ್ದು, ಸಾಫ್ಟ್ವೇರ್
ಇನ್ ಎ ವೀಕ್, ಹಾರ್ಡ್ವೇರ್
ಇನ್ ಎ ಇಯರ್ ಎನ್ನುವ
ಹ್ಯಾಶ್ಟ್ಯಾಗ್ ಕೂಡ ಟ್ರೆಂಡ್
ಆಗಿದ್ದು, ಮೊದಲಿಗೆ ಚೀನಾದ ಆ್ಯಪ್,
ಸಾಫ್ಟ್ವೇರ್ಗಳನ್ನು ಕಿತ್ತೊಗೆಯುವ ಮತ್ತು
ನಂತರದಲ್ಲಿ ಹಂತಹAತವಾಗಿ ಒಂದೊAದೆ ಚೀನಾ ಸರಕುಗಳನ್ನು
ನಿರ್ಬಂಧಿಸುವ ಸಂದೇಶವನ್ನು ಜನರು ಹಂಚಿಕೊಳ್ಳುತ್ತಿದ್ದಾರೆ. ಈ ಅಭಿಯಾನಕ್ಕೆ
ಸಾಥ್ ನೀಡಿರುವ ಗುಮ್ಮಟನಗರಿ ಟಿಕಟಾಕ್
ಕಲಾವಿದರಾದ ಪ್ರಕಾಶ ಆರ್.ಕೆ,
ರವಿ ಆರ್.ಎಸ್.ವಿಕಾಸ
ಕೆ, ಶ್ರೀಶೈಲ, ಸಚಿನ್ ವಾಲಿಕರ್, ಸಚಿನ್
ಹಳ್ಳಿಕಟ್ಟಿ, ರಾಜಕುಮಾರ್ ಹೊಸಟ್ಟಿ, ಕಿರಣ್ ಶಿವಣ್ಣನವರ, ಸಂತೋಷ್
ಚವಾಣ್, ಪ್ರಮೋದ್ ಚವಾಣ್, ಮಹೇಶ್
ಕುಂಬಾರ್, ಮತ್ತಿತರರು ತಮ್ಮ ಟಿಕಟಾಕ್ ಖಾತೆ
ಕ್ಲೋಜ್ ಮಾಡಿ ನಮಗೆ ದೇಶ
ಮೊದಲು, ದೇಶಕ್ಕಿಂತ ಮೀಗಿಲಾದ್ದದ್ದು ಯಾವದು ಇಲ್ಲಾ, ಪ್ರಕಾಶ್. ಆರ್. ಕೆ.ಯುಟ್ಯೂಬ್
ಚಾನೆಲ್ ನಲ್ಲಿ ತಮಗೆ ಎಂದಿನAತೆ ಮನೋರಂಜನೆ ಪಡಿಸುತ್ತೇವೆ
ಎಂದರು.
ಆದ್ರೆ ಚೀನಾ
ಆ್ಯಪ್ ಗಳನ್ನು ಬಳಸೊದಿಲ್ಲಾ ಎಂದು
ವಿಡಿಯೋ ಸಂದೇಶ ಕಳಿಸುವ ಮೂಲಕ
ದೇಶಪ್ರೇಮ ಮೆರೆದಿದ್ದಾರೆ.
No comments:
Post a Comment